One N Only Exclusive Cine Portal

ಕನ್ನಡದಲ್ಲೂ ಬರುತ್ತಾ ಪ್ಯಾಡ್‌ಮನ್?

ಬಿಡುಗಡೆಗೂ ಮುನ್ನವೇ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ `ಪ್ಯಾಡ್‌ಮನ್’ ಕಳೆದವಾರ ಅದ್ದೂರಿಯಾಗಿ ತೆರೆಗೆ ಬಂದಿದೆ. ನಿರೀಕ್ಷೆಯಂತೆ `ಪ್ಯಾಡ್‌ಮನ್’ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲೂ ಪ್ರೇಕ್ಷಕರ ಮನಗೆದ್ದು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇನ್ನು ಪ್ಯಾಡ್‌ಮನ್ ಸಿನಿಮಾವನ್ನು ನೋಡಿದ ಬಾಲಿವುಡ್ ಮಂದಿ ಚಿತ್ರವನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದಾರೆ. ಚಿತ್ರೋದ್ಯಮ ಮಾತ್ರವಲ್ಲದೆ, ರಾಜಕೀಯ ರಂಗದ ಗಣ್ಯರು, ಮಾಧ್ಯಮಗಳು, ಸಾಮಾಜಿಕ ಹೋರಾಟಗಾರರು, ಮಹಿಳಾ ಹೋರಾಟಗಾರರು, ಶಿಕ್ಷಣ ತಜ್ಞರು ಹೀಗೆ ವಿವಿಧ ರಂಗಗಳ ಗಣ್ಯರು ಕೂಡ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇವೆಲ್ಲದರ ನಡುವೆ ಗಲ್ಲಾಪೆಟ್ಟಿಗೆಯಲ್ಲಿ `ಪ್ಯಾಡ್‌ಮನ್’ ಗಳಿಕೆ ಹಲವು ನಿರ್ಮಾಪಕರ ನಿದ್ದೆಕೆಡಿಸಿದೆ. ‘ಪ್ಯಾಡ್‌ಮನ್’ ಬೇರೆ ಬೇರೆ ಭಾಷೆಗಳಿಗೆ ರಿಮೇಕ್ ಆಗುವ ಸುದ್ದಿ ಕೂಡ ಬಾಲಿವುಡ್‌ನಲ್ಲಿ ಜೋರಾಗುತ್ತಿದೆ. `ಪ್ಯಾಡ್‌ಮನ್’ ರಿಮೇಕ್ ಹಕ್ಕುಗಳನ್ನು ಖರೀದಿಸಲು ಹಲವು ನಿರ್ಮಾಪಕರು ಮುಂದಾಗಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಹಲವು ದೊಡ್ಡ ದೊಡ್ಡ ನಿರ್ಮಾಪಕರು ‘

ಪ್ಯಾಡ್‌ಮನ್’ ಅನ್ನು ದಕ್ಷಿಣಕ್ಕೆ ಕರೆತರಲು ಸರದಿಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಕನ್ನಡದಲ್ಲಿಯೂ `ಪ್ಯಾಡ್‌ಮನ್’ ಚಿತ್ರವನ್ನು ತೆರೆಗೆ ತರಲು ಪ್ರಯತ್ನಗಳು ಆರಂಭವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. `ಪ್ಯಾಡ್‌ಮನ್’ ಸಿನಿಮಾವನ್ನು ಬಾಲಿವುಡ್ ಮಂದಿ ಪ್ರಚಾರ ಮಾಡಿದ ರೀತಿಯ ಕನ್ನಡದಲ್ಲೂ ಹಲವು ಕಲಾವಿದರು ಇಂಥದ್ದೆ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ಯಾಗ್ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ಮುಟ್ಟಾಗುವ ವಿಚಾರವನ್ನ ಮುಕ್ತವಾಗಿ ಮಾತನಾಡಬೇಕು ನಟಿ ಶೃತಿ ಹರಿಹರನ್ ಸ್ಯಾನಿಟರಿ ಪ್ಯಾಡ್ ಹಿಡಿದು ಹೇಳಿಕೆ ನೀಡಿದರೆ, ಮತ್ತೊಬ್ಬ ನಟಿ ಹಿತಾ ಚಂದ್ರಶೇರ್ಖ ರೆಡ್ ರೆವಲ್ಯೂಷನ್ ಹೆಸರಿನಲ್ಲಿ ಅಭಿಯಾನವನ್ನು ಪ್ರಾರಂಭ ಮಾಡಿದ್ದಾರೆ. ಇದನ್ನೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ನೋಡುತ್ತಿರುವ ಕನ್ನಡ ಸಿನಿಪ್ರೇಕ್ಷಕರು ಕೂಡ `ಪ್ಯಾಡ್‌ಮನ್’ ತರದ ಸಿನಿಮಾಗಳು ಕನ್ನಡದಲ್ಲೂ ಬರಬೇಕು ಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಇಂಥದ್ದೊಂದು ಅದ್ಭುತ ರೆಸ್ಪಾನ್ಸ್ ಕಂಡ `ಪ್ಯಾಡ್‌ಮನ್’ ಚಿತ್ರತಂಡ ಅದನ್ನು ಕನ್ನಡಕ್ಕೆ ತರಲು ಯೋಚಿಸುತ್ತಿದೆ ಎನ್ನಲಾಗುತ್ತಿದೆ. `ಪ್ಯಾಡ್‌ಮನ್’ ಚಿತ್ರವನ್ನು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಲು ಟ್ವಿಂಕಲ್ ಖನ್ನಾ ಅಂಡ್ ಟೀಮ್ ಗಂಭೀರ ಯೋಚನೆ ಮಾಡುತ್ತಿದ್ದು, ತಮಿಳಿನಲ್ಲಿ ಅಕ್ಷಯ್ ಕುಮಾರ್ ನಿರ್ವಹಿಸಿದ್ದ ಪಾತ್ರಕ್ಕೆ ನಟ ಧನುಷ್ ಅವರನ್ನು ಕರೆತರಲು ಮಾತುಕತೆಗೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಇದೆ. ಆದರೆ ಕನ್ನಡದಲ್ಲಿ ಈ ಬರುವುದಾದರೆ, ಈ ಪಾತ್ರವನ್ನು ಯಾವ ನಟ ಮಾಡಬಹುದು ಎಂಬ ಬಗ್ಗೆಯೂ ಚರ್ಚೆಗಳು ಆರಂಭವಾಗಿದೆ. ಒಟ್ಟಾರೆ ಚಿತ್ರರಂಗದ ಮೂಲಗಳ ಪ್ರಕಾರ ಇನ್ನೊಂದು ತಿಂಗಳಲ್ಲಿ ಈ ಎಲ್ಲಾ ಅಂತೆ-ಕಂತೆಗಳ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಲಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image