Connect with us

ಬ್ರೇಕಿಂಗ್ ನ್ಯೂಸ್

ಫಿಲಂ ಚೇಂಬರಿನಲ್ಲಿ ಜಡಿದುಕೊಂಡಿದೆ ಕೇಸ್!

Published

on

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಡಾಲಿ ಧನಂಜಯ್ ಚಿತ್ರವನ್ನೀಗ ನಿರ್ಮಾಣ ಮಾಡುತ್ತಿದ್ದಾರೆ. ಭೈರವ ಗೀತಾ ಚಿತ್ರ ಬಿಡುಗಡೆಯ ಸನ್ನಾಹದಲ್ಲಿರುವಾಗಲೇ ವರ್ಮಾ ಒಡೆತನದ ಚಿತ್ರ ನಿರ್ಮಾಣ ಸಂಸ್ಥೆ ‘ಕಂಪೆನಿ’ ವಿರುದ್ಧ ಕನ್ನಡದ ಹಂಚಿಕೆದಾರರೊಬ್ಬರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ವರ್ಮಾ ನೆರಳಲ್ಲಿಯೇ ನಡೆದ ಲಕ್ಷಾಂತರ ರೂಪಾಯಿ ದೋಖಾದ ಬಗ್ಗೆ ಅಂಕಿ ಅಂಶಗಳ ಸಮೇತ ದಾಖಲೆಗಳನ್ನೂ ನೀಡಿದ್ದಾರೆ!

ಇದೇ ಕಂಪೆನಿ ಸಂಸ್ಥೆ ನಿರ್ಮಾಣ ಮಾಡಿದ್ದ ಆಫಿಸರ್ ಎಂಬ ಚಿತ್ರವನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದರು. ಈ ಚಿತ್ರ ಈ ವರ್ಷವೇ ತೆರೆ ಕಂಡಿತ್ತು. ಇದನ್ನು ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳನ್ನು ಹೊರತುಪಡಿಸಿ ವಿಶಾಲ ಕರ್ನಾಟಕ ವಿತರಣಾ ಹಕ್ಕನ್ನು ಸೂರ್ಯ ಫಿಲಂಸ್ ಎಂಬ ಸಂಸ್ಥೆ ಪಡೆದುಕೊಂಡಿತ್ತು. ಆಫಿಸರ್ ಚಿತ್ರದ ವಿತರಣಾ ಹಕ್ಕುಗಳನ್ನು ಸೂರ್ಯ ಫಿಲಂಸ್ ಸಂಸ್ಥೆ ಅರವತ್ತಾರು ಲಕ್ಷ ಕೊಟ್ಟು ಖರೀದಿಸಿತ್ತು. ಇದರಲ್ಲಿ ಐವತ್ತಾರು ಲಕ್ಷ ರೂಪಾಯಿಗಳನ್ನು ಆರ್‌ಟಿಜಿಎಸ್ ಮೂಲಕ ಆಕ್ಸಿಸ್ ಬಾಂಕಿನ ಹೈದ್ರಾಬಾದ್ ಶ್ರೀನಗರ ಶಾಖೆಯ ಕಂಪೆನಿ ಸಂಸ್ಥೆಯ ಅಕೌಂಟಿಗೆ ಜಮೆ ಮಾಡಲಾಗಿತ್ತು. ಉಳಿದ ಹತ್ತು ಲಕ್ಷವನ್ನು ಚಿತ್ರ ಬಿಡುಗಡೆಗೂ ಮುನ್ನ ನಿರ್ಮಾಪಕರಿಗೆ ಸಂದಾಯ ಮಾಡಲಾಗಿತ್ತು.

