One N Only Exclusive Cine Portal

ಮೋಹನ್ ಲಾಲ್ ಮಗನ ಸ್ಯಾಂಡ್ ಸಾಂಗು!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮಲೆಯಾಳದ ಸೂಪರ್ ಸ್ಟಾರ್ ಮೋಹನ್ ಲಾಲ್ ಪುತ್ರ ಪ್ರಣವ್ ಮೋಹನ್ ಲಾಲ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾನೆ. ಆತನ ಮೊದಲ ಚಿತ್ರ ಆದಿ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಥರ ಥರದ ಪಾತ್ರಗಳ ಮೂಲಕ ಮಾಲಿವುಡ್ ಅನ್ನು ಆವರಿಸಿಕೊಂಡು ಸೂಪರ್ ಸ್ಟಾರ್ ಅನ್ನಿಸಿಕೊಂಡಿರೋ ಮೋಹನ್ ಲಾಲ್ ಮಗನ ಚಿತ್ರದ ಮೊದಲ ಹಾಡೊಂದು ಬಿಡುಗಡೆಯಾಗಿ ಎಲ್ಲರ ಗಮನ ಸೆಳೆದಿದೆ.


ಅನಿಲ್ ಜಾನ್ಸನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ವೀಡಿಯೋ ಸಾಂಗ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದೆ. ಬಹಳಾ ಕಡಿಮೆ ಅವಧಿಯಲ್ಲೆ ಲಕ್ಷಾಂತರ ವೀಕ್ಷಣೆ ಪಡೆಯೋ ಮೂಲಕ ಸೂಪರ್ ಸ್ಟಾರ್ ಮಗ ಮೊದಲ ಗೆಲುವಿನ ಹೆಜ್ಜೆಯನ್ನ ಎತ್ತಿಟ್ಟಿದ್ದಾನೆ. ಅಪ್ಪ ಅಮ್ಮನಿಂದ ದೂರಾದ ಸಂಕಟದ ಭಾವ ಸೂರ್ಯಾನೆ ಎಂಬ ಹಾಡೀಗ ತನ್ನ ಭಾವುಕ ಫೀಲ್‌ನ ಮೂಲಕ ಮಾಲಿವುಡ್ ಪ್ರೇಕ್ಷಕರನ್ನು ಸೆಳೆದಿದೆ. ಇದರಲ್ಲಿನ ಪ್ರಣವ್ ಭಾವಪೂರ್ಣ ನಟನೆ ಆತನ ಮೊದಲ ಚಿತ್ರದೆಡೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದುವೇ ಈ ಚಿತ್ರದಲ್ಲಿ ಪ್ರಣವ್‌ನ ಪಾತ್ರವೇನೆಂಬ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿದೆ.


ಸಂತೋಷ್ ವರ್ಮಾ ಬರೆದಿರೋ ಈ ಹಾಡಿಗೆ ನಜೀಮ್ ಅರ್ಶಾದ್ ಅಷ್ಟೇ ಚೆಂದಗೆ ಹಾಡೋ ಮೂಲಕ ಈ ಹಾಡೀಗ ಮಾಲಿವುಡ್ ಮೀರಿ ಎಲ್ಲೆಡೆ ಹರಡಿಕೊಂಡಿದೆ. ಜೀತು ಜೋಸೆಫ್ ನಿರ್ದೇಶನದ ಈ ಚಿತ್ರ ಮಾಲಿವುಡ್‌ನಲ್ಲಿ ಮೈಲಿಗಲ್ಲೊಂದನ್ನು ಸ್ಥಾಪಿಸುತ್ತದೆ ಎಂಬ ಬಗ್ಗೆ ಈಗಾಗಲೇ ಮಾತುಗಳು ಕೇಳಿ ಬವರುತ್ತಿವೆ. ಬಹು ಕಾಲದಿಂದಲೂ ಮೋಹನ್‌ಲಾಲ್ ತಮ್ಮ ಪುತ್ರ ಪ್ರಣವ್‌ನನ್ನು ಹೀರೋ ಆಗಿ ಲಾಂಚ್ ಮಾಡುತ್ತಾರೆಂಬ ನಿರೀಕ್ಷೆ ಇದ್ದೇ ಇತ್ತು. ಆದರೆ ಮೋಹನ್ ಲಾಲ್ ತಮ್ಮ ಪುತ್ರ ಮೊದಲ ಚಿತ್ರದಲ್ಲೇ ಗೆಲುವು ದಾಖಲಿಸಬೇಕು ಎಂಬ ಕಾರಣದಿಂದ ಆತುರ ತೋರಿರಲಿಲ್ಲ. ಕಡೆಗೂ ಪ್ರಣವ್ ಜೀತು ಜೋಸೆಫ್ ನಿರ್ದೇಶನದಲ್ಲಿ ಮಾಲಿವುಡ್‌ಗೆ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image