One N Only Exclusive Cine Portal

ಹಳೇ ಹೆಸರು ಹೊಸ ಚಿತ್ರ ಪ್ರೇಮಯುದ್ಧ

‘ಪ್ರೇಮಯುದ್ಧ’ ಹೆಸರಿನ ಚಿತ್ರ ೮೦ರ ದಶಕದಲ್ಲಿ ತೆರೆಕಂಡಿತ್ತು. ಈಗ ಅದೇ ಹೆಸರಿನಲ್ಲಿ ಚಿತ್ರವೊಂದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬರಲು ಸಜ್ಜಾಗಿದೆ. ಈ ಕಾರಣಕ್ಕಾಗಿ ಚಿತ್ರತಂಡವು ಮೊದಲಬಾರಿ ಮಾಧಮದ ಮುಂದೆ ಹಾಜರಾಗಿತ್ತು. ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಬಷೀರ್ ಆಲೂರಿ ಚಿತ್ರವನ್ನು ಬಣ್ಣಿಸಿದ್ದು ಹೀಗೆ : “ಪ್ರಚಲಿತ ತಲೆಮಾರಿನ ಟೆಕ್ಕಿಗಳ ಜೀವನ, ಪ್ರೀತಿ, ಸಂಬಂದಗಳು, ಅಹಂ, ಧೋರಣೆ. ಅವರುಗಳ ಜೀವನ ವಿಧಾನ ಯಾವ ರೀತಿ ಇರುತ್ತದೆ. ಸಾಫ್ಟ್‌ವೇರ್ ಕಂಪನೆಗಳಲ್ಲಿ ಮಹಿಳೆಯರ ಸಮಸ್ಯೆ, ತೊಂದರೆಗಳು ಸಿನಿಮಾದಲ್ಲಿ ತೆರೆದುಕೊಳ್ಳಲಿವೆ. ಉನ್ನತ ವ್ಯಾಸಾಂಗಕ್ಕಾಗಿ ವಿದೇಶಕ್ಕೆ ಹೋದ ವಿದ್ಯಾರ್ಥಿಗಳು ಅನುಭವಿಸುವ ಯಾತನೆಗಳನ್ನು ಪೋಷಕರಿಗೆ ತಿಳಿಸುವುದಿಲ್ಲ. ಇವೆಲ್ಲವನ್ನು ಭಾವನಾತ್ಮಕವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ ಎಂಬುದಾಗಿ ವಾಖ್ಯಾನ ನೀಡಿದರು. ಸಾಕಷ್ಟು ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸಿರುವ ವಿನೋದ್ ಆಳ್ವ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು.

ಎಂದಿನಂತೆ ಖಳನಾಯಕನಾಗಿ ಮೂರು ಭಾಷೆಗಳಲ್ಲಿ ಹೆಸರು ಮಾಡಿರುವ ಸತ್ಯಪ್ರಕಾಶ್ ಪಾತ್ರದ ಪರಿಚಯ ಮಾಡಿಕೊಳ್ಳುವ ಮುಂಚೆ ೧೦ ನಿಮಿಷಗಳ ಕಾಲ ದೇವರ ಶ್ಲೋಕಗಳನ್ನು ಹೇಳಿ ಅಚ್ಚರಿ ಮೂಡಿಸಿದರು. ಟೆಕ್ಕಿಯಾಗಿ ಮೃದು ಸ್ವಭಾವದವನಾಗಿ ಸಂಸ್ಕ್ರತಿಯನ್ನು ಗೌರವಿಸುವ ಪಾತ್ರದಲ್ಲಿ ಸಾಗರ್ ನಾಯಕ. ಪ್ರಗ್ಯಾ ನಯನ ನಾಯಕಿ ಅಲ್ಲದೆ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರಂತೆ. ಕಾಮಿಡಿ ಕಿಲಾಡಿಗಳು ಲೋಕೇಶ್ ಕಂಪೆನಿಯ ಎಂ.ಡಿ, ಕಾಶ್ಮೀರ ಮೂಲದ ಜಹೀದಾ, ಸಹನ ತಾರಬಳಗವಿದೆ. ಒಂದು ಹಂತದ ಚಿತ್ರೀಕರಣ ಮುಗಿಸಿದ್ದು, ಎರಡನೆ ಹಂತದಲ್ಲಿ ಹೈದಾರಬಾದ್ ಕಡೆಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಸಂಗೀತ ರಾಜ್‌ಕಿರಣ್, ಛಾಯಗ್ರಹಣ ನಾಗಬಾಬು ಕರ್ರಾ, ಸಂಕಲನ ಶ್ರೀನಿಬಾಬು ನಿರ್ವಹಿಸುತ್ತಿದ್ದಾರೆ. ಆಂಧದವರಾದ ಶ್ರೀನಿವಾಸ್ ವೀರಂ ಶೆಟ್ಟಿ ನಿರ್ಮಾಪಕರು.

Leave a Reply

Your email address will not be published. Required fields are marked *


CAPTCHA Image
Reload Image