ಈ ಚಿತ್ರದ ವಿತರಣಾ ಹಕ್ಕಿಗಾಗಿ ಸಂದಾಯ ಮಾಡಿದ ಅರವತ್ತಾರು ಲಕ್ಷ, ಪ್ರಚಾರಕ್ಕೆ ಖರ್ಚು ಮಾಡಿದ ಹಣ ಮತ್ತು ಒಟ್ಟಾರೆ ಗಳಿಕೆಯ ಇಪ್ಪತ್ತು ಪರ್ಸೆಂಟಿನಷ್ಟು ಹಣವನ್ನು ಹಿಡಿದುಕೊಳ್ಳುವ ಬಗ್ಗೆ ಸೂರ್ಯ ಫಿಲಂಸ್ ಮುಖ್ಯಸ್ಥರು ಆಫಿಸರ್ ಚಿತ್ರ ನಿರ್ಮಾಪಕರ ಜೊತೆ ಮೌಕಿಕ ಒಪ್ಪಂದ ಮಾಡಿಕೊಂಡಿದ್ದರು. ಇದೆಲ್ಲವೂ ಸುಬ್ಬಾ ರೆಡ್ಡಿಯವರ ಸಮ್ಮುಖದಲ್ಲಿಯೇ ನಡೆದಿತ್ತು. ಇದರನ್ವಯ ೦೧.೦೬.೨೦೧೮ರಂದು ಆಫಿಸರ್ ಚಿತ್ರವನ್ನು ಸೂರ್ಯ ಫಿಲಂಸ್ ಕರ್ನಾಟಕದಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಬಿಡುಗಡೆಯಾಗಿ ದಿನದೊಪ್ಪತ್ತಿನಲ್ಲಿಯೇ ಹಂಚಿಕೆದಾರರಿಗೆ ಮಹಾ ಆಘಾತ ಕಾದಿತ್ತು. ಚಿತ್ರ ಮಂದಿರಗಳೆಲ್ಲ ಖಾಲಿ ಹೊಡೆದು ಥೇಟರುಗಳಿಂದ ಈ ಚಿತ್ರ ಎತ್ತಂಗಡಿಯಾಗೋ ಹಂತ ತಲುಪಿತ್ತು. ಒಟ್ಟಾರೆಯಾಗಿ ಈ ಚಿತ್ರದಿಂದ ಗಳಿಕೆಯಾದದ್ದು ಹನ್ನೆರಡು ಲಕ್ಷ ಮಾತ್ರ. ಆದರೆ ಈ ಚಿತ್ರದ ಪ್ರಚಾರಕ್ಕೆಂದೇ ಸೂರ್ಯ ಫಿಲಂಸ್ ಸಂಸ್ಥೆ ಒಂಭತ್ತು ಲಕ್ಷದ ತೊಂಬತ್ಮೂರು ಸಾವಿರ ಚಿಲ್ಲರೆ ರೂಪಾಯಿಗಳನ್ನು ವ್ಯಯ ಮಾಡಿತ್ತು!

ಈ ಆಘಾತದಿಂದ ಕಂಗಾಲಾದ ಸೂರ್ಯ ಸಂಸ್ಥೆಯ ಮುಖ್ಯಸ್ಥರು ಕಂಪೆನಿ ಸಂಸ್ಥೆಯ ಹೈದ್ರಾಬಾದ್ ಕಚೇರಿಗೆ ತೆರಳಿದ್ದರು. ಅಲ್ಲಿ ಸಿಕ್ಕ ಸಜ್ಜು ಮತ್ತು ವೇಣು ಮುಂದೆ ಇರೋ ವಿಚಾರ ಹೇಳಿ ತಾವು ಹಾಕಿದ ಹಣವನ್ನು ವಾಪಾಸು ಮಾಡುವಂತೆ ಅಂಗಲಾಚಿದ್ದರು. ಒಂದು ವೇಳೆ ಹಣ ಹಿಂತಿರುಗಿಸದಿದ್ದರೆ ಚಿತ್ರದ ನಾಯಕ ನಾಗಾರ್ಜುನ್ ಮುಂದೆ ಎಲ್ಲವನ್ನೂ ಹೇಳೋದಾಗಿ ಹೇಳಿದಾಗ ಸುಧೀರ್ ಚಂದರ್ ಮತ್ತು ವರ್ಮಾ ಜೆಡಿ ಚಕ್ರವರ್ತಿ ಮನೆಯಲ್ಲಿರುತ್ತಾರೆಂದ ಕಂಪೆನಿ ಸಂಸ್ಥೆಯ ಮಂದಿ ಅಲ್ಲಿಗೆ ಸಾಗಹಾಕಿದ್ದರು. ಆದರೆ ಅಲ್ಲಿ ಯಾರೂ ಇರಲಿಲ್ಲ!

