One N Only Exclusive Cine Portal

ಮಡದಿ ಮಕ್ಕಳ ಜೊತೆ ಸಂಜು ಬಾಬಾ ಮೋಜು ಮಸ್ತಿ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆


ಮುಂಬೈ ಬಾಂಬ್ ಸ್ಫೋಟದ ರೂವಾರಿಗಳಿಗೆ ಆಶ್ರಯ ನೀಡಿದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿರೋ ಸಂಜಯ್ ದತ್ ಇದೀಗ ವಿವಿಧ ಚಿತ್ರಗಳಲ್ಲಿ ಬ್ಯುಸಿಂii ಗಿದ್ದಾರೆ. ಸದ್ಯಕ್ಕೆ ಟೊರ್‍ಬಾಜ್ ಚಿತ್ರದ ಚಿತ್ರೀಕರಣದಲ್ಲಿ ಸಂಜಯ್ ಕಳೆದು ಹೋಗಿದ್ದಾರೆ.

ಆದರೆ ಇಂತಾ ಬ್ಯುಸಿ ಶೆಡ್ಯೂಲಿನ ನಡುವೆಯೂ ಸಂಜಯ್ ದತ್ ತಮ್ಮ ಮಡದಿ ಮಕ್ಕಳೊಂದಿಗೆ ಮೋಜು ಮಸ್ತಿ ಮಾಡಲೂ ಒಂದಷ್ಟು ಸಮಯ ಹೊಂದಿಸಿಕೊಂಡಿರೋದು ವಿಶೇಷ. ಈಗೊಂದು ತಿಂಗಳಿಂದ ಸಂಜು ಬಾಬಾ ಯುಎಸ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿ ಬಿಡುವಿರದೆ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

ಆದರೆ ಈ ಹಿಂದಿನಿಂದಲೂ ಅದೇನೇ ಒತ್ತಡದಲ್ಲಿದ್ದರೂ ಕಷ್ಟಪಟ್ಟಾದರೂ ತಮ್ಮ ಕುಟುಂಬಕ್ಕಾಗಿ ಒಂದಷ್ಟು ಸಮಯ ಮೀಸಲಿಡೋದು ಸಂಜಯ್ ಸ್ಪೆಷಾಲಿಟಿ. ಈಗಲೂ ಅದೇ ರೀತಿ ತಮ್ಮ ಮಡದಿ ಮಾನ್ಯತಾ ಮತ್ತು ಮಕ್ಕಳಾದ ಇಕ್ರಾ ಮತ್ತು ಶಹರಾನ್ ಜೊತೆ ಯುಎಸ್‌ನ ಸುಂದರ ತಾಣಗಳಲ್ಲಿ ಅಲೆದಾಡಿದ್ದಾರೆ.
ಸಂಜಯ್ ದತ್ ಜೈಲುಪಾಲಾಗೋ ಮುಂಚೆಯೇ ಒಂದಷ್ಟು ಚಿತ್ರಗಳಿಗೆ ಸಹಿ ಮಾಡಿದ್ದರು. ಆದರೆ ಆ ನಂತರದ ಅನಿವಾರ್ಯ ವಿದ್ಯಮಾನಗಳಿಂದ ನಿಂತು ಹೋಗಿದ್ದ ಎಲ್ಲಾ ಚಿತ್ರಗಳನ್ನೂ ಮುಗಿಸಿಕೊಟ್ಟು ಎಲ್ಲರಿಗೂ ನ್ಯಾಯ ಒದಗಿಸೋ ಪ್ರಯತ್ನ ಸಂಜಯ್ ದತ್ ಅವರದ್ದು. ಸದ್ಯ ಚಿತ್ರೀಕರಣ ನಡೆಸುತ್ತಿರೋ ಸಿನಿಮಾ ಸದ್ಯದಲ್ಲೇ ತೆರೆ ಕಾಣಲಿದೆ.

copying or reproducing the above content in any format without approval is criminal offence and will be prosecuted in Bengaluru court © CINIBUZZ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Leave a Reply

Your email address will not be published. Required fields are marked *


CAPTCHA Image
Reload Image