One N Only Exclusive Cine Portal

‘ಚಲೋ’ ಅಂತಾರಾ ತೆಲುಗು ಮಂದಿ?

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನಕ್ಕೆ ನಾಯಕಿಯಾಗಿ ಕಾಲಿಟ್ಟ ಚೆಲುವೆ ರಶ್ಮಿಕಾ ಮಂದಣ್ಣ ಮೊದಲ ಚಿತ್ರದಲ್ಲಿಯೇ ಭರ್ಜರಿ ಅಭಿಮಾನಿಗಳನ್ನು ಸಂಪಾದಿಸಿಕೊಂಡ ಹುಡುಗಿ. ಕಿರಿಕ್ ಪಾರ್ಟಿ ಸಕ್ಸಸ್ ಬಳಿಕ ಒಂದರ ಹಿಂದೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಕನ್ನಡದ ಜೊತೆ ಜೊತೆಗೆ ತೆಲುಗು ಚಿತ್ರರಂಗದಲ್ಲೂ ಸಕ್ರಿಯವಾಗಿದ್ದಾರೆ.

ಅಂದಹಾಗೆ, ಈ ವಾರ ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ತೆಲುಗು ಚಿತ್ರ `ಚಲೋ’ ತೆರೆಗೆ ಬಂದಿದೆ. ಉಷಾ ಮುಲ್ಪುರಿ ನಿರ್ಮಾಣದ ಈ ಚಿತ್ರಕ್ಕೆ, ನಿರ್ದೇಶಕ ವೆಂಕಿ ಕುದುಮುಲಾ ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಾಯಕ ನಾಗ ಶೌರ್ಯ ಅವರಿಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ನರೇಶ್, ವಿವಾ ಹರ್ಷ, ರಘು ಬಾಬು ಮೊದಲಾದ ಕಲಾವಿದರ ತಾರಾಗಣ ಈ ಚಿತ್ರದಲ್ಲಿದೆ.

ಇನ್ನು ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದಲ್ಲೂ ಬಿಡುಗಡೆಯಾಗಿರುವ `ಚಲೋ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲ ವರ್ಷಗಳ ಹಿಂದೆ ತೆಲುಗಿನಲ್ಲಿ ತೆರೆಕಂಡ `ಮರ್ಯಾದಾ ರಾಮಣ್ಣ’ ಸಿನಿಮಾದಲ್ಲಿ ರಾಜಮೌಳಿ ಏನನ್ನು ತೋರಿದ್ದರೋ ಅದನ್ನೇ ಭಿನ್ನವಾಗಿ ಈ ಸಿನಿಮಾದಲ್ಲೂ ನಿರ್ದೇಶಕ ವೆಂಕಿ ಕುದುಮುಲಾ ಹೇಳಿzರೆ ಎಂಬ ಮಾತುಗಳು ಕೇಳಿಬರುತ್ತಿದೆ. ಚಿತ್ರದಲ್ಲಿ ನಾಯಕ ನಾಗ ಶೌರ್ಯ ಮತ್ತು ಕನ್ನಡದ ಇನ್ನೊಬ್ಬ ನಟ ಅಚ್ಯುತ್ ಕುಮಾರ್ ಅಭಿನಯ ನೋಡುಗರಿಂದ ಪ್ರಶಂಸೆ ಪಡೆದುಕೊಂಡರೆ, ರಶ್ಮಿಕಾ ಮಂದಣ್ಣ ಪಾತ್ರ ಪೋಷಣೆ ಅಷ್ಟಕ್ಕಷ್ಟೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಒಟ್ಟಾರೆ ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಚಿತ್ರಕ್ಕೆ ತೆಲುಗು ಚಿತ್ರ ಪ್ರೇಮಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಮುಂದಿನ ದಿನಗಳಲ್ಲಿ ಟಾಲಿವುಡ್‌ನಲ್ಲಿ ರಶ್ಮಿಕಾ ಬೇಡಿಕೆ ಏನಾಗಬಹುದು ಎಂಬ ಕುತೂಹಲ ಎಲ್ಲರಲ್ಲಿದೆ.

Leave a Reply

Your email address will not be published. Required fields are marked *


CAPTCHA Image
Reload Image