Connect with us

ರಿಯಾಕ್ಷನ್

ರಶ್ಮಿಕಾಗೆ ಸುದೀಪ್ ಜೊತೆ ನಟಿಸೋ ಆಸೆ!

Published

on

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದೇ ಏಕಾಏಕಿ ಬ್ಯುಸಿಯಾಗಿ ಹೋದಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದಲ್ಲಿ ನಟಿಸಿಯಾದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೂ ನಟಿಸೋ ಅವಕಾಶ ಪಡೆದಿದ್ದ ರಶ್ಮಿಕಾ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಯಜಮಾನ ಚಿತ್ರದಲ್ಲಿ ನಾಯಕಿಯಾಗಿದ್ದಾಳೆ. ಹೀಗಿರುವಾಗಲೇ ಅಭಿಮಾನಿಗಳ ಮುಂದೆ ರಶ್ಮಿಕಾ ತನ್ನ ಮನದಾಸೆ ಒಂದನ್ನು ತೆರೆದಿಟ್ಟಿದ್ದಾಳೆ!

ಇದೀಗ ತೆಲುಗಿನಲ್ಲಿಯೂ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿರುವ ರಶ್ಮಿಕಾ ಮಂದಣ್ಣನಿಗೆ ಕಿಚ್ಚಾ ಸುದೀಪ್ ಜೊತೆ ನಾಯಕಿಯಾಗಿ ನಟಿಸೋ ಆಸೆ ಇದೆಯಂತೆ!

ರಶ್ಮಿಕಾ ಫೇಸ್‌ಬುಕ್‌ನಂಥಾ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳೋದಿಲ್ಲ. ಈಗ ಆಕೆಯ ಕೈಲಿರೋ ಚಿತ್ರಗಳ ಪಟ್ಟಿ ನೋಡಿದರೆ ಅಂಥಾದ್ದಕ್ಕೆಲ್ಲ ಪುರಸೊತ್ತು ಸಿಗುವುದೂ ಇಲ್ಲ ಎಂಬುದು ಖಾತರಿಯಾಗುತ್ತದೆ. ಆದರೆ ಇತ್ತೀಚೆಗೆ ಫೇಸ್ ಬುಕ್ ಲೈವ್ ಬಂದಿದ್ದ ರಶ್ಮಿಕಾ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದಳು. ಈ ಸಂದರ್ಭದಲ್ಲಿ ಅಭಿಮಾನಿಗಳು ಕಿಚ್ಚಾ ಸುದೀಪ್ ಅವರ ಜೊತೆ ನಟಿಸ್ತೀರಾ ಎಂಬ ಪ್ರಶ್ನೆಯನ್ನೂ ಕೇಳಿದ್ದರು. ಇದಕ್ಕೆ ರಶ್ಮಿಕಾ ಬಲು ಉತ್ಸಾಹದಿಂದಲೇ ಸಕಾರಾತ್ಮಕ ಉತ್ತರ ನೀಡಿದ್ದಾಳೆ.


ಇತ್ತ ಯಜಮಾನ ಚಿತ್ರದ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ರಶ್ಮಿಕಾ ತೆಲುಗಿನ ಒಂದು ಚಿತ್ರದಲ್ಲಿ ನಟಿಸಿದ್ದಾಳೆ. ಇನ್ನೊಂದೆರಡು ಚಿತ್ರಗಳಿಗೆ ತಯಾರಿಯನ್ನೂ ನಡೆಸುತ್ತಿದ್ದಾಳೆ. ಕನ್ನಡದಲ್ಲಂತೂ ಅವಕಾಶಗಳು ಸಾಲುಗಟ್ಟಿ ನಿಂತಿವೆ. ಈಕೆಯ ಸ್ಪೀಡು ನೋಡಿದರೆ ಸುದೀಪ್ ಅವರಿಗೆ ಜೋಡಿಯಾಗಿ ನಟಿಸೋ ಕಾಲ ಹತ್ತಿರದಲ್ಲಿಯೇ ಇರುವಂತಿದೆ!

ರಿಯಾಕ್ಷನ್

ಟ್ವಿಟರ್‌ನಲ್ಲಿ ತೇಲಿ ಬಿಟ್ಟಳು ಖುಷಿಯ ಸುದ್ದಿ!

Published

on

ವರ್ಷದ ಹಿಂದೆ ಮದುವೆಯಾಗೋ ಮೂಲಕ ಸಂಸಾರಸ್ಥೆಯಾಗಿದ್ದ ಪ್ರಿಯಾಮಣಿ ಆ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿಯೇ ಕಣ್ಮರೆಯಾಗಿದ್ದಳು. ಆಕೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹೆಚ್ಚು ಆಕ್ಟೀವ್ ಆಗಿರದ ಕಾರಣ ಅಭಿಮಾನಿಗಳೆಲ್ಲ ಕಸಿವಿಸಿಗೊಂಡಿದ್ದರು. ಇದೀಗ ಪ್ರಿಯಾಮಣಿ ಟ್ವಿಟರ್‌ನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷಳಾಗಿದ್ದಾಳೆ!

