One N Only Exclusive Cine Portal

ಸಾಹೂ ಸಾಹಸದ ಖರ್ಚು ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ!

ಪ್ರಭಾಸ್ ಬಾಹುಬಲಿ ಭರ್ಜರಿ ಗೆಲುವಿನ ನಂತರ ನಟಿಸುತ್ತಿರುವ ಮೊದಲ ಚಿತ್ರ ಸಾಹೂ. ಸದ್ಯ ಈ ಚಿತ್ರದ ಬಗೆಗೂ ಕೂಡಾ ತೆಲುಗು ಮಾತ್ರವಲ್ಲದೆ ದೇಶಾದ್ಯಂತ ನಿರೀಕ್ಷೆ ಹುಟ್ಟಿಸಿದೆ. ಭಾರೀ ದೊಡ್ಡ ಬಜೆಟ್ಟಿನ ಈ ಚಿತ್ರಕ್ಕೀಗ ದುಬೈನಲ್ಲಿ ಫೈಟಿಂಗ್ ಚಿತ್ರೀಕರಣಕ್ಕೆಂದು ಚಿತ್ರ ತಂಡ ಬೀಡು ಬಿಟ್ಟಿದ್ದರೂ ಕೂಡಾ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿದೆ.

ಸೂರ್ಜಿತ್ ರೆಡ್ಡಿ ನಿರ್ದೇಶನದ ಈ ಚಿತ್ರಕ್ಕೆ ಅತ್ಯಂತ ವಿರಳವಾದ ಲೊಕೇಷನ್ನುಗಳನ್ನು ಹುಡುಕಿ ಚಿತ್ರೀಕರಣ ನಡೆಸಲಾಗಿದೆ. ಇದರಲ್ಲಿಲನ ಮೈ ನವಿರೇಳಿಸುವ ಸಾಹಸ ದೃಷ್ಯಗಳಿಗೆ ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ದುಬೈಗೆ ಧಾವಿಸಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಈ ಚಿತ್ರೀಕರಣ ಕೆಲ ದಿನಗಳ ಮಟ್ಟಿಗೆ ಮುಂದೂಡಲ್ಪಟ್ಟಿದೆ. ಸದ್ಯ ರೊಮ್ಯಾನಿಯಾದಲ್ಲಿ ಚಿತ್ರೀಕರಣ ನಡೆಸುತ್ತಿರಲು ಚಿತ್ರ ತಂಡ ತೀರ್ಮಾನಿಸಿದೆಯಂತೆ.

ಸಾಹೂ ಚಿತ್ರ ದೇಶ ವಿದೇಶಗಳಲ್ಲಿಯೂ ಹುಟ್ಟಿಸಿದ ಕ್ರೇಜ್ ನೋಡಿದರೆ ಅದು ಬಾಹುಬಲಿಯನ್ನೇ ಸರಿಇಗಟ್ಟುವಂಥಾ ಗೆಲುವೊಂದರ ರೂವಾರಿಯಾಗುವ ಲಕ್ಷಣಗಳೇ ಕಾಣಿಸುತ್ತಿವೆ. ಈ ಹಿಂದೆ ಪ್ರಭಾಸ್ ಚಿತ್ರಗಳೆಂದರೆ ತೆಲುಗು ಮತ್ತು ಒಂದಷ್ಟು ಭಾಷೆಗಳಲ್ಲಿ ಮಾತ್ರವೇ ಕ್ರೇಜ್ ಇತ್ತು. ಆದರೆ ಬಾಹುಬಲಿಯ ನಂತರದಲ್ಲಿ ಪ್ರಭಾಸ್‌ಗೆ ವಿಶ್ವಾಧ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇದೂ ಕೂಡಾ ಸಾಹೂ ಚಿತ್ರದ ಅದ್ದೂರಿ ಗೆಲುವಿಗೆ ಕಾರಣವಾಗುತ್ತದೆ ಅಂತಲೂ ವಿಶ್ಲೇಷಿಸಲಾಗುತ್ತಿದೆ.

ಅಂದಹಾಗೆ ಸಾಹೂ ೧೫೦ ಕೋಟಿಗೂ ಹೆಚ್ಚಿನ ಬಜೆಟ್ಟಿನಲ್ಲಿ ತಯಾರಾಗುತ್ತಿದೆ. ಇದರಲ್ಲಿ ಸಾಹಸವೇ ಪ್ರಧಾನವಾದುದರಿಂದ ಬರೀ ಸಾಹಸ ದೃಷ್ಯಾವಳಿಗೆಂದೇ ಅಖಂಡ ನಲವತ್ತು ಕೋಟಿಗಳನ್ನು ಖರ್ಚು ಮಾಡಲಾಗಿದೆಯಂತೆ. ಅಂತೂ ಈ ಚಿತ್ರದ ಮೂಲಕ ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಜೋಡಿ ಭಾರತೀಯ ಚಿತ್ರರಂಗದಲ್ಲೇ ಮೈಲಿಗಲ್ಲಾಗುವಂಥಾ ಗೆಲುವೊಂದಕ್ಕೆ ರೂವಾರಿಯಾಗಲಿದ್ದಾರಾ ಎಂಬ ಪ್ರಶ್ನೆ ಎಲ್ಲೆಡೆ ಹುಟ್ಟಿಕೊಂಡಿದೆ.

Leave a Reply

Your email address will not be published. Required fields are marked *


CAPTCHA Image
Reload Image