Connect with us

ಪೆಟ್ಟಿ ಅಂಗಡಿ

ಉದಯ ಟಿವಿಯಲ್ಲಿ ಡಬಲ್ ಧಮಾಕಾ

Published

on

ಜುಲೈ ೧೪ರಿಂದ “ಸವಾಲ್ ಗೆ ಸೈ” ೧೫ ರಿಂದ

೨೫ನೇ ವರ್ಷದಲ್ಲಿಕಾಲಿಟ್ಟ ಉದಯ ಟಿವಿ ಕರುನಾಡ ಜನತೆಯ ಹೆಮ್ಮೆಯಚಾನಲ್. ಮನಸೂರೆಗೋಂಡ ಧಾರಾವಾಹಿಗಳನ್ನು ಮತ್ತು ಮನ ಮೆಚ್ಚುವ ರಿಯಾಲಿಟಿ ಶೋಗಳನ್ನು ಅಂದಿನಿಂದ ಇಂದಿನ ವರೆಗೆ ವೀಕ್ಷಕರ ಮಡಿಲಲ್ಲಿ ಹಾಕಿ ಸೈ ಎನಿಸಿಕೊಂಡ ಏಕೈಕ ಕನ್ನಡದ ಮೊದಲ ವಾಹಿನಿ ಎಂದು ಹೇಳಬಹುದು.
ಇತ್ತಿಚಗಷ್ಟೆ “ಮಾಯಾ” ಎಂಬ ವಿಭಿನ್ನರೀತಿಯಧಾರಾವಾಹಿಯನ್ನು ಬಿತ್ತರಿಸಿದ ಬೆನ್ನ ಹಿಂದೆ ಈಗ ಅಧ್ಬುತಕಾನ್ಸೆಪ್ಟ್‌ನೊಂದಿಗೆಎರಡುರೀಯಾಲಿಟಿ ಶೋವನ್ನು ವೀಕ್ಷಕರ ಮಡಲಿಗೆ ಹಾಕಲು ನಿರ್ಧರಿಸಿದೆ. ಎರಡೂಕೂಡಾ ಸೆಲೆಬ್ರಿಟಿಗಳಿಂದ ಕೂಡಿದಕಾರ್ಯಕ್ರಮವಾದರೂಒಂದು ಶೋ ಸೆಲಬ್ರಿಟಿಗಳಿಂದ ಮನರಂಜನೆಕೊಡುವ ಶೋ ಆದರೆ ಮತ್ತೊಂದು ಸೆಲಬ್ರಿಟಿಗಳಿಂದ ಸಮಾಜ ಕಳಕಳಿಯನ್ನು ಇಟ್ಟುಕೊಂಡಕಾರ್ಯಕ್ರಮ. ಇದೇಜುಲೈ ೧೪ಕ್ಕೆ(ಶನಿವಾರ)”ಸವಾಲ್ ಗೆ ಸೈ” ಮತ್ತು ೧೫ಕ್ಕೆ(ಭಾನುವಾರ)”ಸದಾ ನಿಮ್ಮೊಂದಿಗೆರಾತ್ರಿ ೯ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಸೆಲಬ್ರಿಟಿಗಳಿಂದ ಪಕ್ಕಾ ಮನರಂಜನೆಯ ಶೋ ಸವಾಲ್‌ಗೆ ಸೈ
ಇದೇ ಶನಿವಾರದಿಂದರಾತ್ರಿ೯ಕ್ಕೆ

