One N Only Exclusive Cine Portal

ಪ್ರೀತಿಯ ರಾಯಭಾರಿ – ಹಾಡುಗಳ ಸವಾರಿ!

ಪ್ರೀತಿಯ ರಾಯಭಾರಿ ಚಿತ್ರತಂಡ ಎರಡೆರಡು ಖುಷಿಯಲ್ಲಿ ತೇಲಾಡುತ್ತಿದೆ. ಬಂದ್‌ನ ಕಾರಣದಿಂದ ಚಿತ್ರ ಪ್ರದರ್ಶನ ಮುಂದೂಡುವ ಕಂಟಕದಿಂದ ಪಾರಾಗಿ ಬಿಡುಗಡೆಯ ದಿನಾಂಕ ಫಿಕ್ಸಾದ ಖುಷಿ ಒಂದಾದರೆ, ಇತ್ತೀಚೆಗೆ ಅನಾವರಣಗೊಂಡ ಹಾಡುಗಳೆಲ್ಲವೂ ಗೆಲುವು ಕಂಡಿರೋದು ಮತ್ತೊಂದು ಸಂತಸ!

ಅಂದಹಾಗೆ ಈಗಾಗಲೇ ಟ್ರೈಲರ್, ಹಾಡು ಸೇರಿದಂತೆ ಪ್ರತಿಯೊಂದು ಹಂತದಲ್ಲಿಯೂ ಕುತೂಹಲ ಹುಟ್ಟಿಸಿರುವ ಪ್ರೀತಿಯ ರಾಯಭಾರಿ ಚಿತ್ರ ಇದೇ ಮಾರ್ಚ್ ೨ರಂದು ತೆರೆ ಕಾಣಲಿದೆ. ಹೀಗೆ ಬಿಡುಗಡೆಯ ಹೊಸ್ತಿಲಲ್ಲಿ ನಿಂತಿರುವ ಚಿತ್ರತಂಡಕ್ಕೆ ಹಾಡುಗಳಿಗೆ ಸಿಕ್ಕಿರೋ ಭರಪೂರ ಮೆಚ್ಚುಗೆ ಮತ್ತಷ್ಟು ಉತ್ಸಾಹ ತುಂಬಿದೆ.

ಅರ್ಜುನ್ ಜನ್ಯಾ ಪ್ರೀತಿಯ ರಾಯಭಾರಿ ಚಿತ್ರದ ಮೂಲಕ ಮತ್ತೊಮ್ಮೆ ಕೈಚಳಕ ತೋರಿಸಿದ್ದಾರೆ. ಜನ್ಯಾ ಸಂಗೀತ ನಿರ್ದೇಶನ ಮಾಡಿರುವ ನಾಲಕ್ಕೂ ಹಾಡುಗಳೂ ಕೂಡಾ ಒಂದೊಂದು ರೀತಿಯಲ್ಲಿ ಜನರನ್ನು ತಲುಪಿಕೊಂಡಿದೆ. ಅದರಲ್ಲಿಯೂ ಚಂದನ್ ಶೆಟ್ಟಿ ಬರೆದು ಹಾಡಿರುವ `ಸಂಬಡಿ ಸೇ’ ಹಾಡಂತೂ ವೈರಲ್ ಆಗಿ ಹುಚ್ಚೆಬ್ಬಿಸಿದೆ!

ಇನ್ನುಳಿದಂತೆ ವಜಯ ಪ್ರಕಾಶ್ ಹಾಡಿರುವ ಅಮ್ಮಿ ಅಮ್ಮಿ ಹಾಡೂ ಕೂಡಾ ಟಾಪ್ ಟೆನ್ ಪಟ್ಟಿಯಲ್ಲಿ ಭದ್ರವಾದ ಸ್ಥಾನ ಗಿಟ್ಟಿಸಿಕೊಂಡಿದೆ. ಪ್ರೀತಿಯ ರಾಯಭಾರಿ ಹಾಡುಗಳ ವಿಚಾರದಲ್ಲಿಯೇ ಮತ್ತೊಂದು ವಿಶೇಷವೆಂದರೆ ಖ್ಯಾತ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಒಂದು ಹಾಡು ಹಾಡಿರೋದು. ಸಾಧು ಹಾಡಿರುವ `ದೂರ ದೂರ ನಿಂತೆ ನೀ’ ಎಂಬ ಮೆಲೋಡಿ ಹಾಡೂ ಕೂಡಾ ಜನಪ್ರಿಯತೆ ಗಳಿಸಿಕೊಂಡಿದೆ. ಸಾಧು ಕೋಕಿಲಾ ಎದೆಗಾರಿಕೆ ಚಿತ್ರದ ನಂತರ ಲಾಂಗ್ ಗ್ಯಾಪಿನಲ್ಲಿ ಮೊದಲ ಸಲ ಈ ಹಾಡನ್ನು ಹಾಡಿದ್ದಾರೆ.

ಆನಂದ್ ಆಡಿಯೋ ಮೂಲಕ ಹೊರ ಬಂದಿರೋ ಈ ಹಾಡುಗಳಿಗೆ ಜಯಂತ ಕಾಯ್ಕಿಣಿ, ಭರ್ಜರಿ ಚೇತನ್, ಅಲೆಮಾರಿ ಸಂತು ಸಾಹಿತ್ಯ ಒದಗಿಸಿದ್ದಾರೆ. ಅನುರಾಧಾ ಭಟ್ ಕೂಡಾ ಧ್ವನಿಯಾಗಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಎಲ್ಲರನ್ನೂ ಆವರಿಸಿಕೊಂಡಿರುವ ಹಾಡುಗಳೇ ಪ್ರೀತಿಯ ರಾಯಭಾರಿ ಚಿತ್ರ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ.

Leave a Reply

Your email address will not be published. Required fields are marked *


CAPTCHA Image
Reload Image