Connect with us

ಪ್ರಚಲಿತ ವಿದ್ಯಮಾನ

ಬಾಂಬು ಸಿಡಿಸಿದಳು ಗಾಯಕಿ ಚಿನ್ಮಯಿ!

Published

on

ಹೈದ್ರಾಬಾದಿನ ಚಿನ್ಮಯಿ ಶ್ರೀಪಾದ ಎನ್ನುವ ಗಾಯಕಿ ರಾಕ್ ಸಿಂಗರ್ ರಘು ದೀಕ್ಷಿತ್ ವಿರುದ್ಧ ಬಾಂಬು ಸಿಡಿಸಿದ್ದಾಳೆ!

ಹೆಸರು ಹೇಳಲು ಇಚ್ಚಿಸದ ಬೇರೊಬ್ಬ ಗಾಯಕಿಯೊಬ್ಬರು ರಘು ದೀಕ್ಷಿತ್ ಮೇಲೆ ಮಾಡಿರುವ ಆರೋಪವನ್ನು ಗಾಯಕಿ ಚಿನ್ಮಯಿ ಟ್ವಿಟರಿನಲ್ಲಿ ಹಾಕಿಕೊಂಡಿದ್ದಾರೆ.

ಅದೊಂದು ದಿನ ಗಾಯಕಿಯನ್ನು ರೆಕಾರ್ಡಿಂಗಿಗೆಂದು ತಮ್ಮ ಸ್ಟುಡಿಯೋಗೆ ಕರೆಸಿಕೊಂಡ ರಘು ದೀಕ್ಷಿತ್ ‘ನನ್ನ ಹೆಂಡತಿಗೆ ಹುಷಾರಿಲ್ಲ, ಅದೂ ಇದೂ’ ಅಂತೆಲ್ಲಾ ಆಕೆಯ ಬಗ್ಗೆ ಕೆಟ್ಟದಾಗಿ ಮಾತು ಶುರು ಮಾಡಿದರಂತೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ರಘು ಪತ್ನಿ ಮಯೂರಿ ಚನ್ನಾಗೇ ಇದ್ದರಂತೆ. ಇದನ್ನು ನೋಡಿದ ಗಾಯಕಿಗೆ ‘ಯಾಕೆ ಈತ ನನ್ನ ಬಳಿ ಸುಳ್ಳು ಹೇಳಿದ. ಇಷ್ಟಕ್ಕೂ ನನ್ನ ಬಳಿ ಇದನ್ನೆಲ್ಲಾ ಯಾಕೆ ಹೇಳಬೇಕು’ ಎಂದುಕೊಂಡಿದ್ದರಂತೆ. ಇದೆಲ್ಲಾ ಆಗಿ ರೆಕಾರ್ಡಿಂಗು ಮುಗಿಸಿ ಚೆಕ್‌ಗೆ ಸಹಿ ಹಾಕುವಾಗ ಹತ್ತಿರಕ್ಕೆ ಎಳೆದುಕೊಂಡು ಕಿಸ್ಸು ಕೊಡುವಂತೆ ಹಠ ಮಾಡಿದನಂತೆ. ಆಕೆಯನ್ನು ಎತ್ತಿಕೊಳ್ಳುವ ಪ್ರಯತ್ನವನ್ನೂ ಮಾಡಿದನಂತೆ. ಇದರಿಂದ ಮನನೊಂದ ಗಾಯಕಿ ಅಳುತ್ತಾ ಸೀದಾ ಹೊರಗೆ ಹೊರಟಳಂತೆ. ರಘು ದೀಕ್ಷಿತ್ ನನ್ನೊಂದಿಗೆ ಮಾತ್ರವಲ್ಲ ಹಲವಾರು ಹೆಣ್ಮಕ್ಕಳ ಜೊತೆ ಇದೇ ರೀತಿ ಅಸಭ್ಯವಾಗಿ ವರ್ತಿಸುತ್ತಾನೆ ಅನ್ನೋದು ನನಗೆ ಗೊತ್ತು ಅಂತಲೂ ಆಕೆ ಹೇಳಿಕೊಂಡಿದ್ದಾಳೆ.

