One N Only Exclusive Cine Portal

ಕೋಟಿ ಕಳ್ಳ ಮೋದಿಯಿಂದ ಬಚಾವಾದಳು ಪ್ರಿಯಾಂಕಾ!

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿಗಳ ನಾಮವಿಟ್ಟು ದೇಶ ಬಿಟ್ಟಿರುವ ಕುಖ್ಯಾತ ವಜ್ರ ವ್ಯಾಪಾರಿ ನೀರವ್ ಮೋದಿ ಈಗ ಸುದ್ದಿಯ ಕೇಂದ್ರಬಿಂದು. ಭಾರತದಲ್ಲಿ ಈ ಪರಿ ಫ್ರಾಡು ಮಾಡಿ ವಿದೇಶ ಸೇರಿ ಬಚಾವಾಗ ಬಹುದಾದರೆ ಈ ನೆಲದ ಕಾನೂನು ಕಟ್ಟಳೆಗಳಿಗೆ ಯಾವ ಬೆಲೆ ಇದೆ ಎಂಬರ್ಥದ ಚರ್ಚೆಗಳೂ ದೇಶಾಧ್ಯಂತ ನಡೆಯುತ್ತಿದೆ.

ಇತ್ತ ಈ ನೀರವ್ ಮೋದಿ ಎಂಬ ದಗಲ್ಬಾಜಿಯ ವಿರುದ್ಧ ಸಿಬಿಐ ತನಿಖೆಗಿಳಿದಿರುವಾಗಲೇ ಬಾಲಿವುಡ್ ಮಟ್ಟದಲ್ಲಿಯೂ ಸಣ್ಣಗೆ ನಡುಕ ಶುರುವಾಗಿದೆ. ಯಾಕೆಂದರೆ, ನೀರವ್ ಮೋದಿ ದೇಶ ಬಿಟ್ಟಿರೋದರಿಂದ ಕೇಂದ್ರ ಸರ್ಕಾರಕ್ಕೆ ಅದರ ಕಳಂಕ ಮೆತ್ತಿಕೊಂಡಿದೆ. ಇದರಿಂದ ಪಾರಾಗಲು ನೀರವ್ ಮೋದಿಯ ಲಿಂಕುಗಳನ್ನು ಕೆದಕಿ ಆ ಮೂಲಕ ಹಣವನ್ನು ಮತ್ತೆ ವಾಪಾಸಾಗಿಸುವಂಥಾ ಜವಾಬ್ದಾರಿಯನ್ನೂ ಸಿಬಿಐಗೆ ವಹಿಸಲಾಗಿದೆ.

ಶೋಕಿಲಾಲ ನೀರವ್ ಮೋದಿ ಬಾಲಿವುಡ್ ನಟಿಯರ ಜೊತೆಗೂ ಸಖ್ಯ ಹೊಂದಿದ್ದ. ಬೇನಾಮಿ ಹೆಸರಲ್ಲಿ ಸಿನಿಮಾಗಳಿಗೆ ಹೂಡಿಕೆಯನ್ನೂ ಮಾಡಿದ್ದ. ಅದೆಲ್ಲ ಎಲ್ಲಿ ಬಯಲಾಗುವುದೋ ಅಂತ ಬಹುತೇಕರು ಕಂಗಾಲಾಗಿರುವಾಗಲೇ ಪ್ರಿಯಾಂಕಾ ಚೋಪ್ರಾ ಒಂದು ಖಡಕ್ ನಿರ್ಧಾರ ತೆಗೆದುಕೊಂಡಿದ್ದಾಳೆ!

ಅಂದಹಾಗೆ ಈ ನೀರವ್ ಚೋಪ್ರಾ ತನ್ನ ಉತ್ಪನ್ನಗಳ ಜಾಹೀರಾತಿಗೆ ಬಾಲಿವುಡ್ ನಟಿಯರನ್ನು ಬ್ರಾಂಡ್ ಅಮಬಾಸಡರ್ ಆಗಿ ಬಳಸಿಕೊಳ್ಳುತ್ತಿದ್ದ. ವರ್ಷಾಂತರಗಳ ಹಿಂದೆ ಮೋದಿಯ ಉತ್ಪನ್ನಗಳಿಗೆ ಪ್ರಿಯಾಂಕಾ ಚೋಪ್ರಾ ಬ್ರಾಂಡ್ ಅಂಬಾಸಡರ್ ಆಗಿದ್ದಳು. ಇನ್ನೊಂದು ವರ್ಷದವರೆಗೂ ಅದು ಮುಂದುವರೆಯೋದರಲ್ಲಿತ್ತು. ಇದೀಗ ನೀರವ್ ಫ್ರಾಡ್ ಮಾಡಿ ದೇಶ ಬಿಟ್ಟ ಸುದ್ದಿ ತಿಳಿಯುತ್ತಲೇ ಕಾನೂನು ಸಲಹೆ ಪಡೆದುಕೊಂಡಿರೋ ಪ್ರಿಯಾಂಕಾ ಕಾನೂನಾತ್ಮಕವಾಗಿಯೇ ನೀರವ್ ಮೋದಿಯೊಂದಿಗಿನ ಕರಾರಿನಿಂದ ಹೊರ ಬಂದು ಬಚಾವಾಗಿದ್ದಾಳಂತೆ!

Leave a Reply

Your email address will not be published. Required fields are marked *


CAPTCHA Image
Reload Image