Connect with us

ಪ್ರೆಸ್ ಮೀಟ್

ಶೀಘ್ರದಲ್ಲೇ ರಾಬರ್ಟ್ ದರ್ಶನ!

Published

on

ಚಾಲೆಂಜಿಂಗ್ ಸ್ಟಾರ್ ದರ್ಶನ್ ವರ್ಷದಿಂದೀಚೆಗೆ ಒಂದಿಷ್ಟೂ ಬಿಡುವಿಲ್ಲದಂತೆ ನಟನೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಕೈಲಿ ಇನ್ನೂ ಒಂದೆರಡು ಚಿತ್ರಗಳು ಬಾಕಿ ಇರುವಾಗಲೇ ತರುಣ್ ಸುಧೀರ್ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿಯೂ ಹೊರ ಬಿದ್ದಿತ್ತು. ಆದರೆ ಎಲ್ಲ ತಯಾರಿ ಮುಗಿದರೂ ಟೈಟಲ್ ಮಾತ್ರ ಪಕ್ಕಾ ಆಗಿರಲಿಲ್ಲ.

ಆದರೀಗ ತರುಣ್ ಸುಧೀರ್ ಈ ಚಿತ್ರಕ್ಕೆ ಟೈಟಲ್ ಹುಡುಕಿದ್ದಾರೆ. ಈ ಚಿತ್ರಕ್ಕೆ ‘ರಾಬರ್ಟ್’ ಎಂಬ ಶೀರ್ಷಿಕೆ ನಿಗಧಿಯಾಗಿದೆ!

ಈ ಹಿಂದೆ ತರುಣ್ ಸುಧೀರ್ ಚೌಕ ಎಂಬ ಚಿತ್ರ ನಿರ್ದೇಶನ ಮಾಡಿದ್ದರಲ್ಲಾ? ಅದರ ಒಟ್ಟಾರೆ ಗೆಲುವಿನಲ್ಲಿ ದರ್ಶನ್ ಅವರು ಅಭಿನಯಿಸಿದ್ದ ರಾಬರ್ಟ್ ಎಂಬ ಪಾತ್ರದ ಪಾಲೂ ಪ್ರಧಾನವಾಗಿದ್ದದ್ದು ಸುಳ್ಳಲ್ಲ. ಆ ಪಾತ್ರ ಇಡೀ ಚಿತ್ರಕ್ಕೊಂದು ಖದರ್ ತಂದುಕೊಟ್ಟಿದ್ದೂ ನಿಜ. ಇದೀಗ ತರುಣ್ ಅದೇ ಪಾತ್ರದ ಹೆಸರನ್ನು ತಮ್ಮ ಮುಂದಿನ ಚಿತ್ರಕ್ಕೆ ಇಟ್ಟಿದ್ದಾರೆ.

ದರ್ಶನ್ ಅವರಿಗೂ ಕೂಡಾ ಈ ಶೀರ್ಷಿಕೆ ಮೆಚ್ಚುಗೆಯಾಗಿದೆಯಂತೆ. ಸದ್ಯ ಅವರು ಒಪ್ಪಿಕೊಂಡಿರುವ ಯಜಮಾನ ಮತ್ತು ಒಡೆಯ ಚಿತ್ರದ ಚಿತ್ರೀಕರಣವೆಲ್ಲ ಸಂಪೂರ್ಣವಾಗಿ ಮುಗಿದ ನಂತರ ದರ್ಶನ್ ರಾಬರ್ಟ್ ಆಗಿ ಅವತಾರವೆತ್ತಲಿದ್ದಾರೆ. ಹೆಚ್ಚೂ ಕಡಿಮೆ ಈ ವರ್ಷದ ಕೊನೆಯ ಹಂತದಲ್ಲಿ ರಾಬರ್ಟ್ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.

#

ಕಲರ್ ಸ್ಟ್ರೀಟ್

ಉದ್ಘರ್ಷದ ಥ್ರಿಲ್ಲರ್ ಟ್ರೈಲರ್ ಲಾಂಚ್ ಮಾಡಿದರು ದರ್ಶನ್!