ಮನರಂಜನೆಯೇ ಈ ಕಾರ್ಯಕ್ರಮದಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿತೆರೆಯಮೇಲೆಇದೊಂದು ಹೊಸ ರೀತಿಯ, ವಿನೂತನರಿಯಾಲಿಟಿ ಶೋ ಆಗಿ ಮೂಡಿಬರಲಿದೆ. ಸವಾಲ್ ಗೆ ಸೈ ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತುಕಿರುತೆರೆಯತಾರೆಯರದಂಡು ಭಾಗವಹಿಸಲಿದ್ದಾರೆ.
ಆಟದಲ್ಲಿಎರಡುತಂಡವಿದ್ದು, ಪ್ರತಿತಂಡದಿಂದ ನಾಲ್ಕು ಜನ ಸ್ಪರ್ಧಿಸುತ್ತಾರೆ. ಸವಾಲುಗಳಿಗೆ ಜವಾಬುಕೊಡಲುತಾರೆಯರ ಪರದಾಟ, ಸೆಣೆಸಾಟ, ಜೊತೆಗೆ ಒಂದಿಷ್ಟು ಹುಡುಗಾಟವನ್ನೂ ನಾವು ನೋಡಬಹುದು. ಜವಾಬು ನೀಡಲಾಗದಿದ್ದರೆಅನಿರೀಕ್ಷಿತವಾದರೂ ಮಜ ನೀಡುವಂತ ಸಜೆಗಳನ್ನು ನೀಡಲಾಗುವುದು. ಗೆಲುವು ಸೋಲಿಗಿಂತಇಲ್ಲಿಕೊಡುವ ಕ್ರಿಯಾಶೀಲ ಸವಾಲುಗಳನ್ನು ಎದುರಿಸಲುತಾರೆಯರು ಬರುತ್ತಿರುವುದುಒಂದು ವಿಶೇಷ. ಹಿರಿಯರಿಂದಕಿರಿಯರವರೆಗೂ ಮನೆಮಂದಿಯೆಲ್ಲಾಕೂತು ನೋಡುವಂತ ಶೋ ಸವಾಲ್ ಗೆ ಸೈ.
ಹಿರಿತೆರೆ ಮತ್ತುಕಿರುತೆರೆ, ಎರಡರಲ್ಲೂತನ್ನ ನಟನೆಯಿಂದ ಮನೆಮಾತಾಗಿರೋ ನಿತ್ಯರಾಂ, ಇದೇ ಮೊದಲ ಬಾರಿಗೆ ಸಾವಲ್ ಗೆ ಸೈ ಕಾರ್ಯಕ್ರಮದಿಂದ ನಿರೂಪಕಿಯಾಗಲಿದ್ದಾರೆ. ಜೊತೆಗೆತನ್ನ ಮಾತಿನಿಂದಲೇ ನಗುವಿನ ಹೊಳೆ ಹರಿಸುವ ನಿರಂಜನ್‌ದೇಶಪಾಂಡೆ ಸಹ ನಿರೂಪಕನಾಗಿಕಾರ್ಯ ವಹಿಸಲಿದ್ದಾರೆ.
ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಶೋನಲ್ಲಿಜನಕ್ಕೆತಮ್ಮ ನೆಚ್ಚಿನತಾರೆಯರ ಪರಿಚಯ, ಮತ್ತಷ್ಟು ಹತ್ತಿರದಿಂದಆಗುವುದರಲ್ಲಿಅನುಮಾನವೇಇಲ್ಲ. ಹಾಗೆ ಮಸ್ತಿ ಮತ್ತು ಮನರಂಜನೆಅನಿಯಮಿತವಾಗಿದೊರೆಯಲಿದೆಎಂಬುದು ಉದಯ ಟಿವಿಯಆಶಯ.
ಸೆಲಬ್ರಿಟಿಗಳಿಂದ ಸಮಾಜಿಕ ಕಳಕಳಿ ಸದಾ ನಿಮ್ಮೊಂದಿಗೆ
ಮೊದಲ ಸಂಚಿಕೆಯಲ್ಲಿ ಬಹದ್ದೂರ್‌ಎಂಟ್ರಿ
ಇದೇ ಭಾನುವಾರದಿಂದರಾತ್ರಿ ೯ಕ್ಕೆ

ಕನ್ನಡಕಿರುತೆರೆಯಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾಜ ಕಾಳಜಿ ಇಟ್ಟುಕೊಂಡು ಸಾಮಾನ್ಯಜನರಿಗೆ ಅನಕೂಲವಾಗಲು ಸೆಲಬ್ರಿಟಿಗಳು ಸಾಮನ್ಯಜನರಂತೆ ಕೆಲಸವನ್ನು ಮಾಡಿ ನೊಂದ ಮನಸ್ಸಿಗೆ ಸಹಾಯ ಮಾಡುವ ಏಕೈಕ ಶೋ “ಸದಾ ನಿಮ್ಮೊಂದಿಗೆ” ಇದೇ ಭಾನುವಾರದಿಂದರಾತ್ರಿ ೯ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತಿದೆ.

