One N Only Exclusive Cine Portal

ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಗೆ ಕವಿತಾ ಲಂಕೇಶ್ ಪ್ರಶ್ನೆ!

ಇಂದು ಬೇರೆ ಬೇರೆ ರಂಗಗಳಲ್ಲಿ ಸಕ್ರಿಯರಾಗಿರುವ ಮಹಿಳೆಯರೊಂದಿಗೆ ಕಾಂಗ್ರೆಸ್ ರಾಷ್ಟ್ರಾದ್ಯಕ್ಷ ರಾಹುಲ್ ಗಾಂಧಿ ಸಂವಾದ ಕಾರ್ಯಕ್ರಮವೊಂದು ನಡೆದಿದೆ. ಪತ್ರಕರ್ತೆಯರು, ಹೊರಾಟಗಾರ್ತಿಯರೂ ಸೇರಿದಂತೆ ವಿವಿಧ ಕ್ಷೇತ್ರದಲ್ಲಿನ ಮಹಿಳೆಯರು ಸೇರಿದ್ದ ಈ ಕಾರ್ಯಕ್ರಮದಲ್ಲಿ ನಿರ್ದೇಶಕಿ ಕವಿತಾ ಲಂಕೇಶ್ ಅವರು ಪಾಲ್ಗೊಂಡಿದ್ದರು. ಕವಿತಾರನ್ನು ಖುದ್ದು ರಮ್ಯಾ ಈ ಸಂವಾದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.

ಇದೇ ಸಂದರ್ಭದಲ್ಲಿ ಕವಿತಾ ಲಂಕೇಶ್ ಅವರು ರಾಹುಲ್ ಗಾಂಧಿಯವರಿಗೆ ‘ಪತ್ರಕರ್ತೆಯರು, ಸಾಮಾಜಿಕ ಹೋರಾಟಗಾರ್ತಿಯರು ಮತ್ತು ಸತ್ಯದ ಭೂಮಿಕೆಯಲ್ಲಿ ಮತಾಡೋ ಮಹಿಳೆಯರಿಗೆ ಯಾವ ರೀತಿ ರಕ್ಷಣೆ ಕೊಡುತ್ತೀರಿ’ ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ರಾಹುಲ್ ‘ಸತ್ಯ ಮಾತಾಡಿದಾಗ ಅಂಥ ಮಹಿಳೆಯರ ಸಪೋರ್ಟಿಗೆ ನಿಲ್ಲುವಂಥಾ ಸಮಾಜ ನಿರ್ಮಾಣವಾಗಬೇಕು. ಹಾಗಾದಾಗ ಅನಾಹುತಗಳನ್ನು ತಪ್ಪಿಸಬಹುದು’ ಎಂಬಥದಲ್ಲಿ ಉತ್ತರ ನೀಡಿದ್ದಾರೆ.


ವಿವಿಧ ಕ್ಷೇತ್ರಗಳ ಮಹಿಳೆಯರು ನಾನಾ ನೆಲೆಗಳ ಪ್ರಶ್ನೆಗಳ ಜೊತೆಗೆ ರಾಹುಗಾಂಧಿಯವರೊಂದಿಗೆ ಆತ್ಮೀಯ ಸಂವಾದ, ಚರ್ಚೆ ನಡೆಸಿದ ಈ ಕಾರ್ಯಕ್ರಮ ಮುಗಿದ ನಂತರವೂ ಕವಿತಾ ಲಂಕೇಶ್ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಗೌರಿ ಲಂಕೇಶ್ ಅವರ ‘ದಿ ವೇ ಐ ಸೀ ಇಟ್’ ಎಂಬ ಪುಸ್ತಕವನ್ನೂ ಕವಿತಾ ರಾಹುಲ್‌ಗೆ ನೀಡಿದ್ದಾರೆ. ಅದನ್ನು ಖುಷಿಯಿಂದಲೇ ಪಡೆದುಕೊಂಡ ರಾಹುಲ್ ಕವಿತಾರನ್ನು ಆತ್ಮೀಯವಾಗಿ ಬೀಳ್ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image