One N Only Exclusive Cine Portal

ಪರಭಾಷಾ ಚಿತ್ರಗಳನ್ನೂ ಹಿಂದಿಕ್ಕಿದ ಕನ್ನಡ ಚಿತ್ರ!

ಕೆ. ಎ ಸುರೇಶ್ ನಿರ್ಮಾಣದ ರಾಜು ಕನ್ನಡ ಮೀಡಿಯಂ ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ಸಿಕ್ಕ ಅದ್ದೂರಿ ಓಪನಿಂಗ್ ದಿನದಿಂದ ದಿನಕ್ಕೆ ಇಮ್ಮಡಿಗೊಳ್ಳುತ್ತಾ ಕಲೆಕ್ಷನ್ ವಿಚಾರದಲ್ಲಿಯೂ ದಾಖಲೆ ಸೃಷ್ಟಿಯಾಗುತ್ತಿದೆ. ಹೀಗಿರುವಾಗಲೇ ಐಎಂಡಿಬಿ ರೇಟಿಂಗ್‌ನಲ್ಲಿಯೂ ಮೊದಲ ಸ್ಥಾನ ಗಿಟ್ಟಿಸಿಕೊಳ್ಳುವ ಮೂಲಕ ಕನ್ನಡ ಮೀಡಿಯಂ ರಾಜು ಹವಾ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿದೆ!

ಐಎಂಡಿಬಿ ರೇಟಿಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಸಿದ್ಧಿ ಮತ್ತು ವಿಶ್ವಾಸಾಒರ್ಹತೆ ಪಡೆದಿರುವಂಥಾದ್ದು. ಅದರ ರೇಸಿನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದೇ ಸಾಹಸ. ಯಾಕೆಂದರೆ ತೆಲುಗು, ತಮಿಳು, ಹಿಂದಿ ಸೇರಿದಂತೆ ಎಲ್ಲ ಭಾಷೆಗಳ ಚಿತ್ರಗಳೂ ಸ್ಪರ್ಧೆಯಲ್ಲಿರುತ್ತವೆ. ಗುಣಮಟ್ಟದ ಮೂಲಕವೇ ಸ್ಥಾನ ಗಿಟ್ಟಿಸಿಕೊಂಡರೂ ರೇಟಿಂಗ್‌ನಲ್ಲಿ ಗಮನ ಸೆಳೆಯೋದು ಕಷ್ಟ. ಆದರೆ, ಅಪ್ಪಟ ಕನ್ನಡ ಚಿತ್ರವಾದ ಕನ್ನಡ ಮೀಡಿಯಂ ರಾಜು ಬಾಹುಬಲಿಯಂಥಾ ಚಿತ್ರವನ್ನೇ ಮೀರಿಸಿ ೯.೧ ಐಎಂಡಿಬಿ ರೇಟಿಂಗ್ ಪಡೆದುಕೊಂಡಿದೆ!


ಐಎಂಡಿಬಿ ರೇಟಿಂಗ್‌ನಲ್ಲಿ ರಾಜು ಕನ್ನಡ ಮೀಡಿಯಂ ಚಿತ್ರದ ದಾಖಲೆ ನಿಜಕ್ಕೂ ಗಮನಾರ್ಹ. ಇದರಲ್ಲಿ ಬಾಹುಬಲಿ ಚಿತ್ರಕ್ಕೆ ಸಿಕ್ಕಿರೋದು ೮.೫ ರೇಟಿಂಗ್. ವಿಜಯ್ ಅಭಿನಯದ ತಮಿಳು ಚಿತ್ರ ಮೆರ್ಸಲ್ ಚಿತ್ರಕ್ಕೆ ಸಿಕ್ಕಿರೋ ರೇಟಿಂಗ್ ೮.೪. ಇನ್ನುಳಿದಂತೆ ತೆಲುಗಿನ ಅರ್ಜುನ್ ರೆಡ್ಡಿ ಚಿತ್ರಕ್ಕೆ ೮.೭, ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ೮.೧, ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರಕ್ಕೆ ೮.೬ ರೇಟಿಂಗ್ ಸಿಕ್ಕಿದೆ. ಅದೇ ಸಾಲಿನಲ್ಲಿ ಕನ್ನಡ ಮೀಡಿಯಂ ರಾಜುಗೆ ಸಿಕ್ಕಿರೋದು ೯.೧ ರೇಟಿಂಗ್.


ಈ ಮೂಲಕ ಕನ್ನ ಮೀಡಿಯಂ ರಾಜು ಚಿತ್ರ ದಿನೇ ದಿನೇ ಹೊಸಾ ವೇಗದೊಂದಿಗೆ ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯುತ್ತಾ ಮುಂದುವರೆಯುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image