ಪ್ರತಿಒಂದು ವಾರಅಸಹಾಯಕರಿಗೆಅವರಅವಶ್ಯಕತೆಗೆಚಿತ್ರರಂಗದ ದಿಗ್ಗಜರು ಸಾಮಾನ್ಯಜನರಂತೆ ಸಾರ್ವಜನಿಕರ ಮುಂದೆ ಕೆಲಸವನ್ನು ಮಾಡಿ ಹಣವನ್ನು ಸಂಗ್ರಹಿಸುತ್ತಾರೆ. ಆ ಸಂದರ್ಭದಲ್ಲಿ ಬಂದ ಹಣಕ್ಕೆ ಉದಯ ಟಿವಿ ಆ ಒಟ್ಟು ಹಣಕ್ಕೆ ೧೦೦ರಷ್ಟು ಸೆರಿಸಿ ಅವರಜೀವನಕ್ಕೆ ಅನುಕೂಲವನ್ನು ಮಾಡಿಕೊಡುವ ಸಮಾಜ ಕಳಕಳಿಯ ಕಾರ್ಯಕ್ರಮಇದಾಗಿದೆ. ಹೂವು ಮಾರುವುದು, ಏಳೆನೀರು ಮಾರುವುದು, ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವುದು,ಆಟೋಓಡಿಸುವುದು, ಗೋಲಿ ಸೋಡಾ ಮಾರುವುದು,ಸೊಪ್ಪು ಮಾರುವುದು ಪಾನಿ ಪುರಿ,ಕಬ್ಬಿನ ಹಾಲು ಮಾರುವುದು ಹೀಗೆ ಇನ್ನೂ ಅನೇಕ ಕೆಲಸವನ್ನು ಸಾರ್ವಜನಿಕರ ನಡುವೆ ಮಾಡಿ ಈ ಶೋಗೆ ಕೈ ಜೋಡಿಸಿದ್ದಾರೆ ಸ್ಯಾಂಡಲ್‌ವುಡ್‌ತಾರೆಯರು.

“ಸದಾ ನಿಮ್ಮೊಂದಿಗೆ” ಯ ಮುಂಚುಣಿಯನ್ನು ಪಂಚಭಾಷಾತಾರೆ, ಕನ್ನಡದ ಹೆಸರಾಂತ ನಟಿ, ಚಿತ್ರರಂಗದಲ್ಲಿ ೫೦ ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಜೂಲಿಲಕ್ಮೀಯವರು ವಹಿಸಿಕೊಂಡಿದ್ದಾರೆ. ಲಕ್ಷ್ಮೀಯವರು ಈ ಕಾರ್ಯಮದಲ್ಲಿತಮ್ಮಜೀವನಾನುಭವದಲ್ಲಿ ನೋಡಿರುವ ಘಟನೆಗಳನ್ನು ಉದಾಹರಣೆಗೆತೆಗೆದುಕೊಂಡು ಬಹಳ ಘನತೆಯಿಂದ ನಡೆಸಿಕೊಡುತ್ತಿದ್ದಾರೆ.

ಎಷ್ಟೋ ಸಲ ನಮಗೆ ಅಸಹಾಯಕರಿಗೆ ಸಹಾಯ ಮಾಡಬೇಕು ಅನಿಸುತ್ತೆಆದರೆಯಾವುದೋ ಸಂದರ್ಭದಲ್ಲಿಅದನ್ನು ನಾವು ಮರೆತು ಬಿಡುತ್ತೇವೆ. ಆದರೆ ಉದಯ ಟಿವಿ ಈ ಕಾರ್ಯವನ್ನು ಕರ್ತವ್ಯ ಎಂದು ಭಾವಿಸಿ ದುರ್ಬಲರಿಗೆ ಬಲವನ್ನುಕೊಡುವಅದ್ಭುತಕಾರ್ಯವನ್ನು ಮಾಡುತ್ತಿದೆ.ಇದಕ್ಕೆ ಸ್ಯಾಂಡಲ್‌ವುಡ್‌ನ ನಟನಟಿಯರು ಕೈ ಜೋಡಿಸಿದ್ದಾರೆ ಎಂಬುದು ಸಂತಸದ ವಿಷಯ. ಕನ್ನಡಕಿರುತೆರೆಯಇತಿಹಾದಲ್ಲಿಯೇ ಮೊದಲ ಬಾರಿಗೆ ಉದಯ ಟಿವಿ ಇಂತಹಕಾರ್ಯಕ್ರಮವನ್ನು ನಡೆಸಸುತ್ತಿರುವುದುಅಭಿನಂದನಾರ್ಹ ಎಂದುಜುಲಿ ಲಕ್ಷ್ಮೀಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಸದಾ ನಿಮ್ಮೊಂದಿಗೆ ಕಾರ್ಯಕ್ರಮದಲ್ಲಿ ಮೊದಲ ಸಂಚಿಕೆಯಲ್ಲಿಅದ್ಧೂರಿಯಾಗಿಎಂಟ್ರಿಕೊಟ್ಟು ಬಹದ್ದೂರ್ ಆಗಿ ಮಿಂಚಿರೋ ಸರ್ಜಾ ಫ್ಯಾಮಿಲಿಯ ಭರ್ಜರಿ ಹುಡ್ಗಧ್ರುವ ಸರ್ಜಾ. ಇವರು ನರೇಂದ್ರಕುಮಾರ್ ಎಂಬ ಒಬ್ಬಆಟೋಡ್ರೈವರ್‌ಗೆ ಸಹಾಯ ಮಾಡಿದ್ದಾರೆ. ಧ್ರುವ ಸರ್ಜಾಅವರು ನರೇಂದ್ರಕುಮಾರ್‌ರ ಹಾಗೆ ಆಟೋ ಓಡಿಸಿ ಅವರಿಗೆ ಸಹಾಯವನ್ನು ಮಾಡಿದ್ದಾರೆ.

