One N Only Exclusive Cine Portal

ಅನೂಪ್ ಭಂಡಾರಿ ಬಿಚ್ಚಿಟ್ಟ ರಾಜರಥ ರಹಸ್ಯ!

ರಂಗಿತರಂಗ ಎಂಬ ಸೂಪರ್ ಹಿಟ್ ಚಿತ್ರ ನಿರ್ದೇಶನ ಮಾಡಿದ್ದ ಅನೂಪ್ ಭಂಡಾರಿ ಅವರ ಎರಡನೇ ಚಿತ್ರ `ರಾಜರಥ’. ರಂಗಿತರಂಗ ಚಿತ್ರ ನೋಡಿದ ಪ್ರತಿಯೊಬ್ಬರೂ ಈ ನಿರ್ದೇಶಕರ ಮುಂದಿನ ಚಿತ್ರ ಯಾವುದೆಂಬ ಬಗ್ಗೆ ಕುತೂಹಲ ಗೊಂಡಿದ್ದರಲ್ಲಾ? ಅದುವೇ ರಾಜರಥದ ಗೆಲುವಿನ ಸಾರಥ್ಯ ವಹಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಇವೆ. ಇಂಥಾ ಅಸೀಮ ಕುತೂಹಲ, ನಿರೀಕ್ಷೆಗಳಿಗೆ ಕಾರಣವಾಗಿರುವ ರಾಜರಥ ಥೇಟರಿಗೆ ಆಗಮಿಸಲು ಇನ್ನು ಒಂದು ದಿನವಷ್ಟೇ ಬಾಕಿ ಉಳಿದುಕೊಂಡಿದೆ.

ಇಂಥಾ ಹೊತ್ತಿನಲ್ಲಿ ಚಿತ್ರತಂಡ ಪತ್ರಿಕಾ ಗೋಷ್ಟಿಯೊಂದರ ಮೂಲಕ ಮಾಧ್ಯಮ ಂತಿeನಿಧಿಗಳನ್ನು ಮೂಖಾಮುಖಿಯಾಗಿದೆ. ನಿರ್ದೇಶಕ ಅನೂಪ್ ಭಂಡಾರಿ ಸುಧೀರ್ಘವಾಗಿ ಚಿತ್ರದ ಬಗ್ಗೆ ಮಾತಾಡಿದ್ದಾರೆ. ಸ್ವಾರಸ್ಯಕರವಾದ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಂಗಿತರಂಗ ಚಿತ್ರದ ಹವಾ ಇಂದಿಗೂ ಹಸಿರಾಗಿದೆ. ಒಂದು ಡಿಫರೆಂಟಾದ ಕಥೆ ಮತ್ತು ನಿರೂಪಣಾ ಶೈಲಿಯಿಂದ ಈ ಚಿತ್ರ ಭಾರೀ ಗೆಲುವಿನ ರೂಪಾರಿಯಾಗಿದೆ. ರಾಜರಥ ಚಿತ್ರದಲ್ಲಿಯೂ ಅಂಥಾದ್ದೇ ಅಂಶಗಳಿರುತ್ತವಾ? ಬೆಚ್ಚಿ ಬೀಳಿಸೋ ಹಾರರ್ ಅಂಶಗಳಿರುತ್ತವಾ? ಅಷ್ಟಕ್ಕೂ ರಾಜರಥದ ಕಥಾ ಎಳೆ ಏನು… ಇಂಥಾ ಸಾಲು ಸಾಲು ಪ್ರಶ್ನೆಗಳು ಪ್ರೇಕ್ಷಕರನ್ನು ಕಾಡುತ್ತಿವೆ. ನಿರ್ದೇಶಕ ಅನೂಪ್ ಭಂಡಾರಿ ಅದೆಲ್ಲದಕ್ಕೂ ಸೂಕ್ಷ್ಮವಾಗಿ ಉತ್ತರ ರವಾನಿಸಿದ್ದಾರೆ.

