One N Only Exclusive Cine Portal

ಫೋಟೋ ನೋಡಿದ್ರೆ ಬೆಚ್ಚಿ ಬೀಳ್ತೀರಿ!

ಬಾಜಿರಾವ್ ಮಸ್ತಾನಿ ಸೇರಿದಂತೆ ಅನೇಕ ಚಿತ್ರಗಳ ಮೂಲಕ ಪರಿಪೂರ್ಣ ನಟನಾಗಿ ಹೊರಹೊಮ್ಮಿರುವಾತ ರಣ್‌ವೀರ್ ಸಿಂಗ್. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಲುಕ್ ಮಾತ್ರವಲ್ಲದೇ ದೈಹಿಕವಾಗಿಯೂ ಬದಲಾವಣೆ ತಂದುಕೊಳ್ಳೋ ರಣ್‌ವೀರ್ ತನ್ನ ಮುಂದಿನ ಚಿತ್ರಕ್ಕಾಗಿ ಮಾಡಿಕೊಂಡಿರೋ ಬದಲಾವಣೆ ಎಂಥವರನ್ನೂ ಬೆಚ್ಚಿ ಬೀಳಿಸುವಂತಿದೆ.
ರಣ್‌ವೀರ್ ಸಿಂಗ್ ಅಂದರೆ ಕಟೆದಿಟ್ಟ ಕಟ್ಟುಮಸ್ತಾದ ದೇಹಸಿರಿ ಕಣ್ಮುಂದೆ ಬರೋದು ಸಹಜ. ಆದರೆ ಈಗ ಸ್ವತಃ ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರೋ ಫೋಟೋವೊಂದು ಅಭಿಮಾನಿಗಳೇ ಕಂಗಾಲಾಗುವಂತೆ ಮಾಡಿದೆ. ಯಾಕೆಂದರೆ, ಅದರಲ್ಲಿ ರಣ್‌ವೀರ್ ಅದೇನೋ ಕಾಯಿಲೆ ಬಂದಂತೆ ಕಟ್ಟುಮಸ್ತಾದ ದೇಹವೆಲ್ಲಾ ಕರಗಿ ಪೀಚು ಪೀಚಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾನೆ.


ಆದರೆ ಆತನಿಗೆ ಯಾವುದೇ ಕಾಯಿಲೆ ಕಸಾಲೆಗಳೂ ಬಂದಿಲ್ಲ. ನಿರಂತರವಾಗಿ ಶ್ರಮ ಹಾಕಿ ಆತನೇ ದೇಹದ ತೂಕ ಇಳಿಸಿಕೊಂಡು ಪೀಚಾದ ದೇಹವನ್ನು ತನ್ನದಾಗಿಸಿಕೊಂಡಿದ್ದಾನೆ. ಅಂದ ಹಾಗೆ ರಣ್‌ವೀರ್ ಇಂಥಾದ್ದೊಂದು ಸಾಹಸ ಮಾಡಿರೋದು ತನ್ನ ಮುಂದಿನ ಚಿತ್ರಗಳಲ್ಲಿ ಬಾಯ್‌ಗಾಗಿಯಂತೆ. ಆ ಚಿತ್ರದ ಪಾತ್ರ ಇಂಥಾ ಸ್ಕಿನ್ನಿ ಬಾಯ್ ಲುಕ್ ಬೇಡುತ್ತದೆಯಂತೆ. ಆದ್ದರಿಂದಲೇ ರಣ್‌ವೀರ್ ಭಾರೀ ಪರಿಶ್ರಮ ವಹಿಸಿ ದೇಹವನ್ನು ಈ ಪಾಟಿ ಇಳಿಸಿಕೊಂಡಿದ್ದಾನೆ.


ರಣ್‌ವೀರ್ ಇದೀಗ ತೆರೆ ಕಾಣಲು ಸಜ್ಜಾಗಿರುವ ಪದ್ಮಾವತಿ ಚಿತ್ರದಲ್ಲಿಯೂ ಕಟ್ಟುಮಸ್ತಾದ ದೇಹವನ್ನೇ ಹೊಂದಿದ್ದಾನೆ. ಆದರೆ ಗಲ್ಲಿ ಬಾಯ್ ಚಿತ್ರಕ್ಕಾಗಿ ಈ ರೀತಿ ಮೂಳೆಗೆ ಚಕ್ಕಳ ಅಂಟಿಸಿಕೊಳ್ಳಲು ಆತ ತೆಗೆದುಕೊಂಡಿದ್ದು ಕೇವಲ ಆರು ವಾರ ಎಂಬುದು ನಿಜಕ್ಕೂ ಶಾಕಿಂಗ್ ಸುದ್ದಿ. ಅದುವೇ ಆತನ ಕಠಿಣ ಪರಿಶ್ರಮಕ್ಕೂ ಕನ್ನಡಿಯಂತಿದೆ.


ಇಂಥಾ ಗಾಢವಾದ ಪರಿಶ್ರಮದಿಂದ ರಣ್‌ವೀರ್ ತಯಾರಾಗಿರೋ ಗಲ್ಲಿ ಬಾಯ್ ಚಿತ್ರ ಅತ್ಯಂತ ವಿಶೇಷವಾದ ರೋಚಕವಾದ ಕಥಾ ಹಂದರ ಹೊಂದಿದೆ. ಆದ್ದರಿಂದಲೇ ಈ ಚಿತ್ರದ ಬಗ್ಗೆ ಬಾಲಿವುಡ್ ಬೆರಗುಗಣ್ಣಿನಿಂದ ನೋಡಲಾರಂಭಿಸಿದೆ.

Leave a Reply

Your email address will not be published. Required fields are marked *


CAPTCHA Image
Reload Image