One N Only Exclusive Cine Portal

ಭ್ರಷ್ಟ ವ್ಯವಸ್ಥೆ ಬದಲಾಯಿಸಲು ಬಂದರೇ ರಜನೀಕಾಂತ್?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರಜನಿ ಅಷ್ಟು ಸಲೀಸಾಗಿ ಇಂಥಾ ರಿಸ್ಕುಗಳನ್ನು ಮೈಮೇಲೆಳೆದುಕೊಳ್ಳೋರಲ್ಲ. ಅವರಿಗಿರೋ ಕ್ರೇಜ್‌ಗೆ ಯಾವುದಾದರೂ ಪಕ್ಷ ಸೇರಿ ಗೆದ್ದು ಒಂದೇ ಏಟಿಗೆ ಕೇಂದ್ರದಲ್ಲೇ ಸಚಿವ ಸ್ಥಾನ ಪಡೆದು ಸೇಫಾಗಬಹುದು. ಆದರೆ ತಮಿಳುನಾಡಿನ ಈವತ್ತಿನ ರಾಜಕೀಯ ಸ್ಥಿತಿ ತಮ್ಮ ಹೊಸಾ ಪಕ್ಷದ ಹುಟ್ಟಿಗೆ ಮತ್ತು ಗೆಲುವಿಗೆ ಪೂರಕವಾಗಿರೋದರಿಂದ ರಜನಿ ತಮಿಳುನಾಡನ್ನೇ ತಮ್ಮ ರಾಜಕೀಯ ನೆಲೆಯಾಗಿಸಿಕೊಂಡಿದ್ದಾರೆ.

ರಜನಿಕಾಂತ್ ರಾಜಕೀಯ ಪ್ರವೇಶವನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ. ತಮಿಳು ನಾಡಿನ ಮಟ್ಟಿಗೆ ಸಿನಿಮಾ ತಾರೆಗಳ ರಾಜಕೀಯ ಪ್ರವೇಶ ಅಷ್ಟೇನೂ ವಿಶೇಷವಲ್ಲ. ಆದರೆ ತಮಿಳುನಾಡು ಮಾತ್ರವಲ್ಲದೆ ವಿಶ್ವಾಧ್ಯಂತ ಅಭಿಮಾನಿಗಳನ್ನು ಹೊಂದಿರೋ ರಜನಿ ರಾಜಕೀಯ ನಡೆಯ ಬಗ್ಗೆ ಸಹಜವಾಗಿಯೇ ಒಂದಷ್ಟು ಕುತೂಹಲಗಳೆದ್ದಿವೆ.


ರಜನೀಕಾಂತ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಸೆಳೆಯುವ ಪ್ರಯತ್ನ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳ ಕಡೆಯಿಂದಲೂ ನಿರಂತರವಾಗಿ ನಡೆದಿತ್ತು. ರಜನಿ ಖಂಡಿತವಾಗಿಯೂ ಬಿಜೆಪಿ ಸೇರಿಕೊಳ್ತಾರೆಂಬ ಬಗ್ಗೆಯೂ ಗುಲ್ಲೆದ್ದಿತ್ತು. ಆದರೆ ಹೊಸಾ ವರ್ಷದಾರಂಭದಲ್ಲಿಯೇ ರಜನಿ ತಾವು ಸ್ವತಂತ್ರ ಪಕ್ಷ ಕಟ್ಟುವ ಘೋಷಣೆ ಮಾಡಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯ ಹೊತ್ತಿಗೆಲ್ಲ ಹೊಸಾ ಪಕ್ಷದ ಹೆಸರು ಜಾಹೀರು ಮಾಡುವ ಭರವಸೆಯನ್ನೂ ಅಭಿಮಾನಿಗಳಿಗೆ ನೀಡಿದ್ದಾರೆ.

