One N Only Exclusive Cine Portal

ವಿದೇಶಗಳಲ್ಲಿ `ಪ್ರೇಮಬರಹ’ದ ಭರ್ಜರಿ ಚಿತ್ತಾರ!

ಅರ್ಜುನ್ ಸರ್ಜಾ ನಿರ್ದೇಶನದ `ಪ್ರೇಮಬರ` ಚಿತ್ರ ಇತ್ತೀಚೆಗೆ ಬಿಡುಗಡೆಗೊಂಡಿರೋ ವಿಚಾರ ಗೊತ್ತೇ ಇದೆ. ಇಲ್ಲಿ ಯಶಸ್ವಿ ಪ್ರದರ್ಶನ ಕಂಡಿರುವ ಈ ಚಿತ್ರವೀಗ ವಿದೇಶಗಳಲ್ಲಿಯೂ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡಿದೆ.

ಕ್ಯಾಲಿಫೋರ್ನಿಯಾ, ನ್ಯೂಯಾರ್ಕ್, ನ್ಯೂಜೆರ್ಸಿ, ಟೆಕ್ಸಾಸ್, ಚಿಕಾಗೋ ಮುಂತಾದೆಡೆಗಳಲ್ಲಿ ಏರ್ಪಡಿಸಿದ್ದ ಪ್ರೀಮಿಯರ್ ಶೋಗಳಿಗೆ ಅಭೂತಪೂರ್ವವಾದ ಪ್ರತಿಕ್ರಿಯೆ ಸಿಕ್ಕಿದೆ.

ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಮೊದಲ ಸಲ ಈ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಈ ಚಿತ್ರ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು ಮುದಗೊಳಿಸುವಲ್ಲಿ ಗೆದ್ದಿದೆ. ವಿದೇಶದಾಧ್ಯಂತ ಕೇಳಿ ಬಂದಿರೋ ಸಕಾರಾತ್ಮಕ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಗೊಂಡಿದೆ.

ಶ್ರೀರಾಮ ಫ಼ಿಲಂಸ್ ಇಂಟರ್ ನ್ಯಾಷನಲ್ ಲಾಂಛನದಲ್ಲಿ ಅರ್ಜುನ್ ಸರ್ಜಾ ಅವರು ನಿರ್ಮಿಸಿ, ನಿರ್ದೇಶಿಸಿರುವ `ಪ್ರೇಮ ಬರಹ` ಚಿತ್ರದಲ್ಲಿ ಚಂದನ್, ಐಶ್ವರ್ಯ ಅರ್ಜುನ್, ಸಾಧುಕೋಕಿಲ, ರಂಗಾಯಣ ರಘು, ವಿಶ್ವನಾಥ್, ಸುಹಾಸಿನಿ, ಪ್ರಕಾಶ್ ರೈ ಮುಂತಾದವರು ಅಭಿನಯಿಸಿದ್ದಾರೆ. ಚಾಂಲೆಂಜಿಂಗ್ ಸ್ಟಾರ್ ದರ್ಶನ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಹಾಗೂ ಧೃವ ಸರ್ಜಾ ಈ ಚಿತ್ರದ ಹಾಡೊಂದರಲ್ಲಿ ಸ್ನೇಹಪೂರ್ವಕವಾಗಿ ನಟಿಸಿದ್ದಾರೆ.

ಜೆಸ್ಸಿ ಗಿಫ಼್ಟ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಹೆಚ್.ಸಿ.ವೇಣುಗೋಪಾಲ್ ಅವರ ಛಾಯಾಗ್ರಹಣವಿದೆ. ಕೆ ಕೆ ಸಂಕಲನ ಮೋಹನ್ ನೃತ್ಯ ನಿರ್ದೇಶನ ಹಾಗೂ ಸೀನು ಕಲಾ ನಿರ್ದೆಶನವಿರುವ ಈ ಚಿತ್ರಕ್ಕೆ ಶಿವಾರ್ಜುನ್ ಅವರ ನಿರ್ಮಾಣ ನಿರ್ವಹಣೆಯಿದೆ.

Leave a Reply

Your email address will not be published. Required fields are marked *


CAPTCHA Image
Reload Image