ಬೇರೆ ನಿರ್ವಾಹವಿಲ್ಲದೆ ಸೂರ್ಯ ಸಂಸ್ಥೆಯ ಮುಖ್ಯಸ್ಥರು ಹೈದ್ರಾಬಾದಿನ ಫಿಲಂ ಚೇಂಬರ್ ಕಚೇರಿಯಲ್ಲಿ ಆರು ದಿನಗಳ ಕಾಲ ಕಾದಿದ್ದರು. ಕಡೆಗೂ ನಿರ್ಮಾಪಕ ಸುಧೀರ್ ಚಂದರ್ ಅಲ್ಲಿಗೆ ಬಂದು ಖರ್ಚು ವೆಚ್ಚದ ವಿವರ ಪಡೆದುಕೊಂಡಿದ್ದರು. ಅಸಲೀ ನಷ್ಟದ ವಿಚಾರ ಅರಿವಾಗಿದೆ ಎಂದೂ ಹೇಳಿದ್ದರು. ೧೫.೦೬.೨೦೧೮ರಂದು ಬಂದು ತನ್ನನ್ನು ಭೇಟಿಯಾಗುವಂತೆ ತಿಳಿಸಿದ ಸುಧೀರ್ ಚಂದರ್ ಇಪ್ಪತ್ತು ಲಕ್ಷ ರೂಗಳನ್ನು ಕೊಡೋದಲ್ಲದೇ ಅದೇ ತಿಂಗಳ ಮೂವತ್ತನೇ ತಾರೀಕಿನಂದು ಉಳಿದ ಹಣವನ್ನೂ ವಾಪಾಸು ಕೊಡೋದಾಗಿ ಭರವಸೆ ನೀಡಿದ್ದರು. ಕಲ್ಯಾಣ್ ರಾಮ್ ಮತ್ತು ನಾನಿ ಅಭಿನಯದ ಹೊಸಾ ಚಿತ್ರದ ನೆಗೆಟೀವ್ ಹಣದಲ್ಲಿ ಎಲ್ಲ ಬಾಬತ್ತನ್ನು ವಾಪಾಸು ಮಾಡೋದಾಗಿಯೂ ಹೇಳಿದ್ದರು.

ಆದರೆ ಅದೇ ದಿನಾಂಕದಂದು ಕಂಪೆನಿ ಕಚೇಢರಿಗೆ ಹೋದ ಸೂರ್ಯ ಫಿಲಂಸ್ ಮುಖ್ಯಸ್ಥರಿಗೆ ಸಿಕ್ಕಿದ್ದು ಸಜ್ಜು ಎಂಬಾತ. ಸುಧೀರ್ ಚಂದರ್ ಕಲ್ಯಾಣ್ ರಾಮ್‌ರನ್ನು ಭೇಟಿಯಾಗಲು ಹೋಗಿದ್ದಾರೆಂಬ ಉತ್ತರ ಕೊಟ್ಟಿದ್ದ. ಎರಡ್ಮೂರು ದಿನ ಬಿಟ್ಟು ಬರುವಂತೆ ಹೇಳಿದ್ದ. ಆದರೆ ನಂತರ ಹೋದಾಗ ಆತನೇ ಸುಧೀರ್ ಚಂದರ್ ಲಂಡನ್ನಿಗೆ ಹೋಗಿರೋದಾಗಿ ಕಥೆ ಹೇಳಿದ್ದ. ಈ ಚಿತ್ರದ ಟಿವಿ ರೈಟ್ಸ್ ಹಣ ಬರಬೇಕಾದ್ದರಿಂದ ಜುಲೈ ಎರಡರಂದು ಬರಲು ಹೇಳಿ ಕಳಿಸಿದ್ದ.

