Connect with us

ಪ್ರೆಸ್ ಮೀಟ್

ಎಂ.ಎಲ್. ಎ. ಹಾಡು ಮತ್ತು ಪ್ರಥಮ್ ತಗೊಂಡ ಬಿರುದು !

Published

on

ಚಿತ್ರರಂಗದಲ್ಲಿ ಕೆಲವರು ಬಿರುದುಗಳನ್ನು ಸ್ವತ: ತಗುಲಿಸಿಕೊಳ್ಳುತ್ತಾರೆ. ಕಳೆದ ಭಾನುವಾರ ನಡೆದ ಎಂ.ಎಲ್.ಎ. ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲೂ ಹಾಗೊಂದು ಬಿರುದನ್ನು ಅನಾವರಣ ಮಾಡಲಾಯಿತು. ‘ಬಿಗ್‌ಬಾಸ್’ ಪ್ರಖ್ಯಾತಿಯ ಪ್ರಥಮ್ ಹೀರೋ ಆಗಿ ಅಭಿನಯಿಸಿರುವ ಈ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ದರ್ಶನ್ ಆಗಮಿಸಿದ್ದರು. ದರ್ಶನ್ ಬರುತ್ತಾರೆ ಎನ್ನುವಾಗ ಇಡೀ ವೇದಿಕೆ ತುಂಬಾ ಜನ ಜಮಾಯಿಸಲೇಬೇಕು. ಇಲ್ಲ್ಲಿ ದರ್ಶನ್ ಪಕ್ಕದಲ್ಲಿ ನಿಂತುಕೊಂಡ ಪ್ರಥಮ್, ದರ್ಶನ್ ಕೈಯನ್ನು ತನ್ನ ಹೆಗಲ ಮೇಲೆ ತಾನೇ ಹಾಕಿಸಿಕೊಂಡು, ಚಿತ್ರರಂಗಕ್ಕೆ ದರ್ಶನ್ ಚಾಲೆಂಜಿಂಗ್ ಸ್ಟಾರ್ ಆದರೆ ತಾನು ಚಾಲಾಕಿ ಸ್ಟಾರ್ ಎನ್ನುವ ಸ್ವಯಂ ಘೋಷಿತ ಬಿರುದನ್ನು ಇಟ್ಟುಕೊಂಡರು ! ಇಲ್ಲಿ ಎಲ್ಲರೂ ನಗಬೇಕು ಎನ್ನುವಾಗ ಪ್ರಥಮ್ ಮತ್ತೊಂದು ಮಾತಿಗೆ ಹೊರಳಿಕೊಂಡರು.


ಪ್ರಥಮ್ ಅಭಿನಯಿಸುತ್ತಿರುವ ಎ.ಎಲ್. ಎ. ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಈ ಚಿತ್ರವನ್ನು ಎಪ್ರಿಲ್ ಎರಡನೇ ವಾರ ತೆರೆಕಾಣಿಸುವ ಎಲ್ಲಾ ತಯಾರಿಯೂ ನಡೆದುಹೋಗಿತ್ತು. ಆದರೆ ಚಿತ್ರದಲ್ಲಿ ಈಗ ವಿಧಾನಸಭೆ ಚುನಾವಣೆಗೆ ಉಮೇದುವಾರಾಗಿರುವ ಎಚ್.ಎಂ. ರೇವಣ್ಣ ಅಭಿನಯಿಸಿದ್ದಾರೆ. ಚಿತ್ರದ ಟೈಟಲ್ ಎಂ. ಎಲ್. ಎ. ಆಗಿರುವುದು, ಮತ್ತು ಓಟಿನ ಮೇಲೆ ಹಾಡೊಂದೂ ಇದೆ. ಇದೆಲ್ಲಾ ಚುನಾವಣಾ ನೀತಿ ಸಂಹಿತೆ ಮೀರಬಹುದು ಎನ್ನುವ ಕಾರಣದಿಂದ ಬಿಡುಗಡೆಯನ್ನು ಚುನಾವಣಾ ನಂತರ ಇಟ್ಟುಕೊಳ್ಳಲಾಗಿದೆ.


