One N Only Exclusive Cine Portal

ಬೆಚ್ಚಿ ಬೀಳಿಸಲು ರೆಡಿಯಾಗುತ್ತಿದೆ ಪಕ್ಕಾ ಪ್ಲಾನ್!

ರಾಜಕುಮಾರ ಚಿತ್ರದ ಭರ್ಜರಿ ಗೆಲುವಿನ ನಂತರ ಅಂಜನಿ ಪುತ್ರ ಚಿತ್ರವೂ ಗೆಲುವು ಕಂಡ ಖುಷಿಯಲ್ಲಿರುವವರು ಪುನೀತ್ ರಾಜ್‌ಕುಮಾರ್. ಈ ಹೊತ್ತಿನಲ್ಲಿಯೇ ಅವರ ಮುಂದಿನ ಚಿತ್ರ ಯಾವುದು ಅಂತ ಅವರ ಅಭಿಮಾನಿಗಳಲ್ಲಿಯೇ ಕುತೂಹಲ ಹುಟ್ಟಿಕೊಂಡಿದೆ.

ಈಗ ಹರಿದಾಡುತ್ತಿರೋ ಸುದ್ದಿಗಳ ಪ್ರಕಾರ ಪುನೀತ್ ಮುಂದಿನ ಚಿತ್ರ ಎಲ್ಲರ ಪಾಲಿಗೂ ಪಕ್ಕಾ ಸರ್‌ಪ್ರೈಸ್ ಆಗಿ ಮೂಡಿ ಬರಲಿದೆ. ಇದುವರೆಗೂ ಕಾಣಿಸಿಕೊಂಡಿರದ ಪಾತ್ರ ಮತ್ತು ಕಥಾ ವಸ್ತುವನ್ನು ಹೊಂದಿರೋ ಪಾತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

ಪವನ್ ಒಡೆಯರ್ ಮತ್ತು ಪುನೀತ್ ಕಾಂಬಿನೇಷನ್ನಿನಲ್ಲಿ ಮತ್ತೊಂದು ಚಿತ್ರ ಬರಲಿದೆ ಅಂತ ಸುದ್ದಿಯಾಗಿತ್ತಲ್ಲಾ? ಅದು ನಿಜವಾಗುವ ಎಲ್ಲ ಲಕ್ಷಣಗಳೂ ಇದ್ದಾವೆ. ಒಂದು ವೇಳೆ ಈ ಮಾತು ನಿಜವೇ ಆದರೆ ಅದು ಯಾವ ಥರದ ಚಿತ್ರ ಎಂಬ ಕುತೂಹಲ ಸಹಜವೇ. ಈಗ ಹೊರ ಬಿದ್ದಿರೋ ಮಾಹಿತಿಯ ಪ್ರಕಾರವಾಗಿ ನೋಡ ಹೋದರೆ ಅದೊಂದು ಹಾರರ್ ಚಿತ್ರವಂತೆ!

ಬೇರೆ ಬೇರೆ ಥರದ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬಂಥಾ ಆಸೆ ಹೊಂದಿರುವ ಪುನೀತ್ ಈ ಚಿತ್ರದಲ್ಲಿ ನಟಿಸಲು ಉತ್ಸುಕರಾಗಿದ್ದಾರಂತೆ. ಪವನ್ ಒಡೆಯರ್ ಕೂಡಾ ಹೀಗೊಂದು ಗ್ರೀನ್ ಸಿಗ್ನಲ್ ಸಿಗುತ್ತಲೇ ಚೆಂದದ ಕಥೆಯೊಂದನ್ನು ಒಪ್ಪ ಓರಣ ಮಾಡಿಕೊಳ್ಳುತ್ತಿದ್ದಾರಂತೆ. ಅಂದಹಾಗೆ ಇದು ಪುನೀತ್ ನಟಿಸುತ್ತಿರುವ ಮೊದಲ ಹಾರರ್ ಸಿನಿಮಾ ಅಂತ ಹೆಸರಾಗಲಿದೆ. ನಿರ್ದೇಶಕ ಪವನ್ ಒಡೆಯರ್ ಅವರಿಗೂ ಇದು ಮೊದಲ ಪೂರ್ಣಪ್ರಮಾಣದ ಹಾರರ್ ಚಿತ್ರ!

Leave a Reply

Your email address will not be published. Required fields are marked *


CAPTCHA Image
Reload Image