ರಾಜರಥ ಒಂದು ಬಸ್ ಮೂಲಕ ಬಿಚ್ಚಿಕೊಳ್ಳುವ ವಿಭನ್ನ ಕಥೆಯಂತೆ. ಬಸ್ ಕೂಡಾ ಈ ಚಿತ್ರದ ಪ್ರಧಾನ ಪಾತ್ರ. ತೆಲುಗಿನಲ್ಲಿ ರಾಣಾ ದಗ್ಗುಬಾಟಿ ಮತ್ತು ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಚಿತ್ರದುದ್ದಕ್ಕೂ ಅಶರೀರವಾಗಿ ಸಾಥ್ ಕೊಟ್ಟಿದ್ದಾರೆ. ಅವರ ಇರುವಿಕೆಯೂ ಚಿತ್ರದುದ್ದಕ್ಕೂ ಇದೆಯಂತೆ. ಟ್ರೈಲರ್‌ನಲ್ಲಿ ಭಿನ್ನವಾದ ಕಲರಿಂಗ್ ಜೊತೆಗೆ ಕಥಾ ಎಳೇಯ ಬಗ್ಗೆ ಕುತೂಹಲ ಕೆರಳಿಸುವಂಥಾ ಎಲಿಮೆಂಟುಗಳಿದ್ದವಲ್ಲಾ? ಅದು ಚಿತ್ರದ ಒಂದು ಮುಖ ಮಾತ್ರ. ಇಡೀ ಕಥೆಗೆ ಮತ್ತೊಂದು ಬೆರಗಾಗಿಸೋ ಮುಖವಿದೆಯಂತೆ.

ಇದನ್ನು ಹೊರತು ಪಡಿಸಿ ಇದೊಂದು ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಚಿತ್ರ. ನಿರೂಪ್ ಭಂಡಾರಿ ಇಲ್ಲಿ ಅಭಿ ಎಂಬ ಪಾತ್ರ ನಿರ್ವಹಿಸಿದ್ದಾರೆ. ಆವಂತಿಕಾ ಶೆಟ್ಟಿಯದ್ದು ಮೇಘನಾ ಎಂಬ ಕಾಲೇಜು ಹುಡುಗಿಯ ಪಾತ್ರ. ಇನ್ನುಳಿದಂತೆ ರವಿಶಂಕರ್ ಅಂಕಲ್ ಎಂಬ ವಿಭಿನ್ನವಾದ ಪಾತ್ರದಲ್ಲಿ ಮಿಂಚಿದ್ದಾರೆ. ಇದುವರೆಗೂ ರಗಡ್ ಲುಕ್ಕಿನಲ್ಲಿ ಮಾತ್ರವೇ ಕಾಣಿಸಿಕೊಳ್ಳುತ್ತಿದ್ದ ರವಿಶಂಕರ್ ಪಾತ್ರ ಕೂಡಾ ರಾಜರಥದ ಪ್ರಧಾನ ಆಕರ್ಷಣೆಗಳಲ್ಲೊಂದೆಂಬುದು ಅನೂಪ್ ಭಂಡಾರಿ ಅವರ ಭಯವಸೆ.

ಹೀಗೆ ಒಂದು ಭಿನ್ನವಾದ ಕಥಾ ಹಂದರ ಹೊಂದಿರೋ ಈ ಚಿತ್ರ ಕರ್ನಾಟಕದಲ್ಲಿ ಇನ್ನೂರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಆಂದ್ರಪ್ರದೇಶ ತೆಲಂಗಾಣದಲ್ಲಿಯೂ ಅಷ್ಟೇ ಸಂಖ್ಯೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಎರಡನೇ ವಾರದ ನಂತರ ವಿದೇಶಗಳಲ್ಲಿಯೂ ರಾಜರಥದ ಹವಾ ಶುರುವಾಗಲಿದೆ!

ಜಾಲಿಹಿಟ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಜಯ್ ರೆಡ್ಡಿ, ವಿಶು ದಕಪ್ಪಗಾರಿ, ಅಂಜು ವಲ್ಲಭನೇನಿ ಹಾಗೂ ಸತೀಶ್ ಶಾಸ್ತ್ರಿ ಅವರು ನಿರ್ಮಿಸಿರುವ `ರಾಜರಥ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅನೂಪ್ ಭಂಡಾರಿ ಕಥೆ ಬರೆದು, ಗೀತರಚನೆ ಹಾಗೂ ಸಂಗೀತ ನಿರ್ದೇಶನ ಮಾಡಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ವಿಲಯಂ ಡೇವಿಡ್ ಅವರ ಛಾಯಾಗ್ರಹಣವಿದೆ. ಶಾಂತಕುಮಾರ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ನೀಡಿದ್ದಾರೆ. ನಿರೂಪ್ ಭಂಡಾರಿ, ಪುನೀತ್ ರಾಜಕುಮಾರ್, ಆವಂತಿಕಾ ಶೆಟ್ಟಿ, ರವಿಶಂಕರ್, ಆರ್ಯ(ತಮಿಳು) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image