Connect with us

ಸೌತ್ ಬಜ್

ರಜನೀಕಾಂತ್ ಎದುರಾಳಿಯಾಗಲಿದ್ದಾರೆ ವಿಜಯ್ ಸೇತುಪತಿ!

Published

on

ತಮಿಳು ಚಿತ್ರರಂಗದಲ್ಲಿ ಎಂಥವರೂ ಅಚ್ಚರಿಗೊಳ್ಳುವಂತೆ ಸ್ಟಾರ್ ನಟನಾಗಿ ಹೊರ ಹೊಮ್ಮಿರುವವರು ವಿಜಯ್ ಸೇತುಪತಿ. ಸ್ಟಾರ್‌ಗಿರಿಯಾಚೆಗೆ ಎಲ್ಲ ಥರದ ಪಾತ್ರಗಳನ್ನು ಮಾಡುವ ಮೂಲಕ ತಾನೊಬ್ಬ ಅಪ್ಪಟ ನಟ ಎಂಬುದನ್ನು ಸಾಬೀತು ಪಡಿಸಿರುವ ಸೇತುಪತಿತಮಿಳು ಭಾಷೆಯಾಚೆಗೂ ಅಭಿಮಾನಿಗಳನ್ನು ಹೊಂದಿರುವ ನಟ.

  
ಇದೀಗ ವಿಜಯ್ ಸೇತುಪತಿ ಅಭಿಮಾನಿಗಳೆಲ್ಲ ಖುಷಿಗೊಳ್ಳುವಂಥಾ ಸುದ್ದಿಯೊಂದನ್ನು ಸನ್ ಪಿಚ್ಚರ್ಸ್ ಸಂಸ್ಥೆ ಹೊರ ಹಾಕಿದೆ.
ಸನ್ ಪಿಚ್ಚರ‍್ಸ್ ಸಂಸ್ಥೆ ಹೊರ ಹಾಕಿರೋ ಸುದ್ದಿಯ ಪ್ರಕಾರವಾಗಿ ಹೇಳೋದಾದರೆ ವಿಜಯ್ ಸೇತುಪತಿ ಸೂಪರ್ ಸ್ಟಾರ್ ರಜನೀಕಾಂತ್ ಅವರ ಜೊತೆ ಇಷ್ಟರಲ್ಲಿಯೇ ನಟಿಸಲಿದ್ದಾರೆ. ಇದೀಗ ರಜನೀಕಾಂತ್ ಅವರ ಕಾಳ ಚಿತ್ರ ಬಿಡುಗಡೆಗೆ ಸಜ್ಜಾಗಿದೆಯಲ್ಲಾ? ಅದು ಬಿಡುಗಡೆಗೊಂಡ ತಕ್ಷಣವೇ ಸನ್ ಪಿಚ್ಚರ್ಸ್ ಲಾಂಛನದಲ್ಲಿ ರಜನಿ ಹೊಸಾ ಚಿತ್ರವೊಂದು ಶುರುವಾಗಲಿದೆ. ಅದರಲ್ಲಿ ರಜನೀಕಾಂತ್ ಜೊತೆ ವಿಜಯ್ ಸೇತುಪತಿ ನಟಿಸಲಿರುವುದು ಗ್ಯಾರೆಂಟಿ!


ಅಂದಹಾಗೆ ಸನ್ ಪಿಚ್ಚರ್ಸ್ ನಿರ್ಮಾಣ ಮಾಡಲಿರುವ ಈ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶನ ಮಾಡಲಿದ್ದಾರೆ. ಸದ್ಯ ಈ ಚಿತ್ರಕ್ಕಾಗಿ ತಾರಾಗಣದ ಆಯ್ಕೆ ನಡೆಯುತ್ತಿದೆ. ಆದರೆ ಹೆಸರು ಇನ್ನೂ ಫೈನಲ್ ಆಗಿಲ್ಲ. ಸದರಿ ಚಿತ್ರದಲ್ಲಿ ವಿಜಯ್ ಸೇತುಪತಿ ರಜನೀಕಾಂತ್ ಜೊತೆ ನಟಿಸುವ ಬಗ್ಗೆ ಮಾತುಕತೆಗಳು ಸಂಪೂರ್ಣವಾಗಿ ಮುಗಿದಿವೆ. ಸೇತುಪತಿ ಕೂಡಾ ರಜನೀ ಜೊತೆ ನಟಿಸುವ ಸುವರ್ಣಾವಕಾಶವನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ.


