One N Only Exclusive Cine Portal

‘ಪುನಾರಂಭ’ದ ಆರಂಭಕ್ಕೆ ಕ್ಷಣಗಣನೆ!

ವಿಜಯ್ ಕುಮಾರ್ ಮತ್ತು ಐಶ್ವರ್ಯಾ ದಿನೇಶ್ ಮುಖ್ಯಭೂಮಿಕೆಯಲ್ಲಿರೊ ಪುನಾರಂಭ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
ದಶಕದ ಹಿಂದೆ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಟಿಸಿ ಗುರುತಿಸಿಕೊಂಡಿದ್ದ ನಟ ಡಾ.ವಿಜಯ್‌ಕುಮಾರ್ ಪುನಾರಂಭ ಚಿತ್ರದ ಮೂಲಕ ಮರಳಿ ಬಂದಿದ್ದಾರೆ. ವ್ಯಕ್ತಿಯೋರ್ವ ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಲು ಹೊರಟಾಗ, ಆತನ ಸಾಧನೆಯ ಹಾದಿಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇಂಥ ಸಮಸ್ಯೆಗಳನ್ನು ಪರಿಹರಿಸಿಕೊಳ್ಳೋದು ಹೇಗೆಂಬ ಅಂಶದ ಸುತ್ತಾ ಸಾಗುವ ಕಥೆಯನ್ನು ಮುಂದಿಟ್ಟುಕೊಂಡು ಈ ಚಿತ್ರವನ್ನು ಡಾ.ವಿಜಯ್‌ಕುಮಾರ್ ನಿರ್ದೇಶನ ಮಾಡಿದ್ದಾರೆ. ಅವರೇ ಈ ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ.
ಇನ್ನುಳಿದಂತೆ ಈ ಚಿತ್ರದಲ್ಲಿ ನಾಯಕಿಯಾಗಿ ಐಶ್ವರ್ಯ ದಿನೇಶ್ ಅಭಿನಯಿಸಿದ್ದಾರೆ. ಕಥಾ ಎಳೆ ಸರಳವಾಗಿ ಕಂಡರೂ ಎಲ್ಲರ ಬದುಕನ್ನೂ ಒಳಗೊಂಡಂಥಾ ಚೆಂದದ ಕಥೆ ಮತ್ತು ನಿರೂಪಣೆಯನ್ನು ಈ ಚಿತ್ರ ಒಳಗೊಂಡಿದೆ ಎಂಬುದು ಚಿತ್ರ ತಂಡದ ಭರವಸೆ. ಈಗಾಗಲೇ ಈ ಚಿತ್ರ ಕುತೂಹಲ ಹುಟ್ಟಿಸುವಲ್ಲಿ ಯಶ ಕಂಡಿದೆ. ವಿ ನಾಗೇಂದ್ರ ಪ್ರಸಾದ್ ರಚಿಸಿರೋ ಹಾಡುಗಳೂ ಪ್ರೇಕ್ಷಕರ ಮನಗೆದ್ದಿವೆ.
ಈ ಚಿತ್ರ ಯಾವ ಥರದ ಮೋಡಿ ಮಾಡಲಿದೆ ಎಂಬುದಕ್ಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

Leave a Reply

Your email address will not be published. Required fields are marked *


CAPTCHA Image
Reload Image