ಅಟೋಓಡಿಸುವ ಮೊದಲುಆಟೋರಾಜ ಶಂಕ್ರಣ್ಣನ ಪ್ರತಿಮೆಗೆ ಹೂವಿನಹಾರ ಹಾಕಿ ನಮಸ್ಕರಿಸಿ ಶ್ರದ್ಧೆಯಿಂದಆಟೋ ಹತ್ತಿದರು. ಇವರಿಗೆ ಸಿಕ್ಕ ಮೊಟ್ಟ ಮೊದಲ ಕಸ್ಟಮರ್‌ಗರ್ಭಿಣಿಅವರನ್ನುಕರೆದುಕೊಂಡು ಹೋಗಿ ಶ್ರೀನಗರ ಆಸ್ಪತ್ರೆಗೆ ಬಿಟ್ರು. ಆ ಗರ್ಭಿಣಿ ಹತ್ರದುಡ್ಡು ತೆಗೆದುಕೊಳ್ಳದೇ ತಾವೇ ಆ ದುಡ್ಡನ್ನತಮ್ಮಜೇಬಿನಿಂದಕೊಟ್ಟಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ವಾಸವಿ ಕಾಲೇಜ್‌ಗೆ ಬಿಟ್ಟುಅಲ್ಲಿ ಸ್ಟೂಡೆಂಟ್ಸ್‌ಜೊತೆಕುಣಿದು ಕುಪ್ಪಳಿಸಿ, ಮೋಜು ಮಸ್ತಿ ಮಾಡಿ ಮತ್ತೆಆಟೋ ಹತ್ತಿದರು. ಹೀಗೆ ದಿನ ಪೂರ್ತಿಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧ ದಂಪತಿಗಳ ವರೆಗೂ ಬೆಂಗಳೂರಿನಾದ್ಯಂತ ಎಲ್ಲಕಡೆಆಟೋ ಓಡಿಸಿದರು ಬಂದ ಹಣದಿಂದ ನರೇಂದ್ರಕುಮಾರ್‌ಅವರ ಸ್ವಂತಆಟೋ ಮಾಡಿಕೊಳ್ಳೋ ಆಸೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಶೋನಲ್ಲಿ ಪ್ರತಿ ವಾರವೂಒಬ್ಬೊಬ್ಬ ಸೆಲಬ್ರಿಟಿಗಳು ಬಂದಿದ್ದಾರೆ ಅವರುಗಳಲ್ಲಿ ಶ್ರೀ ಮುರಳಿ,ಲವ್ಲಿ ಸ್ಟಾರ್ ಪ್ರೇಮ್,ಪ್ರೀಯಾಂಕಉಪೇಂದ್ರ,ಪಾರೂಲ್‌ಯಾದವ್,ವಿಜಯರಾಘವೇಂದ್ರ,ಸೃಜನ್ ಲೋಕೇಶ್,ಮಾನ್ವಿತಾ ಹರೀಶ್,ಪ್ರೀಯಾಮಣಿ,ರಶ್ಮೀಕಾ ಮಂದಣ್ಣ,ರ್ಧನಂಜಯ್,ಚಿರಂಜೀವಿ ಸರ್ಜಾ, ಹೀಗೆ ಇನ್ನೂಅನೇಕರು ಭಾಗವಹಿಸಿದ್ದಾರೆ.

ಇನ್ನು ಈ ಕಾರ್ಯಕ್ರಮ ಸೃಜನ್ ಲೋಕೇಶ್ ನೇತೃತ್ವದ ಪ್ರತಿಷ್ಠಿತ”ಲೋಕೇಶ್ ಪ್ರೊಡಕ್ಷನ್” ಸಂಸ್ಥೆಯಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ಆರ್ಥಿಕದುರ್ಭಲರಿಗೆ ಬೆಂಬಲ ನೀಡಿ, ಬಲಹೀನರಿಗೆದೈರ್ಯತುಂಬುವ ಶಕ್ತಿ ನೀಡುವ, ಕಷ್ಟದಕಗ್ಗತ್ತಲೆಯಲ್ಲಿ ಮುಳಗಿದವರಿಗೆ ಬೆಳಕಿನ್ನು ಕೊಡುವ, ನೊಂದ ಬೆಂದ ಮನಸ್ಸಿಗೆ ಸೆಲಬ್ರಿಟಿಗಳಿಂದ ಸಾಂತ್ವನ ಹೆಳುವ ಉದಯ ಟಿವಿಯರೀಯಾಲಿಟಿಅಲ್ಲ್ಲರೀಯಲ್ ಶೋ “ಸದಾ ನಿಮ್ಮೊಂದಿಗೆ” ಪ್ರತಿ ಭಾನುವಾರ(೧೫.೭.೨೦೧೮) ೯ಕ್ಕೆ ಪ್ರಸಾರವಾಗಲಿದೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಪೆಟ್ಟಿ ಅಂಗಡಿ

ಬಿಗ್‌ಬಾಸ್ ಮನೆ ತಲುಪಿದ ಸೂತಕದ ಸುದ್ದಿ!