ಹಾಗಾದರೆ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಯಾವ ಪಾತ್ರವನ್ನು ನಿರ್ವಹಿಸಿಸಲಿದ್ದಾರೆಂಬು ಕುತೂಹಲ ಕಾಡೋದು ಸಹಜ. ಈ ನಿಟ್ಟಿನಲ್ಲಿ ನೋಡ ಹೋದರೆ ಸಣ್ಣ ಹೊಳಹೊಂದಷ್ಟೇ ಸಿಗುತ್ತದೆ. ಈ ಚಿತ್ರದಲ್ಲಿ ಸೇತುಪತಿ ರಜನೀಕಾಂತ್ ಎದುರಾಳಿಯಾಗಿ ನಟಿಸಲಿದ್ದಾರಂತೆ. ಆದರೆ ಆ ಪಾತ್ರದ ರೂಪುರೇಷೆಗಳೇನೆಂಬುದನ್ನು ಗೌಪ್ಯವಾಗಿಡಲಾಗಿದೆ.


ಅಂತೂ ಪ್ರತಿಭಾವಂತ ನಟ ವಿಜಯ್ ಸೇತುಪತಿ ಮತ್ತು ರಜನೀಕಾಂತ್ ಸಂಗಮದ ಈ ಚಿತ್ರ ತಮಿಳುನಾಡಿನಾಧ್ಯಂತ ಭಾರೀ ಕುತೂಹಲ ಹುಟ್ಟಿಸಿದೆ!

Continue Reading
Click to comment

Leave a Reply

Your email address will not be published. Required fields are marked *

ಸೌತ್ ಬಜ್

ತಾಪ್ಸಿಯ ಹೋರಾಟಕ್ಕೆ ಸಿನಿಮಾವೇ ಅಸ್ತ್ರ!

Published

on

ಸಿನಿಮಾ ಮಂದಿ ಅದರಲ್ಲಿಯೂ ನಟಿಯರು ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ. ಆದರೆ ಪ್ರಜ್ಞಾವಂತ ನಟಿ ತಾಪ್ಸಿ ಪನ್ನು ಇದಕ್ಕೆ ತದ್ವಿರುದ್ಧ!

ಸಾಮಾಜಿಕ ಪಲ್ಲಟಗಳ ಬಗ್ಗೆ ದೊಡ್ಡ ಸ್ವರದಲ್ಲಿ ಧ್ವನಿ ಎತ್ತಲು ನಾನೇನು ಆಕ್ಟಿವಿಸ್ಟ್ ಅಲ್ಲ. ಆದರೆ ನನಗನ್ನಿಸಿದ್ದನ್ನು, ಹೇಳಲೇ ಬೇಕಾಗಿರೋದನ್ನು ಹೇಳಲು ಸಿನಿಮಾ ನನಗೆ ಮಾಧ್ಯಮ. ಸಿನಿಮಾಗಳ ಮೂಲಕವೇ ಇದರ ಸಾಕಾರಕ್ಕಾಗಿ ಪ್ರಯತ್ನಿಸುತ್ತೇನೆ. ಜನರನ್ನು ಎಜುಕೇಟ್ ಮಾಡುವಂಥಾ ಚಿತ್ರಗಳು ಸಿಕ್ಕರೆ ಅಂಥಾದ್ದರಲ್ಲಿ ಬೇಷರತ್ತಾಗಿ ಅಭಿನಯಿಸುತ್ತೇನೆ ಎಂಬುದು ತಾಪ್ಸಿ ಪನ್ನು ತನ್ನೊಳಗಿನ ಸಾಮಾಜಿಕ ಕಳಕಳಿಯನ್ನು ಅನಾವರಣಗೊಳಿಸಿದ ಪರಿ.

