One N Only Exclusive Cine Portal

ನಂದಿಹಿಲ್ಸ್‌ಗೂ ಪ್ರೀತಿಯ ರಾಯಭಾರಿಗೂ ಏನು ಸಂಬಂಧ?

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಶುರುವಾಗಿರೋ ಟ್ರೆಂಡುಗಳಲ್ಲಿ ನೈಜ ಘಟನೆಯಾಧಾರಿತ ದೃಷ್ಯ ಕಟ್ಟುವಿಕೆಯೂ ಒಂದಾಗಿ ಗುರುತಿಸಿಕೊಂಡಿದೆ. ಈ ಸಾಲಿನಲ್ಲಿ ಅನಾಯಾಸವಾಗಿ ಸ್ಥಾನ ಗಿಟ್ಟಿಸಿಕೊಳ್ಳಬಹುದಾದ ಚಿತ್ರ ‘ಪ್ರೀತಿಯ ರಾಯಭಾರಿ’. ಸದ್ಯ ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಈ ಚಿತ್ರ ಮಾರ್ಚ್ ೯ರಂದು ತೆರೆಕಾಣಲು ಮುಹೂರ್ತ ನಿಗಧಿಪಡಿಸಿಕೊಂಡಿದೆ!

ಮುತ್ತು ನಿರ್ದೇಶನದ ಈ ಚಿತ್ರವನ್ನು ಜೆಡಿಎಸ್ ಮುಖಂಡರಾಗಿ ಗುರುತಿಸಿಕೊಂಡಿರುವ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಲ್ಲೇಶ್ವರಂ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಎಸ್.ಆರ್. ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ರಾಜಕೀಯದ ಜೊತೆ ಜೊತೆಗೇ ಅಪಾರವಾದ ಸಿನಿಮಾ ಪ್ರೀತಿ

ಹೊಂದಿರುವ ವೆಂಕಟೇಶ್ ಗೌಡರು ಇಡೀ ಚಿತ್ರವನ್ನು ಚೆಂದದ ದೃಷ್ಯಕಾವ್ಯವಾಗಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆಂಬುಂದು ಚಿತ್ರ ತಂಡದ ಮೆಚ್ಚುಗೆ. ಇನ್ನುಳಿದಂತೆ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ಎಂ.ಎಂ. ಮುತ್ತು. ಅವರು ಈ ಚಿತ್ರಕ್ಕೆ ಕಥೆಯನ್ನು ಸಿದ್ಧಪಡಿಸಿಕೊಂಡಿದ್ದು, ಆ ಕಥೆಯ ಒಂದೆಳೆ ಸಿಕ್ಕಿದ್ದೆಲ್ಲವೂ

ಅಚಾನಕ್ಕು ವಿದ್ಯಮಾನ. ೨೦೦೭-೮ನೇ ಸಾಲಿನಲ್ಲಿ ಕ್ರೈಂ ನ್ಯೂಸ್ ಕಾರ್ಯಕ್ರಮದಲ್ಲಿ ನಂದಿ ಹಿಲ್ಸ್‌ನಲ್ಲಿ ನಡೆದೊಂದು ಘಟನೆ ವರದಿಯಾಗಿತ್ತಂತೆ. ಅದನ್ನು ನೋಡಿದ ಮುತ್ತು ಅಂದೇ ಈ ಬಗ್ಗೆ ಒಂದು ಚಿತ್ರ ನಿರ್ದೇಶನ ಮಾಡಬೇಕು ಅಂದುಕೊಂಡಿದ್ದರಂತೆ. ನಂತರ ಮನಸೊಳಗೇ ಆ ಕಥೆ ಹದವಾಗಿ

ಕಡೆಗೂ ಈಗ ಪ್ರೀತಿಯ ರಾಯಭಾರಿ ಎಂಬ ದೃಷ್ಯ ರೂಪ ಪಡೆದುಕೊಂಡಿದೆ.

