One N Only Exclusive Cine Portal

ಕೊಲೆಯಾದ ದೀಪಕ್ ಮನೆಗೆ ಪ್ರಥಮ್ ಭೇಟಿ!

ದೀಪಕ್ ಎಂಬ ಯುವಕನ ಕೊಲೆಯ ಮೂಲಕ ಮಂಗಳೂರು ಮತ್ತೊಮ್ಮೆ ಪ್ರಕ್ಷುಬ್ಧವಾಗಿದೆ. ಈ ಕೊಲೆಯ ಸುತ್ತಾ ಧರ್ಮ, ರಾಜಕೀಯದ ಆಟ ಜೋರಾಗೇ ನಡೆಯುತ್ತಿರೋ ಈ ಹೊತ್ತಿನಲ್ಲಿ ಮಗನನ್ನು ಕಳೆದುಕೊಂಡ ಆ ಮನೆಯವರ ಸಂಕಟ, ಮನುಷ್ಯಸಹಜ ಆಕ್ರಂದನಗಳೆಲ್ಲ ಮರೆ ಮಾಚಲ್ಪಟ್ಟಂತಿದೆ. ಇದೀಗ ಪ್ರಥಮ್ ಮೃತ ದೀಪಕ್ ಮನೆಗೆ ತೆರಳಿ ಸಾಂತ್ವನ ಹೇಳಿ ಆರ್ಥಿಕ ನೆರವನ್ನೂ ಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮಂಗಳೂರಿನ ಪ್ರಕ್ಷುಬ್ಧ ವಾತಾವರಣದ ನಡುವೆಯೂ ಪ್ರಥಮ್ ದೀಪಕ್ ಮನೆಗೆ ಖುದ್ದಾಗಿ ಭೇಟಿ ನೀಡಿದ್ದಾರೆ. ಸಾವಿನ ಸೂತಕದಲ್ಲಿ ದುಃಖಿತರಾಗಿದ್ದ ದೀಪಕ್ ಮನೆ ಸದಸ್ಯರಿಗೆಲ್ಲಾ ಸಾಂತ್ವನ ಹೇಳಿದ್ದಲ್ಲದೆ ೨೫ ಸಾವಿರ ರೂಪಾಯಿಯ ನೆರವನ್ನೂ ನೀಡಿದ್ದಾರೆ. ಈ ಮೂಲಕ ಈ ಸಾವನ್ನೂ ಕೂಡಾ ರಾಜಕೀಯವಾಗಿ ಬಳಸಿಕೊಳ್ಳೋ ಪಿತೂರಿಗಳ ನಡುವೆಯೂ ಮನುಷ್ಯತ್ವದಿಂದ ವರ್ತಿಸೋ ಮೂಲಕ ಪ್ರಥಮ್ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೊತೆಗೆ ಇಂದು ನಡೆದಿರುವ ಬಷೀರ್ ಎಂಬ ಯುವಕನ ಸಾವಿಗೂ ಪ್ರಥಮ್ ಕಂಬನಿ ಮಿಡಿದಿದ್ದಾರೆ.


ಮಂಗಳೂರು ಸುತ್ತ ಇಂಥಾ ಕೊಲೆಗಳು ಸರಣಿಯೋಪಾದಿಯಲ್ಲಿ ನಡೆಯುತ್ತಿವೆ. ರಾಜಕೀಯ ಪಕ್ಷಗಳು ಇಂಥಾ ಮೃಗೀಯತೆಗೆ ಒಳಗೊಳಗೇ ಸಾಥ್ ನೀಡುತ್ತಾ ಲಾಭ ಗುಂಜಿಕೊಳ್ಳಲು ಸ್ಪರ್ಧೆಗೆ ಬಿದ್ದಂತೆ ಕೆಲಸ ಮಾಡುತ್ತಿವೆ. ಪ್ರಥಮ್‌ರಂಥವರು ಇಂಥಾ ರಾಜಕೀಯ ಪಿತೂರಿಗಳನ್ನೂ ಜನ ಸಾಮಾನ್ಯರಿಗೆ ಮನದಟ್ಟು ಮಾಡಿಸುವಂತಾಗಲಿ…

Leave a Reply

Your email address will not be published. Required fields are marked *


CAPTCHA Image
Reload Image