ಬಾಲಿವುಡ್‌ನಲ್ಲಿ ತಾಪ್ಸಿಗೆ ಡೇರಿಂಗ್ ಇಮೇಜೊಂದಿದೆ. ಬಿಡುಬೀಸಾದ ನಟನೆಯ ಜೊತೆಗೆ ಅದೇ ಥರದ ವ್ಯಕ್ತಿತ್ವವನ್ನೂ ಹೊಂದಿರೋ ತಾಪ್ಸಿ ಯಾರಿಗೂ ಕೇರು ಮಾಡುವವಳಲ್ಲ. ಇದೇ ರೀತಿ ಆಕೆಗೆ ಈ ಸಮಾಜಕ್ಕಾಗಿ ಏನನ್ನಾದರೂ ಮಾಡ ಬೇಕು, ಯಾವುದು ಸರಿ ಯಾವುದು ತಪ್ಪೆಂಬ ಬಗ್ಗೆ ಕೈಲಾದಷ್ಟು ಜನರನ್ನು ಪ್ರಭಾವಿಸಬೇಕೆಂಬ ಆಸೆ ಇದೆ. ಆದರೆ ಸಿನಿಮಾದಾಚೆಗೆ ಅಂಥಾದ್ದನ್ನು ಮಾಡಲು ಆಕೆಗಿಷ್ಟವಿಲ್ಲ. ತನಗೆ ಒಲಿದಿರೋ ನಟನೆಯ ಮೂಲಕವೇ ಆ ಕೆಲಸ ಮಾಡಲು ತಾಪ್ಸಿ ತೀರ್ಮಾನಿಸಿದ್ದಾಳಂತೆ.

ಇದೀಗ ತಾಪ್ಸಿ ನೀತಿ ಶಾಸ್ತ್ರ ಅಂತೊಂದಿ ಕಿರು ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಇದರಲ್ಲಿ ಸಿಖ್ಖ್ ಹುಡುಗಿಯ ಪಾತ್ರ ಮಾಡುತ್ತಿರುವ ತಾಪ್ಸಿ ಇಂದು ದೇಶಾದ್ಯಂತ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರೋ ದೌರ್ಜನ್ಯ, ನೈತಿಕ ಮಪೊಲೀಸ್‌ಗಿರಿ ಮುಂತಾದವುಗಳ ವಿರುದ್ಧ ಸಿಡಿದೇಳುವ ಪಾತ್ರ ಮಾಡುತ್ತಿದ್ದಾಳಂತೆ.

Continue Reading

ಸೌತ್ ಬಜ್

ಪಿಗ್ಗಿ ಮೇಲೆ ಕಂಗನಾ ಕೋಪಗೊಂಡಿದ್ದೇಕೆ?