Published

on


ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ಚಿತ್ರಗಳ ಮಾಸ್ಟರ್ ಡೈರೆಕ್ಟರ್ ಎಂದೇ ಹೆಸರಾಗಿರುವವರು ಸುನೀಲ್ ಕುಮಾರ್ ದೇಸಾಯಿ. ಅವರು ನಿರ್ದೇಶನ ಮಾಡಿರೋ ಬಹು ನಿರೀಕ್ಷಿತ ಉದ್ಘರ್ಷ ಚಿತ್ರದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದಾರೆ. ನಿರೀಕ್ಷೆಯಂತೆಯೇ ಈ ಟ್ರೈಲರ್ ಕ್ಷಣ ಕ್ಷಣವೂ ಕುತೂಹಲ ಕೆರಳಿಸುತ್ತಾ ಇಡೀ ಚಿತ್ರದ ಬಗ್ಗೆ ಎಲ್ಲರನ್ನೂ ಸೆಳೆಯುವಂತೆ ಮೂಡಿ ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಾವರಣಗೊಳಿಸಿರೋ ಈ ಟ್ರೈಲರ್‌ಗೆ ಕಿಚ್ಚಾ ಸುದೀಪ್ ಖಡಕ್ ಶೈಲಿಯಲ್ಲಿ ಧ್ವನಿ ನೀಡಿದ್ದಾರೆ. ಕಡೆಯಲ್ಲವರು ಮಾಸ್ಟರ್ ಆಫ್ ಸಸ್ಪೆನ್ಸ್ ಸುನೀಲ್ ಕುಮಾರ್ ದೇಸಾಯಿ ಮತ್ತೆ ಮರಳಿದ್ದಾರೆ ಅಂದಿದ್ದಾರೆ. ಇಡೀ ಟ್ರೈಲರ್ ಆ ಮಾತನ್ನು ಅಕ್ಷರಶಃ ಪುಷ್ಟೀಕರಿಸುವಂತಿದೆ.

ಮರ್ಡರ್ ಮಿಸ್ಟರಿಯ ಸುತ್ತಾ, ಕ್ಷಣ ಕ್ಷಣವೂ ಮೈನವಿರೇಳುವಂತೆ ಮಾಡೋ ಶೈಲಿಯಲ್ಲಿ ಉದ್ಘರ್ಷ ಮೂಡಿ ಬಂದಿದೆ ಅನ್ನೋ ಸೂಚನೆಯೂ ಈ ಮೂಲಕ ಸಿಕ್ಕಿದೆ. ಕನ್ನಡವೂ ಸೇರಿದಂತೆ ಬೇರೆ ಭಾಷೆಗಳಲ್ಲಿಯೂ ತಯಾರಾಗಿರೋ ಈ ಸಿನಿಮಾ ಮೂಲಕ ಮತ್ತೆ ದೇಸಾಯಿಯವರ ಸಸ್ಪೆನ್ಸ್ ಥ್ರಿಲ್ಲರ್ ಯುಗ ಶುರುವಾಗೋ ಲಕ್ಷಣಗಳೂ ಸ್ಪಷ್ಟವಾಗಿವೆ. ಕೆಲ ಜನಪ್ರಿಯ ಟಿವಿ ಶೋಗಳು ಸೇರಿದಂತೆ ಸಿಂಗಂ 3 ಚಿತ್ರದಲ್ಲಿಯೂ ಖಳನಾಗಿ ನಟಿಸಿದ್ದ ಠಾಕೂರ್ ಅನೂಪ್ ಸಿಂಗ್ ಈ ಚಿತ್ರದ ಮೂಲಕ ಮೊದಲ ಸಲ ಹೀರೋ ಆಗಿದ್ದಾರೆ. ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿಯೂ ಖಳನಾಗಿ ಅಬ್ಬರಿಸಿರೋ ಇವರನ್ನೇ ನಾಯಕನಾಗಿ ಮಾಡಬೇಕೆಂದುಕೊಂಡ ದೇಸಾಯಿ ಅದನ್ನೇ ಮಾಡಿದ್ದಾರೆ. ಈ ಮೂಲಕ ಅಜಾನುಬಾಹು ನಾಯಕನೊಬ್ಬ ಕನ್ನಡಕ್ಕೂ ಎಂಟ್ರಿ ಕೊಟ್ಟಂತಾಗಿದೆ.


