One N Only Exclusive Cine Portal

ಅಣ್ಣಾವ್ರು ಎಷ್ಟು ಸಿಂಪಲ್ಲಾಗಿದ್ರು ಗೊತ್ತಾ?

ಡಾ.ರಾಜ್‌ಕುಮಾರ್ ಅಂದರೇನೇ ಅಹಮ್ಮಿಕೆಯ ಪಸೆಯೂ ಇಲ್ಲದ ಮೇರು ವ್ಯಕ್ತಿತ್ವ. ಇಂಥಾ ಅಪರೂಪದ ವ್ಯಕ್ತಿಯೊಂದಿಗೆ ಒಂದೇ ಒಂದು ಕ್ಷಣ ಕಳೆಯಬೇಕೆಂದು ಅದೆಷ್ಟು ಜೀವಗಳು ಹಂಬಲಿಸಿದ್ದವೋ… ಅಂಥಾದ್ದರ ನಡುವೆಯೇ ಅಣ್ಣೌವ್ರೊಂದಿಗೆ ಕಲೆತು ಬದುಕಿದ್ದವರು ಚೆನ್ನ. ಅವರೇ ಅಣ್ಣೌವ್ರೊಂದಿಗಿನ ಕೆಲ ನೆನಪುಗಳನ್ನು ಸಿನಿಬಜ್ ಓದುಗರಿಗಾಗಿ ಹಂಚಿಕೊಂಡಿದ್ದಾರೆ.

  

ಅಣ್ಣಾವ್ರ ವಾಕ್ ಎಂಬ ಸಂಭ್ರಮವೇ ಮನಕ್ಕೆ ಮುದ ನೀಡುವ ವಿಷಯ. ಬೆಳಗಿನ ಯೋಗ ಸಂಜೆಯ ವಾಕ್ ನಿಯಮಿತವಾದ ಶುಚಿಯಾದ ಊಟ ತಿಂಡಿ, ಕಣ್ಣತುಂಬಾ ನಿದ್ದೆ, ಟಿವಿಯಲ್ಲಿನ ಧಾರಾವಾಹಿ ಸಿನಿಮಾಗಳ ಮೂಲಕ ಮಕ್ಕಳು ಮೊಮ್ಮಕ್ಕಳು ಬಂಧುಗಳು ಸ್ನೇಹಿತರು ಅಭಿಮಾನಿ ವಋಂದದ ಭೇಟಿಗೆ ಮಹತ್ವ ಇತ್ತ ರಾಜ್‌ರ ಬದುಕಿನ ಅವಿಭಾಜ್ಯ ಅಂಗ. ವಯಸ್ಸು ೬ಂರ ಹಾಗೂ ೭ಂರ ಗಡಿ ದಾಟಿದರೂ ನವಯುವನಕ ಲವಲವಿಕೆ ಅವರಲ್ಲಿನ ವಿಶೇಷ ಗುಣ.
ಯಾರೊಂದಿಗೂ ಹಠ ಸಾಧಿಸದ ಅಪರೂಪದ ವ್ಯಕ್ತಿತ್ವ. ಪ್ರತಿನಿತ್ಯ ಐದು ಕಿ.ಮೀ. ವಆಕ್ ಎಂಬ ರಊಢಿ. ಶೂ ಧರಿಸಿ ವಾಕಿಂಗ್‌ಗೆ ಬರ‍್ತಾ ಇದ್ರು. ಮನೆಗೆ ಮರಳಿದ ಮೇಲೆ ಶೂ ಬಿಚ್ಚಲು ಹೋದರೆ ಆ ಹಿರಿಯ ಜೀವ ಒಪ್ತಾ ಇರಲಿಲ್ಲ. ನನ್ನ ಕೆಲಸ ನಾನೇ ಮಾಡ್ಕೋಬೇಕು ಎನ್ನಾ ಅವರೇ ಎಂಬ ಪ್ರೀತಿಯಿಂದ ಪ್ರತಿಭಟನೆ. ಮಂಡಿ ಆಪರೇಶನ್ ಆದ ಮೇಲೆ ವಾಕ್‌ನ ಈ ಗುಣಮಟ್ಟ ಕಡಿಮೆ ಆಗಿತ್ತು. ಖಾಸಗಿ ಚಾನೆಲ್‌ಗಳಲ್ಲಿ ಪ್ರಸಾರ ಆಗುವ ವಿಶೇಷ ಸಂದರ್ಶನಗಳನ್ನೇ ಅಥವಾ ಮನಕ್ಕೆ ಮುದ ನೀಡುವ ಕಾರ್ಯಕ್ರಮಗಳನ್ನೇ ನೋಡಿ ಆನಂದ ಪಡ್ತಾ ಇದ್ರು. ಅದರಲ್ಲೂ ಅಮಿತಾಭ್ ಬಚ್ಚನ್‌ರ್ ಕೌನ್ ಬನೇಗಾ ಕರೋಡ್ ಪತಿ ಪ್ರಸಾರದ ಸಮಯದಲ್ಲಂತೂ ಎವೆಯಿಕ್ಕದೇ ಟಿವಿ ಮುಂದೆ ಕುಳಿತು ಬಿಡ್ತಾಇದ್ರು. ಊಟ ತಇಂಡ ಕಾಫಿ ಮಾತು ಊಹೂಂ ಏನೂ ಬೇಡ. ಇವತ್ತು ಕನ್ನಡದ ಕೋಟ್ಯಾಧಿಪತಿಯಂತಹ ಕಾರ್ಯಕ್ರಮ ನನ್ನ ಪ್ರೀತಿ ಮಿತ್ರ ಪುನೀತ್ ನಡೆಸಿಕೊಡೋದನ್ನ ನೋಡಿದ್ರಂತೂ ಅಣ್ಣಾವ್ರು ಎಷ್ಟು ಸಂಭ್ರಮಿಸಿಸ್ತಾ ಇದ್ರೋ ಏನೋ! ಆ ಕಾರ್ಯಕ್ರಮ ನೆನಪಾದರೆ ಸಾಕು ನನಗೆ ಅಣ್ಣಾವ್ರು ಕೌನ್ ಬನೇಗಾ ಕಾರ್ಯಕ್ರಮಕ್ಕಾಗಿ ಮಾಡುತ್ತಿದ್ದ ತರಾತುರಿ ಕಣ್ಣ ಮುಂದೆ ಬರುತ್ತದೆ.