ಹಾಗಂತ ಟ್ವಿಟರ್ ಮೂಲಕ ಪ್ರಿಯಾಮಣಿ ಮತ್ತೆ ನಟನೆಗೆ ವಾಪಾಸಾಗೋದರ ಬಗೆಗಾಗಲಿ, ಹೊಸಾ ಚಿತ್ರದ ವಿಚಾರವನ್ನಾಗಲಿ ಹೇಳಿಕೊಂಡಿಲ್ಲ. ಆದರೆ ಸುತ್ತೀ ಬಳಸಿ ತಾನು ತಾಯಿಯಾಗುತ್ತಿರೋ ಸೂಚನೆಯನ್ನು ನೀಡಿದ್ದಾಳೆ!

ಟ್ವಿಟರ್‌ನಲ್ಲಿ ತಂನ್ನ ಪತಿ ಮುಸ್ತಫಾ ರಾಜ್ ಜೊತೆಗಿನ ಕಲರ್ ಕಲರ್ ಫೋಟೋಗಳನ್ನು ಹಾಕಿಕೊಂಡಿರೋ ಪ್ರಿಯಾಮಣಿ ತನ್ನ ಸಂಸಾರಕ್ಕೆ ಪುಟ್ಟ ಅತಿಥಿಯ ಆಗಮನ ಆಗುತ್ತಿರೋದರ ಸೂಚನೆ ಕೊಟ್ಟಿದ್ದಾಳೆ. ಇದನ್ನು ಬೇಗನೆ ಅರ್ಥ ಮಾಡಿಕೊಂಡಿರೋ ಅಭಿಮಾನಿಗಳೆಲ್ಲ ಶುಭಾಶಯಗಳ ಸುರಿಮಳೆಯನ್ನೇ ಹರಿಸಲಾರಂಭಿಸಿದ್ದಾರೆ.

ಕಳೆದ ವರ್ಷ ಮುಸ್ತಾಫಾನನ್ನು ಮದುವೆಯಾಗಿದ್ದ ಪ್ರಿಯಾಮಣಿ ಚಿತ್ರ ರಂಗದಿಂದ ದೂರವಾಗೋ ನಿರ್ಧಾರ ಮಾಡಿದ್ದಳೋ ಅಥವಾ ಆ ನಂತರದ ಸಾಂಸಾರಿಕ ಜಂಜಾಟಗಳೇ ಆಕೆಯನ್ನು ದೂರವಿಟ್ಟಿದ್ದವೋ ಗೊತ್ತಿಲ್ಲ. ಆದರೆ ನಟನೆಯತ್ತ ಮಾತ್ರ ಆಕೆ ಮನಸು ಮಾಡಿಲ್ಲ. ಇದೀಗ ಆಕೆಯೇ ತಾಯಿಯಾಗುತ್ತಿರುವ ವಿಚಾರವನ್ನು ಹೇಳಿಕೊಂಡಿರೋದರಿಂದ ಸದ್ಯಕ್ಕೆ ಆಕೆಯನ್ನು ಹೊಸಾ ಚಿತ್ರಗಳಲ್ಲಿ ನೋಡುವ ಅಭಿಮಾನಿಗಳ ಆಸೆ ಕೈಗೂಡುವ ಲಕ್ಷಣಗಳು ಕಾಣಿಸುತ್ತಿಲ್ಲ!

Continue Reading

ರಿಯಾಕ್ಷನ್

ಸ್ಟಾರ್ ವಾರ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ಗಂಭೀರ ಕ್ರಮ!

Published

on

ಕನ್ನಡ ಚಿತ್ರರಂಗದಲ್ಲಿ ಈ ಸ್ಟಾರ್ ವಾರ್‌ಗಳು ವ್ಯಾಪಕವಾಗಿರೋದೇ ಆನ್‌ಲೈನ್ ಸರ್ವವ್ಯಾಪಿಯಾದ ನಂತರ. ಫ್ಯಾನ್ ಪೇಜುಗಳಲ್ಲಿ ಹರಿದಾಡೋ ಯದ್ವಾತದ್ವಾ ಆಕ್ರೋಶದ ವಿಚಾರಗಳು, ಕಮೆಂಟುಗಳೇ ಪರಸ್ಪರ ಬೆಂಕಿ ಹೊತ್ತಿಸುತ್ತಿವೆ. ಅಭಿಮಾನಿಗಳೆಂದ ಮೇಲೆ ಇಂಥಾ ಅತೀ ಉತ್ಸಾಹ, ವಿರೋಧ ಬಂದಾಗ ಆಕ್ರೋಶ ಎಲ್ಲ ಇದ್ದಿದ್ದೆ. ಆದರೆ ಆಯಾ ನಟರು ಕೊಂಚ ಎಚ್ಚರ ತಪ್ಪಿದರೆ ಅನಾಹುತಗಳಾಗುತ್ತವೆ. ಅಂಥಾದ್ದೊಂದು ಎಚ್ಚರಿಕೆಯ ನಡೆಯನ್ನೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರದರ್ಶಿಸಿದ್ದಾರೆ.