ಮೂರು ಪಾತ್ರಗಳ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಈ ಚಿತ್ರ ಹೊಂದಿದೆ. ಠಾಕೂರ್ ಅವರ ಖಡಕ್ ಲುಕ್ಕಿಗೆ ತಕ್ಕುದಾದ ಪಾತ್ರವನ್ನೇ ದೇಸಾಯಿ ಸೃಷ್ಟಿಸಿದ್ದಾರೆ. ಆರಂಭದಿಂದಲೂ ದೇಸಾಯಿ ಅವರ ಚಿತ್ರಗಳನ್ನು ನೋಡಿಕೊಂಡೇ ಬಂದಿದ್ದ ಆರ್ ದೇವರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜುನಾಥ್ ಡಿ ಮತ್ತು ರಾಜೇಂದ್ರ ಕುಮಾರ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

Continue Reading

ಕಲರ್ ಸ್ಟ್ರೀಟ್

ಇನ್ನೆರಡು ದಿನಗಳಲ್ಲಿ ಲಾಂಚ್ ಆಗಲಿದೆ ಉದ್ಘರ್ಷ ಟ್ರೈಲರ್!

Published

on

 

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಉದ್ಘರ್ಷ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ನಾನಾ ರೀತಿಯಲ್ಲಿ ಅಗಾಧ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಗೀಗ ಮುಹೂರ್ತ ನಿಗಧಿಯಾಗಿದೆ.

ಇದೇ ತಿಂಗಳ ಐದನೇ ತಾರೀಕಿನಂದು ಉದ್ಘರ್ಷ ಟ್ರೈಲರ್ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಇದನ್ನು ಬಿಡುಗಡೆಗೊಳಿಸಲಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈ ಟ್ರೈಲರ್ ಗೆ ಕಿಚ್ಚಾ ಸುದೀಪ್ ಖಡಕ್ ಧ್ವನಿ ನೀಡಿರೋದು ಮತ್ತೊಂದು ವಿಶೇಷ.

ಈ ಮೂಲಕ ಉದ್ಘರ್ಷ ಟ್ರೈಲರ್ ಮೂಲಕ ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸುದೀಪ್ ಸಮಾಗಮವಾಗಿದೆ. ಸುದೀಪ್ ಅವರಂತೂ ತಮ್ಮ ಗುರುವಿನಂಥಾ ಸುನೀಲ್ ಕುಮಾರ್ ದೇಸಾಯಿಯವರ ಉದ್ಘರ್ಷ ಚಿತ್ರಕ್ಕೆ ಆರಂಭದಿಂದಲೂ ಸಾಥ್ ನೀಡುತ್ತಲೇ ಬಂದಿದ್ದಾರೆ. ಅವರು ಖಡಕ್ ವಾಯ್ಸ್ ನೀಡಿರೋ ಟ್ರೈಲರ್‍ನ ಅಸಲೀ ಖದರ್ ಇದೇ ತಿಂಗಳ 5ನೇ ತಾರೀಕಿನಂದು ಅನಾವರಣಗೊಳ್ಳಲಿದೆ.

ಮೂರು ಪಾತ್ರಗಳ ಸುತ್ತ ನಡೆಯುವ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಈ ಚಿತ್ರ ಹೊಂದಿದೆ. ಠಾಕೂರ್ ಅವರ ಖಡಕ್ ಲುಕ್ಕಿಗೆ ತಕ್ಕುದಾದ ಪಾತ್ರವನ್ನೇ ದೇಸಾಯಿ ಸೃಷ್ಟಿಸಿದ್ದಾರೆ. ಆರಂಭದಿಂದಲೂ ದೇಸಾಯಿ ಅವರ ಚಿತ್ರಗಳನ್ನು ನೋಡಿಕೊಂಡೇ ಬಂದಿದ್ದ ಆರ್ ದೇವರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಜುನಾಥ್ ಡಿ ಮತ್ತು ರಾಜೇಂದ್ರ ಕುಮಾರ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ.

 

Continue Reading

ಕಲರ್ ಸ್ಟ್ರೀಟ್

ಪಡ್ಡೆಹುಲಿ ಟ್ರೈಲರ್ ಬಿಡುಗಡೆಗೊಳಿಸಿದರು ಯಜಮಾನ!ಇದು ಪಕ್ಕಾ ಫ್ಯಾಮಿಲಿ ಫ್ಲೇವರ್ ಪಡ್ಡೆಹುಲಿ!

