One N Only Exclusive Cine Portal

ಕಣ್ಸನ್ನೆ ಹುಡುಗಿಗೆ ಭರ್ಜರಿ ಡಿಮ್ಯಾಂಡ್..!

ಅವಕಾಶ ಮತ್ತು ಅದೃಷ್ಟ ಎನ್ನುವುದು ಕೈ ಹಿಡಿದರೆ ರಾತ್ರಿ-ಬೆಳಗಾಗುವುದರೊಳಗೆ ಜನಪ್ರಿಯವಾಗಬಹುದು ಎನ್ನುವುದಕ್ಕೆ ಪ್ರಿಯಾ ವಾರಿಯರ್ ಎಂಬ ಹದಿನೆಂಟರ ಪೋರಿಗಿಂತ ಉತ್ತಮ ಉದಾಹರಣೆ ಇನ್ನು ಸಿಗುವುದಿಲ್ಲವೇನೊ.., ಹೌದು. ಕಳೆದವಾರ ಬಿಡುಗಡೆಯಾದ ಮಲಯಾಳಂನ ‘ಒರು ಆಡಾರ್ ಲವ್’ ಚಿತ್ರದ ‘ಮಾಣಿಕ್ಯಾ ಮಲರಾಯಾ ಪೂವಿ’ ಎಂಬ ಹಾಡೊಂದು, ಅದರಲ್ಲೂ ಕೆಲವೇ ಕೆಲವು ಸೆಕೆಂಡ್‌ಗಳ ಪ್ರಿಯಾಳ ಮುzದ ನಗು ಹಾಗೂ ವಿಂಕಿಂಗ್, ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ, ಅದೆಷ್ಟೋ ಹುಡುಗರ ಹಾರ್ಟ್‌ಗೆ ಖನ್ನ ಹೊಡೆದಿತ್ತು. ಹದಿನೆಂಟರ ಹುಡುಗಿ ಪ್ರಿಯಾ ಒಂದೇ ದಿನದಲ್ಲಿ ದೇಶದಾದ್ಯಂತ ಜನಪ್ರಿಯವಾದಳು.

ಪ್ರಿಯಾ ಪ್ರಕಾಶ್ ಜನಪ್ರಿಯತೆ ಯಾವ ಮಟ್ಟಿಗಿದೆಯೆಂದರೆ, ಕಳೆದ ಐದಾರು ದಿನಗಳಲ್ಲಿ ಬಾಲಿವುಡ್‌ನ ಸನ್ನಿ ಲಿಯೋನ್‌ಳನ್ನು ಹಿಂದಿಕ್ಕಿ ಗೂಗಲ್ ನಲ್ಲಿ ಮೋಸ್ಟ್ ಸರ್ಚಿಂಗ್ ನಟಿ ಎಂಬ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಗೂಗಲ್‌ನಲ್ಲಿ ಇಲ್ಲಿಯವರೆಗೆ ಅತಿಹೆಚ್ಚು ಸರ್ಚ್‌ಗೆ ಒಳಗಾಗುತ್ತಿದ್ದ ಸನ್ನಿ ಲಿಯೋನ್‌ಳನ್ನೇ ಪ್ರಿಯಾ ಕೇವಲ ಎರಡೇ ದಿನಗಳಲ್ಲಿ ಹಿಂದಿಕ್ಕಿ ಗೂಗಲ್ ಸರ್ಚ್‌ನ ಟಾಪ್ ನಟಿ ಎನಿಸಿದ್ದಾಳೆ.

ಇಷ್ಟೆ ಅಲ್ಲದೆ, ಪ್ರಿಯಾ ಇನ್‌ಸ್ಟಾಗ್ರಾಂನಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರನ್ನು ಹಿಂದಿಕ್ಕಿದ್ದಾಳೆ ಎಂದರೆ

ನಂಬಲೇಬೇಕು. ೨೦೧೭ರಲ್ಲಿ ಸುಮಾರು ೧೭ ವರ್ಷಗಳ ಬಳಿಕ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಮಾನುಷಿ ಚಿಲ್ಲರ್ ವಿಶ್ವ ಸುಂದರಿಯಾಗಿ ಹೊರಹೊಮ್ಮುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಮೂಲಕ ಮಾನುಷಿಗೆ ಸೋಷಿಯಲ್ ಮೀಡಿಯಾವಾದ ಇನ್‌ಸ್ಟಾಗ್ರಾಂನಲ್ಲಿ ಸುಮಾರು ೨೮ ಲಕ್ಷ -ಲೋವರ್ಸ್ ಸೇರ್ಪಡೆಯಾಗಿದ್ದರು. ಪ್ರಿಯಾ ಪ್ರಕಾಶ್ ತನ್ನ ವಿಂಕಿಂಗ್ ಹಾಗೂ ಕಣ್ ಸನ್ನೆಯ ಮೂಲಕ ನ್ಯಾಷನಲ್ ಸೆನ್ಸೇಷನ್ ಆಗಿ ಕೇವಲ ಮೂರೇ ದಿನದಲ್ಲಿ ೩೭ಲಕ್ಷ ಫಾಲೋವರ‍್ಸ್ ಗಳಿಸಿಕೊಂಡಿದ್ದಾಳೆ. ಒಂದೇ ದಿನ ಸುಮಾರು ೬ ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಫಾಲೋ ಮಾಡುವ ಮುಖೇನ ಒಂದು ದಿನದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಪಡೆದ ಜಗತ್ತಿನ ಮೂರನೇ ಸೆಲೆಬ್ರಿಟಿ ಎನಿಸಿಕೊಂಡಿದ್ದಾಳೆ. ಇದಕ್ಕೂ ಹಿಂದೆ ಅಮೆರಿಕ ಮಾಡೆಲ, ಟಿವಿ ನಿರೂಪಕಿ ಕೈಲೀ ಜೆನ್ನರ್ ಮತ್ತು ಪ್ರಸಿದ್ಧ -ಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಈ ಸಾಧನೆ ಮಾಡಿದ್ದರು. ಈ ಮೂಲಕ ಇನ್‌ಸ್ಟಾಗ್ರಾಂನಲ್ಲಿಯೂ ಪ್ರಿಯಾ ಹೊಸ ದಾಖಲೆ ಬರೆದಿದ್ದಾಳೆ. ದಿನದಿಂದ ದಿನಕ್ಕೆ ಈ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಈ ಸಂಖ್ಯೆ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ದೇವರೇ ಬಲ್ಲ..!

