One N Only Exclusive Cine Portal

ರಚಿತಾ ವಿರುದ್ಧ ಪುನೀತ್ ಅಭಿಮಾನಿಗಳ ಅಭಿಯಾನ!

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಮುಂದಿನ ಚಿತ್ರ ನಟಸಾರ್ವಭೌಮ ನಾನಾ ರೀತಿಯಲ್ಲಿ ಸುದ್ದಿಯಲ್ಲಿದೆ. ಕೆಲ ಮಂದಿ ಈ ಟೈಟಲ್ ಅನ್ನು ಸಿನಿಮಾ ಆಗಿಸಿದ್ದಕ್ಕೆ ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪುನೀತ್ ಹುಟ್ಟುಹಬ್ಬದಂದು ಟೈಟಲ್ ಲಾಂಚ್ ಮಾಡಿಕೊಂಡಿರೋ ಈ ಚಿತ್ರದ ಕೆಲಸ ಕಾರ್ಯಗಳು ಸಾಂಘವಾಗಿ ನೆರವೇರುತ್ತಿವೆ.

ಆದರೀಗ ಪುನಿತ್ ಅಭಿಮಾನಿಗಳ ಅಸಹನೆಯೊಂದು ಇಡೀ ಚಿತ್ರ ತಂಡವನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ.

ನಟಸಾರ್ವಭೌಮ ಚಿತ್ರದಲ್ಲಿನ ಪುನೀತ್ ಫಸ್ಟ್‌ಲುಕ್ ಕಂಡು ಅಭಿಮಾನಿಗಳು ಖುಷಿಯಾಗಿದ್ದರು. ಇದಾದ ಬೆನ್ನಿಗೇ ಈ ಚಿತ್ರದ ನಾಯಕಿ ಯಾರೆಂಬ ಬಗ್ಗೆ ಕುತೂಹಲ ಕಾವೇರಿಕೊಂಡಿತ್ತು. ನಿರ್ದೇಶಕ ಪವನ್ ಒಡೆಯರ್ ಬೇಗನೆ ತಲಾಶು ನಡೆಸಿ ರಚಿತಾ ರಾಮ್ ಹೀರೋಯಿನ್ ಅಂತ ಘೋಶಿಸಿದ್ದರು. ಈ ಸುದ್ದಿ ಹೊರ ಬೀಳುತ್ತಲೇ ಪುನೀತ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಯಾವ ಕಾರಣಕ್ಕೂ ನಟಸಾರ್ವಭೌಮ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗೋದು ಬೇಡ ಅಂತ ಪಟ್ಟು ಹಿಡಿದು ಕೂತಿದ್ದಾರೆ!

ಪುನೀತ್ ಅಭಿಮಾನಿಗಳು ರಚಿತಾ ವಿರುದ್ಧ ಅದ್ಯಾವ ಪರಿ ರೊಚ್ಚಿಗೆದ್ದಿದ್ದಾರೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ `ರಚಿತಾ ಬೇಡ’ ಎಂಬ ಅಭಿಯಾನವನ್ನೇ ನಡೆಸಿ ಚಿತ್ರ ತಂಡದ ಮೇಲೆ ಒತ್ತಡ ಹಾಕಲಾರಂಭಿಸಿದ್ದಾರೆ. ಈ ಹಿಂದೆ ಯಾರೇ ನಾಯಕಿಯಾದಾಗಲೂ ಪುನೀತ್ ಅಭಿಮಾನಿಗಳು ಇಂಥಾ ವಿರೋಧ ವ್ಯಕ್ತಪಡಿಸಿದ ಉದಾಹರಣೆಗಳಿಲ್ಲ. ಆದರೆ ಅವರೆಲ್ಲಾ ಈಗ ಯಾಕೆ ರಚಿತಾ ವಿರುದ್ಧ ಅಸಹನೆ ಹೊಂದಿದ್ದಾರೆಂಬುದಕ್ಕೂ ನಿಖರ ಉತ್ತರಗಳಿಲ್ಲ!

ಅಭಿಮಾನಿಗಳೆಲ್ಲ ಒತ್ತಡ ಹಾಕುತ್ತಿರೋದರಿಂದ ಅದು ರಚಿತಾಗೆ ಮುಳುವಾಗಲಿದೆಯಾ? ರಚಿತಾರನ್ನು ಚಿತ್ರತಂಡ ಹೊರ ಕಳಿಸಲಿದೆಯಾ ಎಂಬ ಕುತೂಹಲವಷ್ಟೇ ಉಳಿದುಕೊಂಡಿದೆ!

Leave a Reply

Your email address will not be published. Required fields are marked *


CAPTCHA Image
Reload Image