One N Only Exclusive Cine Portal

ರಾಜಕೀಯಕ್ಕೆ ಎಂಟ್ರಿ ಕೊಟ್ಟಳೇ ಪ್ರಿಯಾಮಣಿ?

ತನ್ನ ನಟನೆಯ ಮೂಲಕವೇ ಕನ್ನಡ, ತಮಿಳು, ಮಲೆಯಾಳಂ ಸೇರಿದಂತೆ ನಾನಾ ಭಾಷೆಗಳ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವಾಕೆ ಪ್ರಿಯಾಮಣಿ. ಇಂಥಾ ಪ್ರಿಯಾ ಇತ್ತೀಚೆಗಷ್ಟೇ ಮದುವೆಯಾಗಿದ್ದಾಳೆ. ಈಕೆ ಮದುವೆ ಸಂಸಾರ ಅಂತ ಕಳೆದು ಹೋಗ್ತಾಳಾ ಅಥವಾ ಮುಂದೆಯೂ ಚಿತ್ರಗಳಲ್ಲಿ ನಟಿಸ್ತಾಳಾ ಅಂತೊಂದು ಕುತೂಹಲ ಆಕೆಯ ಅಭಿಮಾನಿಗಳಲ್ಲಿ ಇದ್ದೇ ಇತ್ತು. ಹೀಗಿರುವಾಗಲೇ ಪ್ರಿಯಾಮಣಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾಳೆಂಬ ಸ್ಫೋಟಕ ಸುದ್ದಿಯೊಂದು ಜಾಹೀರಾಗಿದೆ!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರೋ ಸುದ್ದಿಯ ಪ್ರಕಾರ ನೋಡ ಹೋದರೆ ಆಕೆ ಜನಶಕ್ತಿ ಅಂತೊಂದು ಪಕ್ಷದಿಂದ ಕರ್ನಾಟಕದಿಂದಲೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾಳೆ. ಸ್ವತಃ ಆಕೆಯ ಪತಿರಾಯನೇ ಪ್ರಿಯಾ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಅಲ್ಲಲ್ಲಿ ಪ್ರಿಯಾ ಮಣಿಯ ಕಟೌಟುಗಳೂ ತಲೆ ಎತ್ತಿ ನಿಂತಿವೆ… ಇಂಥಾ ನಾನಾ ಸುದ್ದಿಗಳು ಎಗ್ಗಿಲ್ಲದೆ ಹರಿದಾಡುತ್ತಿವೆ. ಆದರೆ ಈ ಸುದ್ದಿಯ ಜಾಡು ಹಿಡಿದು ಹೊರಟರೆ ಇಂಟರೆಸ್ಟಿಂಗ್ ಆದ ಒಂದಷ್ಟು ಮಾಹಿತಿಗಳು ಜಾಹೀರಾಗುತ್ತವೆ!

ನಿಜ, ಆ ಫೋಟೋದಲ್ಲಿ ಪ್ರಿಯಾಮಣಿಯ ಕಟೌಟಿರೋದು, ಆಕೆ ಜನಶಕ್ತಿ ಅಂತೊಂದು ಪಕ್ಷದಿಂದ ಚುನಾವಣಾ ರಾಜಕೀಯಕ್ಕೆ ದುಮುಕಿರೋದು ಎಲ್ಲವೂ ನಿಜ. ಆದರೆ ರಿಯಲ್ಲಾಗಿ ಅಲ್ಲ, ಅದು ರೀಲಿನಲ್ಲಿ. ಅಂದರೆ ಒಂದು ಚಿತ್ರದಲ್ಲಿ ಇಂಥಾ ಸೀನುಗಳಲ್ಲಿ ಪ್ರಿಯಾಮಣಿ ನಟಿಸಿದ್ದಾಳಂತೆ!

ಅಂದಹಾಗೆ ಮದುವೆಯ ಗೌಜಿನ ಬಳಿಕ ಮೊದಲನೆಯದಾಗಿ ಪ್ರಿಯಾಮಣಿ ಧ್ವಜ ಎಂಬ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಅಶೋಕ್ ಕಶ್ಯಪ್ ನಿರ್ದೇಶನದ ಈ ಚಿತ್ರದಲ್ಲಿ ಆಕೆ ರಾಜಕಾರಣದ ಗೆಟಪ್ಪಿನಲ್ಲಿಯೂ ಕಾಣಿಸಿಕೊಂಡಿದ್ದಾಳೆ. ಆ ಚಿತ್ರದ ಫೋಟೋ ಒಂದು ಲೀಕಾಗಿ ಪ್ರಿಯಾಮಣಿ ನಿಜವಾಗಿಯೂ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾಳೆಂಬ ಸುದ್ದಿ ಹರಡಿಕೊಂಡಿದೆ. ಇದು ಹೇಳಿ ಕೇಳಿ ಚುನಾವಣೆ ಸನ್ನಿಹಿತವಾಗಿರೋ ಸಂದರ್ಭವಾದ್ದರಿಂದ ಬಹುತೇಕರು ಅದನ್ನು ನಂಬಿದ್ದರೂ ಅಚ್ಚರಿಯೇನಿಲ್ಲ. ಆದರೆ ಅದು ರೀಲು ಎಂಬುದು ಅಸಲೀ ಸತ್ಯ!

 

Leave a Reply

Your email address will not be published. Required fields are marked *


CAPTCHA Image
Reload Image