One N Only Exclusive Cine Portal

ರವಿ ಸರ್ ಅಮ್ಮನಿಗೆ ಎಲ್ಲವೂ ಸರಿ ಹೋಗಲಿ…

ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಅಪ್ಪ ಅಂದರೆ ಪ್ರಾಣ. ಅಮ್ಮ ಅಂದರೆ ಉಸಿರು. ಅಪ್ಪ ವೀರಾಸ್ವಾಮಿ ನಿಧನರಾದಾಗ ರವಿಚಂದ್ರನ್ ಅವರ ಅರ್ಧ ಪ್ರಾಣವೇ ಹೊರಟುಹೋಗಿತ್ತು. ಈಗ ಉಸಿರಿಗೆ ಉಸಿರಾಗಿರುವ ಅಮ್ಮ ಪಟ್ಟಮ್ಮಾಳ್ ಪ್ರಪಂಚವನ್ನೇ ಮರೆತ ಸ್ಥಿತಿಯಲ್ಲಿ ಬದುಕು ನಡೆಸಿದ್ದಾರೆ.
ಹೌದು, ಇದು ನಿಜ. ರSancharaವಿಚಂದ್ರನ್ ತಾಯಿಗೆ ಮರೆವಿನ ಕಾಯಿಲೆ ಬಂದುಬಿಟ್ಟಿದೆ. ಹೀಗಾಗಿ ರವಿಚಂದ್ರನ್ ತಲೆ ಕೆಡಿಸಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ, ನಿರ್ದೇಶನದ ‘ಅಪೂರ್ವ’ ಚಿತ್ರದ ಅಂತಿಮಹಂತದ ಕೆಲಸ, ಹೆಬ್ಬುಲಿಯ ಶೂಟಿಂಗು, ಮಗನ ಸಿನಿಮಾ.. ಹೀಗೆ ಒತ್ತಡದ ಕೆಲಸಗಳು ನಡೆದಿರುವಂತೆಯೇ ಅಮ್ಮನ ಆರೋಗ್ಯದ ಕಡೆಯೂ ಗಮನಹರಿಸಬೇಕಿದೆ. ಈ ನಡುವೆ ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಾದ ಮಹಾಪ್ರಳಯದಲ್ಲಿ ಇವರ ಸೋದರಿಯ ಮನೆ ಕೂಡಾ ಆರ್ಧ ಮುಳುಗಿಹೋಗಿತ್ತು. ಅದರ ಕಡೆಯೂ ರವಿ ಸಾಕಷ್ಟು ಗಮನ ಕೊಟ್ಟಿದ್ದರು. ರವಿಚಂದ್ರನ್ ಅವರ ಮುಂದೆ ಸಾಕಷ್ಟು ಸಿನಿಮಾಗಳಿವೆ. ಒಂದು ಕಡೆ ಸೋದರಿ, ಮತ್ತೊಂದು ಕಡೆ ಹೆತ್ತ ತಾಯಿ, ಹೀಗೆ ಎರಡೈ ಕಡೆ ಗಮನ ಕೊಡಬೇಕಿರುವುದರಿಂದ  ಅನೇಕ ಬಾರಿ ಕೆಲಸ ತಮ್ಮ ನಿರ್ದೇಶನದ ಕೆಲಸ ಕೂಡಾ ತಡವಾಗಿದ್ದಿದೆ.  ಒಟ್ಟಾರೆ ಕನಸುಗಾರನ ಕನಸು ಕಾರ್ಯರೂಪಕ್ಕೆ ತರುವ ಅವರ ಸಂಕಲ್ಪಕ್ಕೆ ಅಮ್ಮನ ಅನಾರೋಗ್ಯ ಹಿನ್ನಡೆಯುಂಟುಮಾಡಿದೆ. ಇಷ್ಟಕ್ಕೂ ಅಮ್ಮನನ್ನು ಕಾಡುತ್ತಿರುವ ಅನಾರೋಗ್ಯವಾದರೂ ಏನು?


ಪಟ್ಟಮ್ಮಾಳ್ ಅವರದ್ದು ಮರೆವಿನ ಕಾಯಿಲೆ. ಒಂದು ಕ್ಷಣ ಮಾಡಿದ್ದನ್ನು ಮರುಕ್ಷಣ ಮರೆತುಬಿಡುವ ಕಾಯಿಲೆ. ಸದ್ಯಕ್ಕೆ ಮನೆಯ ಒಳಕೋಣೆಗಳಲ್ಲಷ್ಟೇ ವಾಕ್ ಹೋಗುತ್ತಿದ್ದಾರೆ. ಒಂದಷ್ಟು ದೂರ ನಡೆದು ಹಿಂದಿರುಗಿ ಬಂದು ಸೋಫಾ ಮೇಲೆ ಕುಳಿತಾಗ ಆವರೆಗಿನ ನಡಿಗೆಯನ್ನೇ ಮರೆತುಬಿಡುವ ವಿಚಿತ್ರ ಕಾಯಿಲೆ. ಮತ್ತೆ ನಡಿಗೆ.. ಹೀಗೆ ದಿನವೊಂದರಲ್ಲಿಯೇ ಮೈಲುಗಟ್ಟಲೆ ನಡೆಯುವ ಪಟ್ಟಮ್ಮಾಳ್ ಎಂದೂ ಆಯಾಸಗೊಳ್ಳುವುದಿಲ್ಲವಂತೆ. ಅಮ್ಮನ ಈ ದುಃಸ್ಥಿತಿ ಕಂಡು ಮರುಗುವ ರವಿಚಂದ್ರನ್ “ಇದೊಂದು ಔಷಧಿಯೇ ಇಲ್ಲದ ಕಾಯಿಲೆ. ಪ್ರಪಂಚದ ಯಾವ ಭಾಗದಲ್ಲಾದರೂ ಸರಿ, ಇದಕ್ಕೊಂದು ಔಷಧಿ ಎನ್ನುವುದು ಇದ್ದರೆ ಕೋಟಿ ಖರ್ಚಾದರೂ ಪರ‍್ವಾಗಿಲ್ಲ ತಂದುಬಿಡುತ್ತೇನೆ” ಎಂದೆನ್ನುವ ರವಿಚಂದ್ರನ್  ಚಿತ್ರದ ಕೆಲಸಗಳನ್ನು ಗುಡ್ಡೆ ಹಾಕಿ ಸುಮ್ಮನೇ ಮೌನವಾಗಿ ಕುಳಿತುಬಿಡುತ್ತಾರೆ.  ಈ ಕಡೆ ಪತ್ರಕರ್ತರು ಛೇಡಿಸುವುದು ನಡೆದೇ ಇದೆ. ‘ಎಲ್ಲಿಹೋಯ್ತು ಮಂಜಿನಹನಿ, ಎಲ್ಲಿ ಹೋಯ್ತು ರಣಧೀರ ?’ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಹಾಕುತ್ತಾ ರವಿಚಂದ್ರನ್ ಭಾವನೆಗಳ ಜೊತೆ ಗಿರಗಿಟ್ಲೆಯಾಟ ಶುರುವಿಟ್ಟುಕೊಂಡಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image