Published

on

ಇಂಗ್ಲಿಷ್ ಧಾರಾವಾಹಿಯೊಂದರಲ್ಲಿ ನಟಿಸುತ್ತಲೇ ವಿಶ್ವಾಧ್ಯಂತ ಖ್ಯಾತಳಾದ ಪ್ರಿಯಾಂಕಾ ಛೋಪ್ರಾ ಬಾಲಿವುಡ್ ಅನ್ನು ಮರೆತೇ ಬಿಟ್ಟಂತಿದ್ದಳು. ವರ್ಷಾಂತರಗಳ ಕಾಲ ವಿದೇಶದಲ್ಲಿಯೇ ಇದ್ದ ಪಿಗ್ಗಿ ತನ್ನ ಹುಡುಗ ನಿಕ್‌ನೊಂದಿಗೇ ಮರಳಿದ್ದಾಳೆ. ಈಕೆ ಹೋದಲ್ಲಿ ಬಂದಲ್ಲಿ ಮಾಧ್ಯಮಗಳು ನಾಕಾಬಂಧಿ ಹಾಕುತ್ತಲೇ ಏಕಾಏಕಿ ಎಂಗೇಜ್‌ಮೆಂಟ್ ಮಾಡಿಕೊಳ್ಳೋ ಮೂಲಕ ಪಿಗ್ಗಿ ಎಲ್ಲರಿಗೂ ಶಾಕ್ ನೀಡಿದ್ದಾಳೆ.
ಆದರೆ, ಪ್ರಿಯಾಂಕಾ ಛೋಪ್ರಾ ಎಂಗೇಜ್ ಮೆಂಟ್ ಮಾಡಿಕೊಂಡಿರೋ ಸುದ್ದಿ ಮಾಧ್ಯಮಗಳಿಂದಷ್ಟೇ ತಿಳಿದುಕೊಂಡಿರೋ ಆಕೆಯ ಬಹುಕಾಲದ ಗೆಳತಿ ಕಂಗನಾ ರನೌತ್ ಎಲ್ಲರಿಗಿಂತಲೂ ಹೆಚ್ಚು ಶಾಕ್ ಆಗಿದ್ದಾಳೆ!
ಕಂಗನಾ ರನೌತ್ ಸ್ವತಃ ಹೇಳಿಕೊಂಡಿರೋ ಪ್ರಕಾರವಾಗಿ ಹೇಳೋದಾದರೆ ಪ್ರಿಯಾಂಕಾ ಛೋಪ್ರಾ ಎಂಗೇಜ್‌ಮೆಂಟ್ ಮಾಡಿಕೊಂಡಿರೋ ವಿಚಾರ ಆರಂಭದಲ್ಲಿ ಗೊತ್ತೇ ಇರಲಿಲ್ಲ. ದಶಕಗಳಿಂದೀಚೆಗೆ ಗೆಳತಿಯಾಗಿರೋ ಕಂಗನಾಗೆ ಪಿಗ್ಗಿ ಎಂಗೇಜ್ ಮೆಂಟ್ ಬಗ್ಗೆ ಒಂದು ಮಾತನ್ನೂ ಹೇಳಿಲ್ಲವಂತೆ!
ಅತ್ತ ಪ್ರಿಯಾಂಕಾ ಎಂಗೇಜ್‌ಮೆಂಟ್ ಹತ್ತಿರ ಬರುತ್ತಲೇ ಒಂದು ಕಾರ್ಯಕ್ರಮದಲ್ಲಿ ಆ ಬಗ್ಗೆ ಕಂಗನಾಗೆ ಪ್ರಶ್ನೆ ಎದುರಾಗಿತ್ತಂತೆ. ಆಗಷ್ಟೇ ಈ ಎಂಗೇಜ್‌ಮೆಂಟ್ ವಿಚಾರ ತಿಳಿದುಕೊಂಡ ಕಂಗನಾ ಶಾಕ್ ಆಗಿದ್ದಾಳೆ. ಆದರೆ ಕಡೇ ಕ್ಷಣದಲ್ಲಾದರೂ ಪಿಗ್ಗಿ ತನ್ನನ್ನು ಆಹ್ವಾನಿಸ ಬಹುದು ಅಂದುಕೊಂಡಿದ್ದ ಕಂಗನಾಗೆ ಕಡೆಗೂ ನಿರಾಸೆಯೇ ಗಟ್ಟಿಯಾಗಿತ್ತು. ಆದ್ದರಿಂದಲೇ ತನ್ನನ್ನು ಪಿಗ್ಗಿ ಎಂಗೇಜ್‌ಮೆಂಟಿಗೆ ಕರೆಯದಿರೋದರಿಂದ ಅಪ್‌ಸೆಟ್ ಆಗಿರೋದಾಗಿ ಕಂಗನಾ ಹೇಳಿಕೊಂಡಿದ್ದಾಳೆ.
೨೦೦೮ರಲ್ಲಿ ತೆರೆ ಕಂಡಿದ್ದ ಫ್ಯಾಷನ್ ಚಿತ್ರದಲ್ಲಿ ಪ್ರಿಯಾಂಕಾ ಛೋಪ್ರಾ ಮತ್ತು ಕಂಗನಾ ಒಟ್ಟಾಗಿ ನಟಿಸಿದ್ದರು. ಅಲ್ಲಿಂದಲೇ ಇವರಿಬ್ಬರ ನಡುವೆ ಗಾಢವಾದ ಸ್ನೇಹ ಹಬ್ಬಿಕೊಂಡಿತ್ತು. ಆ ನಂತರದಲ್ಲಿ ಬಾಲಿವುಡ್‌ನ ತುಂಬಾ ಇವರಿಬ್ಬರು ಗೆಳತಿಯರಾಗಿ ಬಿಂಬಿಸಿಕೊಂಡಿದ್ದರು. ಆದರೆ, ಇಂಥಾ ಗೆಳತಿಗೇ ಹೇಳದೆ ಪಿಗ್ಗಿ ಎಂಗೇಜ್ ಮೆಂಟ್ ಮುಗಿಸಿಕೊಂಡು ಮದುವೆಗೂ ತಯಾರಾಗಿದ್ದಾಳೆ!

Continue Reading

ಸೌತ್ ಬಜ್

ಪ್ರಿಯಾಂಕಾ ಕೈ ಕೊಟ್ಟ ನಂತರ ಸಲ್ಮಾನ್‌ಗೆ ಸಿಕ್ಕಳು ಕತ್ರಿನಾ!

