One N Only Exclusive Cine Portal

ರಂಕಲ್ ರಾಟೆಯ ಸುತ್ತ ನಿರೀಕ್ಷೆಗಳ ಭರಾಟೆ!

ಆಟವನ್ನೇ ಪ್ರಧಾನ ಕಥೆಯಾಗಿಸಿಕೊಂಡು ದೊಡ್ಡ ಗೆಲುವು ಕಂಡ ಚಿತ್ರಗಳು ಬಾಲಿವುಡ್‌ನಲ್ಲಿ ಬೇಕಾದಷ್ಟಿವೆ. ಆದರೆ ಕನ್ನಡದಲ್ಲಿ ಅಂಥಾ ಚಿತ್ರಗಳು ಇಲ್ಲವೇ ಇಲ್ಲ ಎಂಬಂಥಾ ವಾತಾವರಣವಿದೆ. ಆದರೆ ಅಂಥಾದ್ದೊಂದು ಕೊರತೆ ನೀಗುವಂತೆ ತಯಾರಾಗಿರೋ ರಂಕಲ್ ರಾಟೆ ಎಂಬ ಚಿತ್ರವೀಗ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. ಇದೇ ತಿಂಗಳ ೨೩ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ತನ್ನ ಹೆಸರಿನಿಂದಲೇಋ ಕುತೂಹಲ ಕೆರಳಿಸಿರೋ ರಂಕಲ್ ರಾಟೆ ಚಿತ್ರಕ್ಕೆ `ಎಲ್ರಿಗೂ ಕಾಲ ಬರುತ್ತೆ’ ಎಂಬ ಆಶಾದಾಯಕವಾದ, ಸ್ಫೂರ್ತಿದಾಯಕವಾದ ಟ್ಯಾಗ್‌ಲೈನ್ ಇದೆ. ಈ ಚಿತ್ರದ ಮೂಲಕ ಆಟವನ್ನೇ ಪ್ರಧಾನವವಾಗಿಸಿಕೊಂಡ ಚಿತ್ರವೊಂದು ಬರಪೂರ ಗೆಲುವಿನ ರೂವಾರಿಯಾಗೋ ಕಾಲವೂ ಬರಲಿದೆಯಾ ಅಂತೊಂದು ಆಶಾದಾಯಕ ಪ್ರಶ್ನೆಯೂ ಪಪ್ರೇಕ್ಷಕ ವಲಯದಲ್ಲಿದೆ. ಈ ಚಿತ್ರದ ಬಗ್ಗೆ ಇಂಥಾದ್ದೊಂದು ಭರವೆಸೆ ಮೂಡಿಕೊಂಡಿರೋದು ಎಲ್ಲ ಪ್ರಚಾರದ ಪಟ್ಟುಗಳಾಚೆಗಿನ ಅಸಲೀ ಪವಾಡ. ಯಾಕೆಂದರೆ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟ್ರೈಲರ್ ಮತ್ತು ಹಾಡುಗಳಿಂದಲೇ ರಂಕಲ್ ರಾಟೆ ಪ್ರಚಾರ ಪಡೆದುಕೊಂಡಿದೆ.

ಇನ್ನುಳಿದಂತೆ ಆಟವನ್ನೇ ಪ್ರಧಾನ ಕಥಾ ಹಂದರವಾಗಿಸಿ ಕೊಂಡಿರೋ ಈ ಚಿತ್ರವನ್ನು ನಿಮಾಣ ಮಾಡಿರುವವರು ಬೈಸಾನಿ ಸತೀಶ್ ಕುಮಾರ್. ಒಂದು ಅಚ್ಚುಕಟಾದ ಚಿತ್ರ ಮಾಡುವ ಕನಸಿನೊಂದಿಗೆ ಈ ಚಿತ್ರವನ್ನು ಆರಂಭಿಸಿದ ಸತೀಶ್ ಅವರು ಇದೀಗ ಒಂದೊಳ್ಳೆ ಚಿತ್ರ ನಿರ್ಮಾಣ ಮಾಡಿದ ಖುಷಿಯಲ್ಲಿದ್ದಾರೆ. ಅಂದಹಾಗೆ ಈ ಚಿತ್ರದ ಕಥಾ ಹಂದರವನ್ನು ಇಷ್ಟಪಟ್ಟು ನಿರ್ದೇಶಕ ಗೋಪಿ ಕೆರೂರ್ ಅವರಿಗೆ ಉತ್ತೇಜನ ನೀಡಿದ್ದೇ ಬೀಸಾನಿ ಸತೀಶ್ ಕುಮಾರ್. ಈ ಮೂಲಕ ಈ ಚಿತ್ರದ ಸಬ್‌ಟೈಟಲ್ `ಎಲ್ರಿಗೂ ಕಾಲ ಬರುತ್ತೆ’ ಎಂಬುದು ನಿರ್ದೇಶಕರಿಗೂ ಪಕ್ಕಾ ಸೂಟ್ ಆಗುತ್ತೆ!

ಯಾಕೆಂದರೆ ರಂಕಲ್ ರಾಟೆಗೆ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಗೋಪಿ ಕೆರೂರ್ ಬಹು ವರ್ಷಗಳಿಂದ ನಿರ್ದೇಶಕನಾಗುವ ಕನಸು ಹೊತ್ತು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದವರು. ಮೂಲತಃ ರಂಗಭೂಮಿ ಕಲಾವಿದರಾಗಿರುವ ಗೋಪಿ ಕೆರೂರು ಅಖಂಡ ಎರಡು ದಶಕಗಳಿಂದ ಅಸೋಸಿಯೇಟ್, ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಿರ್ದೇಶಕನಾಗಬೇಕೆಂ ಬುದು ಅವರ ಧ್ಯಾನ. ವರವೆಂಬುದು ಅವರತ್ತ ಇದೀಗ ಎರಡು ದಶಕಗಳ ನಂತರ ಸಾಗಿ ಬಂದಿದೆ!

ಈ ಚಿತ್ರದ್ದು ಭಿನ್ನವಾದ ಕಥೆ. ಸ್ಕೇಟಿಂಗ್ ಇದರ ಜೀವಾಳ. ಅಂದಹಾಗೆ ಈ ಸ್ಕೇಟಿಂಗ್ ಈಗ ಕ್ರೇಜಿ ಆಟವಾಗಿದ್ದರೂ ಅದನ್ನು ಮೊದಲಿಗೆ ಈ ಜಗತ್ತಿಗೆ ಪರಿಚಯಿಸಿದ್ದ ರಾವಣನ ಮಗ ಇಂದ್ರಜಿತ್ ಅಂತೆ. ಆತ ಹಲಗೆಗೆ ಚಕ್ರಗಳನ್ನು ಫಿಕ್ಸು ಮಾಡಿಕೊಂಡು ಅದರ ಮೇಲೆ ಎರಡೂ ಕಾಲೂರಿ ಯುದ್ಧ ಭೂಮಿಗೆ ಬರುತ್ತಿದ್ದನಂತೆ. ಈ ಆಟದಲ್ಲಿ ನಾನಾ ವಿಶೇಷಗಳಿದ್ದಾವೆ. ಅದಕ್ಕೂ ಬದುಕಿಗೂ ಸಂಬಂಧವೂ ಇದೆ. ಬೇರೆ ಆಟಗಳಂತೆ ಇದರಲ್ಲಿ ಹಿಂದಕ್ಕೆ ಚಲಿಸೋ ಅವಕಾಶವಿಲ್ಲ. ಇಂಥಾ ಕ್ರೀಡೆಯನ್ನು ಬೇಸ್ ಆಗಿಟ್ಟುಕೊಂಡು ಚೇತೋಹಾರಿಯಾದ ಚೆಂದದ್ದೊಂದು ಚಿತ್ರ ಮಾಡಿರುವ ಖುಷಿ ಗೋಪಿ ಕೆರೂರ್ ಅವರದ್ದು.

ಪ್ರವೀಣ್ ಎಂ ಪ್ರಭು ಛಾಯಾಗ್ರಹಣ, ಅವಿನಾಶ್ ಶ್ರೀರಾಮ್ ಸಂಗೀತ, ಕೆ.ಜೆ.ವೆಂಕಟೇಶ್ ಸಂಕಲನ, ಗೋಪಿಕೆರೂರ್, ಸುದೀರ್ ಅತ್ತಾವರ್ ಮತ್ತು ಮನ್ವರ್ಷೀ ನವಲಗುಂದ ಸಾಹಿತ್ಯ ಹೊಂದಿರೋ ಈ ಚಿತ್ರ ಇದೇ ೨೩ನೇ ತಾರೀಕಿನಂದು ತೆರೆ ಕಾಣಲಿದೆ.

Leave a Reply

Your email address will not be published. Required fields are marked *


CAPTCHA Image
Reload Image