Published

on

ಪ್ರಯಾಸ ಪಡುತ್ತಿದ್ದಾರೆ. ಎಲ್ಲರ ಮನಸಲ್ಲಿಯೂ ಹಿರಿಯಣ್ಣನನ್ನು ಕಳೆದುಕೊಂಡ ಖಾಲಿತನವೊಂದು ಆವರಿಸಿಕೊಂಡು ಬಿಟ್ಟಿದೆ. ಆದರೆ ಬಿಗ್‌ಬಾಸ್ ಮನೆಯೊಳಗೆ ಬಂಧಿಯಾಗಿ ತಮ್ಮದೇ ಕಿತ್ತಾಟ, ಕೊಸರಾಟಗಳಲ್ಲಿ ಕಳೆದು ಹೋಗಿರೋ ಸ್ಪರ್ಧಿಗಳ ಪಾಲಿಗೆ ಮಾತ್ರ ಹೊರ ಜಗತ್ತಿನ ಪರಿವೆಯೇ ಇಲ್ಲ. ಈ ಶನಿವಾರದ ಕಡೆಯ ಕ್ಷಣದ ವರೆಗೂ ಅವರ್‍ಯಾರಿಗೂ ಅಂಬಿ ಇನ್ನಿಲ್ಲವೆಂಬ ಸಣ್ಣ ಸುಳಿವೂ ಇರಲಿಲ್ಲ.

ಆದರೆ ಈ ಶನಿವಾರ ಎಲಿಮಿನೇಷನ್ ಜೊತೆಗೇ ಎಲ್ಲ ಸ್ಪರ್ಧಿಗಳಿಗೂ ಮತ್ತೊಂದು ಅನಿರೀಕ್ಷಿತ ಆಘಾತ ಕಾದಿತ್ತು. ಆನಂದ್ ಮನೆಯಿಂದ ಹೊರ ಬಿದ್ದ ಬಳಿಕ ಏಕಾಏಕಿ ಸ್ಕ್ರೀನಿನ ಮೇಲೆ ಅಂಬಿ ಅಂತಿಮ ದರ್ಶನದ ದೃಷ್ಯಾವಳಿಗಳು ತೆರೆದುಕೊಳ್ಳುತ್ತಲೇ ಸ್ತಬ್ಧರಾದ ಸ್ಪರ್ಧಿಗಳೆಲ್ಲ ಭೋರಿಟ್ಟು ಅತ್ತಿದ್ದಾರೆ.

ಅಂಬರೀಶ್ ಅಂತಿಮ ದರ್ಶನದ ವೇಳೆಯಲ್ಲಿ ಸುದೀಪ್ ಕೂಡಾ ಕಣ್ಣೀರಾಗಿದ್ದರು. ಹಾಗೆ ನೋಡಿದರೆ ಬಿಗ್‌ಬಾಸ್ ಮನೆ ಮಂದಿಗೆ ಇಂಥಾ ಹೊರ ಜಗತ್ತಿನ ಯಾವ ವಿದ್ಯಮಾನಗಳನ್ನೂ ತಿಳಿಸುವಂತಿಲ್ಲ. ಆದರೆ ಅದನ್ನು ಮೀರಿ ಅಂಬಿ ಇನ್ನಿಲ್ಲವೆಂಬ ವಿಚಾರವನ್ನು ಸುದೀಪ್ ಬಿಗ್‌ಬಾಸ್ ಸ್ಪರ್ಧಿಗಳಿಗೆ ತಿಳಿಸಿದ್ದಾರೆ.
ವಾರದ ಪಂಚಾಯ್ತಿಯೆಲ್ಲ ಮುಗಿದ ನಂತರ ಅಂಬರೀಶ್ ಅಂತಿಮ ದರ್ಶನದ ವೀಡಿಯೋವನ್ನು ಮನೆಯೊಳಗೆ ಭಿತ್ತವಾಗುವಂತೆ ಮಾಡೋ ಮೂಲಕ ಬಿಗ್‌ಬಾಸ್ ಸ್ಪರ್ಧಿಗಳೆಲ್ಲ ಕಂಗಾಲಾಗುವಂಥಾ ವಿಚಾರವೊಂದನ್ನು ಅವರ ಮುಂದೆ ತೆರೆದಿಟ್ಟಿದ್ದಾರೆ.

