One N Only Exclusive Cine Portal

ತಮಿಳಿಗರು ಕಂಡಂತೆ…

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದ ಉಳಿದವರು ಕಂಡಂತೆ ಚಿತ್ರ ಇದೀಗ ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಂಚಲನ ಸೃಷ್ಟಿಸಿದೆ. ತಮಿಳಿನಲ್ಲಿ ಈ ಚಿತ್ರ ರಿಚಿ ಎಂಬ ಹೆಸರಲ್ಲಿ ರೀಮೇಕ್ ಆಗಿರೋದು ಗೊತ್ತಿರೋ ವಿಚಾರ. ಇಷ್ಟು ಈ ಚಿತ್ರದ ಟ್ರೇಲರ್ ತಮಿಳುನಾಡಿನ ತುಂಬಾ ಟ್ರೆಂಡಿಂಗ್ ಹುಟ್ಟು ಹಾಕಿತ್ತು. ಈಗ ಸಿನಿಮಾವನ್ನು ಕೂಡಾ ತಮಿಳ್ ಮಕ್ಕಳ್ ಮೆಚ್ಚಿದ್ದಾರೆ.

ತಮಿಳು, ಮಲೆಯಾಳಂ ಸೇರಿದಂತೆ ನಾನಾ ಭಾಷೆಗಳ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ರೀಮೇಕ್ ಮಾಡೋದು ಮಾಮೂಲು. ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ಕಂಪ್ಲೇಂಟು ಅಂದರೂ ತಪ್ಪೇನಿಲ್ಲ. ಆದರೀಗ ಉಳಿದವರು ಕಂಡಂತೆ ಚಿತ್ರ ರೀಮೇಕ್ ವಿಚಾರದಲ್ಲಿ ತಕರಾರು ಹೊಂದಿದ್ದವರೇ ಬೆರಗಾಗುವಂತೆ ಮಾಡಿದೆ.

ಈ ಹಿಂದೆ ಕೆಲವೇ ಕೆಲ ಕನ್ನಡ ಚಿತ್ರಗಳು ತಮಿಳಿಗೆ ರೀಮೇಕ್ ಆಗಿವೆ. ಈಗ ಉಳಿದವರು ಕಂಡಂತೆ ಚಿತ್ರ ಭಾರೀ ಸದ್ದಿನ ಒಡ್ಡೋಲಗದಲ್ಲಿಯೇ ತಮಿಳು ಮತ್ತು ಮಲೆಯಾಳಕ್ಕೆ ರೀಮೇಕ್ ಆಗಿ ಬೇರೆ ಭಾಷೆಗಳವರೂ ಕನ್ನಡ ಚಿತ್ರ ರಂಗದತ್ತ ತಿರುಗಿ ನೋಡುವಂಥಾ ವಾತಾವರಣ ಸೃಷ್ಟಿಸಿದೆ.

ಅಂದಹಾಗೆ ಉಳಿದವರು ಕಂಡಂತೆ ಚಿತ್ರದ ತಮಿಳು ಅವತರಣಿಕೆಯಾದ ರಿಚಿ ಚಿತ್ರವನ್ನು ಗೌತಮ್ ರಾಮಚಂದ್ರನ್ ನಿರ್ದೇಶನ ಮಾಡಿದ್ದಾರೆ. ಪ್ರೇಮಂ ಖ್ಯಾತಿಯ ಮಲೆಯಾಳಂ ನಟ ನಿವಿನ್ ಪೌಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೊಸತನದ ನಿರೂಪಣೆ, ಕಥೆ ಹೊಂದಿದ್ದ ಉಳಿದವರು ಕಂಡಂತೆ ಚಿತ್ರದ ಮೂಲಕ ತಮಿಳು ಸೇರಿದಂತೆ ನಾನಾ ಭಾಷೆಗಳ ಗಮನ ಸೆಳೆದಿರೋದಂತೂ ಸತ್ಯ. ಇದಕ್ಕೆಲ್ಲಾ ಮೂಲ ಕಾರಣವಾಗಿರೋ ರಕ್ಷಿತ್ ಶೆಟ್ಟಿ ಮತ್ತು ಉಳಿದವರು ಕಂಡಂತೆ ಚಿತ್ರಕ್ಕೆ ದುಡ್ಡು ಹಾಕಿದ್ದ ಎಲ್ಲರೂ ನಿಜಕ್ಕೂ ಅಭಿನಂದನಾರ್ಹರು.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image