ವಾಕ್ ಆದ ಮೇಲೆ ಪೂರ್ತಿ ಫ್ರೆಶ್ ಆಗಿ ಮದುವೆ ಆರತಕ್ಷತೆ ಅಥವಾ ಇನ್ಯಾವುದಾದರೂ ಕಾರ್ಯಕ್ರಮ ಇದ್ರೆ ತಪ್ಪಸದೇ ಭಾಗವಹಿಸಿ ಬರ‍್ತಾ ಇದ್ರು. ಒಳ್ಳೆ ಬಿಳೀ ರೇಶಿಮೆ ಪಂಚೆ ರೇಶಿಮೆ ಶರ್ಟು ಧರಿಸಿ ಒಳ್ಳೆ ಮಧುಮಗನ ಗೆಟಪ್ಪಿಗೆ ಬಂದು ಬಿಡ್ತಾ ಇದ್ರು. ಪಾರ್ವತಮ್ಮ ಅವರಿಗೆ ಗಂಡ ಅಂದ್ರೆ ಪಂಚಪ್ರಾಣ. ಹೊರಗೆ ಹೋಗುವ ಸಮಯದಲ್ಲಿ ಸಾಮಾನ್ಯ ಒಬ್ಬೊಬ್ಬರೇ ಹೋದದ್ದು ಅಂತ ಇಲ್ಲವೇ ಇಲ್ಲ. ತೀರಾ ನಿವಾರ‍್ಯ ಅಂತಾದರೆ ಮಾತ್ರ ಒಬ್ಬರೇ ಹೋಗುವ ಪದ್ಧತಿ ಈ ದಂಪತಿಯದ್ದು. ಇಲ್ಲದಿದ್ದರೆ ಜೊತೆಯಾಗಿ ಹಿತವಾಗಿ ಸೇರಿ ನಲೀತಾ….! ಅಣ್ಣಾವು ಸಿದ್ಧವಾಗುವ ಹೊತ್ತಿಗೆ ಅಕ್ಕಾವ್ರು ಸೀರೆಯುಟ್ಟು ಮುಖತೊಳೆದು ಇಷ್ಟಗಲದ ಕುಂಕುಮ ಇರಿಸಿ ನಾನು ರೆಡಿ ಅನ್ನೋರು!
ಅಣ್ಣಾವ್ರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಾಗ ಕನ್ನಡದ ಜನ ಪ್ರತಿ ಜಿಲ್ಲೆಯಲ್ಲಿ ತುಂ ಬು ಗೌರವ ಸಲ್ಲಿಸುವ ಸಂಭ್ರಮ. ಅಣ್ಣ, ಅಮ್ಮ ನಾನು ಕಾರಿನಲ್ಲಿ ಹೋಗಿ ಬರುವ ಕಾರ್ಯಕ್ರಮ. ಹಿರಿಯೂರು, ಮೈಸೂರು, ಶಿವಮೊಗ್ಗ, ಮಂಡ್ಯ, ವಿಜಿಪುರ, ಗೌರಿಬಿದನೂರು ಎಲ್ಲ ಕಡೆ ಲಕ್ಷ ಲಕ್ಷ ಜನ. ಬೀದರ್ ತನಕ ಹೋಗಿ ಬಂದ್ವಿ. ಮ್ಯೂಸಿಕಲ್ ನೈಟ್‌ನಲ್ಲಿ ಪಾಲ್ಗೊಳ್ಳುವಾಗಲೂ ಹಾಗೇ. ಶಿಸ್ತು, ಸಮಯ ಪಾಲನೆ. ಕೆಲವೊಮ್ಮೆ ಅನಿವಾರ‍್ಯವಾಗಿ ದಾರಿಯಲ್ಲಿಯೇ ಒಂದು ಬದಿಯಲ್ಲಿ ಮೂತ್ರ ವಿಸರ್ಜನೆಗೆ ಸಂಕೋಚದಿಂದ ಕರ‍್ತಾ ಇದ್ರು. ಮನೆಗೆ ಮರಳಿ ಕೈಕಾಲು ತೊಳೆದು ಬಾಯಿ ಮುಕ್ಕಳಿಸಿ ಮುಖ ತೊಳೆದು ಶುಚಿತ್ವದ ಭಾವನೆಗೆ ಮನಸ್ಸು ಬರುವ ತನಕ ನನ್ನನ್ನೇ ಮುಟ್ತಾ ಇರ‍್ಲಿಲ್ಲ. ಇವೆಲ್ಲ ಪಾಠಗಳು ಕಲಿತರೆ ಕೇಳಿದರೆ ಬರುವಂತಹದ್ದಲ್ಲ. ನೋಡಿ ಅನುಭವಿಸಿ ಅಳವಡಿಸಿಕೊಳ್ಳುವ ಪಾಠಗಳು ಇತ್ತು. ಜಮಖಾನ ಹಾಸಿಕೊಂಡು ದಿಂಬು ಇರಿಸಿಕೊಂಡರೆ ಮನಕೆ ಸುಖ ನಿದ್ದೆ. ಜೊತೆಗೆ ರಾಘು ಮಕ್ಕಳು ಸುನೀತ ಮಗು ಮಲಗುವ ಸಂಭ್ರಮ. ಕ್ರೀಮ್ ಕಲರ್ ಪ್ಯಾಂಟ್ ಶರ್ಟ್ ಹಾಕಿಕೊಂಡರೆ ಮಲಗುವ ಡ್ರೆಸ್ ರೆಡಿ.

ಒಮ್ಮೆ ಅಣ್ಣಾವ್ರ ಮನೆಲೇ ಶೂಟಿಂಗ್. ರಾತ್ರಿ ಪ್ಯಾಕಪ್ ಆಗುವಂತೆ ಯೋಜನೆ ರೂಪಿತವಾಗಿತ್ತು. ಅದೇಕೋ ಸ್ವಲ್ಪ ಮುಂದುವರೆಯಲೇಬೇಕಾದ ಸ್ಥಿತಿ. ಚೆನ್ನಾ ಇದ್ಯಾಕೋ ಮುಗಿತಾ ಇಲ್ಲ ಶೂಟಿಂಗ್ ನೈಟ್ ಪೂರ್ತಿ ಇರೋ ಹಂಗೆ ಕಾಣ್ಸುತ್ತೆ ನಡೀರಿ ನಮ್ಮ ಶಿವಣ್ಣನ ಮನೆಗೆ ಅಂದವರೇ ನಡೆದೇ ಬಿಟ್ಟರು. ಸನಿಹದಲ್ಲಿ ಇದ್ದ ಶಿವಣ್ಣನ ಮನೆಗೆ ಹೋಗಿ ಶಿವಣ್ಣ ಗೀತಕ್ಕ ಮಕ್ಕಳುಗಳ ಜೊತೆ ಹರಟಿ ಒಳ್ಳೆ ನಿದ್ರೆಗೆ ಶರಣಾದ ಘಳಿಗೆ ಅದು. ಆಣ್ಣಾವ್ರ ಮನೆಲಿ ತುಂಬಾ ಚಿತ್ರಗಳ ಶೂಟಿಂಗ್ ನಡೆದಿದೆ. ಮುಹೂರ್ತದ ಪೂಜೆಯಂತೂ ಅಲ್ಲೇ ಗ್ಯಾರಂಟಿ.

