One N Only Exclusive Cine Portal

ದೀಪಿಕಾ ಈಗ ಲೇಡಿ ಡಾನ್ ಸಪ್ನಾ ದೀದಿ!


ಸದಾ ಸವಾಲಿನಬ ಪಾತ್ರಗಳನ್ನೇ ಆರಿಸಿಕೊಳ್ಳುತ್ತಾ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಾಕೆ ದೀಪಿಕಾ ಪಡುಕೋಣೆ. ಈಕೆ ನಟಿಸಿದ್ದ ಪದ್ಮಾವತಿ ಚಿತ್ರ ಭಾರೀ ವಿವಾದ ವೆಬ್ಬಿಸಿ ಕಡೆಗೂ ಬಿಡುಗಡೆಯಾಗಿ ಒಂದು ಮಟ್ಟದ ಗೆಲುವು ದಾಖಲಿಸಿದೆ. ಆದರೆ ಅದರಲ್ಲಿ ದೀಪಿಕಾ ನಟಿಸಿದ್ದ ರಾಣಿ ಪದ್ಮಾವತಿಯ ಪಾತ್ರ ಮೆಚ್ಚುಗೆ ಗಳಿಸಿಕೊಂಡಿದೆ.


ಪದ್ಯಾವತಿ ಎಂಬ ಸತ್ಯ ಕಥೆ ಆಧಾರಿತವಾದ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದ, ಒಂದು ಬಣದಿಂದ ತೀವ್ರವಾದ ವಿರೋಧ ಎದುರಿಸಿದ್ದ ದೀಪಿಕಾಳ ಮುಂದಿನ ಚಿತ್ರ ಯಾವುದು ಎಂಬ ಬಗ್ಗೆ ಕುತೂಹಲವಿತ್ತು. ಇದೀಗ ಅದು ಜಾಹೀರಾಗಿದೆ. ದೀಪಿಕಾಳ ಮುಂದಿನ ಚಿತ್ರವೂ ಒಂದು ನಂಬಲಸಾಧ್ಯವಾದ ರೋಚಕ ಸತ್ಯಕಥೆಯನ್ನಾಧರಿಸಿದ್ದಾಗಿದೆ ಎಂಬುದೇ ಅಸಲೀ ವಿಶೇಷ!


ವಿಶಾಲ್ ನಿರ್ದೇಶನದ ಈ ಚಿತ್ರ ಲೇಡಿ ಡಾನ್ ಸಪ್ನಾ ಎಂಬಾಕೆಯ ಜೀವನಾಧಾರಿತವಾದ ಚಷಿತ್ರವಂತೆ. ಸ್ತ್ರೀ ಶಕ್ತಿಯ ಸಂಕೇತದಂತಿರೋ ಸಪ್ನಾಳ ಖಡಕ್ ಪಾತ್ರವನ್ನು ಮಾಡುತ್ತಿರೋದರ ಬಗ್ಗೆ ದೀಪಿಕಾ ಕೂಡಾ ಖುಷಿಯಾಗಿದ್ದಾಳೆ. ತಾನು ಖಡಕ್ ಆದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಪದ್ಮಾವತಿ ಚಿತ್ರದ ನಂತರವೂ ಅಂಥಾದ್ದೇ ಒಂದು ಪಾತ್ರ ತಲನಗೆ ಒಲಿ ಬಂದಿರೋದಕ್ಕೆ ಖುಷಿಯಾಗಿದೆ ಅಂದಿದ್ದಾಳೆ ದೀಪಿಕಾ.


ಇನ್ನೇನು ಈ ಚಿತ್ರದ ಕುರಿತಾದ ಎಲ್ಲ ಮಾತುಕತೆಗಳೂ ಫೈನಲ್ ಆಗಿವೆ. ವಿಶಾಲ್ ಈ ಚಿತ್ರದ ಕಥೆ ಚಿತ್ರಕಥೆಯನ್ನೂ ಮುಗಿಸಿಕೊಂಡಿದ್ದಾರೆ. ಇಷ್ಟರಲ್ಲಿಯೂ ಒಟ್ಟಾರೆ ತಾರಾಗಣದ ವಿವರವನ್ನೂ ಜಾಹೀರು ಮಾಡಲಿದ್ದಾರೆ. ಪದ್ಮಾವತಿ ಚಿತ್ರದ ನಂತರ ರಿಲ್ಯಾಕ್ಸ್ ಮೂಡಿನಲ್ಲಿರೋ ದೀಪಿಕಾ ತಿಂಗಳಾಂತ್ಯದಲ್ಲಿ ಲೇಡಿ ಡಾನ್ ಅವತಾರದಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾಳೆ. ಆದರೆ ಈ ಚಿತ್ರವೂ ಕೂಡಾ ಪದ್ಮಾವತಿ ಚಿತ್ರದಂತೆಯೇ ವಿನಾ ಕಾರಣ ವಿವಾದಗಳನ್ನು ಹುಟ್ಟು ಹಾಕದಿರಲಿ ಅಂತ ಆಕೆಯ ಅಭಿಮಾನಿಗಳೇ ಆಶಿಸುತ್ತಿದ್ದಾರೆ!

Leave a Reply

Your email address will not be published. Required fields are marked *


CAPTCHA Image
Reload Image