Continue Reading

ಪೆಟ್ಟಿ ಅಂಗಡಿ

ಬಿಗ್‌ಬಾಸ್ ಆಂಡಿ ಅಂದ್ರೆ ಪರಮ ಕ್ರೂರಿ ಅಂದೋರ್‍ಯಾರು?

Published

on


ಬಿಗ್‌ಬಾಸ್ ಶೋ ಎಂಬುದೇ ಹುಚ್ಚರ ಸಂತೆ. ಹುಚ್ಚಾ ವೆಂಕಟನಂಥವರನ್ನೇ ಜುಟ್ಟು ಕೆದರಿಕೊಂಡು ಬೀದಿಗೆ ಬಿಟ್ಟ ಖ್ಯಾತಿಯೂ ಈ ಶೋಗೇ ಸಲ್ಲುತ್ತೆ. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಈ ಶೋವನ್ನು ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ!

ಇಂಥಾ ಶೋನಲ್ಲಿ ಪ್ರತೀ ಸೀಜನ್ನಿನಲ್ಲಿಯೂ ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ತುಂಬಿಕೊಳ್ಳೋದು ವಾಡಿಕೆ. ಈ ಬಾರಿಯೂ ಅಂಥಾದ್ದೇ ಒಂದು ಅಸಡ್ಡಾಳ ದೈತ್ಯಾಕೃತಿಯನ್ನು ಮನೊಯೊಳಗೆ ಬಿಟ್ಟುಕೊಳ್ಳಲಾಗಿದೆ. ಆತ ಆಂಡ್ರೀವ್ ಅಲಿಯಾಸ್ ಆಂಡಿ!

ಯಾವುದೇ ಮನುಷ್ಯ ಸಹ್ಯವಾಗೋದು, ಅಸಹ್ಯ ಅನ್ನಿಸೋದು ಅಂದ, ಚೆಂದ, ಆಕೃತಿಗಳಿಂದಲ್ಲ. ಆತನ ವರ್ತನೆಗಳಿಂದ. ಇಂಥಾ ಕಾಮನ್‌ಸೆನ್ಸ್ ಕೂಡಾ ಇಲ್ಲದ ಆಂಡಿಯೆಂಬಾತ ಕೇಲವ ಬಿಗ್‌ಬಾಸ್ ಸ್ಪರ್ಧಿಗಳಿಗೆ ಮಾತ್ರವಲ್ಲದೇ ಪ್ರೇಕ್ಷಕರಿಗೂ ಕಿರಿಕಿರಿಯುಂಟು ಮಾಡುತ್ತಿದ್ದಾನೆ. ಎಂಥಾ ಸಹನೆಯಿರುವವರೂ ಕೂಡಾ ಕಪಾಳ ಚೆದುರಿ ಹೋಗುವಂತೆ ಬಾರಿಸುವಂತೆ ಕಿರಿಕಿರಿ ಉಂಟು ಮಾಡುವ ಈತ ಅದನ್ನೇ ಗೇಮ್ ಪ್ಲ್ಯಾನ್ ಅಂದುಕೊಂಡಿದ್ದಾನೆ. ಉಕ್ಕಿನಂಥಾ ದೇಹ ಹೊಂದಿದ್ದರೂ ಮಗುವಿನಂಥಾ ಮನಸು ಹೊಂದಿರುವ, ಅದನ್ನೇ ಉಳಿಸಿಕೊಂಡು ಹೊರ ಬಂದಿರುವ ಜಿಮ್ ರವಿಯಂಥಾ ರವಿಯೇ ಆಂಡಿಯೊಬ್ಬ ಪರಮ ಕ್ರೂರಿ ಎಂಬರ್ಥದಲ್ಲಿ ಮಾತಾಡುತ್ತಾರೆಂದರೆ ಈತನ ವ್ಯಕ್ತಿತ್ವ ಎಂಥಾದ್ದೆಂಬುದು ಬಿಗ್‌ಬಾಸ್ ಶೋ ನೋಡದವರಿಗೂ ಗೊತ್ತಾಗಿ ಬಿಡುತ್ತೆ!