ಚಿತ್ರದ ಚಿತ್ರೀಕರಣ ಹಾಡುಗಳನ್ನು ಇಲ್ಲಿ ಪ್ರದರ್ಶಿಸಲಾಯಿತು. ಅದರೊಂದಿಗೆ ಚಿತ್ರದ ಧ್ವನಿ ಸುರುಳಿಯನ್ನೂ ಬಿಡುಗಡೆ ಮಾಡಲಾಯಿತು. ಹಾಡುಗಳ ಮಾರುಕಟ್ಟೆಯನ್ನು ಪುನೀತ್ ಒಡೆತನದ ಪಿ.ಆರ್.ಕೆ. ಸಂಸ್ಥೆ ನೋಡಿಕೊಂಡಿದೆ. ಫಿಲಂ ಚೇಂಬರ್ ಅದ್ಯಕ್ಷ ಸಾರಾ. ಗೋವಿಂದು, ನಿರ್ಮಾಪಕ ಎಂ.ಗಣೇಶ್, ನಿರ್ದೇಶಕ ವಾಸು, ಎಂ.ಜಿ. ರಾಮಮೂರ್ತಿ ಮುಂತಾದ ಪ್ರಮುಖರು ಇಲ್ಲಿ ಜಮಾಯಿಸಿದ್ದರು. ವೇದಿಕೆಯಲ್ಲೇ ಅಭಿಮಾನಿಗಳಿಂದ ಸೆಲಿ ಕಾಟ; ಹಾಗಾಗಿ ದರ್ಶನ್ ಸಮಾರಂಭಕ್ಕೆ ಶುಭಾಷಯ ಕೋರಿ ಮಾತು ಮುಗಿಸಿದರು. ಚಿತ್ರದಲ್ಲಿ ಕುರಿ ಪ್ರತಾಪ್ ೪೮ ಕಾಲ್ ಶೀಟ್ ಕೊಟ್ಟು ಅಭಿನಯಿಸಿದ್ದಾರೆ. ಹಾಗಾಗಿ ಅವರಿಂದ ಚಿತ್ರದುದ್ದಕ್ಕೂ ಅಭಿನಯವನ್ನು ನಿರೀಕ್ಷಿಸಬಹುದು. ಸರ್ಶ ರೇಖಾ ಇದ್ದಾರೆ. ಹತ್ತು ವರ್ಷ ಚಿಕ್ಕವರಾಗಿದ್ದರೆ ನಾನು ರೇಖಾ ಅವರಿಗೆ ನಾಯಕ ಆಗುತ್ತಿದ್ದೆ ಎಂದು ಪ್ರಥಮ್ ಹೇಳಿಕೊಂಡರು. ಈ ಮಾತಿನಿಂದ ನಗು ಕೇಳಿಸಿಕೊಂಡಿದ್ದು ಪ್ರಥಮ್‌ರಿಂದ ಮಾತ್ರ !


ಚಿತ್ರವನ್ನು ಮೌರ್ಯ ಎಂಬುವವರು ನಿರ್ದೇಶಿಸಿದ್ದಾರೆ. ಇದು ಅವರಿಗೆ ಪ್ರಥಮ ಅವಕಾಶ. ಈ ಹಂತದಲ್ಲೂ ಮಾತು ಬಂದಿದ್ದು ಮತ್ತೆ ಪ್ರಥಮ್‌ರಿಂದ ; ಆತ ಮಗರ, ನಾನು ರಣರ ! ಹೀಗೆ ಪ್ರಥಮ್ ಸಿಕ್ಕಿಸಿಕೊಂಡಿದ್ದು ಮತ್ತೊಂದು ಟೈಟಲ್. ಚಿತ್ರದ ನಿರ್ಮಾಪಕರು ವೆಂಕಟೇಶ್ ರೆಡ್ಡಿ ಮತ್ತು ವೆಂಕಿ ಪಾಲುಗೂಳ್ಳ. ವಿಕ್ರಮ್ ಸುಬ್ರಮಣ್ಯ ಸಂಗೀತ ನಿರ್ದೇಶಕರು.
ಎಂ.ಎಲ್.ಎ. ಹಾಡುಗಳ ಬಿಡುಗಡೆಯಿಂದ ಪ್ರಥಮ್ ಚಾಲಾಕಿ ನಟ ಎಂಬ ಬಿರುದನ್ನಂತೂ ಇಟ್ಟುಕೊಂಡರು. ಈ ಚಿತ್ರಕ್ಕೆ ಮೈಸೂರು, ಚಿಕ್ಕಮಗಳೂರು, ಕಳಸಾ ಮುಂತಾದಡೆ ಚಿತ್ರೀಕರಣ ನಡೆಸಲಾಗಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಪ್ರಚಲಿತ ವಿದ್ಯಮಾನ

ಲವರ್ ಬಾಯ್ಸ್ ವಿತ್ ಆರೆಂಜ್!

