One N Only Exclusive Cine Portal

ಪದ್ಮಾವತಿ ಪರ ಧ್ವನಿಯೆತ್ತಿದ ಶಬಾನಾ ಆಜ್ಮಿ!

ಚಿತ್ರೀಕರಣ ಆರಂಭವಾದ ಕ್ಷಣದಿಂದಲೂ ಥರ ಥರದ ವಿವಾದಗಳನ್ನು ಸುತ್ತಿಕೊಂಡಿದ್ದ ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರಕ್ಕೆ ಇನ್ನೂ ಕಂಟಕ ತೀರಿಕೊಂಡಿಲ್ಲ. ಖುದ್ದು ಸುಪ್ರೀಂ ಕೋರ್ಟ್ ಭಾರತಾಧ್ಯಂತ ಈ ಚಿತ್ರವನ್ನು ಬಿಡುಗಡೆಗೊಳಿಸಲು ಹಸಿರು ನಿಶಾನೆ ತೋರಿಸಿದ್ದರೂ ಕೆಲ ಮಂದಿ ಅಡ್ಡಿ ಪಡಿಸುವ ಮಾತಾಡುತ್ತಿದ್ದಾರೆ. ಇದೀಗ ಬಾಲಿವುಡ್‌ನ ಹಿರಿಯ ನಟಿ ಶಬಾನಾ ಆಜ್ಮಿ ಪದ್ಮಾವತಿ ಚಿತ್ರದ ಸುತ್ತಲಿನ ವಿವಾದಗಳ ವಿರುದ್ಧವಾಗಿ ಧ್ವನಿ ಎತ್ತಿದ್ದಾರೆ.


ಪದ್ಮಾವತಿ ಚಿತ್ರದ ಬಿಡುಇಗಡೆಗೆ ಹಸಿರು ನಿಶಾನೆ ತೋರಿಸಿರುವ ಸುಪ್ರೀಂ ಕೋರ್ಟ್ ಕ್ರಮವನ್ನು ಸ್ವಾಗತಿಸಿರುವ ಶಬಾನಾ, ಈ ಚಿತ್ರದ ವಿಚಾರವಾಗಿ ಜೋವ ಬೆದರಿಕೆ ಹಾಕಿದ್ದ ಶಕ್ತಿಗಳ ವಿರುದ್ಧವೂ ಶಿಕ್ಷೆಯಾಗುವಂತೆ ನೋಡಿಕೊಳ್ಳ ಬೇಕು, ಇನ್ನು ಮುಂದೆಯೂ ಇಂಥಾದ್ದು ನಡೆಯದಂತೆ ತೆಡೆಯುವಂಥಾ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಚಿತ್ರದ ಬಗ್ಗೆ ದೇಶಾಧ್ಯಂತ ವಿವಾದ ಎಬ್ಬಿಸಿದ್ದವರು ಮುಖ್ಯಪಾತ್ರಧಾರಿಯಾಗಿರೋ ದೀಪಿಕಾ ಪಡುಕೋಣೆ ಓರ್ವ ಹೆಣ್ಣೆಂಬುದನ್ನೂ ಮರೆತು ಮಾಡಿದ್ದ ಪ್ರಹಾರಗಳು ಒಂದೆರಡಲ್ಲ. ಇದೇ ಪಂಥದ ಮಂದಿ ದೀಪಿಕಾಳ ತಲೆ ಕಡಿಯುವಂತೆ ಕರೆ ನೀಡಿ ಆಕೆಯ ತಲೆಗೆ ರೇಟು ಫಿಕ್ಸ್ ಮಾಡಿದ್ದರು. ಇನ್ನೂ ಕೆಲ ಮಂದಿ ದೀಪಿಕಾಳನ್ನು ಜೀವಂತವಾಗಿಯೇ ಸುಡುವಂಥಾ ಅಮಾನವೀಯ ಮಾತುಗಳನ್ನಾಡಿದ್ದರು. ಇನ್ನು ಅಂಥಾದ್ದೇ ಮನಸ್ಥಿತಿಯ ಜನ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ಮೇಲೆ ಹಲ್ಲೆಯನ್ನೂ ನಡೆಸಿದ್ದರು.


ಈವತ್ತು ಸುಪ್ರೀಂ ಕೋರ್ಟು ಪದ್ಮಾವತಿ ಚಿತ್ರದ ಬಿಡುಗಡೆಗೆ ಹಸಿರು ನಿಶಾನೆಯನ್ನೇನೋ ತೋರಿದೆ. ಆದರೆ ಈ ಚಿತ್ರದ ವಿರುದ್ಧ ಮನುಷ್ಯತ್ವ ಇಲ್ಲದೆ ವರ್ತಿಸಿದವರಿಗೆ ಶಿಕ್ಷೆ ವಿಧಿಸೋರು ಯಾರು ಅಂತ ಶಬಾನಾ ಆಜ್ಮಿ ಪ್ರಶ್ನಿಸಿದ್ದಾರೆ. ಜೊತೆಗೆ ದೀಪಿಕಾಗೆ ಮಾನಸಿಕ ಹಿಂಸೆ ನೀಡಿದ್ದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image