ಆ ಬಳಿಕವೂ ಒಂದೆರಡು ಸಲಕ ಹೈದ್ರಾಬಾದಿಗೆ ಅಲೆದ ಸೂರ್ಯ ಫಿಲಂಸ್ ಮುಖ್ಯಸ್ಥರಿಗೆ ಜುಲೈ ಮೂವತ್ತರಂದು ಅಂತಿಮ ಆಘಾತ ಕಾದಿತ್ತು. ಯಾಕೆಂದರೆ ಹೈದ್ರಾಬಾದಿನ ಕಂಪೆನಿ ಸಂಸ್ಥೆಯ ಕಚೇರಿಗೆ ಬೀಗ ಜಡಿದುಕೊಂಡಿತ್ತು. ಸುಧೀರ್ ಚಂದರ್ ಮೊಬೈಲು ಕೂಡಾ ಸ್ವಿಚಾಫ್ ಆಗಿತ್ತು. ಕಡೆಗೆ ಹೇಗೋ ಮಾಹಿತಿ ಕಲೆ ಹಾಕಿ ರಾಮ್‌ಗೋಪಾಲ್ ವರ್ಮಾ ಮತ್ತು ಸುಧೀರ್ ಮುಂಬೈ ಕಚೇರಿಯಲ್ಲಿದ್ದಾರೆಂಬ ಸುಳಿವು ತಿಳಿದು ಅಲ್ಲಿಗೆ ಹೋದರೂ ಪ್ರಯೋಜನವಾಗಲಿಲ್ಲ. ಸಜ್ಜು ಮುಂಬೈನ ಹೋಟೆಲಿನಲ್ಲಿ ಸಿಕ್ಕನಾದರೂ ಆತನೂ ಸುಧೀರ್ ಚಂಣದರ್‌ನನ್ನು ಭೇಟಿಯಾಗಲು ಬಂದಿರೋದಾಗಿ ಹೇಳಿದ್ದ. ಅಲ್ಲಿಗೆ ಸಾಲ ಸೋಲ ಮಾಡಿ ಆಫಿಸರ್ ಚಿತ್ರದ ವಿತರಣ ಹಕ್ಕು ಖರೀದಿ ಮಾಡಿದ್ದ ಕಾಸು ಗೋತಾ ಹೊಡೆದಿದೆ ಎಂಬ ವಿಚಾರ ಸ್ಪಷ್ಟವಾಗಿತ್ತು.

ಸೂರ್ಯ ಫಿಲಂಸ್ ಸಣ್ಣ ವಿತರಣಾ ಸಂಸ್ಥೆ. ಅವರಿವರ ಬಳಿ ಸಾಲ ಮಾಡಿಯೇ ಇದರ ಮಾಲೀಕರು ಆಫಿಸರ್ ಚಿತ್ರದ ವಿತರಣಾ ಹಕ್ಕನ್ನು ಖರೀದಿಸಿದ್ದರು. ಇದೀಗ ಬೇರೆ ದಾರಿ ಕಾಣದೆ ಈ ಚಿತ್ರದ ವಿತರಣೆಗಾದ ಒಟ್ಟು ೭೮,೯೩,೯೯೮ ರೂಗಳನ್ನು ವಾಪಾಸು ಕೊಡಿಸುವಂತೆ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಆಗಾಗ ಬೇಡದ ವಿಚಾರಕ್ಕೆ ಮೂಗು ತೂರಿಸಿ ವಿವಾದವೆಬ್ಬಿಸೋ ವರ್ಮಾಗೆ ಬಡಪಾಯಿ ಹಂಚಿಕೆದಾರರ ಸಂಕಷ್ಟ ತಾಕುತ್ತಿಲ್ಲವೇ? ಅಥವಾ ವಂಚನೆ ಅವರಿಗೆ ಕರಗತವಾಗಿದೆಯೋ ಎಂಬುದನ್ನು ಫಿಲಂಚೇಂಬರಿನ ಮುಂದಿನ ಕ್ರಮಗಳೇ ನಿರ್ಧರಿಸಲಿವೆ!

 

Advertisement
Click to comment

Leave a Reply

Your email address will not be published. Required fields are marked *

ಗಾಂಧಿನಗರ ಗಾಸಿಪ್

ಕಿರಾತಕನ ಕತ್ತು ಹಿಸುಕಿದರಾ ಯಶ್?

Published

on

ಈಗ ಎಲ್ಲೆಲ್ಲೂ ಕೆಜಿಎಫ್ ಸಿನಿಮಾದ ಹವಾ. ಕರ್ನಾಟಕದ ಗಡಿ ದಾಟಿ ಇಂಡಿಯಾ ಪೂರ್ತಿ ರಾಕಿಂಗ್ ಸ್ಟಾರ್ ಸಿನಿಮಾ ಸೌಂಡು ಮಾಡುತ್ತಿದೆ. ಕನ್ನಡ ನಾಡಿಗಷ್ಟೇ ಗೊತ್ತಿದ್ದ ಕಿರಾತಕನ ಪರಿಚಯ ದೇಶಾದ್ಯಂತ ಪಸರಿಸಿಕೊಂಡಿದೆ. ಇದು ಎಲ್ಲರಿಗೂ ಗೊತ್ತಿರೋ ವಿಚಾರ. ಯಾರಿಗೂ ಗೊತ್ತಿಲ್ಲದ ನ್ಯೂಸೊಂದು ಇಲ್ಲಿದೆ.

ಈ ವಾರ ತೆರೆಗೆ ಬರುತ್ತಿರೋ ಕೆ.ಜಿ.ಎಫ್ ನಂತರ ಯಶ್ ಸಿನಿಮಾ ಯಾವುದು? ಅಂದರೆ, ಅವರ ಅಭಿಮಾನಿಗಳೆಲ್ಲಾ `ಕಿರಾತಕ-೨’ ಅಂತಾ ಕೂಗಿ ಹೇಳುತ್ತಿದ್ದಾರೆ. ಆದರೆ `ಕಿರಾತಕ-೨’ ಅನ್ನೋ ಚಿತ್ರ ಯಾವ ಕಾರಣಕ್ಕೂ ಮುಂದುವರೆಯೋದಿಲ್ಲ ಅನ್ನೋ ಮಾತು ಖುದ್ದು ರಾಕಿಂಗ್ ಸ್ಟಾರ್ ಸರ್ಕಲ್ಲಿನಲ್ಲೇ ಮಾರ್ದನಿಸುತ್ತಿದೆ.

ಈ ಹಿಂದೆ ದಿಲ್ ವಾಲಾ, ಮಾಲಾಶ್ರೀಯ ಶಕ್ತಿ ಮತ್ತು ರ್‍ಯಾಂಬೋ-೨ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ಅದಕ್ಕೂ ಮುಂಚೆ ಡೈಲಾಗ್ ರೈಟರ್ ಆಗಿ ಅಬ್ಬರಿಸಿದ್ದ ಅನಿಲ್ ಕುಮಾರ್ `ಕಿರಾತಕ-೨’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಕೆ.ಜಿ.ಎಫ್ ಶೂಟಿಂಗ್ ಮುಗಿದ ಕೂಡಲೇ `ಕಿರಾತಕ-೨’ ಆರಂಭವಾಗಿತ್ತು. ಮೂರು ವರ್ಷಗಳಿಂದ ಪೊದೆಯಂತೆ ಬೆಳೆದುಕೊಂಡಿದ್ದ ಗಡ್ಡವನ್ನು ಬೋಳಿಸಿಕೊಂಡುಬಂದು ಹತ್ತು ದಿನಗಳ ಕಾಲ ಚಿತ್ರೀಕರಣವನ್ನೂ ನಡೆಸಿಕೊಟ್ಟಿದ್ದರು ಯಶ್. ಈ ನಡುವೆ ಕೆ.ಜಿ.ಎಫ್. ಪರಭಾಷೆಗಳಿಗೂ ಡಬ್ ಆಗಿ ಟಾಕ್ ಕ್ರಿಯೇಟ್ ಮಾಡಲು ಶುರು ಮಾಡಿತು ನೋಡಿ… ಯಶ್‌ಗೆ `ಕಿರಾತಕ’ನ ಮೇಲೆ ಅಸಡ್ಡೆ ಶುರುವಾಯಿತು. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ತಯಾರುಮಾಡಿದ ಕೆ.ಜಿ.ಎಫ್ ಸಿನಿಮಾ ಈ ಪರಿ ಹೈಪು ಕ್ರಿಯೇಟ್ ಮಾಡಿರೋವಾಗ `ಕಿರಾತಕ’ನಂಥ ಸಾಧಾರಣ ಸಿನಿಮಾವನ್ನು ಮಾಡಬೇಕಾ ಅನ್ನೋ ಚಿಂತೆ ಯಶ್‌ಗೆ ಶುರುವಾಯಿತಂತೆ.

ಹೀಗಾಗಿ `ಹತ್ತು ದಿನ ಶೂಟಿಂಗ್ ಮಾಡಿರೋದಷ್ಟೇ ಅಲ್ವಾ? ಇಲ್ಲಿಗೇ ನಿಲ್ಲಿಸಿಬಿಡೋಣ’ ಅಂತ ತೀರ್ಮಾನಿಸಿದರು ಅನ್ನುತ್ತಿದೆ ಮೂಲ. ಇನ್ನೊಂದು ವಿಚಾರವೆಂದರೆ, ಈ ಸಿನಿಮಾಗೆ ಜಯಣ್ಣ ಬ್ಯಾನರಿನ ಹೆಸರು ಬಳಸಿಕೊಳ್ಳಲಾಗಿತ್ತಾದರೂ ಸ್ವತಃ ಯಶ್ ನಿರ್ಮಾಪಕರಾಗಿದ್ದರು ಅನ್ನೋದು.

ಏಕಾಏಕಿ ಸಿನಿಮಾ ನಿಂತುಹೋಗುತ್ತದೆ, ಅದೂ ಒಬ್ಬ ಸ್ಟಾರ್ ಸಿನಿಮಾ ಡ್ರಾಪ್ ಆಯಿತೆಂದರೆ ಅದರ ನಿರ್ದೇಶಕನ ಭವಿಷ್ಯಕ್ಕೆ ಕತ್ತಲು ಕವಿಯೋದು ಗ್ಯಾರೆಂಟಿ. ಹೀಗಾಗಿ `ಕಿರಾತಕ’ ನಿಲ್ಲಿಸಿದರು ಅನ್ನೋದನ್ನು ಮರೆ ಮಾಚಲಾಗಿದೆ. ಇತ್ತ ನಿರ್ದೇಶಕ ಅನಿಲ್ ಕುಮಾರ್ ಸೈಲೆಂಟಾಗಿ ರಾಮ್ ಕುಮಾರ್ ಪುತ್ರ ಧೀರನ್’ನನ್ನು ಹಾಕಿಕೊಂಡು `ದಾರಿ ತಪ್ಪಿದ ಮಗ’ ಅನ್ನೋ ಚಿತ್ರವನ್ನು ಆರಂಭಿಸಿದ್ದಾರೆ. ಯಶ್ ಸಿನಿಮಾ ಮುಂದುವರೆಯುವಂತಾಗಿದ್ದರೆ ಅನಿಲ್ ತಾನೆ ಮತ್ತೊಂದು ಸಿನಿಮಾ ಕೆಲಸ ಆರಂಭಿಸೋ ಪ್ರಮೇಯವೆಲ್ಲಿ ಬರುತ್ತಿತ್ತು? ಈ ವಿಚಾರವಾಗಿ ಮಾಧ್ಯಮದ ಮಂದಿ ಡೈರೆಕ್ಟರ್ ಅನಿಲ್ ಅವರನ್ನು ಪ್ರಶ್ನಿಸಿದರೆ `ಯಶ್ ಅವರು ಒಂಚೂರು ಬ್ಯುಸಿ ಇದಾರೆ’ ಅದಕ್ಕೇ ಮತ್ತೊಂದು ಸಿನಿಮಾ ಮಾಡ್ತಿದೀನಿ ಅಂತಾ ಸಬೂಬು ಹೇಳಿ ಸಿನಿಮಾ ನಿಂತುಹೋದ ವಿಚಾರವನ್ನು ಮರೆಮಾಚುತ್ತಿದ್ದಾರೆ.

ಒಟ್ಟಾರೆಯಾಗಿ ನೋಡಿದರೆ ಸದ್ಯದ ಪರಿಸ್ಥಿತಿಯಲ್ಲಿ `ಕಿರಾತಕ-೨’ ಮುಂದುವರೆಯುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಒಂದುವೇಳೆ ಕೆ.ಜಿ.ಎಫ್. ನಿರೀಕ್ಷೆಯಂತೇ ಗೆದ್ದರೆ, ಅದರ ಮುಂದುವರಿದ ಅಧ್ಯಾಯದಲ್ಲಿ ಯಶ್ ಬ್ಯುಸಿಯಾಗುತ್ತಾರೆ. ಪ್ರಶಾಂತ್ ನೀಲ್ ಸಿನಿಮಾ ಅಂದರೆ ಗೊತ್ತಲ್ಲ? ಹೆಚ್ಚೂಕಮ್ಮಿ ಅದು ಪಂಚವಾರ್ಷಿಕ ಯೋಜನೆಯಿದ್ದಂತೆ. ಅಲ್ಲಿಗೆ ಕಿರಾತಕ ಖತಂ ಅನ್ನೋದು ನಿಜವಾದಂತೆ!

Continue Reading

ಬ್ರೇಕಿಂಗ್ ನ್ಯೂಸ್

ಅಂಬಿ ಇಲ್ಲದ ಚಿತ್ರರಂಗ ತಬ್ಬಲಿ ಹೆಬ್ಬುಲಿ ನಿರ್ಮಾಪಕ ರಘುನಾಥ್ ಶ್ರದ್ಧಾಂಜಲಿ

Published

on

ಸುದೀಪ್ ನಟಿಸಿದ್ದ ಹೆಬ್ಬುಲಿಯಂಥಾ ಚಿತ್ರವನ್ನು ನಿರ್ಮಾಣ ಮಾಡಿದ್ದ ಎಸ್ ಆರ್ ವಿ ಪ್ರೊಡಕ್ಷನ್ಸ್ ಮಾಲೀಕ ರಘುನಾಥ್ ಅಂಬರೀಶ್ ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕನ್ನಡಿಗರ ಪ್ರೀತಿಯ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಮ್ಮನ್ನೆಲ್ಲ ಅಗಲಿರುವುದು ವಿಷಾಧದ ಸಂಗತಿ. ಅವರು ನಮ್ಮ ಚಿತ್ರರಂಗದ ಯಜಮಾನನಂತಿದ್ದರು. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಮತ್ತು ನಾವೆಲ್ಲರೂ ತಬ್ಬಲಿಗಳಂತಾಗಿದ್ದೆವೆ. ಅವರ ಸ್ಫೂರ್ತಿಯಿಂದಲೇ ನಾನು ಚಿತ್ರರಂಗಕ್ಕೆ ನಿರ್ಮಾಪಕನಾಗಿ ಬಂದು ಹೆಬ್ಬುಲಿಯಂಥಾ ಸಿನಿಮಾ ಮೂಲಕ ನಿರ್ಮಾಪಕನಾಗಿದ್ದೇನೆ.

ಇಂದು ಆರಾಧ್ಯ ದೈವದಂತಾ ನಾಯಕನನ್ನು ಕಲೆದುಕೊಂಡು ದುಃಖಿತನಾಗಿದ್ದೇನೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಅನ್ನುವ ಮೂಲಕ ರಘುನಾಥ್ ತಾವು ಬಹುವಾಗಿ ಆರಾಧಿಸುತ್ತಿದ್ದ ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Continue Reading

ಬ್ರೇಕಿಂಗ್ ನ್ಯೂಸ್

ಅಂಬಿಗೆ ಸುಧೀಂದ್ರ ವೆಂಕಟೇಶ್ ಸಹೋದರರ ಶ್ರದ್ಧಾಂಜಲಿ, ಸುಧೀಂದ್ರರನ್ನು ನಿಮಾಪಕರನ್ನಾಗಿಸಿದ್ದ ಕರ್ಣ!

Published

on


ಕಲಿಯುಗದ ಕರ್ಣ ಎಂದೇ ಖ್ಯಾತರಾಗಿದ್ದ ಅಂಬರೀಶ್ ಅವರ ಋಣ ಒಂದಲ್ಲಾ ಒಂದು ರೀತಿಯಲ್ಲಿ ಚಿತ್ರರಂಗದ ಎಲ್ಲರ ಮೇಲೂ ಇದೆ. ಯಾರಿಗೇ ಆದರೂ ಸಹಾಯಕ್ಕಾಗಿ ಸದಾ ಮುಂದಿರುತ್ತಿದ್ದ ಅಂಬಿ ಅನೇಕರ ಗೆಲುವಿಗೆ ಪ್ರೇರಕ ಶಕ್ತಿಯಾಗಿದ್ದವರು. ಕನ್ನಡ ಚಿತ್ರರಂಗದ ಖ್ಯಾತ ಪ್ರಚಾರಕರ್ತರಾಗಿದ್ದ ಡಿ.ವಿ ಸುಧೀಂದ್ರ ಅವರನ್ನು ‘ಒಲವಿನ ಉಡುಗೊರೆ’ ಚಿತ್ರದ ಮೂಲಕ ನಿರ್ಮಾಪಕರನ್ನಾಗಿಸಿದ್ದೂ ಕೂಡಾ ಅಂಬರೀಶ್ ಅವರೇ!

ಅಂಬಿ ನಿರ್ಗಮಿಸಿದ ದುಃಖದಲ್ಲಿರುವ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಅದನ್ನು ನೆನಪಿಸಿಕೊಂಡೇ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ರಾಘವೇಂದ್ರ ಚಿತ್ರವಾಣಿಯ ಜನಕ ಡಿ.ವಿ ಸುಧೀಂದ್ರ ರವರ ನಿರ್ಮಾಣದ ‘ಒಲವಿನ ಉಡುಗೊರೆ’ ಚಿತ್ರದ ಮೂಲಕ ಸುಧೀಂದ್ರ ರವರನ್ನು ನಿರ್ಮಾಪಕನ ಪಟ್ಟಕ್ಕೆ ಕೂರಿಸಿದ ಕಲಿಯುಗದ ಕರ್ಣ ಕನ್ನಡ ಚಿತ್ರರಂಗದ ಹಿರಿಯಣ್ಣ ರೆಬಲ್ ಸ್ಟಾರ್ ಅಂಬರೀಶ್ ರವರ ಅಗಲಿಕೆಯಿಂದ ನಮ್ಮ ಕುಟುಂಬದ ಹಾಗೂ ನಮ್ಮೆಲ್ಲರ ಮನಸ್ಸು ಆಘಾತದಿಂದ ದುಃಖಿತವಾಗಿದೆ ಎಂದು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಪರವಾಗಿ ಸುಧೀಂದ್ರ ವೆಂಕಟೇಶ್, ವಾಸು ಮತ್ತು ಸನೀಲ್ ಸಹೋದರರು ಅಂಬರೀಶ್ ಅವರಿಗೆ ಭಕ್ತಿ ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಡಿ.ವಿ ಸುಧೀಂದ್ರ ಅಂಬರೀಶ್ ಅವರಿಗೆ ಆಪ್ತರಾಗಿದ್ದವರು. ಅವರು ನಿಧನ ಹೊಂದಿದ ನಂತರ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸಾರಥ್ಯ ವಹಿಸಿಕೊಂಡಿದ್ದವರು ಸುಧೀಂದ್ರ ವೆಂಕಟೇಶ್. ಅವರೂ ಕೂಡಾ ಅಂಬರೀಶ್‌ರೊಂದಿಗೆ ನಿಕಟ ಸಂಪರ್ಕ ಹೊಂದಿದ್ದವರು. ಸುಧೀಂದ್ರ ಪಾಲಿಗೂ ಅಂಬಿ ಮಾರ್ಗದರ್ಶಕರಾಗಿದ್ದರು. ರಾಘವೇಂದ್ರ ಚಿತ್ರವಾಣಿಒ ಎಂಬ ಸುಧೀಮದ್ರ ಅವರ ಕನಸನ್ನು ಸಮರ್ಥವಾಗಿ ಮುಂದುವರೆಸುತ್ತಿರೋ ವೆಂಕಟೇಶ್ ಅವರ ಬಗ್ಗೆ ಅಂಬಿ ಮೆಚ್ಚುಗೆಯನ್ನೂ ಹೊಂದಿದ್ದರು.

 

Continue Reading

Trending

Copyright © 2018 Cinibuzz