ಇನ್ನು ಪ್ರಿಯಾ ಕಳೆದ ಒಂದು ವಾರದಲ್ಲಿ ಪ್ರಿಯಾ ಪ್ರಕಾಶ್ ಕುರಿತಾಗಿ ವಾಹಿನಿಗಳಲ್ಲಿ ೩೨೦೦ಕ್ಕೂ ಹೆಚ್ಚು ಕಾರ್ಯಕ್ರಮಗಳು ಪ್ರಸಾರವಾಗಿದ್ದು, ಈ ಎಲ್ಲಾ ಕಾರ್ಯಕ್ರಮಗಳು ಚಾನಲ್‌ಗಳಿಗೆ ಭರ್ಜರಿ ಟಿಆರ್‌ಪಿಯನ್ನೆ ತಂದುಕೊಟ್ಟಿದೆ ಎನ್ನಲಾಗುತ್ತಿದ್ದು, ಅದೆಷ್ಟರಮಟ್ಟಿಗೆ ಆಕರ್ಷಣೆಯಾಗಿದ್ದಾಳೆ ಎಂಬುದನ್ನು ನೀವೆ ಊಹಿಸಿ…

ಇಷ್ಟೆಲ್ಲ ಜನಪ್ರಿಯತೆ ಪಡೆದ ಮೇಲೆ ನಿರ್ಮಾಪಕ, ನಿರ್ದೇಶಕರ ಕಣ್ಣು ಸಹಜವಾಗಿಯೇ ಪ್ರಿಯಾಳ ಮೇಲೆ ಬಿದ್ದಿದೆ. ಪ್ರಿಯಾ ಜನಪ್ರಿಯತೆಯನ್ನು ತಮ್ಮ ಸಿನಿಮಾದಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿರುವ ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಅಭಿನಯಿಸುವಂತೆ ಆ-ರ್‌ಗಳ ಸುರಿಮಳೆಯನ್ನೆ ಸುರಿಸುತ್ತಿದ್ದಾರೆ. ಆದರೆ ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಪ್ರಿಯಾ ಪ್ರಕಾಶ್ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ ೨.೫ ಕೋಟಿ ಸಂಭಾವನೆ ಕೇಳುತ್ತಿದ್ದಾಳಂತೆ..! ಪ್ರಿಯಾಳ ಈ ಬೇಡಿಕೆಯನ್ನು ಕಂಡು ಕೆಲವು ನಿರ್ಮಾಪಕರು ಸುಸ್ತಾಗಿ ಹೋಗಿದ್ದಾರಂತೆ. ಆದರೆ ಚಿತ್ರೋದ್ಯಮದ ಮೂಲಗಳ ಪ್ರಕಾರ, ಅಷ್ಟೊಂದು ಸಂಭಾವನೆಯನ್ನು ಕೊಟ್ಟರೂ ಪ್ರಿಯಾ ಪ್ರಕಾಶ್ ಕ್ರಿಯೇಟ್ ಮಾಡಿರುವ ಸೆನ್ಸೆಷನ್, ಅವಳಿಗಿರುವ ಹೈಪ್ ಸಿನಿಮಾಕ್ಕೆ ವರ್ಥ್ ಆಗಲಿದೆ. ಹಾಗಾಗಿ ಆಕೆ ಕೇಳಿದಷ್ಟು ಸಂಭಾವನೆ ಕೊಡಲು ಕೆಲವು ನಿರ್ಮಾಪಕರು ಸಿದ್ದರಾಗಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಪ್ರಿಯಾ ಕಣ್ಸನ್ನೆ ಇಷ್ಟರ ಮಟ್ಟಿಗೆ ಮೋಡಿ ಮಾಡಿದೆ ಎಂದರೆ ಅಚ್ಚರಿಪಡಲೇಬೇಕು.

Leave a Reply

Your email address will not be published. Required fields are marked *


CAPTCHA Image
Reload Image