ರಜನೀಕಾಂತ್ ತಮ್ಮ ಪಕ್ಷದ ಸಂಭಾವ್ಯ ಚಿನ್ಹೆಯನ್ನೂ ಕೂಡಾ ಅನಾವರಣಗೊಳಿಸಿದ್ದಾರೆ. ಆದರದು ಅಧಿಕೃತವಾ ಎಂಬುದು ಮಾತ್ರ ಇನ್ನೊಂದಷ್ಟು ಕಾಲದವರೆಗೆ ಕುತೂಹಲವಾಗುಳಿಯಲಿದೆ. ಆದರೆ ರಜನಿ ಈಗಿರೋ ಭ್ರಷ್ಟ ವ್ಯಸ್ಥೆಯನ್ನು ಬದಲಾಯಿಸೋ ಇರಾದೆಯಿಂದಲೇ ರಾಜಕೀಯಕ್ಕೆ ಅಡಿಯಿರಿಸಿರೋದಾಗಿ ಘೋಷಣೆ ಮಾಡಿರುವುದು ಹೊಸಾ ನಿರೀಕ್ಷೆಗಳನ್ನ ಹುಟ್ಟು ಹಾಕಿದೆ.

ಜಯಲಲಿತಾ ಮರೆಯಾದ ಮೇಲೆ ನಿರೀಕ್ಷೆಗೂ ಮೀರಿ ತಮಿಳುನಾಡಿನ ರಾಜಕೀಯ ದಿಕ್ಕುದೆಸೆ ಇಲ್ಲದಂತಾಗಿದೆ. ಅಮ್ಮ ಇದ್ದಷ್ಟೂ ದಿನ ಕಳ್ಳ ಬೆಕ್ಕಿನಂತಿದ್ದವರೆಲ್ಲ ಈಗಲ್ಲಿ ಹುಲಿವೇಷ ತೊಟ್ಟು ನಾಯಕರಾಗೋ ಜಿದ್ದ ಜಿದ್ದಿಗೆ ಬಿದ್ದಿದ್ದಾರೆ. ಅಲ್ಲಿ ಜನ ಮೆಚ್ಚುವಂಥಾ ರಾಜಕೀಯ ನಾಯಕರ ಕೊರತೆ ಇದೆ. ರಜನೀಕಾಂತ್ ತಮಿಳುನಾಡಿನ ರಾಜಕೀಯದತ್ತಲೇ ಪ್ರಧಾನವಾಗಿ ಪರಿಗಣಿಸಿರೋದಕ್ಕೆ ಇದೇ ಪ್ರಮುಖ ಕಾರಣ. ಈಗಿರೋ ವಾತಾವರಣದಲ್ಲಿ ರಜನಿ ಹೊಸಾ ಪಕ್ಷವನ್ನೇ ಕಟ್ಟಿದರೂ ಅನಾಯಾಸವಾಗಿ ಗೆಲ್ಲಬಹುದು.


ರಜನಿ ಅಷ್ಟು ಸಲೀಸಾಗಿ ಇಂಥಾ ರಿಸ್ಕುಗಳನ್ನು ಮೈಮೇಲೆಳೆದುಕೊಳ್ಳೋರಲ್ಲ. ಅವರಿಗಿರೋ ಕ್ರೇಜ್‌ಗೆ ಯಾವುದಾದರೂ ಪಕ್ಷ ಸೇರಿ ಗೆದ್ದು ಒಂದೇ ಏಟಿಗೆ ಕೇಂದ್ರದಲ್ಲೇ ಸಚಿವ ಸ್ಥಾನ ಪಡೆದು ಸೇಫಾಗಬಹುದು. ಆದರೆ ತಮಿಳುನಾಡಿನ ಈವತ್ತಿನ ರಾಜಕೀಯ ಸ್ಥಿತಿ ತಮ್ಮ ಹೊಸಾ ಪಕ್ಷದ ಹುಟ್ಟಿಗೆ ಮತ್ತು ಗೆಲುವಿಗೆ ಪೂರಕವಾಗಿರೋದರಿಂದ ರಜನಿ ತಮಿಳುನಾಡನ್ನೇ ತಮ್ಮ ರಾಜಕೀಯ ನೆಲೆಯಾಗಿಸಿಕೊಂಡಿದ್ದಾರೆ.


ಇದರ ಜೊತೆ ಜೊತೆಗೇ ರಜನೀಕಾಂತ್ ತಮ್ಮ ರಾಜಕೀಯ ನಡೆಯನ್ನು ಇನ್ನಷ್ಟು ಬಲಪಡಿಸಿಕೊಂಡು ಚುನಾವಣಾ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷ ಸೇರಿದರೂ ಅಚ್ಚರಿಯಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ!

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image