One N Only Exclusive Cine Portal

ಇವಳ ಹುಚ್ಚಾಟಗಳಿಗೆ ಕೊನೆಯಿಲ್ಲವೇ?

ಪ್ರತೀ ವರ್ಷ ಒಂದೊಂದು ವೆರೈಟಿಯ ಮಳ್ಳು ಪ್ರಾಡಕ್ಟುಗಳನ್ನು ಕರ್ನಾಟಕಕ್ಕೆ ಪರಿಚಯಿಸಿ ಕಾಟ ಕೊಡುವುದು ಬಿಗ್‌ಬಾಸ್ ಶೋನ ಪರಂಪರೆ. ಈ ಸೀಜನ್ನಿನ ಮುಖ್ಯಭೂಮಿಕೆಯಲ್ಲಿದ್ದ ಸ್ಪರ್ಧಿಗಳು ಪುಣ್ಯಕ್ಕೆ ತಲೆ ನೆಟ್ಟಗಿರುವವರೇ ಅಂತ ಪ್ರೇಕ್ಷಕರು ನಿಟ್ಟುಸಿರು ಬಿಡುವ ಭಾಗ್ಯವನ್ನೂ ಕಳೆದುಕೊಂಡಿದ್ದಾರೆ. ಯಾಕೆಂದರೆ, ದಿನಗಳ ಲೆಕ್ಕದಲ್ಲಿ ಬಿಗ್‌ಬಾಸ್ ಮನೆಗೆ ಹೋಗಿ ಇಜ್ಜಿಲೊಲೆಯ ಸಮೀರ್ ಆಚಾರ್ಯನಿಗೆ ತದುಕಿ ಹೊರ ಬಂದ ಸಂಯುಕ್ತಾ ಹೆಗಡೆ ನಾನಾ ಅವತಾರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾಳೆ!

ಅದ್ಯಾವ ಘಳಿಗೆಯಲ್ಲಿ ಕಿರಿಕ್ ಪಾರ್ಟಿ ಚಿತ್ರದಲ್ಲಿ ಈ ಪುಣ್ಯಾತ್ಗಿತ್ತಿಗೆ ನಟಿಸೋ ಅವಕಾಶ ಸಿಕ್ಕಿತೋ; ಅದ್ಯಾವ ಸೊಬಗಿಗೆ ಬಿಗ್‌ಬಾಸ್ ಆಯೋಜಕರು ಮನೆಯೊಳಗೆ ಬಿಟ್ಟುಕೊಂಡರೋ ಗೊತ್ತಿಲ್ಲ; ಆ ಕ್ಷಣದಿಂದಲೇ ಈಕೆಯ ವರಾತಗಳು ಮೇರೆ ಮೀರಿ ಇದೀಗ ಅದು ಅಕ್ಷರಶಃ ಅಸಹ್ಯದ ಪರಮಾವಧಿ ತಲುಪಿಕೊಂಡಿದೆ.

ಬಿಗ್‌ಬಾಸ್ ಮನೆಯಲ್ಲಿ ನಖರಾ ಮಾಡಿಕೊಂಡು ಹೊರ ಬಿದ್ದ ಬಳಿಕ ನಾಪತ್ತೆಯಾದಂತಿದ್ದ ಸಂಯುಕ್ತಾ ಹೆಗ್ಡೆ ಇದೀಗ ಮತ್ತದೇ ಚೋಟುದ್ದದ ಬಟ್ಟೆ ತೊಟ್ಟು ಅಸಹ್ಯದ ಪೋಸು ಕೊಡುವ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷಳಾಗಿದ್ದಾಳೆ. ಈಕೆಯ ಈ ಅವತಾರ ಮತ್ತೊಂದು ಸಲ ಟ್ರಾಲ್ ಪೇಜುಗಳಿಗೆ ಭರ್ಜರಿ ಆಹಾರ ಒದಗಿಸಿದೆ. ಮತ್ತೆ ಕೆಟ್ಟಾ ಕೊಳಕಾದ ಟ್ರಾಲಿಂಗ್‌ಗಳು ಸಂಯುಕ್ತಾಳ ಹೊಸಾ ಅವತಾರದ ಸುತ್ತ ಶುರುವಾಗಿವೆ!

ಈ ಹಿಂದೆ ಇದೇ ಸಂಯುಕ್ತಾ ರೈಲ್ವೇ ಹಳಿಗಳ ಮೇಲೆ ಕಾಲೆತ್ತಿ ಮಲಗಿ ಪೋಸು ಕೊಡುವ ಮೂಲಕ ಸಂಚಲನ ಸೃಷ್ಟಿಸಿದ್ದಳು. ಆ ಫೋಟೋ ಟ್ರಾಲ್ ಆದ ರೀತಿ ಕಂಡು ಮಾನ ಮರ್ಯಾದೆಗಳಿರುವ ಯಾರೇ ಆಗಿದ್ದರು ಮತ್ತೆ ಅಂಥಾ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲವೇನೋ. ಆದರೆ ಸಂಯುಕ್ತಾ ಇದೀಗ ಅದಕ್ಕಿಂತಲೂ ಕೊಳಕಾದ, ಅಂಗಾಗ ಪ್ರದರ್ಶನದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾಳೆ. ಇದರ ಅರ್ಥ ಸ್ಪಷ್ಟ; ಸಂಯುಕ್ತಾ ತನ್ನ ಬಗ್ಗೆ ನಡೆಯುತ್ತಿರೋ ಕೊಳಕಾದ ನೆಗೆಟಿವ್ ಟ್ರಾಲಿಂಗ್ ಮತ್ತು ಜನಸಾಮಾನ್ಯರ ಉಗಿತವನ್ನೂ ಎಂಜಾಯ್ ಮಾಡುವ ದಾರುಣ ಮನಸ್ಥಿತಿ ತಲುಪಿಕೊಂಡಿದ್ದಾಳೆ.