ಅಂದಹಾಗೆ ಈ ಚಿತ್ರ ಇಂದು ರೂಪುಗೊಂಡಿರೋದರ ಹಿಂದೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಪಾತ್ರ ಬಹಳಷ್ಟಿದೆ. ನಿರ್ದೇಶಕರು ವರ್ಷಾಂತರದ ಹಿಂದೆ ಜನ್ಯಾ ಬಳಿ ಈ ಕಥೆ ಹೇಳಿದ್ದಲ್ಲದೇ ಸ್ಕ್ರಿಫ್ಟ್ ಅನ್ನೂ ಅವರಿಗೆ ತೋರಿಸಿದ್ದರಂತೆ. ಅದನ್ನು ಬಹುವಾಗಿ ಮೆಚ್ಚಿಕೊಂಡ ಅರ್ಜುನ್ ಜನ್ಯಾ ಬೇಗನೆ ಚಿತ್ರ ಮಾಡಿ ಅಂದಿಲ್ಲದೆ ನಿರ್ಮಾಪಕರಾದ ಎಸ್ ಆರ್ ಗೌಡರನ್ನೂ ಪರಿಚಯ ಮಾಡಿಕೊಟ್ಟಿದ್ದರಂತೆ. ಅದರ ಫಲವಾಗಿಯೇ ಈ ಚಿತ್ರ ಅಣಿಗೊಂಡಿದೆ ಎಂಬುದು ನಿರ್ದೇಶಕ ಮುತ್ತು ಮಾತು. ಈ ಚಿತ್ರದ ನಾಯಕನಾಗಿ ನಟಿಸುತ್ತಿರುವವರು ನಕುಲ್. ಇವರ ಪಾಲಿಗಿದು ಮೊದಲ ಚಿತ್ರ. ನಟನೆ ಹೊಸತಾದ್ದರಿಂದ ನಿರ್ದೇಶಕರು ಆರಂಭದಲ್ಲಿಯೇ ಮೌನೇಶ್ ಬಡಿಗೇರ್ ಅವರಿಂದ ತರಬೇತಿಯನ್ನೂ ಕೊಡಿಸಿದ್ದರಂತೆ. ಅದರ ಫಲವಾಗಿಯೇ ನಕುಲ್ ಲೀಲಾಜಾಲವಾಗಿ ಅಭಿನಯಿಸಿದ್ದಾರಂತೆ.

ಇನ್ನುಳಿದಂತೆ ಈ ಚಿತ್ರದ ನಾಯಕಿಯಾಗಿರುವ ಸುಕೃತಾ ದೇಶಪಾಂಡೆ. ಈ ಹಿಂದೆ ತರ‍್ಲೆ ನನ್ಮಕ್ಳು ಚಿತ್ರದಲ್ಲಿ ನಟಿಸಿ ಒಂದು ತೆಲುಗು ಚಿತ್ರದಲ್ಲಿಯೂ ನಾಯಕಿಯಾಗಿದ್ದ ಸುಕೃತಾಗಿದು ಕನ್ನಡದಲ್ಲಿ ಎರಡನೇ ಚಿತ್ರ. ಹಿರಿಯೂರು ಸುತ್ತಮುತ್ತಲ ಪರಿಸರದಲ್ಲಿ ಚಿತ್ರೀಕರಣ ಮುಗಿಸಿಕೊಂಡಿರೋ ಈ ಚಿತ್ರದಲ್ಲಿ ಚರಣ್ ರಾಜ್, ಸಾಧು ಕೋಕಿಲಾ, ಪದ್ಮಜಾ ರಾವ್, ಸುಚೇಂದ್ರಪ್ರಸಾದ್, ಮುನಿ ಮುಂತಾದವರು ನಟಿಸಿದ್ದಾರೆ. ಸೆನ್ಸಾರ್ ಅನ್ನೂ ಮುಗಿಸಿಕೊಂಡು ಯು/ಎ

 

ಸರ್ಟಿಫಿಕೆಟ್ ಪಡೆದುಕೊಂಡಿರೋ ಈ ಚಿತ್ರ ಮಾರ್ಚ್ ೯ರಂದು ತೆರೆ ಕಾಣಲಿದೆ.

Leave a Reply

Your email address will not be published. Required fields are marked *


CAPTCHA Image
Reload Image