One N Only Exclusive Cine Portal

ಪುಣ್ಯಕ್ಕೆ ಫ್ರಾಕು ಕಳಚಿ ಬಿದ್ದಿಲ್ಲ!

ಬಾಲಿವುಡ್ ನಟಿಯರು ಸದ್ದು ಮಾಡಲು ಘನಂಧಾರಿ ಕಾರಣಗಳೇನೂ ಬೇಕಿಲ್ಲ. ತೀರಾ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡು ಅದರಲ್ಲೂ ಬರಖತ್ತಾಗದ ನಟಿಯರೂ ಇಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಹಾಗಿರೋವಾಗ ನಟನೆಯ ಮೂಲಕವೇ ವಿಶ್ವಾಧ್ಯಂತ ಅಭಿಮಾನಿಗಳನ್ನು ಹೊಂದಿರೋ ಪ್ರಿಯಾಂಕಾ ಚೋಪ್ರಾ ಸುದ್ದಿ ಕೇಂದ್ರವಾಗೋದರಲ್ಲೇನೂ ವಿಶೇಷವಿಲ್ಲ!


ಇದೀಗ ಪ್ರಿಯಾಂಕಾ ತಾನು ಧರಿಸಿಕೊಂಡಿದ್ದ ಡೇಂಜರಸ್ ಬಟ್ಟೆಯೊಂದರ ಮೂಲಕ ಮತ್ತೆ ಸುದ್ದಿಯಾಗಿದ್ದಾಳೆ. ತೀರಾ ಕಡಿಮೆ ಬಟ್ಟೆ ಹಾಕಿ, ಹೆಚ್ಚು ದರ್ಶನ ಭಾಗ್ಯ ಕರುಣಿಸುವ ಈಕೆಯೀಗ ಹೊಸದಾಗಿ ಡಿಸೈನ್ ಮಾಡಿದ ಬಟ್ಟೆಯೊಂದನ್ನು ಧರಿಸಿ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದ್ದಾಳೆ.

ಪ್ರಿಯಾಂಕಾ ಧರಿಸಿದ್ದು ಫ್ರಾಕ್ ಟೈಪಿನದ್ದೊಂದು ಬಟ್ಟೆ. ಆದರೆ ಇದಕ್ಕೆ ಕುತ್ತಿಗೆಯ ಕಡೆಯಿಂದ ಯಾವುದೇ ಸಪೋರ್ಟಿಲ್ಲ. ಆದರೂ ಎದೆಗಾರಿಕೆಯ ಮೂಲಕವೇ ಬಿಂದಾಸ್ ಆಗಿ ಅ ಬಟ್ಟೆ ತೊಟ್ಟಿರೋ ಪ್ರಿಯಾಂಕ ಇದೀಗ ಜಾಗತಿಕ ಫ್ಯಾಶನ್ ಜಗತ್ತಿನಲ್ಲಿ ಸಂಚಲನವೆಬ್ಬಿಸಿದ್ದಾಳೆ. ನೋಡುವವರಲ್ಲಿಯೂ ಯಾವ ಕ್ಷಣದಲ್ಲಿ ಕಳಚಿ ಬೀಳುತ್ತದೋ ಎಂಬ ತಲ್ಲಣ ಹುಟ್ಟಿಸುವಂತಿರೋ ಈ ಬಟ್ಟೆಯನ್ನು ವಿನ್ಯಾಸ ಮಾಡಿರುವಾಕೆ ಬಾಲಿವುಡ್‌ನ ಖ್ಯಾತ ವಸ್ತ್ರ ವಿನ್ಯಾಸಕಿ ಆಮಿ ಪಟೇಲ್!


ಅಂತೂ ಈ ಬಟ್ಟೆಗೆ ತಕ್ಕುದಾದ ಮಾದಕ ಮೇಕಪ್, ಕೇಶ ವಿನ್ಯಾಸದ ಮೂಲಕ ಪ್ರಿಯಾಂಕ ಭಯ ಹುಟ್ಟಿಸಿದರೂ ಮುದ್ದಾಗಿ ಕಂಗೊಳಿಸಿದ್ದಾಳೆ!

Leave a Reply

Your email address will not be published. Required fields are marked *


CAPTCHA Image
Reload Image