ಇದಕ್ಕೆ ಪ್ರತಿಕ್ರಿಯಿಸಿರುವ ರಘು ದೀಕ್ಷಿತ್ ‘ನಾನು ನನ್ನ ಪತ್ನಿಯೊಂದಿಗಿನ ಸಂಬಂಧದಿಂದ ಹೊರಬರುತ್ತಿದ್ದೀನಿ. ಆಗ ನನ್ನ ಮತ್ತು ನನ್ನ ಹೆಂಡತಿಯ ನಡುವಿನ ಸಂಬಂಧ ತೀರಾ ಹಳಸಿತ್ತು. ನನ್ನ ಪರ್ಸನಲ್ ಲೈಫಿನ ಬಗ್ಗೆ ಆ ಗಾಯಕಿಯ ಬಳಿ ಮಾತಾಡಿದ್ದು ನಿಜ. ಆಕೆಯನ್ನು ಅಪ್ಪಿಕೊಂಡು ಮುತ್ತು ಕೊಡಲು ಹೋಗಿದ್ದೂ ಹೌದು. ಇದಾದ ನಂತರ ನಿಮ್ಮ ಬಿಹೇವಿಯರ್ ಇಷ್ಟ ಆಗಲಿಲ್ಲ ಅಂತಾ ಮೆಸೇಜು ಕೂಡಾ ಕಳಿಸಿದ್ದರು. ನಾನು ಆ ಕೂಡಲೇ ಕ್ಷಮೆ ಕೇಳಿದ್ದೆ’ ಎಂದಿದ್ದಾರೆ.

ರಘು ದೀಕ್ಷಿತ್ ರಾಕ್ ಮ್ಯೂಸಿಕ್ ಕಾನ್ಸರ್ಟ್ ಹೆಸರಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಜಗತ್ತಿಡೀ ಅಲೆದಾಡುತ್ತಿರುತ್ತಾರೆ. ಕನ್ನಡದ ದಾಸರ, ಕೀರ್ತನೆಕಾರರ ಪದಗಳನ್ನು ಕನ್ನಡದ ಚೌಕಟ್ಟನ್ನು ಮೀರಿ ಹೊರಗಿನವರಿಗೆ ಪರಿಚಯಿಸಿದ ಕೀರ್ತಿ ರಘು ದೀಕ್ಷಿತ್‌ಗೆ ಸಲ್ಲಬೇಕು. ಅಸಲಿಗೆ ರಘು ದೀಕ್ಷಿತ್ ಬೇರೆಲ್ಲ ಹಾಡುಗಾರರಿಗಿಂತಾ ಭಿನ್ನವಾಗಿ ಕಾಣಲು, ಗಡಿದಾಟಿ ಹೋಗಲು ಪ್ರಮುಖ ಕಾರಣ ಅವರ ಪತ್ನಿ ಮಯೂರಿ. ಬಣ್ಣದ ಅಂಗಿ, ಅದಕ್ಕೆ ತದ್ವಿರುದ್ದ ಬಣ್ಣದ ಲುಂಗಿ, ಕಾಲಿಗೆ ಗೆಜ್ಜೆಯನ್ನು ತೊಟ್ಟು ವಿಚಿತ್ರ ಉಡುಗೆಯ ಮೂಲಕವೇ ಐಡೆಂಟಿಟಿ ಪಡೆದವರು ರಘು ದೀಕ್ಷಿತ್. ಇದನ್ನು ವಿನ್ಯಾಸ ಮಾಡಿದ್ದು ಕೂಡಾ ಮಯೂರಿಯೇ. ತನ್ನ ಯಶಸ್ಸಿಗೆ ಪ್ರಮುಖ ಕಾರಣವಾದ ಮಯೂರಿ ಜೊತೆಗೆ ರಘು ದೀಕ್ಷಿತ್ ಅದ್ಯಾಕೆ ಕಿತ್ತಾಡಿಕೊಂಡರೋ? ಸೈಕೋ ಸಿನಿಮಾದ ‘ನಿನ್ನ ಪೂಜೆಗೆ ಬಂದೇ ಮಾದೇಶ್ವರಾ’ ಹಾಡಿನ ಮೂಲಕ ಸಿನಿಮಾರಂಗದಲ್ಲಿ ಗುರುತಿಸಿಕೊಂಡ ರಘು ದೀಕ್ಷಿತ್ ಲುಂಗಿ ಯಾಕೆ ಲೂಜಾಯ್ತೋ ಗೊತ್ತಿಲ್ಲ. ರೆಕಾರ್ಡಿಂಗ್‌ಗೆ ಅಂತಾ ಬಂದ ಹೆಣ್ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ಈಗ ‘ಹಾಗಲ್ಲ ಹೀಗೆ’ ಅಂತಾ ತಿಪ್ಪೆ ಸಾರಿಸಿದರೆ ಯಾರು ತಾನೆ ನಂಬುತ್ತಾರೆ?

ಯಾರು ಗೊತ್ತಾ ರಘು ಪತ್ನಿ ಮಯೂರಿ?

ಸದ್ಯಕ್ಕೆ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳದ್ದೆ ಭರಾಟೆ. ಇವುಗಳ ತೀರ್ಪುಗಾರರಾಗಿ ಬರುವವರಿಗೂ ಅತೀವ ಮನ್ನಣೆ. ಇತ್ತೀಚಿನ ದಿನಗಳಲ್ಲಿ ಸಿನೆಮಾ ಸ್ಟಾರ್‌ಗಳಷ್ಟೇ ಖ್ಯಾತರಾಗಿದ್ದಾರೆ ಸ್ಯಾಂಡಲ್‌ವುಡ್ ಹೊರಗಿನ ತೀರ್ಪುಗಾರರು. ಅಂಥವರಲ್ಲಿ ಮಯೂರಿ ಉಪಾಧ್ಯ ಮುಖ್ಯವಾಗಿ ನಿಲ್ಲುತ್ತಾರೆ. ಮಯೂರಿ ಅವರಿಗೆ ಸ್ಯಾಂಡಲ್‌ವುಡ್ ಕನೆಕ್ಷನ್ ಇಲ್ಲವೇ ಇಲ್ಲ ಎಂದೇನಲ್ಲ. ಹಲವು ಕನ್ನಡ ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ಬಿಗ್ ಬಜೆಟ್ ಸಿನೆಮಾ ಒಂದರ ಕೊರಿಯೋಗ್ರಫಿಗೆಂದು ಬಿ ಟೌನಿಗೂ ಹೋಗಿ ಬಂದಿದ್ದಾರೆ. ಈ ಎಲ್ಲದರ ಜೊತೆ ಮಯೂರಿ ಕಿರುತೆರೆಯ ನೋಡುಗರಿಗೂ ತಮ್ಮ ಮೋಹಕ ನಗುವಿನ ಮೋಡಿ ಮಾಡುತ್ತಿದ್ದಾರೆ.

ಮೈಸೂರಿನಲ್ಲಿ ಹುಟ್ಟಿ ಬೆಳೆದ ಮಯೂರಿ ಉಪಾಧ್ಯ ಆರನೆ ವಯಸ್ಸಿನಿಂದಲೇ ಶಾಸ್ತ್ರೀಯ ನೃತ್ಯ ಕಲಿಯತೊಡಗಿದರು. ಭರತನಾಟ್ಯ ಹಾಗೂ ಕಥಕ್ ಹಾಗೂ ಕಳರಿಪಯಟ್ಟುಗಳನ್ನು ಕರಗತ ಮಾಡಿಕೊಂಡು ಪಾಶ್ಚಾತ್ಯ ನೃತ್ಯವನ್ನೂ ಅಭ್ಯಾಸ ಮಾಡಿದರು. ಅನಂತರ ಫ್ಯೂಷನ್ ಶೈಲಿಯ ಪಟ್ಟುಗಳನ್ನು ಹಾಕುತ್ತಾ ತಾವೇ ನೃತ್ಯ ಸಂಯೋಜನೆ ಮಾಡತೊಡಗಿದರು. ಹೀಗೆ ಅವರು ಹುಟ್ಟುಹಾಕಿದ ನೃತ್ಯ ತಂಡ ’ನೃತರುತ್ಯ’. ಪತಿ ರಘು ದೀಕ್ಷಿತ್ ಹಾಡುಗಾರಿಕೆಯಲ್ಲಿ ನಾವೀನ್ಯ ಮೆರೆದರೆ, ಪತ್ನಿ ಮಯೂರಿ ಕೂಡ ನಾಟ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸತೊಡಗಿದರು. ಸತಿಪತಿ ಜೊತೆಯಾಗಿ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇನ್ನೊಂದು ಇಂಟರೆಸ್ಟಿಂಗ್ ವಿಚಾರವಿದೆ. ಅದೇನೆಂದರೆ, ರಘು ದೀಕ್ಷಿತ್ ತಮ್ಮ ರಾಕ್ ಬ್ಯಾಂಡ್ ಕಛೇರಿಗಳಲ್ಲಿ ತೊಡುವ ವಿಚಿತ್ರ ಮತ್ತು ವಿಶೇಷ ಉಡುಗೆಯ ಕಾನ್ಸೆಪ್ಟು ಮಯೂರಿ ಅವರದ್ದೇ. ಬ್ಯಾಂಡ್ ಕಾರ್ಯಕ್ರಮದಲ್ಲಿ ಒಬ್ಬೊಬ್ಬರೂ ಒಂದೊಂದು ರೀತಿಯ ಕಾಸ್ಟೂಮ್ ತೊಡುತ್ತಿದ್ದ ಸಂದರ್ಭದಲ್ಲಿ ಭಾರತದ ದೇಸೀ ಉಡುಗೆಯಾದ ಪಂಚೆಯನ್ನು ಉಡಿಸಿ ಎಲ್ಲರನ್ನೂ ಆಕರ್ಷಿಸುವಂತೆ ಮಾಡಿದವರು ಮಯೂರಿ. ರಘು ದೀಕ್ಷಿತ್‌ಗೆ ಇವತ್ತು ಪಂಚೆ ಬ್ರಾಂಡ್ ಆಗಿದ್ದರೆ, ಅದರ ಸಂಪೂರ್ಣ ಕ್ರೆಡಿಟ್ಟು ಮಯೂರಿಗೇ ಸಲ್ಲುತ್ತದೆ.

ಪ್ರತ್ಯೇಕವಾಗಿ ಮಯೂರಿ ದೇಶ ವಿದೇಶಗಳಲ್ಲಿ ಒಟ್ಟು ಎರಡರಿಂದ ಮೂರು ಸಾವಿರದವರೆಗೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಮಿತಾಭ್ ಬಚ್ಚನ್ ಅವರ ಎಪ್ಪತ್ತನೇ ಹುಟ್ಟುಹಬ್ಬಕ್ಕೆ ಅವರ ತಂದೆಯವರ ’ಮಧುಶಾಲಾ’ ಕವಿತೆಗೆ ನೃತ್ಯ ಸಂಯೋಜಿಸಿ ಪ್ರದರ್ಶಿಸಿದ್ದ ಹೆಗ್ಗಳಿಕೆ ಮಯೂರಿಯದ್ದು. ಅದನ್ನು ಅಮಿತಾಭ್ ಬಹುವಾಗಿ ಮೆಚ್ಚಿದ್ದರಂತೆ. ರಾಣಿ ಮುಖರ್ಜಿಗಾಗಿ ’ಶಾಕುಂತಲ’ ಎಂಬ ನೃತ್ಯವನ್ನೂ ಮಯೂರಿ ಸಂಯೋಜಿಸಿದ್ದಾರೆ. ’ಮೇಕ್ ಇನ್ ಇಂಡಿಯಾ’ ಥೀಮ್ ಅಡಿಯಲ್ಲಿ ತಮ್ಮ ತಂಡದೊಂದಿಗೆ ಇತ್ತೀಚೆಗೆ ಜರ್ಮನಿಯಲ್ಲಿ ಒಂದು ಪ್ರದರ್ಶನ ನೀಡಿ ಬಂದಿದ್ದಾರೆ. ’ಸೋಲ್ ಇಂಟರ್‌ನ್ಯಾಷನಲ್ ಕೊರಿಯಾಗ್ರಫಿ ಸ್ಪರ್ಧೆ’ಯಲ್ಲಿ ಭಾರತವನ್ನು ಪ್ರತಿನಿಧಿಸಿ ಗೆದ್ದಿದ್ದಾರೆ. ಇವೆಲ್ಲದರ ಜೊತೆಗೆ ರಾಣಿ ಎಲಿಜಬೆತ್ ಎದುರು ಪ್ರದರ್ಶನ ನೀಡಿದ್ದ ಗರಿಮೆಯೂ ಮಯೂರಿಯ ಕಿರೀಟದಲ್ಲಿದೆ.

ಮಯೂರಿ ಅವರಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳೂ ಶಿಷ್ಯರೂ ಇದ್ದಾರೆ. ಈಕೆ ಸ್ಕೈಪ್ ಮೂಲಕ ಆನ್‌ಲೈನ್‌ನಲ್ಲೂ ನೃತ್ಯ ಕಲಿಸಿಕೊಡುತ್ತಾರೆ. ಇವರು ಸದ್ಯಕ್ಕೆ ಭಾರೀ ಬೇಡಿಕೆಯಲ್ಲಿರುವ ನೃತ್ಯಗುರು. ಸಧ್ಯಕ್ಕೆ ಮಯೂರಿ ತಮ್ಮ ಇತರ ಚಟುವಟಿಕೆಗಳ ಜೊತೆಗೆ ಕಲರ‍್ಸ್ ಕನ್ನಡದ ಡಾನ್ಸಿಂಗ್ ಸ್ಟಾರ್ ಎರಡನೇ ಸೀಸನ್ನಿನ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು. ಮಾಡೆಲಿಂಗ್‌ನಲ್ಲೂ ಅನುಭವ ಇರುವ ಮಯೂರಿ ಎಲ್ಲವನ್ನೂ ನಗುನಗುತ್ತಲೇ ನಿಭಾಯಿಸುತ್ತ ತಮ್ಮ ಚಾರ್ಮ್ ಉಳಿಸಿಕೊಂಡು ಹೊಸಬರ ಪಾಲಿಗೆ ರೋಲ್ ಮಾಡೆಲ್ ಆಗಿದ್ದಾರೆ. ಆದರೆ ಪತಿ ರಘು ದೀಕ್ಷಿತ್ ಕೆಲಸಕ್ಕೆಂದು ಜೊತೆಗೆ ಬರುವ ಹೆಣ್ಮಕ್ಕಳನ್ನು ತಬ್ಬಿಕೊಂಡು, ಮುತ್ತು ಕೊಡುತ್ತಾ ಹೆಸರು ಕೆಡಿಸಿಕೊಳ್ಳುತ್ತಿದ್ದಾರೆ. ಇದೆಲ್ಲಾ ಆಗಬಾರದಿತ್ತು…

 

ಪ್ರಚಲಿತ ವಿದ್ಯಮಾನ

25 ನೇ ದಿನದತ್ತ ತಾರಕಾಸುರ ವೈಭವ! ಮೋಡಿ ಮಾಡಿತು ಚಂದ್ರಶೇಖರ ಬಂಡಿಯಪ್ಪ ಬುಡುಬುಡ್ಕೆ!

Published

on


ಫ್ರೆಶ್ ಆದ ಕಥೆಯನ್ನು, ಆಲೋಚನೆಗಳನ್ನು ಕನ್ನಡದ ಪ್ರೇಕ್ಷಕರು ಕಡೆಗಣಿಸಿದ ಉದಾಹರಣೆಗಳೇ ಇಲ್ಲ. ಅಂಥಾದ್ದರಲ್ಲಿ ಇದುವರೆಗೆ ಯಾರೂ ಮುಟ್ಟದ ಕಥೆಯೊಂದನ್ನು ಹೊಂದಿರುವ ಚೆಂದದ ಚಿತ್ರ ತಾರಕಾಸುರನ ಕೈ ಹಿಡಿಯದಿರುತ್ತಾರಾ? ಚಂದ್ರಶೇಖರ ಬಂಡಿಯಪ್ಪ ನಿರ್ದೇಶನದ ಈ ಚಿತ್ರ ಭರ್ಜರಿ ಓಪನಿಂಗ್ ಪಡೆದು ಇದೀಗ ಯಶಸ್ವಿಯಾಗಿ ಇಪ್ಪತೈದನೇ ದಿನದತ್ತ ದಾಪುಗಾಲಿಟ್ಟಿದೆ!

ತಾರಕಾಸುರನ ಡಿಫರೆಂಟಾದ ಕಥೆಗೆ ಪ್ರೇಕ್ಷಕರು ಮನ ಸೋತಿದ್ದಾರೆ. ಜೊತೆಗೆ ಚಿತ್ರರಂಗದ ಮಂದಿಯೂ ಕೂಡಾ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರ ವೀಕ್ಷಿಸಿದ್ದ ದುನಿಯಾ ವಿಜಯ್ ಅವರಂತೂ ಈ ಚಿತ್ರದ ನಿರ್ದೇಶನ, ಕಥೆ, ವೈಭವ್ ಅವರ ಅಮೋಘ ನಟನೆಯನ್ನೆಲ್ಲ ಕೊಂಡಾಡಿದ್ದಾರೆ. ವಿಜಿ ಮಾತ್ರವಲ್ಲದೇ ಈ ಚಿತ್ರವನ್ನು ನೋಡಿದವರೆಲ್ಲ ಇದೇ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಬುಡುಬುಡ್ಕೆ ಸಮುದಾಯದ ಕಥೆಯನ್ನು ಬೇಸ್ ಆಗಿಸಿಕೊಂಡಿರೋ ತಾರಕಾಸುರ ಪಕ್ಕಾ ಕಮರ್ಶಿಯಲ್ ಚಿತ್ರ. ನಿರ್ದೇಶಕ ಚಂದ್ರ ಶೇಖರ ಬಂಡಿಯಪ್ಪ ಈ ಹಿಂದೆ ರಥಾವರ ಚಿತ್ರದಲ್ಲಿ ಮಾಡಿದ್ದ ಮೋಡಿಯನ್ನೇ ಈ ಬಾರಿಯೂ ಮುಂದುವರೆಸಿದ್ದಾರೆ. ಹೊಸಾ ಹುಡುಗ ವೈಭವ್ ಅವರನ್ನು ಸವಾಲಿನ ಪಾತ್ರದಲ್ಲಿ ಎಲ್ಲರೂ ಮೆಚ್ಚುವಂತೆ ಚಿತ್ರಿಸಿರೋದರಲ್ಲಿಯೇ ಬಂಡಿಯಪ್ಪನವರ ಅಸಲೀ ಕಸುಬುದಾರಿಕೆ ಜಾಹೀರಾಗಿದೆ. ಬಹುಶಃ ಮಾಮೂಲಿ ನೋಟಕ್ಕೆ ಒಂದು ಆರ್ಟ್ ಮೂವಿಯ ವಸ್ತುವಾಗಿಯಷ್ಟೇ ಕಾಣಿಸುವ ಕಥೆಯೊಂದನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ ತೆರೆದಿಟ್ಟಿದ್ದೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.
ಇದೀಗ ಭರ್ಜರಿ ಪ್ರದರ್ಶನೊಂದಿಗೇ ತಾರಕಾಸುರ ವೈಭವ ಇಪ್ಪತೈದನೇ ದಿನದತ್ತ ಹೊರಳಿಕೊಂಡಿದೆ

Continue Reading

ಪ್ರಚಲಿತ ವಿದ್ಯಮಾನ

ಎಕ್ಸಲೆಂಟ್ ಡೈರೆಕ್ಟರ್ ದೇಸಾಯಿಯವರಿಗೆ ಎಕ್ಸಲೆನ್ಸ್ ಅವಾರ್ಡ್!

Published

on


ಕನ್ನಡ ಚಿತ್ರರಂಗದ ಕ್ರಿಯಾಶೀಲ, ಕನಸುಗಾರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ. ಇದೀಗ ಉದ್ಘರ್ಷ ಎಂಬ ಥ್ರಿಲ್ಲರ್ ಸಿನಿಮಾವನ್ನು ನಿರ್ದೇಶನ ಮಾಡಿರುವ ದೇಸಾಯಿಯವರಿಗೆ ಪ್ರತಿಷ್ಠಿತ ಪ್ರಶಸ್ತಿಯೊಂದು ಲಭಿಸಿದೆ. ಇಂಡಿಯನ್ ವರ್ಚುವಲ್ ಅಕಾಡೆಮಿ ವತಿಯಿಂದ ಎಕ್ಸಲೆನ್ಸ್ ಪ್ರಶಸ್ತಿಯನ್ನು ದೇಸಾಯಿಯವರಿಗೆ ಕೊಡಲಾಗಿದೆ.

ಎಂಭತ್ತರ ದಶಕದಲ್ಲಿಯೇ ಮೂವತ್ತು ವರ್ಷದಾಚೆಯ ಆಲೋಚನೆಗಳನ್ನು ಚಿತ್ರವಾಗಿಸಿದ್ದವರು ಸುನೀಲ್ ಕುಮಾರ್ ದೇಸಾಯಿ. ತರ್ಕ ಎಂಬ ವಿಶಿಷ್ಟವಾದ ಸೂಪರ್ ಹಿಟ್ ಚಿತ್ರದ ಮೂಲಕವೇ ನಿರ್ದೇಶಕರಾಗಿ ಹೊರ ಹೊಮ್ಮಿದ್ದ ಅವರು ಭಿನ್ನ ಆಲೋಚನೆಗಳ ಮೂಲಕವೇ ನೆಲೆ ಕಂಡುಕೊಂಡವರು. ಎರಡು ತಲೆಮಾರುಗಳಾಚೆಗೂ ಇಂದಿಗೂ ಪ್ರಸ್ತುತವಾಗಿ ಚಿತ್ರ ಮಾಡೋ ಲವ ಲವಿಕೆ ಹೊಂದಿರುವ ದೇಸಾಯಿ ಕನ್ನಡ ಚಿತ್ರರಂಗದ ಹೆಮ್ಮೆ.ಅವರಿಗೆ ಈಗ ಲಭಿಸಿರುವ ಎಕ್ಸಲೆನ್ಸ್ ಪ್ರಶಸ್ತಿ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಗರಿಮೆ ಎಂದರೂ ಅತಿಶಯೋಕ್ತಿಯಲ್ಲ.

ಅಚ್ಚುಕಟ್ಟಾದ ಕಾರ್ಯಕ್ರಮವೊಂದರಲ್ಲಿ ಪ್ರಶಸ್ತಿ ಸ್ವೀಕರಿಸಿರುವ ದೇಸಾಯಿ ಈ ಪ್ರಶಸ್ತಿಯನ್ನು ಕನ್ನಡಿಗರಿಗೆ ಅಭಿಮಾನಿಗಳಿಗೆ ಸಮರ್ಪಿಸಿದ್ದಾರೆ. ರೇಸ್ ಕೋರ್ಸ್ ರಸ್ತೆ ಭಾರತೀ ವಿದ್ಯಾ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಎಂ.ವಿ.ರಾಜಶೇಖರನ್, ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಆಯಂಡ್ ಪರ್ಫಾರ್ಮಿಂಗ್ ಆರ್ಟ್ಸ್ ಯೂನಿವರ್ಸಿಟಿಯ ಮಾಜಿ ವೈಸ್ ಚಾನ್ಸೆಲರ್ ಡಾ. ಸರ್ವಮಂಗಳ ಶಂಕರ್, ಕೌನ್ಸಿಲ್ ಆಫ್ ಚೈಲ್ಡ್ ಆಯಂಡ್ ಯೂತ್ ಕೇರ್‌ನ ಮಾಜಿ ಸಿಇಓ ಅರುಣ್ ಕುಮಾರ್ ಬುನ್ಯಾನ್, ಸಂಗೀತ ನಿರ್ದೇಶಕ ಬಿ.ವಿ ಶ್ರಿನಿವಾಸ್, ಖ್ಯಾತ ಗಾಯಕಿ ಡಾ.ಬಿ.ಕೆ. ಸುಮಿತ್ರಾ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೌನ್ಸೆಲರ್ ಡಾ. ಎಲ್.ಎಸ್. ನಾರಾಯಣ ರೆಡ್ಡಿ ಭಾರ್ಗವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Continue Reading

ಪ್ರಚಲಿತ ವಿದ್ಯಮಾನ

ಮುಂದಿನ ಬದಲಾವಣೆ ನಾಳೆ ಉಡಾವಣೆ!

Published

on


ಥೇಟರಿಗೆ ಬಂದ ಪ್ರತೀ ಪ್ರೇಕ್ಷಕರೊಳಗೂ ಅಮೋಘವಾದ ಖುಷಿ, ಭರಪೂರ ಮನೋರಂಜನೆ ಸಿಕ್ಕ ತೃಪ್ತಿ ಮೂಡಿಸಬೇಕು… ಇಂಥಾದ್ದೊಂದು ಉದ್ದೇಶವನ್ನೇ ಆತ್ಮವಾಗಿಸಿಕೊಂಡ ಅದೆಷ್ಟೋ ಚಿತ್ರಗಳು ಗೆದ್ದಿವೆ. ನಾಳೆ ಬಿಡುಗಡೆಗೊಳ್ಳಲಿರೋ ಪ್ರವೀಣ್ ಭೂಷಣ್ ನಿರ್ದೇಶನದ, ಫಣಿ ಭೂಷಣ್ ನಿರ್ಮಾಣದ ಮುಂದಿನ ಬದಲಾವಣೆ ಚಿತ್ರ ಕೂಡಾ ಆ ಸಾಲಿನಲ್ಲಿಯೇ ಇರುವಂತಿದೆ!

ಮುಂದಿನ ಬದಲಾವಣೆ ಎಂಬುದು ಸಿನಿಮಾ ಪ್ರೇಮಿಗಳಿಗೆ ಚಿರಪರಿಚಿತವಾದ, ಚಿತ್ರಮಂದಿರಗಳಿಗೆ ಹತ್ತಿರಾದ ಪದ. ಈ ಚಿತ್ರದ ತಿರುಳೂ ಕೂಡಾ ಅದಕ್ಕೆ ತಕ್ಕುದಾಗಿರೋದರಿಂದಲೇ ನಿರ್ದೇಶಕ ಪ್ರವೀಣ್ ಈ ಶೀರ್ಷಿಕೆಯನ್ನ ಆಯ್ಕೆ ಮಾಡಿಕೊಂಡಿದ್ದಾರಂತೆ. ಹಾಗಾದರೆ ಈ ಚಿತ್ರ ಯಾವ ಜಾನರಿನದ್ದು, ಕಥೆ ಏನಿದೆ ಎಂಬಂಥಾ ಕುತೂಹಲ ಶುರುವಾಗಿ ಬಹಳಷ್ಟು ಕಾಲವೇ ಕಳೆದಿದೆ. ಬಿಡುಗಡೆಯ ಹೊಸ್ತಿಲಲ್ಲಿಯೇ ನಿರ್ದೇಶಕರು ಈ ಕುರಿತಾದ ಒಂದಷ್ಟು ಮಜವಾದ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಇದೊಂದು ರೊಮ್ಯಾಂಟಿಕ್ ಕಾಮಿಡಿ ಜಾನರಿನ ಚಿತ್ರ. ತಾಜಾತನಗಳಿಂದ ಕೂಡಿದ ದೃಷ್ಯ ಕಟ್ಟ ಬೇಕೆಂಬ ಆಸೆ ಹೊಂದಿದ್ದ ಪ್ರವೀಣ್ ಅದಕ್ಕೆ ತಕ್ಕುದಾಗಿಯೇ ಇಡೀ ಚಿತ್ರವನ್ನು ರೂಪಿಸಿದ್ದಾರಂತೆ. ಇಲ್ಲಿನ ದೃಷ್ಯಗಳು ಅದೆಷ್ಟು ಸಹಜ ಮತ್ತು ಸುಂದರವಾಗಿವೆಯೆಂದರೆ, ಮರೆಯಲ್ಲೆಲ್ಲೋ ಕ್ಯಾಮರಾ ಇಟ್ಟು ಶೂಟ್ ಮಾಡಿದ್ದಾರೇನೋ ಎಂಬಂಥಾ ಆಹ್ಲಾದ ಪ್ರೇಕ್ಷಕರಿಗೆ ಸಿಗುವಂತಿದೆಯಂತೆ. ಇದು ಸ್ಕ್ರೀನ್ ಪ್ಲೇಯನ್ನೇ ಆತ್ಮವಾಗಿಸಿಕೊಂಡಿರೋ ಪ್ರಯತ್ನ. ಕಥೆಗಿಂತಲೂ ಸ್ಕ್ರೀನ್‌ಪ್ಲೇಗೆ ಹೆಚ್ಚು ಒತ್ತು ಕೊಟ್ಟಿರೋ ನಿರ್ದೇಶಕರು ಅದರಲ್ಲಿ ಹೊಸಾ ಪ್ರಯತ್ನಗಳನ್ನು ಮಾಡಿದ್ದಾರೆ. ಪ್ರತೀ ಸೀನುಗಳಲ್ಲಿಯೂ ಪ್ರೇಕ್ಷಕರನ್ನು ಅಚ್ಚರಿಗೊಳಿಸುತ್ತಾ ಭರ್ಜರಿ ಮನೋರಂಜನೆ ನೀಡೋದೇ ಈ ಚಿತ್ರದ ಪ್ರಧಾನ ಉದ್ದೇಶ.

ಒಂದಷ್ಟು ಕಲಾತ್ಮಕ ಟಚ್ ಇರೋ ಶೀರ್ಷಿಕೆಯ ಕಾರಣದಿಂದ ಇದು ಬೇರೆ ಥರದ ಚಿತ್ರ ಅಂದುಕೊಳ್ಳಬೇಕಿಲ್ಲ. ಮುಂದಿನ ಬದಲಾವಣೆ ಪಕ್ಕಾ ಕಮರ್ಶಿಯಲ್ ಅಂಶಗಳೊಂದಿಗೇ ಅಣಿಗೊಂಡಿದೆ. ಹುಡುಗ ಹುಡುಗೀರದ್ದೊಮದು ಗ್ಯಾಂಗು ಕಾಲೇಜಿಗೆ ಮಾಸ್ ಬಂಕ್ ಹಾಕಿ ಚಿತ್ರ ಮಂದಿರಕ್ಕೆ ಹೋದಾಗ ಯಾವ್ಯಾವ ಘಟನೆಗಳು ನಡೆಯುತ್ತವೆಂಬುದರ ಸುತ್ತಾ ಯುವ ಸಮೂಹಕ್ಕೆ ಹತ್ತಿರಾದ ಕಥನವನ್ನು ಈ ಚಿತ್ರ ಹೊಂದಿದೆ. ಇತ್ತೀಚೆಗಂತೂ ಥೇಟರುಗಳು ಸಾಲು ಸಾಲಾಗಿ ನೆಲಸಮ ಗೊಳ್ಳುತ್ತಿವೆ. ಈ ಮೂಲಕ ಒಂದು ಸಿನಿಮಾ ಸಂಸ್ಕೃತಿಯೇ ಸರ್ವನಾಶವಾಗುತ್ತಿವೆ. ಮಲ್ಟಿಫ್ಲೆಕ್ಸುಗಳ ಅಬ್ಬರ ಥೇಟರುಗಳ ಗಾಂಧಿ ಕ್ಲಾಸಿನ ಸಂಭ್ರಮವನ್ನೇ ನುಂಗಿ ಹಾಕುತ್ತಿದೆ. ಇಂಥಾ ಸೂಕ್ಷ್ಮ ಸಂಗತಿಗಳನ್ನೂ ಬೇರೆಯದ್ದೇ ತೆರನಾಗಿ ದಾಖಲಿಸಲಾಗಿರೋ ಈ ಚಿತ್ರದ್ದು ಪಕ್ಕಾ ಕಮರ್ಶಿಯಲ್ ಹಾದಿ.
ಇದು ಪ್ರವೀಣ್ ನಿದೇಶನದ ಮೊದಲ ಚಿತ್ರ. ಗುಬ್ಬಿಯ ನಿಟ್ಟೂರಿನವರಾದ ಪ್ರವೀಣ್ ಪಾಲಿಗೆ ಸಿನಿಮಾ ರಂಗವೆಂಬುದು ಮೊದಲ ಕನಸು. ಏನಾದರೂ ಪರವಾಗಿಲ್ಲ. ಆದರೆ ಚಿತ್ರರಂಗದ ಭಾಗವಾಗಬೇಕೆಂಬ ಹಂಬಲದಿಂದಿದ್ದ ಅವರ ಪಾಲಿಗೆ ಹಾಡೊಂದನ್ನು ಬರೆಯೋ ಅವಕಾಶ ಕೊಟ್ಟವರು ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ. ಕೋಮಲ್ ನಟಿಸಿದ್ದ ರಾಧನ ಗಂಡ ಚಿತ್ರಕ್ಕೆ ಹಾಡು ಬರೆಯೋ ಮೂಲಕ ಅಡಿಯಿರಿಸಿದ್ದ ಪ್ರವೀಣ್ ಆ ಬಳಿಕ ಮಹೇಶ್ ಸುಖಧರೆ ಮುಂತಾದ ನಿರ್ದೇಶಕರ ಗರಡಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದರು. ಸಿಂಪಲ್ ಸುನಿ ಅವರೊಂದಿಗೂ ಕಾರ್ಯ ನಿರ್ವಹಿಸಿ ಅನುಭವ ಪಡೆದ ಅವರ ಪಾಲಿಗೆ ಮುಂದಿನ ಬದಲಾವಣೆ ಎಂಬುದು ಮೊದಲ ಕನಸು. ಅದು ನಾಳೆ ಅನಾವರಣಗೊಳ್ಳಲಿದೆ.

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz