One N Only Exclusive Cine Portal

ಅಣ್ಣನ ಅನ್ನ ಸಂತರ್ಪಣೆ!


ಸಿನಿಮಾ ಪತ್ರಕರ್ತರಾಗಿ, ಅಂಕಣಕಾರರಾಗಿ ಗುರುತಿಸಿಕೊಳ್ಳುತ್ತಲೇ ರಿಯಾಲಿಟಿ ಶೋಗಳನ್ನು ರೂಪಿಸುತ್ತಾ ಕಿರುತೆರೆಯಲ್ಲಿಯೂ ಸಕ್ರಿಯರಾಗಿರುವವರು ವಿನಾಯಕರಾಮ್ ಕಲಗಾರು. ಶೀಘ್ರದಲ್ಲೇ ಇವರ ನಿರ್ದೇಶನದ ಸಿನಿಮಾ ಕೂಡಾ ಆರಂಭವಾಗಲಿದೆ… ಇಷ್ಟೆಲ್ಲಾ ಬ್ಯುಸೀ ಷೆಡ್ಯೂಲಿನ ನಡುವೆಯೂ ಸಿನಿಬಜ಼್’ಗೆ ‘ವಿರಾಮಾಯಣ’ ಎಂಬ ಅಂಕಣವನ್ನೂ ಬರೆಯಲಿದ್ದಾರೆ. ವೀಕೆಂಡ್ ವಿತ್ ವಿನಾಯಕರಾಮ್ ಅನ್ನುವಂತೆ ವಾರಕ್ಕೊಮ್ಮೆ ಪ್ರಕಟವಾಗುವ ಕಲಗಾರರ ಅಂಕಣವನ್ನು ಮಿಸ್ ಮಾಡದೇ ಓದಿ. ಖಂಡಿತಾ ಮಜಾ ಕೊಡುತ್ತದೆ. ಅದರ ಮೊದಲ ಕಂತು ಇಲ್ಲಿದೆ.

-ಅರುಣ್

ಅನಾದಿಕಾಲದಿಂದ್ಲೂ ರಾಜ್ ಪಾರ್ವತಮ್ಮರಿಗೆ ಮನೆ ತುಂಬ ಊಟಕ್ಕೆ ಜನ ಇರಲೇ ಬೇಕಿತ್ತು. ಅದು ಇವತ್ತು ನಾಳೆಯ ರೂಢಿಯಲ್ಲ. ಅಣ್ಣನ ಮನೆಯಲ್ಲಿ ಅನ್ನ ಸಂತರ್ಪಣೆ ಇಲ್ಲದ ದಿನವಿಲ್ಲ. ಚೆನೈನ ವಡಪ್ಪಳನಿಯಲ್ಲಿರೋ ರಾಜ್ ಮನೆ ಅಕ್ಷರಶಃ ಅನ್ನ ದಾಸೋಹ ದೇಗುಲ. ರಾಜಣ್ಣರ ಮನೆಯ ಪಕ್ಕದ ಬೀದಿಯಲ್ಲಿ ನರಸಿಂಹರಾಜು ಅವರ ಮನೆ ಇತ್ತು. ಕನ್ನಡ ಕಲಾವಿದರಲ್ಲಿ ಹೆಚ್ಚು ಜನ ಚೆನ್ನೈ ಶೂಟಿಂಗ್ ಅಂತ ಹೋದಾಗ ಹಾಸ್ಯ ಚಕ್ರವರ್ತಿಯ ಮನೆಯಲ್ಲೇ ಹಾಸಿಗೆ ಹೊದ್ದು ಮಲಗೋರು. ಅಲ್ಲೇ ಇರೋರು. ಶೂಟಿಂಗ್ ಮುಗಿಸಿ ಬೆಂಗಳೂರು ಬರೋರು. ಮುತ್ತುರಾಜ್-ಪಾರ್ವತಮ್ಮ ಮನೆಯಲ್ಲಿ ಹೊನ್ನವಳ್ಳಿ ಕೃಷ್ಣ ಇರೋರು. ರಾತ್ರಿ ಎಂಟು ಕಳೆಯುತ್ತಿದ್ದ ಹಾಗೇ ಪಾರ್ವತಮ್ಮ ಹೊನ್ನವಳ್ಳಿ ಅವರನ್ನ ಕರೆದು, ಕಿಷ್ಣಣ್ಣ ಕಿಷ್ಣಣ್ಣ… ನರ್ಸಿಂರಾಜು ಮನೇಗೆ ನಮ್ ಕನ್ನಡ ಕಲಾವಿದ್ರು ಯಾರಾನಾ ಬಂದವ್ರಾ ನೋಡ್ಕೊಂಡ್ ಬಾ ಕಿಷ್ಣಣ್ಣ. ಊಟಕ್ ಕರ್ಕೊಂಡ್ ಬಂದ್ ಬುಡು ಕಿಷ್ಣಣ್ಣ ಅನ್ನೋರು. ಅಮ್ಮಾವ್ರ ಆಜ್ಞೆ ಮೀರೋದ್ ಎಲ್ಲಾದ್ರೂ ಉಂಟೇ ಅಂತ ಹೊನ್ನವಳ್ಳಿ ತಮ್ಮ ಪಿಟಿ ಪಿಟಿ ಸೈಕಲ್ ಏರಿ, ಹಳೇ ಡ್ರಾಮಾ ಸಾಂಗ್ ಹಾಡ್ಕೋಂತಾ ನರಸಿಂಹರಾಜು ಮನೆಗ್ ಬರೋರು. ಯಾವ್ ಕಲಾವಿದರು ಇದಾರೋ ಅವ್ರನ್ನ ಎತ್ತಾಕ್ಕಂಡ್ ಬರೋರು. ಹೊಟ್ಟೆ ತುಂಬಾ ಊಟ ಹಾಕಿ ಅದನ್ನ ರಾಜ್ ದಂಪತಿ ಕಣ್ ತುಂಬಿಕೊಳ್ಳೋರು. ಹೊನ್ನವಳ್ಳಿ ಸೇಮ್ ಸ್ಟೈಲಲ್ಲಿ ಸೇಮ್ ಡ್ರಾಮಾ ಸಾಂಗ್ ಹಾಡ್ಕೊಂತಾ ಅವ್ರನ್ನ ಡ್ರಾಪ್ ಮಾಡೋರು…


-ಅದೇ ಕಾರಣಕ್ಕೆ ಇವತ್ತು ಆ ಮನೆಯಲ್ಲಿ ಊಟಕ್ಕೆ ಬರ ಇಲ್ಲ. ಪ್ರೀತಿಗೆ ಬರ ಇಲ್ಲ. ಹರೀಶ್ ಇಂದ ಹಿಡಿದು, ರಾಹುಲ್ ಗಾಂಧೀ ಅವ್ರು ಮನೆಗ್ ಬಂದ್ರೂ ಊಟ ಮಾಡದೇ ವಾಪಸ್ ಆಗೋ ಮಾತೇ ಇಲ್ಲ!

Leave a Reply

Your email address will not be published. Required fields are marked *


CAPTCHA Image
Reload Image