ಸ್ಟಾರ್ ವಾರ್ ಸೇರಿದಂತೆ ತಮ್ಮ ಹೆಸರಿನ ಸುತ್ತಲೇ ಅದೇನು ನಡೆದರೂ ದರ್ಶನ್ ಅವರು ತಮ್ಮ ಚಿತ್ರಗಳ ಕೆಲಸ ಕಾರ್ಯವಾಯಿತು ತಾವಾಯಿತು ಅಂತಿದ್ದದ್ದೇ ಹೆಚ್ಚು. ಆದರೆ ಅವರು ಎಲ್ಲವನ್ನೂ ಸೂಕ್ಷ್ಮವಾಗಿ ನೋಡುವ ಮನಸ್ಥಿತಿ ಹೊಂದಿರುವವರು. ಇತ್ತೀಚಿನ ಕೆಲ ವಿದ್ಯಮಾನಗಳ ಬಗ್ಗೆಯೂ ಅಂತೆಯೇ ಗಮನವಿಟ್ಟಿದ್ದ ದರ್ಶನ್ ತಮ್ಮ ಕಡೆಯಿಂದ ಸ್ಟಾರ್ ವಾರ್‌ನಂಥಾದ್ದಕ್ಕೆ ಉತ್ತೇಜನ ಸಿಗಬಾರದೆಂಬ ಕಾರಣದಿಂದ ತಮ್ಮ ಫ್ಯಾನ್ ಪೇಜುಗಳ ಅಡ್ಮಿನ್‌ಗಳನ್ನು ಕರೆಸಿಕೊಂಡು ತಿಳಿ ಹೇಳಿದ್ದಾರೆ.

ದರ್ಶನ್ ಅವರ ಫ್ಯಾನ್ ಪೇಜುಗಳ ಸಂಖ್ಯೆ ದೊಡ್ಡದಿದೆ. ಅದರಲ್ಲಿ ನಲವತ್ತುಕ್ಕೂ ಹೆಚ್ಚು ಪೇಜುಗಳ ಅಡ್ಮಿನ್‌ಗಳನ್ನು ಕರೆಸಿಕೊಂಡು ಔತಣ ಕೂಟ ಏರ್ಪಡಿಸಿದ್ದ ದರ್ಶನ್ ಎಲ್ಲವನ್ನೂ ಸೂಕ್ಷ್ಮವಾಗಿ ವಿವರಿಸಿ ತಿಳಿ ಹೇಳಿದ್ದಾರೆ. ಕೆಲ ಸೂಚನೆಗಳನ್ನೂ ನೀಡಿದ್ದಾರೆ. ಬೇರೆ ನಟರ ವಿರುದ್ಧದ ಕಾಮೆಂಟ್, ಸ್ಟೇಟಸ್‌ಗಳನ್ನು ಹಾಕೋದನ್ನು ನಿಲ್ಲಿಸುವಂತೆಯೂ ಪ್ರೀತಿಯಿಂದಲೇ ತಾಕೀತು ಮಾಡಿದ್ದಾರೆ.

ಯಾವುದೇ ಸ್ಟಾರ್‌ಗಳ ವಿರುದ್ಧ ಅವಾಚ್ಯವಾಗಿ ಬೈಯೋದು, ಕೌಂಟರ್ ಕಮೆಂಟ್ ಮಾಡೋದನ್ನೆಲ್ಲ ನಿಲ್ಲಿಸುವಂತೆ ಅಡ್ಮಿನ್‌ಗಳಖಿಗೆ ಸಲಹೆ ನೀಡಿರುವ ದರ್ಶನ್ ಈ ಮೂಲಕ ತಮ್ಮ ಎಲ್ಲ ಫ್ಯಾನ್ ಪೇಜುಗಳವರಿಗೂ ಇದೇ ಸಂದೇಶವನ್ನು ರವಾನಿಸಿದ್ದಾರೆ. ಚಿತ್ರರಂಗದಲ್ಲಿರೋದೇ ಬೆರಳೆಣಿಕೆಯಷ್ಟು ನಟರು. ಇಲ್ಲಿ ಎಲ್ಲರೂ ಒಗ್ಗಟ್ಟಾಗಿರ ಬೇಕೇ ಹೊರತು ಒಡಕುಂಟಾಗಬಾರದು. ಇಂಥಾ ಒಡಕಿಗೆ ಫ್ಯಾನ್ ಪೇಜುಗಳು ಕಾರಣವಾಗಬಾರದೆಂಬ ಕಾಳಜಿಯ ಮಾತುಗಳನ್ನೂ ಕೂಡಾ ದರ್ಶನ್ ಅಡ್ಮಿನ್‌ಗಳ ಮುಂದೆ ಹೇಳಿದ್ದಾರಂತೆ.

