One N Only Exclusive Cine Portal

ಪದ್ಮಾವತಿ ಯಾವಾಗ ಬರ‍್ತಾಳೆ ಗೊತ್ತಾ?

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರ ಸೃಷ್ಟಿಸಿದ್ದ ವಿವಾದಗಳು ಒಂದೆರಡಲ್ಲ. ಈ ವಿವಾದ ರಾಜಕೀಯ ರಂಗು ಪಡೆದುಕೊಂಡು ದೇಶಾದಂತ ವಿವಾದದ ಕಿಚ್ಚು ಹಚ್ಚಿದ ರೀತಿ ಕಂಡು ಪದ್ಮಾವತಿಗೆ ಬಿಡುಗಡೆಯ ಭಾಗ್ಯ ಸಿಗೋದೇ ಕಷ್ಟವೇನೋ ಎಂಬಂಥಾ ವಾತಾವರಣ ನಿರ್ಮಾಣವಾಗಿತ್ತು.
ಆದರೀಕ ಡೇಟು ಮುಂದಕ್ಕೆ ಹೋಗುತ್ತಲೇ ಪದ್ಮಾವತಿಯ ಆಗಮನಕ್ಕೆ ಇದೇ ಫೆಬ್ರವರಿ 19ನೇ ತಾರೀಕು ಪಕ್ಕಾ ಫಿಕ್ಸಾಗಿದೆ!


ಬಾಲಿವುಡ್ ತುಂಬಾ ಪದ್ಮಾವತಿ ಚಿತ್ರದ್ದೇ ಮಾತು ಶುರುವಾಗಿ ಬಹಳಷ್ಟು ಕಾಲವೇ ಕಳೆದಿದೆ. ಐತಿಹಾಸಿಕ ಕಥಾ ಹಂದರ ಹೊಂದಿರೋ ಈ ಚಿತ್ರ ಈ ಹಿಂದೆ ವಿವಾದಗಳ ಮೂಲಕವೇ ಭಾರೀ ಸದ್ದು ಮಾಡಿತ್ತು. ಆ ಕಾರಣದಿಂದಲೇ ಬಹುಸಂಖ್ಯಾತರ ವಿರೋಧ ಕಟ್ಟಿಕೊಂಡಿದ್ದ ಈ ಚಿತ್ರ ವಿರೋಧಿಸುವಂಥಾ ಯಾವ ವಿಚಾರವನ್ನೂ ಹೊಂದಿಲ್ಲ ಎಂಬುದು ಈಗಾಗಲೇ ಜಾಹೀರಾಗಿದೆ. ರಾಣಿ ಪದ್ಮಾವತಿಯ ಘನತೆಗೆ ಕುಂದುಂಟು ಮಾಡೋ ಯಾವ ದೃಷ್ಯಾವಳಿಗಳೂ ಇಲ್ಲ ಅಂತ ಅನೇಕರು ನೋಡಿ ಮೆಚ್ಚಿಕೊಂಡ ಬಳಿಕ ಪದ್ಮಾವತಿಯೆಡೆಗಿನ ಕುತೂಹಲ ಮತ್ತಷ್ಟು ಹೆಚ್ಚಿಕೊಂಡಿತ್ತು.


ಅಷ್ಟಕ್ಕೂ ಸಂಜಯ್ ಲೀಲಾ ಬನ್ಸಾಲಿ ಯಾವ ಕ್ಷಣದಲ್ಲಿ ಈ ಚಿತ್ರ ನಿರ್ದೇಶನ ಮಾಡೋದಾಗಿ ಘೋಷಣೆ ಮಾಡಿದ್ದರೋ ಆಗಿನಿಂದಲೇ ವಿವಾದವೂ ಗರಿಗೆದರಿಕೊಂಡಿತ್ತು. ಕಡೇಗೆ ಪ್ರಜಾಪ್ರಭುತ್ವದ ಮೂಲ ಆಶಯವೇ ಕಂಗಾಲಾಗುವಂತೆ ಒಂದು ಗುಂಪು ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆಯನ್ನೂ ನಡೆಸಿತ್ತು. ಬಳಿಕ ವಿರೋಧ ಎಂಬುದು ಯಾವ ಪರಿಯಾಗಿ ತಿರುಗಿಕೊಂಡಿತ್ತೆಂದರೆ ಈ ಚಿತ್ರದಲ್ಲಿ ಪದ್ಮಾವತಿಯ ಪಾತ್ರ ಮಾಡಿರೋ ದೀಪಿಕಾ ಪಡುಕೋಣೆಯ ಮೂಗು ಕುಯ್ಯಲು ಫತ್ವಾ ಹೊರಡಿಸಲಾಗಿತ್ತು!


ದೀಪಿಕಾ ಪಡುಕೋಣೆ ಕೂಡಾ ಈ ಚಿತ್ರದ ದೆಸೆಯಿಂದ ಸಾಕಷ್ಟು ಮಾನಸಿಕ ಹಿಂಸೆ, ವಿರೋಧಗಳನ್ನು ಅನುಭವಿಸಬೇಕಾಗಿ ಬಂದಿತ್ತು. ಇದೀಗ ಈ ಚಿತ್ರ ಬಿಡುಗಡೆಗೆ ಮುಹೂರ್ತ ನಿಗಧಿಯಾಗಿದೆ. ಭರಪೂರವಾದೊಂದು ಗೆಲುವಿನ ಮೂಲಕ ಹಳೇ ಕಹಿಯೆಲ್ಲಾ ಮರೆಯಾದೀತಾ ಎಂಬುದಷ್ಟೇ ಈಗಿರೋ ಕುತೂಹಲ!

Leave a Reply

Your email address will not be published. Required fields are marked *


CAPTCHA Image
Reload Image