Published

on

ಪ್ರಿಯಾಂಕಾ ಛೋಪ್ರಾ ಪಾಲಿಗೀಗ ಆಕೆಯ ಪರ್ಸನಲ್ ಲೈಫೇ ಪ್ರಪಂಚ. ಧಾರಾವಾಹಿ ಅಂತೆಲ್ಲ ವಿದೇಶದಲ್ಲಿಯೇ ಬೀಡು ಬಿಟ್ಟಿದ್ದ ಪಿಗ್ಗಿ ಸಲ್ಮಾನ್ ಖಾನನ ಭರತ್ ಚಿತ್ರದ ಮೂಲಕ ರೀ ಎಂಟ್ರಿ ಕೊಟ್ಟಳೆಂದು ಸುದ್ದಿಯಾಗಿತ್ತು. ಆದರೆ ಆಕೆ ಈ ಪ್ರಾಜೆಕ್ಟಿನಿಂದಲೂ ಹೊರ ಬಿದ್ದಿದ್ದಾಳೆ. ಆ ಜಾಗಕ್ಕೆ ಸಲ್ಮಾನನ ಹಳೇ ಪ್ರೇಯಸಿ ಕತ್ರಿನಾ ಕೈಫ್ ಎಂಟ್ರಿ ಕೊಟ್ಟಿದ್ದಾಳೆ!
ಒಂದು ಕಾಲದಲ್ಲಿ ಜೋಡಿ ಹಕ್ಕಿಯಂತೆ ಜೊತೆಗೇ ಇದ್ದವರು ಸಲ್ಮಾನ್ ಮತ್ತು ಕತ್ರಿನಾ. ಆದರೆ ಪದೇ ಪದೆ ಗೂಡು ಬದಲಿಸುವ ಪೋಲಿ ಹಕ್ಕಿಯಂಥಾ ಸಲ್ಮಾನ್ ನಡತೆಯಿಂದಾಗಿ ಕತ್ರಿನಾ ಒಂದು ಗ್ಯಾಪನ್ನು ಮೇಂಟೇನು ಮಾಡಿಕೊಂಡಿದ್ದಳು. ಹೆಚ್ಚೂ ಕಮ್ಮಿ ಒಂದು ದಶಕಗಳ ಕಾಲ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಟೈಗರ್ ಜಿಂದಾ ಹೈ ಚಿತ್ರದ ಮೂಲಕ ಈ ಜೋಡಿ ಮತ್ತೆ ಒಂದಾಗಿತ್ತು. ನಿರೀಕ್ಷೆಯಂತೆಯೇ ಈ ಚಿತ್ರ ಸೂಪರ್ ಹಿಟ್ ಕೂಡಾ ಆಗಿತ್ತು.
ಇದೀಗ ಅನಿರೀಕ್ಷಿತವಾಗಿ ಭಾರತ್ ಚಿತ್ರಕ್ಕೆ ಕತ್ರಿನಾ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈ ಚಿತ್ರದಲ್ಲಿ ಕತ್ರಿನಾಳದ್ದು ಜಾಲಿ ಜಾಲಿ ಪಾತ್ರವಂತೆ. ಸಲ್ಮಾನನ ಹಿಂದೆ ಬಿದ್ದು ಪ್ರೀತಿಸೋ ಹುಡುಗಿಯಾಗಿ ಈಕೆ ನಟಿಸಲಿದ್ದಾಳಂತೆ. ಟೈಗರ್ ಜಿಂದಾ ಹೈ ಚಿತ್ರದಂತೆಯೇ ಈ ಚಿತ್ರವೂ ಕೂಡಾ ಗೆಲ್ಲುತ್ತದೆಯೆಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಪ್ರಿಯಾಂಕಾ ಚೋಪ್ರಾಗೆ ಭಾರತ್ ಚಿತ್ರದ ಮೂಲಕ ರೀ ಎಂಟ್ರಿ ಪಡೆಯಲು ಅದ್ಭುತ ಅವಕಾಶ ಅರಸಿ ಬಂದಿತ್ತು. ಆದರೆ ಆಕೆ ಸಂಪೂರ್ಣವಾಗಿ ಲವ್ ಮೂಡಿನಲ್ಲಿದ್ದಾಳೆ. ಇದರಿಂದಾಗಿ ಚಿತ್ರ ತಂಡ ರೋಸತ್ತುಯ ಹೋಗಿತ್ತು. ಕಡೆಗೂ ಪ್ರಿಯಾಂಕಾಳೇ ಈ ಚಿತ್ರದಿಂದ ಹೊರ ಬಿದ್ದಿದ್ದಾಳೆ. ಆ ಅವಕಾಶವೀಗ ಕತ್ರಿನಾ ಪಾಲಾಗಿದೆ!

Continue Reading

Trending

Copyright © 2018 Cinibuzz