One N Only Exclusive Cine Portal

ರವಿಚಂದ್ರನ್‌ಗೇಕಿಲ್ಲ ಡಾಕ್ಟರೇಟ್‌ಗೌರವ?

ಇದೀಗ ಸಾಮಾಜಿಕ ಜಾಲತಾಣಗಳ ತುಂಬಾ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಯಾಕಿನ್ನೂ ಗೌರವ ಡಾಕ್ಟರೇಟ್ ಬಂದಿಲ್ಲ ಎಂಬಂಥಾ ಪ್ರಶ್ನೆಯೊಂದು ವ್ಯಾಪಕವಾಗಿ ಹರಿದಾಡಲಾರಂಭಿಸಿದೆ. ಇದಕ್ಕೆ ಕಾರಣವಾಗಿರುವುದು ನಿರ್ದೇಶಕ ರಘುರಾಮ್ ಅವರು ಫೇಸ್ ಬುಕ್ ಮೂಲಕ ಎತ್ತಿರುವೊಂದು ವಿಚಾರ!

ರಘು ರಾಮ್ ಅವರು ರವಿಚಂದ್ರನ್ ಅವರಿಗೆ ಯಾಕೆ ಇನ್ನೂ ಡಾಕ್ಟರೇಟ್ ಬಂದಿಲ್ಲ ಎಂಬ ಚುಟುಕಾದ, ಅರ್ಥವತ್ತಾದ ಬರಹವೊಂದನ್ನು ಇತ್ತೀಚೆಗೆ ಪೋಸ್ಟ್ ಮಾಡಿದ್ದರು. `ಕನ್ನಡ ಚಿತ್ರರಂಗಕ್ಕೆ ಅದ್ದೂರಿತನವನ್ನು ತಂದುಕೊಟ್ಟು ಆಡಿಯೋ ಬೆಲೆಯನ್ನು ಸೃಷ್ಟಿಸಿ. ಪರಭಾಷಾ ನಟ ನಟಿಯರನ್ನು ಕನ್ನಡಕ್ಕೆ ಪರಿಚಯಿಸಿ, ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರರಂಗವನ್ನು ಶ್ರೀಮಂತವಾಗಿಸಲು ಕಾರಣವಾದ ಹಲವರಲ್ಲಿ ಪ್ರಮುಖರಾದ ರವಿಚಂದ್ರನ್ ಅವರಿಗೆ ಡಾಕ್ಟರೇಟ್ ಗೌರವ ಸಿಕ್ಕಿಲ್ಲ. ಇದು ಸರಿಯಾ?’ ಅಂತ ಪ್ರಶ್ನೆ ಮಾಡಿದ್ದರು.

ಈ ಬರಹಕ್ಕೆ ವ್ಯಾಪಕವಾಗಿ ಮೆಚ್ಚುಗೆ ಸಿಕ್ಕಿತ್ತು. ಬಹುತೇಕರು ಈ ಪ್ರಶ್ನೆಯನ್ನು ಪುಷ್ಟೀಕರಿಸಿ ರವಿಚಂದ್ರನ್ ಅವರಿಗೆ ಈ ಗೌರವ ಸಲ್ಲಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ರಘುರಾಮ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ವೈರಲ್ ಆಗಿದೆ!
ರಘುರಾಮ್ ಅವರು ಎತ್ತಿರುವ ಪ್ರಶ್ನೆಯಲ್ಲಿ ನಿಜಕ್ಕೂ ಅರ್ಥವಿದೆ. ಕನ್ನಡ ಚಿತ್ರರಂಗಕ್ಕೆ ಅದ್ದೂರಿತನದ ಜೊತೆಗೆ ಹೊಸಾ ಆಯಾಮವನ್ನು ತಂದುಕೊಟ್ಟವರು ರವಿಚಂದ್ರಕನ್. ಸಿನಿಮಾವನ್ನೇ ಧ್ಯಾನದಂತೆ ಸ್ವೀಕರಿಸಿರುವ ರವಿಚಂದ್ರನ್ ಖಂಡಿತವಾಗಿಯೂ ಡಾಕ್ಟರೇಟ್ ಗೌರವಕ್ಕೆ ಅರ್ಹರೆಂಬ ಅಭಿಪ್ರಾಯವೇ ಎಲ್ಲೆಡೆ ಕೇಳಿ ಬರಲಾರಂಭಿಸಿದೆ.

 

 

1 thought on “ರವಿಚಂದ್ರನ್‌ಗೇಕಿಲ್ಲ ಡಾಕ್ಟರೇಟ್‌ಗೌರವ?

Leave a Reply

Your email address will not be published. Required fields are marked *


CAPTCHA Image
Reload Image