One N Only Exclusive Cine Portal

ರಾಜು ವರಸೆಗೆ ಟೆಕ್ಕಿಗಳೂ ಫಿದಾ!

ಪ್ರಚಾರಕ್ಕಾಗಿ ಅದೇನೇ ಗಿಮಿಕ್ಕುಗಳನ್ನು ಮಾಡಿದರೂ ಜನರಿಂದ ಜನರಿಗೆ ಹಬ್ಬಿಕೊಳ್ಳೋ ಒಳ್ಳೆ ಮಾತುಗಳನ್ನು ಸರಿಗಟ್ಟಲು ಸಾಧ್ಯವಿಲ್ಲ. ಇದುವರೆಗೆ ಗೆದ್ದಿರೋ ಅಷ್ಟೂ ಚಿತ್ರಗಳ ಹಿನ್ನೆಲೆಯಲ್ಲಿರೋದು ಇಂಥಾದ್ದೇ ಸಕಾರಾತ್ಮಕ ಜನಾಭಿಪ್ರಾಯ. ಸದ್ಯ ಫಸ್ಟ್ ರ‍್ಯಾಂಕ್ ರಾಜು ಚಿತ್ರ ಕೂಡಾ ಅಂಥಾದ್ದೊಂದು ಟಾಕ್ ಕ್ರಿಯೇಟ್ ಮಾಡೋ ಮೂಲಕವೇ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಳ್ಳುತ್ತಿರೋದು ಗಮನಾರ್ಹ ಸಂಗತಿ.


ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರೋ ಈ ಚಿತ್ರವನ್ನು ಕಾತರದಿಂದ ನೋಡುತ್ತಿರುವವರಲ್ಲಿ ಟೆಕ್ಕಿಗಳು, ಹೆಣ್ಣುಮಕ್ಕಳದ್ದೇ ಮೇಲುಗೈ. ಟೆಕ್ಕಿಗಳಂತೂ ಈ ಚಿತ್ರವನ್ನು ಮಸ್ತಾಗಿಯೇ ಎಂಜಾಯ್ ಮಾಡುತ್ತಿದ್ದಾರೆ. ಇನ್ನುಳಿದಂತೆ ಹೆಣ್ಣುಮಕ್ಕಳೇ ಶೇಖಡಾ ಐವತ್ತರಷ್ಟು ಪ್ರೇಕ್ಷಕರಾಗೋ ಮೂಲಕ ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ.


ಈ ಮೂಲಕ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಲ್ಲಿ ಕನ್ನಡ ಮೀಡಿಯಂ ರಾಜು ಚಿತ್ರ ಗೆಲುವು ಕಂಡಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾದರೆಂದರೆ ಅಂಥಾ ಚಿತ್ರಗಳು ಗೆದ್ದಂತೆಯೇ. ಈ ನಿಟ್ಟಿನಲ್ಲಿ ನೋಡ ಹೋದರೂ ಕನ್ನಡ ಮೀಡಿಯಂ ರಾಜು ಪಕ್ಕಾ ಅದೃಷ್ಟವಂತ. ದೃಷ್ಯವೈಭವ, ನವಿರಾದ ಕಥೆ, ತಿಳಿ ಹಾಸ್ಯ ಮತ್ತು ಪ್ರತಿಯೊಬ್ಬರ ಬದುಕಿಗೂ ಹತ್ತಿರವಾದ ಹುಡುಕಾಟಗಳ ಚೆಂದದ ನಿರೂಪಣಾ ಶೈಲಿಯಿಂದ ಈ ಚಿತ್ರ ನಾನಾ ದಾಖಲೆಗಳನ್ನು ಸೃಷ್ಟಿಸುತ್ತಾ ಭರಪೂರ ಯಶಸ್ಸಿನತ್ತ ಮುನ್ನುಗ್ಗುತ್ತಿದೆ.

Leave a Reply

Your email address will not be published. Required fields are marked *


CAPTCHA Image
Reload Image