One N Only Exclusive Cine Portal

ಪ್ರಥಮ್ ಸಿದ್ದರಾಮಯ್ಯನವರ ಮುಂದಿಟ್ಟ ವಿಚಿತ್ರ ಬೇಡಿಕೆ!

ಪ್ರಥಮ್ ನಟಭಯಂಕರ ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿರುವ ವಿಚಾರದ ಬಗ್ಗೆ ನಿನ್ನೆಯಷ್ಟೆ ಸವಿವರವಾದ ಮಾಹಿತಿ ಹೊರ ಬಿದ್ದಿತ್ತು. ಈ ಚಿತ್ರದ ಬಗ್ಗೆ ಗಂಭೀರವಾಗಿ ಮುಂದಡಿ ಇಡುತ್ತಿರುವ ಪ್ರಥಮ್ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ರಾಜಕೀಯವಾದ ಮಾತುಕತೆಗಳು ಮಾತ್ರವೇ ನಡೆದಿದೆಯಾ ಎಂಬ ಪ್ರಶ್ನೆ ಕಾಡೋದು ಸಹಜವೇ. ಆದರೆ ಪ್ರಥಮ್ ಮತ್ತು ಸಿಎಂ ನಡುವೆ ಸಿನಿಮಾ ಮತ್ತು ರಾಜಕೀಯದ ಬಗ್ಗೆ ಸವಿಸ್ತಾರವಾದ ಚರ್ಚೆ ನಡೆದಿದೆಯಂತೆ. ಇದೇ ಸಂದರ್ಭದಲ್ಲಿ ಸಿಎಂ ಎಲಕ್ಷನ್ ಬ್ಯುಸಿಯ ಬಗೆಗೂ ಒಂದಷ್ಟು ವಿಚಾರಗಳನ್ನು ಪ್ರಥಮ್ ಜೊತೆ ಹಂಚಿಕೊಂಡಿದ್ದಾರೆ.

ಈ ಮಾತುಕತೆಯ ನಡುವೆಯೇ ಪ್ರಥಮ್ ತಮ್ಮ ಹೊಸಾ ಚಿತ್ರ ನಟಭಯಂಕರದ ಬಗ್ಗೆಯೂ ಸಿಎಂಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಿದ್ದರಾಮಯ್ಯನವರು ಕೂಡಾ ಶುಭ ಹಾರೈಸಿದೇಟಿಗೆ ಪ್ರಥಮ್ ಅಸಲೀ ವಿಚಾರಕ್ಕೆ ಬಂದಿದ್ದಾರೆ. `ಇದುವರೆಗೂ ನೀವು ನಿಮ್ಮ ಶ್ರೀಮತಿಯವರ ಜೊತೆಗೆ ತೆಗೆಸಿಕೊಂಡಿರೋ ಭಾವಚಿತ್ರ ಯಾರ ಬಳಿಯೂ ಇಲ್ಲ. ಒಂದಷ್ಟು ಜನ ಹುಡುಕಿದರೂ ಸಿಕ್ಕಿಲ್ಲ. ನೀವು ಮತ್ತು ನಿಮ್ಮ ಶ್ರೀಮತಿಯವರ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಬೇಕೆಂಬುದು ನನ್ನಾಸೆ. ಅದಕ್ಕೆ ಅವಕಾಶ ಮಾಡಿಕೊಡುತ್ತೀರಿ ಅಂದುಕೊಂಡಿದ್ದೇನೆ’ ಅಂದಿದ್ದಾರೆ!

ಈ ಮಾತು ಕೇಳಿ ತಮ್ಮದೇ ಶೈಲಿಯಲ್ಲಿ ನಕ್ಕು ಸಿದ್ದರಾಮಯ್ಯನವರು ಒಂದು ರೇಂಜಿಗೆ ಒಪ್ಪಿಗೆಯಂಥಾದ್ದನ್ನು ರವಾನಿಸಿದ್ದಾರೆ. ಒಂದು ವೇಳೆ ಸಿಎಂ ಮನಸು ಮಾಡಿದರೆ ತಮ್ಮ ಮಡದಿಯೊಂದಿಗೆ ಪ್ರಥಮ್‌ಗೆ ಸೆಲ್ಫಿ ಪೋಸು ಕೊಡಲಿದ್ದಾರೆ.
ಯಾರೇ ಮುಖ್ಯಮಂತ್ರಿಯಾದಾಗಲೂ ಅವರ ಮನೆ ಮಂದಿ ಮತ್ತು ಮಡದಿ ಸದಾ ಸುದ್ದಿ ಕೇಂದ್ರದಲ್ಲಿರುತ್ತಾರೆ. ಆದರೆ ಸಿದ್ದರಾಮಯ್ಯನವರ ಮಡದಿ ಪಾರ್ವತಿ ಅವರು ಇದಕ್ಕೆ ಅಪವಾದ. ಪ್ರಚಾರ ಹಾಗಿರಲಿ, ಅವರದ್ದೊಂದು ಸ್ಪಷ್ಟವಾದ ಫೋಟೋ ಸಿಗೋದೂ ಕಷ್ಟ ಎಂಬಂತಿದೆ. ಆದರೆ ಪ್ರಥಮ್ ಮೊದಲ ಸಲ ಮುಖ್ಯಮಂತ್ರಿಯನ್ನು ಸಪತ್ನೀಸಮೇತರಾಗಿ ಕರ್ನಾಟಕದೆದುರು ಅನಾವರಣ ಮಾಡಿದರೂ ಅಚ್ಚರಿಯೇನಿಲ್ಲ!

Leave a Reply

Your email address will not be published. Required fields are marked *


CAPTCHA Image
Reload Image