One N Only Exclusive Cine Portal

ಎಂಎಲ್‌ಎ ಪ್ರಥಮ್‌ಗೆ ರಿಯಲ್ ಮಿನಿಸ್ಟರ್ ಸಾಥ್!

ಬಿಗ್‌ಬಾಸ್ ವಿನ್ನರ್ ಪ್ರಥಮ್ ಅಭಿನಯದ ದೇವ್ರಂಥಾ ಮನುಷ್ಯ ಚಿತ್ರ ತೆರೆ ಕಾಣಲು ಸನ್ನದ್ಧವಾಗಿದೆ. ಅದಾಗಲೇ ಪ್ರಥಮ್ ಮತ್ತೊಂದಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅವರ ಲಿಸ್ಟಿನಲ್ಲಿರೋ ಪ್ರಮುಖ ಚಿತ್ರ ಎಂಎಲ್‌ಎ. ಈ ಚಿತ್ರದಲ್ಲಿ ರಾಜಕಾರಣಿಯೊಬ್ಬರು ಪ್ರಮುಖವಾದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆಂಬ ಸುದ್ದಿಯಾಗಿತ್ತಲ್ಲಾ? ಅವರ್‍ಯಾರೆಂಬ ವಿಚಾರವೀಗ ಜಾಹೀರಾಗಿದೆ!


ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಹೆಚ್ ಎಂ ರೇವಣ್ಣ ಪ್ರಥಮ್ ಎಂಎಲ್‌ಎ ಚಿತ್ರದಲ್ಲಿ ಪ್ರಮುಖವಾದೊಂದು ಪಾತ್ರ ನಿರ್ವಹಿಸಿದ್ದಾರೆ. ಅದಕ್ಕಾಗಿ ತಮ್ಮ ಒತ್ತಡದ ಕೆಲಸ ಕಾರ್ಯಗಳ ನಡುವೆಯೂ ತಮ್ಮ ಭಾಗದ ಚಿತ್ರೀಕರಣವನ್ನು ರೇವಣ್ಣನವರು ಮುಗಿಸಿಕೊಟ್ಟಿದ್ದಾರೆ.

ಒಂದೊಳ್ಳೆ ಸಂದೇಶವನ್ನು, ಆಶಯವನ್ನು ಯುವ ಜನಾಂಗಕ್ಕೆ ರವಾನಿಸೋ ಸದುದ್ದೇಶ ಹೊಂದಿರೋ ಈ ಚಿತ್ರದ ಕಥೆಯನ್ನು ಮೆಚ್ಚಿಕೊಂಡು ರೇವಣ್ಣನವರು ಮುಖ್ಯಮಂತ್ರಿಯಾಗಿ ನಟಿಸಲು ಒಪ್ಪಿಕೊಂಡಿದ್ದರಂತೆ. ಚುನಾವಣೆ ಬಂದಿರೋದರಿಂದ ಕೂರಲು ನಿಲ್ಲಲೂ ಪುರಸೊತ್ತಿಲ್ಲದಷ್ಟು ಬ್ಯುಸಿಯಾಗಿರೋ ರೇವಣ್ಣ ಈ ಚಿತ್ರಕ್ಕಾಗಿ ನಾಲಕ್ಕು ದಿನಗಳ ಡೇಟ್ ಕೊಟ್ಟಿದ್ದರಂತೆ. ಅದರನ್ವಯವೇ ಬಂದು ಚಿತ್ರೀಕರಣವನ್ನು ಮುಗಿಸಿಕೊಟ್ಟಿದ್ದಾರೆ.

ನಿನ್ನೆ ಭಾನುವಾರ ಹಬ್ಬದ ನಿಮಿತ್ತವಾಗಿ ರಜೆ ಇದ್ದರೂ ರೇವಣ್ಣನವರು ಡಬ್ಬಿಂಗ್ ಕಾರ್ಯ ಮುಗಿಸಿಕೊಟ್ಟಿದ್ದಾರಂತೆ. ಒಳ್ಳೆಯ ಆಶಯ ಮತ್ತು ಅಷ್ಟೇ ಚೆಂದದ ಕಥೆ ಹೊಂದಿರೋ ಈ ಚಿತ್ರ ಗೆಲ್ಲುವ ಎಲ್ಲ ಲಕ್ಷಣಗಳೂ ಇವೆ ಎಂಬ ಭವಿಷ್ಯ ನುಡಿದಿರೋ ರೇವಣ್ಣ ಪ್ರಥಮ್ ಈ ಚಿತ್ರವನ್ನು ತುಂಬಾ ಲವ ಲವಿಕೆಯಿಂದ ಮಾಡಿದ್ದಾರೆಂಬ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ.
ಈಗಾಗಲೇ ಪ್ರಥಮ್ ಅಭಿನಯದ ದೇವ್ರಂಥಾ ಮನುಷ್ಯ ಚಿತ್ರದ ಟ್ರೈಲರ್ ಎಲ್ಲೆಡೆ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಆ ಬಿಸಿಯಲ್ಲಿಯೇ ಎಂಎಲ್‌ಎ ಚಿತ್ರದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರೋ ಪ್ರಥಮ್ ರೇವಣ್ಣರಂಥಾ ರಿಯಲ್ ರಾಜಕಾರಣಿಗಳಿಂದ ಪಾತ್ರ ಮಾಡಿಸೋ ಮೂಲಕ ಇನ್ನಷ್ಟು ಕುತೂಹಲ ಹುಟ್ಟುವಂತೆ ಮಾಡಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image