Published

on

 
ನಿಮ್ಮ ಸಿನಿಮಾ ಲಾಂಛನದಲ್ಲಿ ನವೀನ್ ಅವರು ನಿರ್ಮಿಸಿರುವ, ಗೋಲ್ದನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ‘ಆರೆಂಜ್‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪ್ರಶಾಂತ್ ರಾಜ್ ಅವರೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಮುರಳಿ ನೃತ್ಯ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ನಟರಾಜ್ ಸಂಭಾಷಣೆ ಬರೆದಿದ್ದಾರೆ. ಗಣೇಶ್, ಪ್ರಿಯಾ ಆನಂದ್, ಸಾಧುಕೋಕಿಲ, ರಂಗಾಯಣ ರಘು, ಅವಿನಾಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದೇ ಪ್ರಶಾಂತ್ ರಾಜ್ ನಿರ್ದೇಶಿಸಿ, ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ್ದ ಜ಼ೂಮ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಯಶಸ್ವಿ ಜೋಡಿಯ ‘ಆರೆಂಜ್’ ತೆರೆಗೆ ಬರುತ್ತಿರೋದರಿಂದ ಪ್ರೇಕ್ಷಕ ವಲಯದಲ್ಲೂ ಒಂಥರಾ ಕುತೂಹಲ ಮನೆ ಮಾಡಿದೆ. ‘ಲವ್ ಗುರು’ ಸಿನಿಮಾದ ಮೂಲಕ ನಿರ್ದೇಶಕರಾಗಿ ಬಂದು ಗೆಲುವು ಕಂಡವರು ಪ್ರಶಾಂತ್ ರಾಜ್, ಲವರ್ ಬಾಯ್ ಆಗಿದ್ದುಕೊಂಡೇ ಸಿನಿಮಾ ಪ್ರೇಮಿಗಳ ಎದೆಗೆ ಮುಂಗಾರುಮಳೆ ಚುಮುಕಿಸಿದವರು ಗಣೇಶ್. ಈ ಇಬ್ಬರ ಕಾಂಬಿನೇಷನ್ ‘ಆರೆಂಜ್’ ಮೂಲಕ ಮತ್ತೆ ಒಂದಾಗಿರೋ ವಿಚಾರವೇ ಮಜಬೂತಾಗಿದೆ. ಈಗಾಗಲೇ ಹೊರಬಂದಿರುವ ಹಾಡುಗಳು ಕೇಳುಗರ ಕಿವಿಗೆ ನಾಟಿದ್ದು, ಮನಸ್ಸಿನಲ್ಲಿ ಹಿತವಾದ ಭಾವ ಹೊಮ್ಮಿಸಿದೆ. ಈ ವಾರವೇ ತೆರೆಗೆ ಬರುತ್ತಿರುವ ‘ಆರೆಂಜ್’ ನೋಡಿದ ಪ್ರತಿಯೊಬ್ಬರನ್ನೂ ಆವರಿಸಿಕೊಳ್ಳುವ ಲಕ್ಷಣವೇ ಹೆಚ್ಚಾಗಿದೆ…

Continue Reading

ಟೀಸರ್ / ಟ್ರೇಲರ್ / ಆಡಿಯೋ ಲಾಂಚ್

ಕೆಜಿಎಫ್ ಆಡಿಯೋ ಹಕ್ಕಿಗೆ ಮೂರು ಕೋಟಿ ಅರವತ್ತು ಲಕ್ಷ!

Published

on

ಕನ್ನಡದ ಮಟ್ಟಿಗೆ ಲಹರಿ ಆಡಿಯೋ ಸಂಸ್ಥೆ ಸಾರ್ವಕಾಲಿಕ ದಾಖಲೆಗಳ ರೂವಾರಿ. ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಳ್ಳೋದು ಲಹರಿಯ ಸ್ಪೆಷಾಲಿಟಿ. ಆದರೆ ಈಗ ಈ ಸಂಸ್ಥೆ ಮಾಡಿರೋ ದಾಖಲೆ ಮಾತ್ರ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳ ಚಿತ್ರರಂಗದವರೂ ಬೆರಗಾಗಿದ್ದಾರೆ!

ಅಂದಹಾಗೆ, ಕನ್ನಡದ ಕೆಜಿಎಫ್ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆಯಲ್ಲಾ? ಅದರಲ್ಲಿ ಹಿಂದಿ ಒಂದನ್ನು ಹೊರತು ಪಡಿಸಿ ಮಿಕ್ಕ ನಾಲಕ್ಕೂ ಭಾಷೆಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿದೆ. ಆ ಮೊತ್ತ ಬರೋಬ್ಬರಿ 3.60 ಕೋಟಿ!

ಇದು ನಿಜಕ್ಕೂ ದಾಖಲೆ. ಕನ್ನಡ, ತೆಲುಗು, ಮಲೆಯಾಳಂ ಮತ್ತು ತಮಿಳು ಭಾಷೆಗಳ ಕೆಜಿಎಫ್ ಆಡಿಯೋ ಹಕ್ಕನ್ನು ಈ ಪಾಟಿ ದೊಡ್ಡ ಮೊತ್ತಕ್ಕೆ ಖರೀದಿಸೋ ಮೂಲಕ ಲಹರಿ ಸಂಸ್ಥೆ ಕೆಜಿಎಫ್ ಚಿತ್ರಕ್ಕೆ ಮತ್ತಷ್ಟು ಖದರು ತಂದು ಕೊಟ್ಟಿರೋದಂತೂ ಸತ್ಯ.

ಈ ಮೂಲಕ ಲಹರಿ ವೇಲು ಈ ಹಿಂದೆ ತಾವೇ ಸೃಷ್ಟಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿದಂತಾಗಿದೆ. 1992ರಲ್ಲಿ ದಳಪತಿ ಚಿತ್ರದ ಆಡಿಯೋ ಹಕ್ಕುಗಳನ್ನು ಈ ಸಂಸ್ಥೆ ಎಪ್ಪತೈದು ಲಕ್ಷ ಕೊಟ್ಟು ಖರೀದಿಸಿತ್ತು. ಈ ಸುದ್ದಿ ಕೇಳಿ ಎಲ್ಲರೂ ಬೆರಗಾಗಿದ್ದರು. ಇಂಥಾದ್ದೊಂದು ದಾಖಲೆಯ ನಂತರ ಬಾಹುಬಲಿ ಚಿತ್ರದ ಆಡಿಯೋ ಹಕ್ಕುಗಳನ್ನೂ ಕೂಡಾ ಭಾರೀ ಮೊತ್ತಕ್ಕೇ ಖರೀದಿಸಲಾಗಿತ್ತು. ಇದೀಗ ಖುದ್ದು ಲಹರಿ ಸಂಸ್ಥೆ ಕೆಜಿಎಫ್ ಮೂಲಕ ತನ್ನ ದಾಖಲೆಗಳನ್ನು ತಾನೇ ಬ್ರೇಕ್ ಮಾಡಿಕೊಂಡಿದೆ.

ಕೆಜಿಎಫ್ ಚಿತ್ರದ ಟೀಸರ್‌ಗೆ ದೇಶಾಧ್ಯಂತ ವ್ಯಾಪಕ ಮೆಚ್ಚುಗೆ ಕೇಳಿ ಬರುತ್ತಿದೆ. ಕನ್ನಡ ಚಿತ್ರವೊಂದು ಬೇರೆ ಭಾಷೆಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ, ಕನ್ನಡ ಚಿತ್ರರಂಗದ ಗರಿಮೆಯನ್ನು ಎತ್ತಿ ಹಿಡಿಯುತ್ತಿರೋದರಿಂದ ಖುಷಿಗೊಂಡಿರೋ ವೇಲು ಅವರು ದಾಖಲೆ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿ ಮಾಡಿದ್ದಾರಂತೆ.

Continue Reading

ಪ್ರೆಸ್ ಮೀಟ್

ಬುಡು ಬುಡುಕೆ ಬಡಿಯೋರ ಬದುಕಿನ ಬಗ್ಗೆ ನಿಮಗೆಷ್ಷು ಗೊತ್ತು?

Published

on


ಈ ಹಿಂದೆ ರಥಾವರ ಚಿತ್ರ ನಿರ್ದೇಶನ ಮಾಡಿದ್ದ ಚಂದ್ರಶೇಖರ ಬಂಡಿಯಪ್ಪರ ಹೊಸಾ ಚಿತ್ರ ತಾರಕಾಸುರ. ಈಗಾಗಲೇ ಭಿನ್ನವಾದ ಕಥೆಯೊಂದರ ಸುಳಿವಿನಿಂದ, ಎಂಥವರನ್ನೂ ಬೆರಗಾಗಿಸುವಂಥಾ ಪೋಸ್ಟರುಗಳಿಂದ ಈ ಚಿತ್ರ ಜನಮನ ಸೆಳೆದುಕೊಂಡಿದೆ. ಈ ಚಿತ್ರ ಈ ವಾರವೇ ತೆರೆ ಕಾಣಲಿದೆ.

ಈ ಚಿತ್ರದ ನಿರ್ಮಾಪಕರು. ಇವರ ಪುತ್ರ ವೈಭವ್ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ವೈಭವ್ ಥರ ಥರದ ಶೇಡುಗಳಿರೋ ಭಿನ್ನವಾದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದ್ಯಾವುದೋ ಲೇಖನವೊಂದನ್ನು ಓದುವಾಗ ನಶಿಸಿ ಹೋಗುತ್ತಿರೋ ವಿಶಷ್ಟ ಜಾನಪದ ಪ್ರಾಕಾರವೊಂದು ಬಂಡಿಯಪ್ಪನವರ ಕಣ್ಣಿಗೆ ಬಿದ್ದಿತ್ತು. ಎಂದಿನ ಕುತೂಹಲದಿಂದ ಅದರ ಬೆಂಬಿದ್ದವರಿಗೆ ಸಿಕ್ಕಿದ್ದು ವಿಸ್ಮಯಕರ ಮಾಹಿತಿ. ಇದರ ಮೂಲಕವೇ ತಾರಕಾಸುರ ಎಂಬ ಅಚ್ಚರಿಯ ಕಥೆಯೊಂದಕ್ಕೆ ಬಂಡಿಯಪ್ಪ ಜೀವ ತುಂಬಿದ್ದರು. ಈ ಹಿಂದೆ ರಥಾವರ ಚಿತ್ರದಲ್ಲಿ ಮಂಗಳಮುಖಿಯರ ಜಗತ್ತನ್ನು ತೆರೆದಿಟ್ಟಿದ್ದರಲ್ಲಾ? ಅಂಥದ್ದೇ ರೋಚಕತೆಯೊಂದಿಗೆ ಈ ಚಿತ್ರದಲ್ಲಿ ಬುಡುಬುಡ್ಕೆ ಸಮುದಾಯದ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.

ಒಂದು ಸಮುದಾಯದ ಸುತ್ತಲಿನ ಕಥಾ ಹಂದರ ಹೊಂದಿದ್ದರೂ ತಾರಕಾಸುರ ಪಕ್ಕಾ ಕಮರ್ಶಿಯಲ್ ಚಿತ್ರ. ಹಾಲಿವುಡ್‌ನ ಖ್ಯಾತ ನಟ ಡ್ಯಾನಿ ಸಫಾನಿ ಈ ಚಿತ್ರದಲ್ಲಿ ಮುಖ್ಯ ವಿಲನ್ ಆಗಿ ನಟಿಸಿದ್ದಾರೆ. ಅದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದಾಗಿದೆ. ಇದೂ ಸೇರಿದಂತೆ ತಾರಕಾಸುರನ ಬಗ್ಗೆ ಇಂಥಾದ್ದೊಂದು ಕೌತುಕ ಹುಟ್ಟಿಕೊಳ್ಳಲು ನಾನಾ ಕಾರಣಗಳಿವೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz