One N Only Exclusive Cine Portal

ರಾಗಿಣಿಯ ಮುದ್ದು ನಾಯಿ ನಿಧನ…

ಈ ಸಿನಿಮಾ ನಟಿಯರಿಗೂ ಶ್ವಾನಪ್ರೇಮಕ್ಕೂ ಎಲ್ಲಿಲ್ಲದ ನಂಟು. ತಮ್ಮ ಭಯಾನಕ ಒತ್ತಡಗಳನ್ನೆಲ್ಲ ಮುದ್ದಿನ ನಾಯಿಗಳ ಜೊತೆ ಒಂದಷ್ಟು ಸಮಯ ಕಳೆಯೋ ಮೂಲಕ ನೀಗಿಕೊಳ್ಳುವ ನಟಿಯರನೇಕರು ತಮ್ಮಿಷ್ಟದ ನಾಯಿ ಮರಣ ಹೊಂದಿದಾಗ ಡಿಪ್ರೆಸ್ ಮೂಡಿಗೆ ಹೋಗೋದಿದೆ. ಇದೀಗ ನಟಿ ರಾಗಿಣಿ ಅಂಥಾದ್ದೇ ಮೂಡಿನಲ್ಲಿದ್ದಾರೆ!
ರಾಗಿಣಿಯ ಮುದ್ದಿನ ನಾಯಿ ನಿನ್ನೆ ರಾತ್ರಿ ಸತ್ತು ಹೋಗಿದೆ.


ಒಂದಿಲ್ಲೊಂದು ಚಿತ್ರಗಳು, ನಾನಾ ಕಾರ್ಯಕ್ರಮಗಳಲ್ಲಿ ಸದಾ ಬ್ಯುಸಿಯಾಗಿರೋ ರಾಗಿಣಿಗೆ ಇದ್ದ ಏಕೈಕ ರಿಲೀಫೆಂದರೆ ಅವರ ಮುದ್ದಿನ ನಾಯಿ ಸ್ಟ್ರೈಕರ್. ಅವರ ಮನೆ ತುಂಬಾ ಮುದ್ದಾಗಿ ಓಡಾಡಿಕೊಂಡಿದ್ದ ಈ ನಾಯಿಗೆ ಸಾಯುವಂಥಾ ವಯಸೇನೂ ಆಗಿರಲಿಲ್ಲ. ಆದರೆ ಎರಡು ದಿನಗಳ ಹಿಂದೆ ಅದು ತುಸು ಮಂಕಾದಂತೆ ಕಂಡು ಬಂದಿತ್ತು. ಸೂಕ್ತ ಔಷದೋಪಚಾರ ಕೊಡಿಸಿದರೂ ಎರಡು ದಿನಗಳಿಂದ ಅಗೋಚರ ಕಾಯಿಲೆಗೆ ಸಿಕ್ಕು ನರಳಿದ ನಾಯಿ ಕಡೆಗೂ ನೆನ್ನೆ ರಾತ್ರಿ ಏಳು ಘಂಟೆಯ ಹೊತ್ತಿಗೆಲ್ಲಾ ಉಸಿರು ನಿಲ್ಲಿಸಿದೆ.
ರಾಗಿಣಿ ಖಾಸಗಿಯಾದ ಸುತ್ತಾಟದ ಸಂದರ್ಭದಲ್ಲೆಲ್ಲಾ ತಮ್ಮ ಮುದ್ದಿನ ನಾಯಿಯನ್ನು ತಮ್ಮ ಜೊತೆಗೇ ಕರೆದೊಯ್ಯುತ್ತಿದ್ದರು. ದಿನದ ಶೂಟಿಂಗ್ ಕಾರ್ಯಗಳನ್ನು ಮುಗಿಸಿಕೊಂಡು ವಾಪಾಸಾದ ರಾಗಿಣಿಯನ್ನು ಮತ್ತೆ ಉಲ್ಲಾಸದಿಂದಿರುವಂತೆ ಮಾಡುತ್ತಿದ್ದದ್ದೂ ಇದೇ ನಾಯಿ. ಅದೇನೇ ಒತ್ತಡಗಳಿದ್ದರೂ ತಮ್ಮ ಮುದ್ದಿನ ನಾಯಿಯೊಂದಿಗೆ ಬಹಳಷ್ಟು ಹೊತ್ತು ಕಳೆಯುತ್ತಿದ್ದ ರಾಗಿಣಿ ಇದೀಗ ಅದನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ.
ಅನಾರೋಗ್ಯ ಪೀಡಿತವಾದ ನಾಯಿಯನ್ನು ಬದುಕಿಸಿಕೊಳ್ಳಲು ಹರಸಾಹಸ ಪಟ್ಟು ಕಡೆಗೂ ಉಳಿಸಿಕೊಳ್ಳಲಾರದ ರಾಗಿಣಿ ತನ್ನ ಮನೆಯ ಸದಸ್ಯನೋರ್ವ ಇನ್ನಿಲ್ಲವೆಂಬಂಥಾ ದುರ್ವಾರ್ತೆಯನ್ನು ಹತ್ತಿರದವರ ಬಳಿಯೆಲ್ಲ ಹಂಚಿಕೊಳ್ಳುವ ಮೂಲಕ ದುಃಖ ತೋಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image