Continue Reading

cbn

ಸತೀಶ್ ಪಾಲಿಗೆ ದಾಖಲೆ ನಿರ್ಮಿಸಿದ ಅಯೋಗ್ಯ!

Published

on

ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರ ಒಂದಷ್ಟು ವಿವಾದ, ಮತ್ತೊಂದಷ್ಟು ಕ್ಯೂರಿಯಾಸಿಟಿಯೊಂದಿಗೇ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆ ಮೂಡಿಸುತ್ತಾ ಸಾಗುತ್ತಿದೆ. ಇದೀಗ ಅರ್ಜುನ್ ಜನ್ಯಾ ಸಂಗೀತ ನೀಡಿರುವ ಈ ಚಿತ್ರದ ಮಜವಾದ ಹಾಡೊಂದನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದ್ದಾರೆ.

ಇಷ್ಟರಲ್ಲಿಯೇ ಅಯೋಗ್ಯ ಚಿತ್ರದ ಹಾಡೊಂದು ಬಿಡುಗಡೆಯಾಗುತ್ತದೆ ಎಂಬ ಬಗ್ಗೆ ಯಾವತ್ತೋ ಸುದ್ದಿ ಹರಡಿತ್ತು. ಆದರೆ ಈಗ ಚಿತ್ರ ತಂಡ ಒಂದೇ ಒಂದು ಹಾಡನ್ನು ಹೊರ ತಂದಿದೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನ ಮಾಡಿರುವ ಏನಮ್ಮಿ ಏನಮ್ಮಿ ಎಂಬ ಈ ಹಾಡನ್ನು ವಿಜಯ ಪ್ರಕಾಶ್ ಹಾಡಿದ್ದಾರೆ. ಇದೀಗ ಧೃವ ಸರ್ಜಾ ಅವರ ಮೂಲಕ ಬಿಡುಗಡೆಯಾಗಿದೆ.

ರಚಿತಾ ರಾಮ್ ಮತ್ತು ನೀನಾಸಂ ಸತೀಶ್ ಈ ಹಾಡಿನಲ್ಲಿ ಪಕ್ಕಾ ರೆಟ್ರೋ ಮೂಡಿನಲ್ಲಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರಂತೆ. ನೀನಾಸಂ ಸತೀಶ್ ಬಹು ಹಿಂದಿನಿಂದಲೂ ಮಂಡ್ಯ ಸೀಮೆಯ ನೆಲದ ಘಮಲಿನ ಪಾತ್ರಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡಿರುವವರು. ಈ ಚಿತ್ರದಲ್ಲಿಯೂ ಅವರು ಅಂಥಾದ್ದೇ ನಾಟಿ ಸ್ಟೈಲಿನಲ್ಲಿ ಕಾಣಿಸಿಕೊಂಡಿದ್ದಾರಂತೆ.

ಕೇವಲ ಹತ್ತು ಘಂಟೆಗಳ ಸಮಯದಲ್ಲಿ ಬರೋಬ್ಬರಿ ಒಂದು ಲಕ್ಷ ವ್ಯೂಸ್ ದಾಟಿದೆಯಂತೆ. ನೀನಾಸಂ ಸತೀಶ್ ಅವರ ಈವರೆಗಿನ ವೃತ್ತಿಜೀವನದಲ್ಲಿ ಹಾಡೊಂದು ಈ ಮಟ್ಟಿಗೆ ಹಿಟ್ ಆಗಿರೋದನ್ನು ಕಂಡು ಸ್ವತಃ ಸತೀಶ್ ಥ್ರಿಲ್ ಆಗಿದ್ದಾರೆ ಮತ್ತು ಇದಕ್ಕೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇಂಥ ಖುಷಿಯ ನಡುವೆಯೇ ಸದ್ಯ ಒಂದು ಹಾಡನ್ನು ಬಿಡುಗಡೆ ಮಾಡಿರೋ ಚಿತ್ರ ತಂಡ ಅಯೋಗ್ಯನನ್ನು ಆದಷ್ಟು ಬೇಗ ತೆರೆಗಾಣಿಸುವ ಸನ್ನಾಹದಲ್ಲಿದೆ.

Continue Reading

Trending

Copyright © 2018 Cinibuzz