Published

on

ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ ಪಡ್ಡೆಹುಲಿ ಚಿತ್ರದ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದ್ದಾರೆ. ಈ ಹೆಸರು ಕೇಳಿದೇಟಿಗೆ ಒಟ್ಟಾರೆ ಕಥೆಯ ಬಗ್ಗೆ ತಮ್ಮದೇ ಅಂದಾಜು ಹೊಂದಿದ್ದವರನ್ನೆಲ್ಲ ಅಚ್ಚರಿಗೊಳಿಸುವಂತೆ ಈ ಟ್ರೈಲರ್ ಹೊರ ಬಂದಿದೆ.

ಇದು ಎಲ್ಲ ಅಂಶಗಳನ್ನೂ ಒಳಗೊಂಡಿರುವ ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಎಂಬ ವಿಚಾರವೂ ಈ ಮೂಲಕವೇ ಜಾಹೀರಾಗಿದೆ.ಬಾಲ್ಯ, ಕುಟುಂಬ, ಮಾಸ್, ಪ್ರೀತಿ, ಹಾಸ್ಯ ಸೇರಿದಂತೆ ಎಲ್ಲ ಅಂಶಗಳನ್ನೂ ಹದವಾಗಿ ಬೆರೆಸಿ ನಿರ್ದೇಶಕ ಗುರುದೇಶಪಾಂಡೆ ಪಡ್ಡೆಹುಲಿಯನ್ನು ರೂಪಿಸಿದ್ದಾರೆ.

ಇದೇ ಈಗ ಯಜಮಾನ ಬಿಡುಗಡೆಗೊಳಿಸಿರುವ ಟ್ರೈಲರ್ ನ ಹೈಲೈಟ್. ಇದರ ಜೊತೆಗೇ ಶ್ರೇಯಸ್ ಎಂಬ ಹೊಸಾ ಹುಡುಗನ ಶ್ರಮ, ತಯಾರಿಗಳೆಲ್ಲವೂ ನೋಡುಗರೆಲ್ಲರು ಖುಷಿಗೊಳ್ಳುವಂತೆ ಮಾಡಿದೆ. ಈ ಮೂಲಕ ನಿರ್ಮಾಪಕ ಎಮ್. ರಮೇಶ್ ರೆಡ್ಡಿಯವರ ಕನಸು, ಶ್ರಮಗಳೆಲ್ಲವೂ ಸಾರ್ಥಕವಾದಂತಾಗಿದೆ.ಟ್ರೈಲರ್‌ನಲ್ಲಿ ಶ್ರೇಯಸ್ ನಾಯಕ ನಟನಾಗಿ ನೆಲೆಗೊಳ್ಳುವ ಸ್ಪಷ್ಟ ಸೂಚನೆಗಳು ಸಿಕ್ಕಿವೆ. ಎಲ್ಲ ಶೇಡುಗಳಲ್ಲಿಯೂ ಅವರು ಗಮನ ಸೆಳೆಯುತ್ತಾರೆ.

ಮಾಸ್ ಸೀನುಗಳಲ್ಲಿಯಂತೂ ಶ್ರೇಯಸ್ ವಿಜೃಂಭಿಸಿದ್ದಾರೆ. ಈ ಮೂಲಕ ಶ್ರೇಯಸ್ ಕನ್ನಡದ ಟೈಗರ್ ಶ್ರಾಫ್ ಎಂಬ ಭಾವನೆ ಮೂಡೋದರಲ್ಲಿ ಅಚ್ಚರಿಯೇನಿಲ್ಲ. ಅಂಥಾ ಫೈಟಿಂಗ್ ಖದರ್ ಅನ್ನು ಶ್ರೇಯಸ್ ಪ್ರದರ್ಶಿಸಿದ್ದಾರೆ.ನಾಯಕಿ ನಿಶ್ವಿಕಾ ನಾಯ್ಡು ಬೇಬಿ ದಾಲ್ ಆಗಿ ಕಂಗೊಳಿಸಿದ್ದಾರೆ. ರವಿಚಂದ್ರನ್ ಮತ್ತು ಸುಧಾರಾಣಿ ಈ ಸಿನಿಮಾ ಮೂಲಕ ಮತ್ತೆ ಜೋಡಿಯಾಗಿ ಹಿಂತಿರುಗಿದ್ದಾರೆ. ಒಟ್ಟಾರೆಯಾಗಿ ಈ ಟ್ರೈಲರ್ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಳ್ಳುವ ಖದರ್ ಹೊಂದಿದೆ.

Continue Reading
Advertisement
Advertisement

Trending