ಶಿರಸಿ ಸೀಮೆಯ ಮರ್ಯಾದಸ್ಥ ಕುಟುಂಬದಿಂದ ಬಂದಿರುವಾಕೆ ಸಂಯುಕ್ತಾ ಹೆಗಡೆ. ಈಕೆ ಹಿಂದಿ ಭಾಷೆಯಲ್ಲೂ ಕೆಲ ರಿಯಾಲಿಟಿ ಶೋ ಮೂಲಕ ಸದ್ದು ಮಾಡಿದಾಗ, ಕಿರಿಕ್ ಪಾರ್ಟಿ ಚಿತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾಗ ಆ ಭಾಗದ ಮಂದಿ ಈ ಹುಡುಗಿಯ ಬೆಳವಣಿಗೆ ಕಂಡು ಸಂಭ್ರಮಿಸಿದ್ದರು. ಇದೀಗ ಈಕೆಯ ಚಿತ್ರ ವಿಚಿತ್ರ ಅವತಾರಗಳನ್ನು ಕಂಡು ಅದೇ ಜನ ಮುಜುಗರಕ್ಕೀಡಾಗಿದ್ದಾರೆ. ತೀರಾ ಈಕೆಗೆ ತಲೆಗೆ ಮೊಟಕಿ ಬುದ್ಧಿ ಹೇಳುವವರೂ ಇಲ್ಲವಾ? ಅಥವಾ ಸಂಯುಕ್ತಾ ಆ ಗೆರೆಯನ್ನೂ ದಾಟಿಕೊಂಡಿದ್ದಾಳಾ?

ಸಂಯುಕ್ತಾಳ ಮುಂದೀಗ ಹೇಳಿಕೊಳ್ಳುವಂತಾ ಯಾವ ಅವಕಾಶಗಳೂ ಇಲ್ಲ. ಕಿರಿಕ್ ಪಾರ್ಟಿ ನಂತರ ಕಾಲೇಜ್ ಕುಮಾರ ಎಂಬ ಚಿತ್ರದಲ್ಲಿ ಈಕೆ ನಾಯಕಿಯಾಗಿದ್ದಳಲ್ಲಾ? ಆ ಸಂದರ್ಭದಲ್ಲಿ ಈಕೆ ಸೃಷ್ಟಿಸಿದ್ದ ರಗಳೆ ರಾಮಾಯಣಗಳು ಖಂಡಿತವಾಗಿಯೂ ಈಕೆ ಇನ್ನು ಮುಂದೆ ನಾಯಕಿಯಾಗದಂತೆ ತಡೆಯುತ್ತವೆ. ಒಟ್ಟಾರೆಯಾಗಿ ಈಕೆಯನ್ನು ಕರೆದು ಅವಕಾಶ ಕೊಡುವ ಧೈರ್ಯ ಕನ್ನಡ ಚಿತ್ರ ರಂಗದಲ್ಲಿ ಯಾರಿಗೂ ಉಳಿದಿಲ್ಲ. ಬಿಗ್‌ಬಾಸ್ ಶೋ ಆದ ನಂತರ ಜನ ಈಕೆಯನ್ನು ಮರೆತೇ ಬಿಟ್ಟಿದ್ದರು. ಇದೀಗ ವಿಚಿತ್ರ ಬಟ್ಟೆ ತೊಟ್ಟು ಬಿಚ್ಚೆದೆ ಪ್ರದರ್ಶಿಸುತ್ತಾ ಸಂಯುಕ್ತಾ ಮತ್ತೆ ಕಾಣಿಸಿಕೊಂಡಿದ್ದಾಳೆ.

ಇದನ್ನೂ ಕೂಡಾ ಆಕೆಯ ಹಕ್ಕು, ಮಹಿಳಾ ಸ್ವಾತಂತ್ರ್ಯ ಅಂತೆಲ್ಲ ವಿತಂಡ ವಾದ ಮಂಡಿಸುವವರು ಯಾರಾದರೂ ಇದ್ದರೆ ಅಂಥವರ ಬಗೆಗೊಂದು ಸಂತಾಪವನ್ನಷ್ಟೇ ಸೂಚಿಸಲಾದೀತು. ಇನ್ನು ಈಕೆ ಯಾವ ಥರದ ಫೋಟೋ ಹಾಕಿಕೊಂಡರೂ ಅದನ್ನು ನೆಗ್ಲೆಟ್ ಮಾಡಿ ಬಿಡಬೇಕು ಎಂಬ ತೀರ್ಮಾನಕ್ಕೆ ಬರುವಂತೆಯೂ ಇಲ್ಲ. ಯಾಕೆಂದರೆ ಅದೇ ರೊಚ್ಚಿಗೆ ಈಕೆ ಬರೇ ಬೆತ್ತಲೆ ಅವತಾರದಲ್ಲಿ ಕಾಣಿಸಿಕೊಳ್ಳುವ ಅಪಾಯವೂ ಇದೆ. ಯಾಕೆಂದರೆ ಇದು ಹುಚ್ಚಾ ವೆಂಕಟನನ್ನೇ ನಿವಾಳಿಸಿ ಬಿಡುವಂಥಾ ಹುಚ್ಚು ಎಲಿಮೆಂಟು!

 

Leave a Reply

Your email address will not be published. Required fields are marked *


CAPTCHA Image
Reload Image