One N Only Exclusive Cine Portal

ಮತ್ತೆ ಬಂದಳು ಪಿಂಕ್ ಹುಡುಗಿ ಬಾನಿತ!

ಮದ್ರಾಸ್‌ಕೆಫೆ, ಪೀಕು, ಪಿಂಕ್ ಮೊದಲಾದ ಚಿತ್ರಗಳಲ್ಲಿ ಬೋಲ್ಡಾಗಿ ಮಿಂಚಿದ್ದ ಬ್ಯೂಟಿ ಎಲ್ಲಿ? ಈ ಪ್ರಶ್ನೆಗೆ ಉತ್ತರ ಅಕ್ಟೋಬರ್ ಚಿತ್ರ. ಈ ಚಿತ್ರದ ಮೂಲಕ ನಟಿ ಬಾನಿತ ಸಂದು ಮತ್ತೆ ಮರಳಿದ್ದಾಳೆ. ಆಕೆಗಾಗಿ ಕಾದಿದ್ದ ಪ್ರೇಕ್ಷಕರಿಗೆ ಮುದ ನೀಡಲು ಸಜ್ಜಾಗಿದ್ದಾಳೆ!

ಟಾಪ್‌ಕ್ಲಾಸ್ ಸಿನಿಮಾಗಳಲ್ಲಿ ಕಾಣಿಸಿಕೊಂಟ ನಟಿ ಬಾನಿತ ಸಂಧು ಜನಿಸಿದ್ದು, ಬೆಳೆದ್ದು ಎಲ್ಲಾ ಆಂಗ್ಲರ ನಾಡಾದ ಇಂಗ್ಲೆಂಡ್‌ನಲ್ಲಿ. ೨೦ರ ಹರೆಯದ ಈ ಹಾಟ್ ನಟಿ ಈಗ ಶೂಜಿತ್ ಸರ್ಕಾರ್ ನಿರ್ದೇಶನದ ಅಕ್ಟೋಬರ್ನ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾಳೆ. ವರುಣ್‌ಧವನ್‌ಗೆ ನಾಯಕಿಯಾಗಿ ನಟಿಸಲಿರುವ ಬಾನಿತ ಸದ್ಯಕ್ಕೆ ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾಳೆ.

ಚಿತ್ರಕಥೆ ಗಟ್ಟಿಯಾಗಿದ್ದರೆ ಯಾವ ಭಾಷೆಯಲ್ಲಿ ನಟಿಸಲು ಸೈ ಎಂದಿರುವ ಈಕೆ, ಯುವಕರ ಮೈಬಿಸಿ ಮಾಡಿರುವುದಂತೂ ಸುಳ್ಳಲ್ಲ. ಸದಾ ವಿಭಿನ್ನ ನೆಲೆಗಟ್ಟಿ ರೋಲ್ ಬಯಸುವ ಬಾನಿತ ಸಂಧು ತಾನು ಡೈರೆಕ್ಟರ್‌ಗಳು ಬಯಸುವ ನಾಯಕಿ ಎಂದಿದ್ದಾಳೆ. ಈ ಹಿಂದೇ ಈಕೆ ನಟಿಸಿದ್ದ ಮೂರು ಚಿತ್ರಗಳು ಹಿಟ್ ಆಗಿದ್ದವು. ಅದರಲ್ಲಿನ ಬೋಲ್ಡ್ ಪಾತ್ರಗಳ ಮೂಲಕ ಈಕೆಗೆ ದೇಶಾಧ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದರು.

Leave a Reply

Your email address will not be published. Required fields are marked *


CAPTCHA Image
Reload Image