One N Only Exclusive Cine Portal

ಇನ್ನೂರು ಕೇಂದ್ರಗಳಲ್ಲಿ ಸಂಹಾರ!

ಥ್ರಿಲ್ಲರ್ ಆಧಾರಿತ ಕತೆಯನ್ನು ವಿಭಿನ್ನ ರೀತಿಯಲ್ಲಿ ತೋರಿಸಿರುವ ’ಸಂಹಾರ’ ಚಿತ್ರವು ಹೊಸತನದಿಂದ ಕೂಡಿದೆ. ಸಿನಿಮಾದಲ್ಲಿ ಹಲವು ವಿಶೇಷತೆಗಳು ಇದೆ. ನಾಯಕ ಚಿರಂಜೀವಿ ಸರ್ಜಾ ಎರಡು ಶೇಡ್‌ಗಳ ಪೈಕಿ ಒಂದರಲ್ಲಿ ಅಂಧನಾಗಿ ನಟನೆ ಮಾಡಿದ್ದಾರೆ. ಕಾವ್ಯಾಶೆಟ್ಟಿ, ಹರಿಪ್ರಿಯಾ ನಾಯಕಿಯರಲ್ಲಿ ಹರಿಪ್ರಿಯಾ ಮೊದಲಬಾರಿ ನೆಗೆಟೀವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯ ನಟನೆಂದು ಬಿಂಬಿತರಾಗಿದ್ದ ಚಿಕ್ಕಣ್ಣ ಪ್ರಥಮಬಾರಿ ಪೋಲೀಸ್ ಇನ್ಸೆಪೆಕ್ಟರ್ ಆಗಿ ಗಂಭೀರವಾಗಿದ್ದರೂ ಅವರ ಹಾವಭಾವಗಳು ನಗು ತರಿಸುತ್ತದೆ. ನಾಯಕರೊಂದಿಗೆ ಇವರು ಶೇಕಡ 70ರಷ್ಟು ತೆರೆ ಹಂಚಿಕೊಂಡಿದ್ದಾರೆ. ಪ್ರತಿ 10-15 ನಿಮಿಷಕ್ಕೂ ತಿರುವುಗಳು ಬರಲಿದ್ದು ಪ್ರೇಕ್ಷಕನಿಗೆ ಕುತೂಹಲ ಮೂಡಿಸುತ್ತದೆ. ಏನ್ ಅಚ್ಚರಿ ಕಾದಿದೆ ಗೀತೆಗೆ ಪುನೀತ್‌ರಾಜ್‌ಕುಮಾರ್ ಧ್ವನಿ ನೀಡಿದ್ದಾರೆ. ಜಯಂತ್‌ಕಾಯ್ಕಣಿ, ನಾಗೇಂದ್ರಪ್ರಸಾದ್ ಮತ್ತು ಚೇತನ್‌ಕುಮಾರ್ ಸಾಹಿತ್ಯ ಹಾಡುಗಳಿಗೆ ರವಿಬಸ್ರೂರು ಸಂಗೀತ ಸಂಯೋಜಿಸಿದ್ದಾರೆ.


ಸಾಹಸ ರವಿವರ್ಮ, ನೃತ್ಯ ಮದನ್-ಹರಿಣಿ, ಹೈಟ್‌ಮಂಜು, ಸಂಕಲನ ಕೆ.ಎಂ.ಪ್ರಕಾಶ್, ಸಂಭಾಷಣೆಗೆ ಪ್ರಶಾಂತ್‌ರಾಜಪ್ಪ ಪೆನ್ನು ಕೆಲಸ ಮಾಡಿದೆ. ರಾಜಾಹುಲಿ ಖ್ಯಾತಿ ಗುರುದೇಶಪಾಂಡೆ ನಿರ್ದೇಶನವಿದೆ. ಸಿನಿಮಾಗಳನ್ನು ವಿತರಣೆ ಮಾಡಿದ ಅನುಭವ ಇರುವ ಸಿ.ನಿರಂಜನ್ ಗೆಳೆಯ ಸಿ.ಮಂಜೇಶ್, ವೆಂಕಟೇಶ್ ಮತ್ತು ಆರ್.ಸುಂದರಕಾಮರಾಜ್ ಅವರೊಂದಿಗೆ ಜಂಟಿಯಾಗಿ ನಿರ್ಮಾಣ ಮಾಡಿರುವ ಚಿತ್ರವು ಇದೇ ಶುಕ್ರವಾರದಂದು ತೆರೆಕಾಣಲಿದೆ.

Leave a Reply

Your email address will not be published. Required fields are marked *


CAPTCHA Image
Reload Image