ಕಿಚ್ಚಾ ಕೇಳಿದೊಂದು ಪ್ರಶ್ನೆಗೆ ಉತ್ತರಿಸಿದ ಜಿಮ್ ರವಿ ಆಂಡಿ ಒಬ್ಬ ಕ್ರೂರಿ, ಕಿರಿಕಿರಿಯ ಆಸಾಮಿ ಅಂತ ನೇರವಾಗಿಯೇ ಹೇಳಿದ್ದಾರೆ. ಅದು ಪ್ರತಿಯೊಬ್ಬ ಪ್ರೇಕ್ಷಕನಿಗೂ ನೂರಕ್ಕೆ ನೂರರಷ್ಟು ಸತ್ಯವೇ ಅನ್ನಿಸಿದೆ. ಆರಂಭದಲ್ಲಿ ಕವಿತಾ ಗೌಡಳನ್ನು ಪುಟ್ಟ ತಂಗಿ ಅಂತ ಪುಂಗಿದ್ದ ಆಂಡಿ ನಂತರ ಅವಳ ಮೇಲೆಯೇ ಲವ್ವಾದಂಥಾ ಡ್ರಾಮಾ ಶುರು ಮಾಡಿದ್ದ. ಈ ಹಿಂದಿನ ಸೀಜನ್ನುಗಳಲ್ಲಿ ಇಂಥಾ ಲವ್ ಸ್ಟೋರಿಗಳ ರೂವಾರಿಗಳನ್ನು ಬರಖತ್ತು ಮಾಡಲಾಗಿತ್ತಲ್ಲಾ? ಅಂಥಾದ್ದೊಂದು ಪ್ಲಾನು ಮಾಡಿಯೇ ಈತ ಕವಿತಾ ಮೇಲೆ ಕ್ಷಶ್ ಆದಂತೆ ನಾಟಕ ಶುರುವಿಟ್ಟಿದ್ದಾನೆಂಬುದು ಯಾರಿಗಾದರೂ ಅರ್ಥವಾಗುವಂತಿದೆ.

ಎಲ್ಲರನ್ನೂ ಇರಿಟೇಟ್ ಮಾಡುತ್ತಾ, ಪಕ್ಕಾ ನರಿ ಬುದ್ಧಿ ಪ್ರದರ್ಶಿಸೋ ಆಂಡಿಗೆ ಇದೀಗ ಸಣ್ಣಗಾಗಿರೋ ಬುಲೆಟ್ ಪ್ರಕಾಶ್ ಜಾಗದಲ್ಲಿ ತನ್ನ ಅಗಾಧ ದೇಹವನ್ನು ಪ್ರತಿಷ್ಠಾಪಿಸೋ ಬಯಕೆ. ಥೇಟು ಬುಲೆಟ್ ಪ್ರಕಾಶನ ಸೋದರ ಸಂಬಂಧಿಯಂತೆ ದೇಹ ಕುಲುಕಿಸಿ ನಗುವ ಆಂಡಿ ಪಾಲಿಗೆ ಬಿಗ್‌ಬಾಸ್ ಶೋನಿಂದಲೇ ಹಾಸ್ಯ ಕಲಾವಿದನಾಗಿ ನೆಲೆಗೊಳ್ಳೋ ತಲುಬು. ಇದರಿಂದಾಗಿಯೇ ಪಚಪಚನೆ ಮಾತಾಡುತ್ತಾ, ಇರಿಟೇಟ್ ಮಾಡೋದನ್ನೇ ಹಾಸ್ಯ ಅಂದುಕೊಂಡಿರೋ ಪರಮ ಮುಠ್ಠಾಳ ಆಂಡಿ!

ಹಾಸ್ಯ ಹುಟ್ಟೋದಕ್ಕೆ ಸೆನ್ಸ್ ಆಫ್ ಹ್ಯೂಮರ್ ಅತ್ಯಗತ್ಯ. ಆದರೆ ಈ ಆಂಡಿಗೆ ಕಾಮನ್ ಸೆನ್ಸೇ ಕಡಿಮೆ ಪ್ರಮಾಣದಲ್ಲಿದೆ. ಅಸಹ್ಯವನ್ನೇ ಹಾಸ್ಯ ಅಂದುಕೊಂಡಿರೋ ಈ ಆಸಾಮಿಯನ್ನು ಹಾಸ್ಯ ನಟನಾಗಿ ನೋಡುವಂತಾದರೆ ಆ ಅಪಹಾಸ್ಯದ ಫಾಯಿದೆ ಬಿಗ್‌ಬಾಸ್ ಮಂದಿಗಲ್ಲದೆ ಬೇರ್‍ಯಾರಿಗೂ ಸಿಕ್ಕಲು ಸಾಧ್ಯವಿಲ್ಲ!

Continue Reading

ಪೆಟ್ಟಿ ಅಂಗಡಿ

ಬಿಗ್‌ಬಾಸ್: ಮಾಡರ್ನ್ ರೈತ ಶಶಿಯ ಒರಿಜಿನಲ್ ಹಿಸ್ಟರಿ!

