One N Only Exclusive Cine Portal

ಈಕೆಯ ಮಾತಿಂದ ಕಂಗಾಲಾಯ್ತು ಟಾಲಿವುಡ್!

ಚಿತ್ರರಂಗದಲ್ಲಿ ನಟಿಯರನ್ನು ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ ಎಂಬ ವಿಚಾರ ಎಲ್ಲ ಭಾಷೆಗಳಲ್ಲಿಯೂ ಆಗಾಗ ಚರ್ಚೆಗೆ ಬರುತ್ತಿರುತ್ತದೆ. ಕೆಲ ನಟೀಮಣಿಯರು ಆಗಾಗ ತಮ್ಮ ಮೇಲಾಗೋ ಲೈಂಗಿಕ ಕಿರುಕುಳದ ವಿರುದ್ಧ ತಿರುಗಿ ಬೀಳೋದೂ ಇದೆ. ಆದರೆ ಟಾಲಿವುಡ್‌ನ ಪ್ರಸಿದ್ಧ ನಟಿ ಪೂನಂ ಕಪೂರ್ ಲೈಂಗಿಕ ಕಿರುಕುಳದ ಬಗ್ಗೆ ಮಾಡಿರೋ ಟ್ವೀಟ್ ಒಂದು ದೇಶಾಧ್ಯಂತ ಸಂಚಲನವೆಬ್ಬಿಸಿದೆ!


‘ಭಾರತದಲ್ಲಿ ಸಾಮಾನ್ಯ ಹುಡುಗಿಯರಿಗಿಂತ ನೀಲಿ ಚಿತ್ರಗಳಲ್ಲಿ ನಟಿಸೋ ನಟಿಯರೇ ಸೇಫ್. ಚಿತ್ರರಂಗದಲ್ಲಂತೂ ನಟಿಯರ ದೇಹದ ಮೇಲೆ ಆಕ್ರಮಣ ನಡೆಸಲು ಸದಾ ಕಾಲ ಹೊಂಚು ಹಾಕಿ ನಿಂತಿರೋ ಕಾಮುಕರ ಸಂಖ್ಯೆಯೇ ಹೆಚ್ಚಿದೆ’ ಎಂಬುದು ಪೂನಂ ಮಾಡಿರೋ ಟ್ವೀಟ್‌ನ ಸಾರಾಂಶ.


ಹಾಗಾದರೆ ಈ ಪೂನಂ ಕೌರ್‌ಗೆ ಯಾರಿಂದ ಲೈಗಿಕ ಕಿರುಕುಳವಾಯಿತು ಅಂತ ನೋಡ ಹೋದರೆ ಟಾಲಿವುಡ್‌ನ ಜನಪ್ರಿಯ ನಿರ್ದೇಶಕನೋರ್ವ ವಿಲನ್ ಸ್ಥಾನದಲ್ಲಿ ನಿಲ್ಲುತ್ತಾನೆ. ಆತ ಮಹೇಶ್ ಕಾತಿ. ಈತ ಪೂನಂ ಕೌರ್‌ಗೆ ಕಿರುಕುಳ ನೀಡಿದ್ದಾನೆಂಬ ಬಗ್ಗೆ ಟಾಲಿವುಡ್ ವಲಯದಲ್ಲಿಯೇ ಒಂದಷ್ಟು ಸುದ್ದಿಯಾಗಿತ್ತು. ಆದರೆ ಏಕಾಏಕಿ ಪೂನಂ ರೊಚ್ಚಿಗೆದ್ದು ಈ ಬಗ್ಗೆ ಟ ವೀಟ್ ಮಾಡೋ ಮೂಲಕ ಅದು ದೊಡ್ಡ ಮಟ್ಟದಲ್ಲಿಯೇ ಭಹಿರಂಗಗೊಂಡಿದೆ.
ಆದರೆ ಪೂನಂ ಆರೋಪದಿಂದ ಟಾಲಿವುಡ್‌ನ ಮಾನವೇ ಹರಾಜಾಗೋದರಿಂದ ಕೆಲ ಗಣ್ಯರ ಒತ್ತಾಸೆಯ ಮೇರೆಗೆ ಪೂನಂ ಈ ಟ್ವೀಟ್ ಅನ್ನು ರಿಮೂವ್ ಮಾಡಿದ್ದಾಳೆ. ಆದರೆ ಅದಾಗಲೇ ವೈರಲ್ ಆಗಿರೋ ಈ ಟ್ವೀಟ್ ಈಗಲೂ ಸಾಮಾಜಿಕ ಜಾಲ ತಾಣಗಳಲಲಿ ವ್ಯಾಪಕವಾಗಿ ಹರಿದಾಡುತ್ತಲೇ ಇವೆ. ಈ ಬಗ್ಗೆ ಪೂನಂ ಪವನ್ ಕಲ್ಯಾಣ್ ಬಳಿ ದೂರು ಹೇಳಿಕೊಂಡಿದ್ದಾಳಂತೆ. ಆದ್ದರಿಂದ ಈ ವಿವಾದ ಟಾಲಿವುಡ್ ವಾತಾವರಣದಲ್ಲಿಯೇ ಇತ್ಯರ್ಥಗೊಳ್ಳೋ ಹಾದಿಯಲ್ಲಿದೆ. ಆದರೆ ಪೂನಂ ಟ್ವೀಟ್ ಟಾಲಿವುಡ್ಡಿನ ಕಾಮ ಪುರಾಣದ ಬಗ್ಗೆ ನಾನಾ ದಿಕ್ಕುಗಳಲ್ಲಿ ಚರ್ಚೆಗಳಿಗೆ ಕಾರಣವಾಗಿದೆ.


ಅಷ್ಟಕ್ಕೂ ಇದೀಗ ತಾನೇ ಚಿತ್ರರಂಗಕ್ಕೆ ಕಾಲಿಟ್ಟ ನವ ನಟಿಯರು ಇಂಥಾ ಆರೋಪ ಮಾಡಿದ್ದರೆ ಈ ಪರಿಯೇನೂ ಪ್ರಚಾರೆ ಪಡೆಯುತ್ತಿರಲಿಲ್ಲ. ಆದರೆ ಈ ಪೂನಂ ಟಾಲಿವುಡ್‌ನ ಖ್ಯಾತ ನಟಿ. ಆಕೆ ಬೇರೆ ಬೇರೆ ಸ್ಟಾರ್‌ಗಳ ಜೊತೆ ನಟಿಸಿದ್ದಾಳೆ. ಈ ವರೆಗೆ ಹದಿಮೂರು ಚಿತ್ರಗಳಲ್ಲಿ ನಟಿಸಿರೋ ಈಕೆ ದೊಡ್ಡ ಗೆಲುವುಗಳ ರೂವಾರಿಯಾಗಿದ್ದಾಳೆ. ಇಂಥಾ ನಟಿಗೇ ಈ ಥರದ ಸ್ಥಿತಿಯಾದರೆ, ಟಾಲಿವುಡ್‌ನಲ್ಲಿ ಇತರೇ ನಟಿಯರ ಪಾಡೇನೆಂಬ ಪ್ರಶ್ನೆ ಈಗ ಎಲ್ಲರನ್ನು ಕಾಡಲಾರಂಭಿಸಿದೆ!

Leave a Reply

Your email address will not be published. Required fields are marked *


CAPTCHA Image
Reload Image