One N Only Exclusive Cine Portal

ಪರದೇಸಿ ನಟನಿಗೆ ಪಿಗ್ಗಿ ಮುತ್ತಿಟ್ಟ ಫೋಟೋ ವೈರಲ್!

ಬಾಲಿವುಡ್‌ನಲ್ಲಿ ತನ್ನ ನಟನೆಯ ಖದರಿನಿಂದಲೇ ಅವಕಾಶಗಳನ್ನು ಗಿಟ್ಟಿಸಿಕೊಂಡು ಇದೀಗ ವಿಶ್ವಾದ್ಯಂತ ಮಿಂಚುತ್ತಿರೋ ತಾರೆ ಪ್ರಿಯಾಂಕಾ ಚೋಪ್ರಾ. ಈಕೆಯೀಗ ಜಗತ್ತಿನೆಲ್ಲೆಡೆ ಭಾರೀ ಪ್ರಸಿದ್ಧಿ ಪಡೆದುಕೊಂಡಿರುವ ಕ್ವಾಂಟಿಕೋ ಸೀರೀಸ್‌ನ ಮೂರನೇ ಸೀಸನ್‌ನಲ್ಲಿ ಬ್ಯುಸಿಯಾಗಿದ್ದಾಳೆ. ಈ ಶೂಟಿಂಗ್ ಸಂದರ್ಭದಲ್ಲಿ ಲೀಕ್ ಆಗಿರೋ ಪಿಗ್ಗಿಯ ಕಿಸ್ಸಿಂಗ್ ಸೀನ್ ಇರೋ ಫೋಟೋವೊಂದು ಇದೀಗ ಪ್ರಪಂಚದ ತುಂಬಾ ವೈರಲ್ ಆಗಿ ಬಿಟ್ಟಿದೆ.
ಕ್ವಾಂಟಿಕೋ ಸೀರೀಸ್‌ನ ಮೂರನೇ ಸೀಸನ್‌ನ ಚಿತ್ರೀಕರಣದ ಸಂದರ್ಭದಲ್ಲಿ ಇದರ ಸಹ ನಟ ಅಲ್ಲೇನ್ ಪೌಲ್‌ಗೆ ಪ್ರಿಯಾಂಕಾ ಛೋಪ್ರಾ ಡೀಪ್ ಕಿಸ್ ಕೊಡುತ್ತಿರೋ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದು ಚಿತ್ರೀಕರಣದ ದೃಶ್ಯವೋ ಅಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಫೋಟೋ ಪಡ್ಡೆಗಳನ್ನು ಬೆಚ್ಚಗಾಗಿಸಿ ಮತ್ತೊಂದಷ್ಟು ಮಂದಿಗೆ ಹೊಟ್ಟೆಕಿಚ್ಚಾಗುವಂತೆ ಮಾಡಿರೋದಂತೂ ಸತ್ಯ.


ಇದು ಹನ್ನೆರಡು ಎಪಿಸೋಡ್‌ಗಳ ಒಂದು ಸೀರೀಸ್. ಇದರ ಮೂರನೇ ಆವೃತ್ತಿಯ ಶೂಟಿಂಗ್ ಇದೀಗ ನಡೆಯುತ್ತಿದೆ. ಕೊರೆಯುವ ಚಳಿಯ ನಡುವೆ ಈ ಚಿತ್ರೀಕರಣ ನಡೆಸುತ್ತಿರೋ ಪ್ರಿಯಾಂಕಾ ಖಾಸಗಿಯಾಗಿ ಸಹ ನಟನಿಗೆ ಮುತ್ತಿಟ್ಟು ಬೆಚ್ಚಗಾದಳಾ? ಆ ದೃಶ್ಯವನ್ನು ಚಾಲಾಕಿಗಳು ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆಸೆದರಾ? ಎಂಬುದೆಲ್ಲ ಇನ್ನಷ್ಟೇ ಜಾಹೀರಾಗಬೇಕಿದೆ. ಅಂದಹಾಗೆ ಹನ್ನೆರಡು ಎಪಿಸೋಡುಗಳ ಈ ಸೀರೀಸ್‌ನಲ್ಲಿ ಈಗ ನಾಲಕ್ಕು ಎಪಿಸೋಡ್‌ಗಾಗುವಷ್ಟು ಮಾತ್ರವೇ ಚಿತ್ರೀಕರಣವಾಗಿದೆಯಂತೆ. ಇನ್ನುಳಿದ ಚಿತ್ರೀಕರಣವನ್ನು ಬೇಗನೆ ಮುಗಿಸಿ ಪಿಗ್ಗಿ ಬಾಲಿವುಡ್‌ಗೆ ಮರಳಲಿದ್ದಾಳೆ.
ಮೇರಿ ಕೋಮ್‌ನಂಥಾ ರಿಯಲಿಸ್ಟಿಕ್ ಪಾತ್ರದಲ್ಲಿ ಅಭಿನಯಿಸೋ ಮೂಲಕ ವಿಶ್ವ ಮಟ್ಟದಲ್ಲಿಯೂ ಗಮನ ಸೆಳೆದಿರೋ ಈಕೆ ಇದೀಗ ಹಾಲಿವುಡ್ ಮಟ್ಟದಲ್ಲಿಯೂ ಬೇಡಿಕೆಯ ನಟಿ. ಬಾಲಿವುಡ್‌ನಲ್ಲಿಯೂ ಈಕೆಯ ಹವಾ ಯಥಾ ಪ್ರಕಾರವಾಗಿಯೇ ಮುಂದುವರೆಯುತ್ತಿದೆ.

 

Leave a Reply

Your email address will not be published. Required fields are marked *


CAPTCHA Image
Reload Image