One N Only Exclusive Cine Portal

ಅಜ್ಞಾತವಾಸಿಯ ದಿನದ ಕಲೆಕ್ಷನ್ 60 ಕೋಟಿ!

ಪವನ್ ಕಲ್ಯಾಣ್ ನಟನೆಯ ಅಜ್ಞಾತವಾಸಿ ಚಿತ್ರ ತೆರೆ ಕಂಡಿದೆ. ಆದರೆ ಈ ಚಿತ್ರ ಒಂದೇ ದಿನದ ಕಲೆಕ್ಷನ್‌ನಲ್ಲಿ ದಾಖಲೆಯನ್ನೇ ನಿರ್ಮಾಣ ಮಾಡಿದೆ. ಈ ಚಿತ್ರ ಚಿತ್ರೀಕರಣದ ಹಂತದಲ್ಲಿಯೇ ಸಾಕಷ್ಟು ಎಡರು ತೊಡರುಗಳನ್ನು ಅನುಭವಿಸಿತ್ತು. ಆದರೀಗ ಆ ಹಂತದ ಕಹಿಯನ್ನೆಲ್ಲ ಮರೆಸುವಂತಾ ಗೆಲುವೊಂದಕ್ಕೆ ಪವನ್ ಕಲ್ಯಾಣ್ ರೂವಾರಿಯಾಗಿದ್ದಾರೆ!


ಪವನ್ ಕಲ್ಯಾಣ್ ಅವರ ಇಪ್ಪತೈದನೇ ಚಿತ್ರವೆಂಬ ಕಾರಣದಿಂದ ಟಾಲಿವುಡ್ ಹಮನ ಸೆಳೆದಿದ್ದ ಚಿತ್ರ ಅಜ್ಞಾತವಾಸಿ. ಆದರೆ ಅದೇಕೋ ಆಂತರಿಕವಾಗಿ ಅಲ್ಲೋಲಕಲ್ಲೋಲ ವಾತಾವರಣ ನಿರ್ಮಾಣವಾದುದರಿಂದ ಈ ಚಿತ್ರ ನಾನಾ ತೆರನಾದ ಗಾಸಿಪ್‌ಗಳಿಗೆ ಆಹಾರವಾಗಿತ್ತು. ತಿಂಗಳ ಹಿಂದೆ ಪವನ್ ಕಲ್ಯಾಣ್ ನಟಿಸಿರೋ ಅಜ್ಞಾತವಾಸಿ ಚಿತ್ರ ನಿಂತೇ ಹೋಗಿದೆ ಎಂಬರ್ಥದಲ್ಲಿ ಸುದ್ದಿ ಹರಡಿಕೊಂಡಿತ್ತು. ಇದಾದೇಟಿಗೆ ಅಸಲೀ ವಿಚಾರಗಳನ್ನು ಸ್ವತಃ ಪವನ್ ಬಿಚ್ಚಿಟ್ಟಿದ್ದರು.


ಮೊದಲು ಈ ಚಿತ್ರವನ್ನು ನಿರ್ಮಾಣ ಮಾಡಿದ್ದ ಹಾರಿಕಾ ಕ್ರಿಯೇಷನ್ಸ್ ಟೈಟಲ್ ಅನೌನ್ಸ್‌ಮೆಂಟ್ ಸೇರಿದಂತೆ ಎಲ್ಲದರಲ್ಲಿಯೂ ವಿಳಂಬ ನೀತಿ ಅನುಸರಿಸಿತ್ತು. ಇದಕ್ಕೆ ಕಾರಣ ವ್ಯಾವಹಾರಿಕ ಜಿದ್ದಾಜಿದ್ದಿ ಅಂತಲೇ ಮೂಲಗಳು ಹೇಳುತ್ತಿವೆ. ಆದರೆ ನಂತರದಲ್ಲಿ ಸುಸೂತ್ರವಾಗಿ ಚಿತ್ರೀಕರಣ ಮುಂದುವರೆದಿತ್ತು. ಅಜ್ಞಾತವಾಸಿ ಚಿತ್ರದ ಬಗ್ಗೆ ಹರಡಿಕೊಂಡಿರೋ ರೂಮರುಗಳೆಲ್ಲ ಸುಳ್ಳು ಎಂಬ ಸಂದೇಶವನ್ನು ಅಭಿಮಾನಿಗಳಿಗೆ ರವಾನಿಸಿದ್ದ ಪವನ್ ಕಲ್ಯಾಣ್ ೨೦೧೮ರ ಜನವರಿ ೧೦ರಂದು ಈ ಚಿತ್ರ ಬಿಡುಗಡೆಯಾಗೋದಾಗಿ ಘೋಸಿದ್ದರು.
ಅದರಂತೆಯೇ ಈ ಚಿತ್ರ ಬಿಡುಗಡೆಯಾಗಿದೆ. ಅಭಿಮಾನಿಗಳು ಈ ಚಿತ್ರವನ್ನು ನೋಡಿ ಹೆಚ್ಚೆದ್ದಿದ್ದಾರೆ. ಅದರ ಫಲವೆಂಬಂಥೆ ಮೊದಲ ದಿನವೇ ೬೦ ಕೋಟಿ ಕಲೆಕ್ಷನ್ ಮಾಡೋ ಮೂಲಕ ಅಜ್ಞಾತವಾಸಿ ಚಿತ್ರ ದಾಖಲೆ ನಿರ್ಮಾಣ ಮಾಡಿದೆ.

Leave a Reply

Your email address will not be published. Required fields are marked *


CAPTCHA Image
Reload Image