One N Only Exclusive Cine Portal

ನಾನು ಜಗ್ಗೇಶ್ ಫ್ಯಾನ್ ಅಂದ್ರು ಪವರ್‌ಸ್ಟಾರ್!

ಒಬ್ಬ ನಟನನ್ನು ಮತ್ತೋರ್ವ ನಟ ಮೆಚ್ಚಿಕೊಂಡು ಕೊಂಡಾಡುವಂಥಾ ಪರಂಪರೆಯೇ ಇತ್ತೀಚೆಗ್ಯಾಕೋ ಮರೆಯಾದಂತಿದೆ. ಆದರೆ ಇಂಥಾ ವಾತಾವರಣದ ನಡುವೆಯೂ ಸರಳ ಸಜ್ಜನಿಕೆಗೆ ಹೆಸರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಓರ್ವ ಸಾಮಾನ್ಯ ಪ್ರೇಕ್ಷಕನಂತೆ ನವರಸನಾಯಕ ಜಗ್ಗೇಶ್ ಅವರ ನಟನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ.


ಪವರ್ ಸ್ಟಾರ್ ಪುನೀತ್ ಮಾತುಗಳಲ್ಲೇ ಹೇಳೋದಾದರೆ, ಅವರು ನವರಸ ನಾಯಕ ಜಗ್ಗೇಶ್ ಅವರ ಪರಮ ಅಭಿಮಾನಿಯಂತೆ. ಆರಂಭದ ದಿನಗಳಲ್ಲಿಯಂತೂ ಜಗ್ಗೇಶ್ ಅವರ ಚಿತ್ರಗಳು ಬಿಡುಗಡೆಯಾಗೋದನ್ನೇ ಕಾದಿದ್ದು ನೋಡುತ್ತಿದ್ದರಂತೆ. ಅದೇನು ಒಂದೆರಡು ಸಲವಲ್ಲ, ಹತ್ತಿಪ್ಪತ್ತು ಸಲ!
ಪುನೀತ್ ಲೆಕ್ಕವಿಲ್ಲದಷ್ಟು ಬಾರಿ ನೋಡಿದ್ದು ಜಗ್ಗೇಶ್ ಅಭಿನಯದ ತರ್‍ಲೆ ನನ್ಮಗ ಚಿತ್ರವನ್ನು. ಆ ನಂತರದಲ್ಲಿ ಪ್ರತೀ ಚಿತ್ರಗಳನ್ನೂ ಸಾರಿ ಸಾರಿ ನೋಡುತ್ತಿದ್ದ ಪುನೀತ್ ಎದ್ದೇಳು ಮಂಜುನಾಥ ಮತ್ತು ನೀರ್ ದೋಸೆ ಚಿತ್ರವನ್ನೂ ಕೂಡಾ ಅಂಥಾದ್ದೇ ಅಭಿಮಾನದಿಂದ ಐವತ್ತಕ್ಕೂ ಹೆಚ್ಚು ಸಾರಿ ನೋಡಿದ್ದಾರಂತೆ. ಜಗ್ಗೇಶ್ ಅವರ ಚಿತ್ರಗಳು ತಮಗೆ ಅದ್ಯಾವ ಪರಿ ಇಷ್ಟ ಎಂಬುದನ್ನು ರಸವತ್ತಾಗಿ ವಿವರಿಸಿರೋ ಪುನೀತ್ ಅವರ ವಿಶಿಷ್ಟವಾದ ನಟನಾ ಶೈಲಿಯನ್ನೂ ಕೊಂಡಾಡಿದ್ದಾರೆ.


ಸಾಮಾನ್ಯವಾಗಿ ಜಗ್ಗೇಶ್ ಅವರನ್ನು ಅಭಿಮಾನಿಸುವವರು ಮೊದಲು ಮಾತಾಡೋದೇ ಅವರ ಭಿನ್ನವಾದ ಮ್ಯಾನರಿಸಂ ಬಗ್ಗೆ. ಪುನೀತ್ ರಾಜ್‌ಕುಮಾರ್ ಅವರನ್ನೂ ಸಹ ನವರಸ ನಾಯಕ ಸೆಳೆದದ್ದು ಅದೇ ಮ್ಯಾನರಿಸಂ ಮೂಲಕವೇ ಎಂಬುದು ಅಸಲೀ ವಿಶೇಷ.
ಸ್ಟಾರ್ ನಟರಾದ ಮೇಲೆ ಇತರೇ ನಟರನ್ನು ಹೊಗಳೋದೇ ಅಪರೂಪ ಎಂಬಂಥಾ ವಾತಾವರಣ ಸದ್ಯ ಚಾಲ್ತಿಯಲ್ಲಿದೆ. ಆದರೆ ಪುನೀತ್ ರಾಜ್‌ಕುಮಾರ್ ತಾನೊಬ್ಬ ಸ್ಟಾರ್ ಎಂಬುದನ್ನು ತಲೆಗೇರಿಸಿಕೊಳ್ಳದೆ ಅಪ್ಪಟ ಅಭಿಮಾನಿಯ ಮನಸ್ಥಿತಿಯಲ್ಲಿ ಜಗ್ಗೇಶ್ ಅವರ ನಟನೆಯ ಬಗ್ಗೆ ಮಾತಾಡೋ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image