One N Only Exclusive Cine Portal

ಸ್ಯಾನಿಟರಿ ಪ್ಯಾಡ್ ವಿತರಿಸಿದ ಪ್ಯಾಡ್‌ಮ್ಯಾನ್!

ಭಾರೀ ಹೈಪ್‌ನೊಂದಿಗೆ ಬಿಡುಗಡೆಯಾದ ಪದ್ಮಾವತ್ ಚಿತ್ರದ ಭರಾಟೆಯಲ್ಲಿ ಕೊಂಚ ಮಂಕಾದಂತೆ ಕಾಣುತ್ತಿದ್ದ ಚಿತ್ರ ಪ್ಯಾಡ್‌ಮನ್. ವಿವಾದಗಳ ಮೂಲಕವೇ ದೇಶದ ಗಡಿ ಮೀರಿ ಜಗತ್ತಿನಾಧ್ಯಂತ ಸಂಚಲನವೆಬ್ಬಿಸಿದ್ದ ಪದ್ಮಾವತ್ ಮುಂದೆ ಬಿಡುಗಡೆಯನ್ನೇ ಮುಂದೂಡಿಕೊಂಡಿದ್ದ ಪ್ಯಾಡ್‌ಮನ್ ಚಿತ್ರ ತಂಡ ಫೆಬ್ರವರಿಯಲ್ಲಿ ತೆರೆ ಕಾಣಲು ಸಜ್ಜಾಗಿ ನಿಂತಿದೆ.


ಪ್ಯಾಡ್‌ಮನ್ ಅಕ್ಷಯ್ ಕುಮಾರ್ ಮತ್ತು ಸೋನಮ್ ಕಪೂರ್ ಮುಖ್ಯಭೂಮಿಕೆಯಲ್ಲಿರೋ ಚಿತ್ರ. ಬಾಲ್ಕಿ ನಿರ್ದೇಶನದ ಈ ಚಿತ್ರದಲ್ಲಿ ರಾಧಿಕಾ ಆಪ್ಟೆ ಪ್ರಧಾನವಾದ, ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾಳಂತೆ. ಅಣಂದಹಾಗೆ ಪದ್ಮಾವತ್ ಚಿತ್ರ ಇದೀಗ ಬಿಡುಗಡೆಯಾಗಿದೆ. ಆ ಚಿತ್ರ ಹಬ್ಬಿಕೊಂಡಿದ್ದ ಹೈಪ್‌ನ ಮಟ್ಟಕ್ಕಿಲ್ಲ ಎಂಬಂಥಾ ಮಿಶ್ರ ಅಭಿಪ್ರಾಯ ಮೂಡಿಕೊಳ್ಳುವ ಮೂಲಕ ಅಬ್ಬರವೆಲ್ಲ ಇಳಿಮುಖವಾಗಿದೆ. ಸರಿಯಾಗಿ ಇದೇ ಸಮಯದಲ್ಲಿ ಪ್ಯಾಡ್‌ಮನ್ ಚಿತ್ರತಂಡ ಅಖಾಡಕ್ಕಿಳಿದಿದೆ!


ಗಣರಾಜ್ಯೋತ್ಸವ ದಿನದ ವಿಶೇಷವೆಂಬಂತೆ ನಿರ್ದೇಶಕ ಆರ್ ಬಾಲ್ಕಿ ಅಕ್ಷಯ್ ಜೊತೆಗೂಡಿ ಒಂದು ಶಾಲೆಗೆ ಭೇಟಿ ನೀಡಿದ್ದಾರೆ. ಅಲ್ಲಿನ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವಂಥಾ ಕೆಲಸವನ್ನೂ ಮಾಡಿದ್ದಾರೆ. ಈ ಮೂಲಕ ಈ ಮೂಲಕ ಮುಟ್ಟಿನ ನೈಮೈಲ್ಯದ ಬಗ್ಗೆ ತಿಳಿ ಹೇಳಿ ಜಾಗೃತಿ ಮೂಡಿಸುವಂಥಾ ಕೆಲಸವನ್ನೂ ಮಾಡಿದ್ದಾರೆ.


ಅಂದಹಾಗೆ ಪ್ಯಾಡ್‌ಮನ್ ಚಿತ್ರ ಒಂದು ಸಾಮಾಜಿಕ ಸಂದೇಶದೊಂದಿಗೆ ಮೂಡಿ ಬಂದಿದೆಯಂತೆ. ಪದ್ಮಾವತ್ ಚಿತ್ರದ ಜೊತೆ ಜೊತೆಗೇ ಚಿತ್ರೀಕರಣ ಮುಗಿಸಿಕೊಂಡಿದ್ದ ಪ್ಯಾಡ್‌ಮನ್ ಅದೇಕೋ ಪದ್ಮಾವತ್ ವಿವಾದದಿಂದ ಸೈಡ್‌ಲೈನಾಗಿತ್ತು. ಆದರೆ ಅದೇನೇ ಆದರೂ ಪದ್ಮಾವತ್ ಚಿತ್ರದ ಜೊತೆಗೇ ಬಿಡುಗಡೆ ಮಾಡಬೇಕೆಂದು ಇಡೀ ಚಿತ್ರ ತಂಡ ಸಜ್ಜಾಗಿತ್ತು. ಆದರೆ ಕಡೇ ಘಳಿಗೆಯ ವರೆಗೂ ಕೂಡಾ ತಮ್ಮ ಚಿತ್ರ ಸದ್ದೇ ಮಾಡದಿದ್ದರಿಂದ ಕಂಗಾಲಾದ ಬಾಲ್ಕಿ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದರು. ಆದರೀಗ ಈ ಚಿತ್ರ ಫೆಬ್ರವರಿ ೯ರಂದು ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image