ಅವತ್ತು ಒಂದು ದಿನ. ವಾಕ್ ಮುಗಿಸಿ ಬರುವಾಗ ರಾತ್ರಿ ೮.೩ಂರ ಸಮಯ ಇರಬೇಕು. ಒಬ್ಬ ಹುಡುಗ ‘ಸಾರ್ ನಮ್ಮ ಅಜ್ಜಿಗೆ ತುಂಬಾ ಹುಷಾರಿಲ್ಲ. ನಿಮ್ಮನ್ನ ನೋಡಬೇಕು ಅಂತ ಅನ್ನುತ್ತಾ ಇರ‍್ತಾರೆ. ಪ್ಲೀಸ್ ಮನೆ ಒಳಗೆ ಬನ್ನಿ ಅಂತ ರಿಕ್ವೆಸ್ಟ್ ಮಾಡಿದ. ಅಣ್ಣಾವ್ರು ನನ್ನ ಕಡೆ ಪ್ರಶ್ನಾರ್ಥಕ ಚಿಹ್ನೆ ಹೊತ್ತ ಮುಖಭಾವದಲ್ಲಿ ನೋಡಿದರು. ನಡೀರಣ್ಣ ಎಂದೆ. ಒಳಗೆ ಹೋದರೆ ಮಂಚದಲ್ಲಿ ಮಲಗಿದ್ದ ಅಜ್ಜಿ ಸರಕ್ಕನೆ ಎದ್ದು ಕೂತಿತು. ಕಣ್ಣಲ್ಲೇ ಸಂಭ್ರಮ ಪಟ್ಟಿತು. ಆ ರಾಘವೇಂದ್ರನನ್ನೇ ನೋಡಿಯಿತು ಎಂದು ಹಿರಿಹಿರಿ ಹಿಗ್ಗಿತು. ತಲೆ ಸವರಿ ಸಮಾಧಾನಿಸಿದರು ಅಣ್ಣಾವ್ರು. ಆಹಾರ ಬೇಡ ಬೇಡ ಎಂದು ನಿರಶನಕ್ಕೆ ಜಾರಿದ್ದ ಅಜ್ಜಿ ಹಾಲು ಕುಡಿದು ಪಾರಣೆ ಮಾಡಿತು. ಹೊರಟೆವು. ನಮಗೂ ಏನೋ ತೃಪ್ತಿ. ರಾಜ್ ನನ್ನ ಕೈ ಹಿಡಿದು ಗಟ್ಟಿಯಾಗಿ ಅಮುಕಿ ಅದಕ್ಕೇ ನಾನು ಅಭಿಮಾನಿ ದೇವರು ಅಂತಾ ಇರೋದು ಅಂದ್ರು. ನನಗೆ ಅರ್ಥವಾಗಿತ್ತು. ಏಕೆಂದರೆ ನಾನೂ ಈ ಖುಷಿಯಲ್ಲಿ ಪಾಲುದಾರ ತಾನೇ!! ಬೆಳಿಗ್ಗೆ ಅಣ್ಣಾವ್ರು ಯೋಗಕ್ಕೆ ಸಿದ್ಧವಾಗ್ತಾ ಇದ್ದಾರೆ. ನಾನೂ ಒಳಬಂದೆ. ಅಜ್ಜಿಯ ಮೊಮ್ಮಗ ಬಂದು ಅಜ್ಜಿ ಪ್ರಾಣ ಬಿಟ್ಟ ಸುದ್ದಿ ಹೇಳಿದ. ಹಾರ ತರಿಸಿ ಚನ್ನಾ ಅಂದವರೇ ಅಲ್ಲಿಗೆ ಹೋದರು. ಅಜ್ಜಿ ಮಗ ಸೊಸೆ ಅಳುವಿನಲ್ಲೂ ಸಂತೈಸಿಕೊಂಡು ಅಭಿನಂದಿಸಿದರು. ನೀವು ಬಂದು ಹೋದ ಮೇಲೆ ಬಾಳಾ ರಿಲೀಫ್ ಆಗಿದ್ರು. ಇದೊಂದು ಹಂಬಲ ಇತ್ತು ಅಂತ ಕಾಣುತ್ತೆ ನೋಡಿ ನೆರವೇರಿಸಿ ಬಿಟ್ರಿ ರಾತ್ರಿ ಮಲಗಿದವರು ಮೇಲೆಳಲಿಲ್ಲ. ನಮ್ಮಿಬ್ಬರ ಕಣ್ಣಲ್ಲೂ ನೀರು.

ಎಲ್ಲಿಗೇ ಪಯಣ ಯಾವುದೋ ದಾರಿ…..!
ಏಕಾಂಗಿ ಸಂಚಾರಿ…..!!

Leave a Reply

Your email address will not be published. Required fields are marked *


CAPTCHA Image
Reload Image