Published

on


ನಿಜವಾದ ರೈತರು ನಾನಾ ಸಂಕಷ್ಟಗ ಸುಳಿಯಲ್ಲಿ ಸಿಕ್ಕಿ ಏದುಸಿರು ಬಿಡುತ್ತಾ ತಮ್ಮ ಪಾಡಿಗೆ ತಾವು ದುಡಿಯುತ್ತಿದ್ದಾರೆ. ಆದರೆ ಅಂಥಾ ರೈತರ ಹೆಸರು ಹೇಳಿಕೊಂಡು ನಾನಾ ಥರದ ಫಾಯಿದೆ ಗಿಟ್ಟಿಸಿಕೊಳ್ಳುವವರು ಮಾತ್ರ ಎಲ್ಲೆಲ್ಲಿಯೂ ಆರಾಮಾಗಿ ಅಡ್ಡಾಡಿಕೊಂಡಿದ್ದಾರೆ. ಹೀಗೆ ರೈತರ ಹೆಸರಿನಲ್ಲಿ ಲಾಭ ಗುಂಜಿಕೊಳ್ಳೋ ಬುದ್ಧಿ ರಾಜಕಾರಣ, ಸಂಘಟನೆಗಳಲ್ಲಿ ಮಾಮೂಲು. ಇದೀಗ ಅದು ಜನಪ್ರಿಯ ಶೋ ಬಿಗ್‌ಬಾಸ್‌ಗೂ ಅಂಟಿಕೊಂಡಿತಾ ಅಂತೊಂದು ಪ್ರಶ್ನೆ ಹುಟ್ಟಲು ಕಾರಣ ಈ ಸಲದ ಸ್ಪರ್ಧಿಯಾಗಿರೋ ಶಶಿ ಅಲಿಯಾಸ್ ಶಶಿಕುಮಾರ್!

ನೋಡಲು ಹ್ಯಾಂಡ್ಸಮ್ ಆಗೇ ಇರೋ ಶಶಿ ಎಂಬ ಹುಡುಗ ಈಗ ಬಿಗ್ ಬಾಸ್ ಸ್ಪರ್ಧಿ. ಆತ ಈ ಶೋಗೆ ಪ್ರವೇಶ ಪಡೆದುಕೊಂಡಿದ್ದೇ ತಾನೊಬ್ಬ ಮಾಡರ್ನ್ ರೈತ ಎಂಬ ಟ್ರಂಪ್ ಕಾರ್ಡ್ ಮೂಲಕ. ಕೃಷಿಯ ವಿಚಾರದಲ್ಲಿಯೇ ಪದವಿ ಪಡೆದು ಆಧುನಿಕ ಪದ್ಧತಿಗಳ ಮೂಲಕ ಕೃಷಿ ಮಾಡುತ್ತಿರೋದಾಗಿ ಈತ ಬೊಂಬಡಾ ಬಜಾಯಿಸಿದ್ದ. ಇಡೀ ರೈತ ಸಂಕುಲಕ್ಕೇ ಮಾಡರ್ನ್ ಕೃಷಿ ಪದ್ಧತಿಯ ಕ್ರಾಂತಿ ಹರಡಲೆಂದೇ ತಾನು ಬಿಗ್ ಬಾಸ್ ಶೋಗೆ ಬಂದಿರೋದು ಎಂಬರ್ಥದಲ್ಲಿಯೂ ಮಾತಾಡಿದ್ದ. ಆದರೀಗ ಈ ಮಾಡರ್ನ್ ರೈತ ಒರಿಜಿನಲ್ ರೈತನಲ್ಲ ಎಂಬಂಥಾ ಗುಮಾನಿಯೊಂದು ವ್ಯಾಪಕವಾಗಿಯೇ ಹರಿದಾಡುತ್ತಿದೆ!

ಕೃಷಿ ವಿಚಾರದಲ್ಲಿ ಎಂಎಸ್‌ಸಿ ಪದವಿ ಪಡೆದುಕೊಂಡಿರೋ ಶಶಿ ತಾನು ಅಪ್ಪಟ ರೈತ ಅಂತ ಹೇಳಿಕೊಂಡು ಈ ಕ್ಷಣಕ್ಕೂ ಅದನ್ನೇ ನಿರೂಪಿಸಲು ಪ್ರಯತ್ನಿಸುತ್ತಿದ್ದಾನೆ. ಆದರೆ ಈತ ಬಿಗ್‌ಬಾಸ್‌ಗೆ ಬರೋದಕ್ಕೂ ಮುನ್ನ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾನೆಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳೂ ಆರಂಭವಾಗಿದೆ. ಕೆಲ ಮಂದಿ ರೈತನೇನು ಧಾರಾವಾಹಿನಗಳಲ್ಲಿ ನಟಿಸ ಬಾರದಾ ಎಂಬಂಥಾ ಸಿನಿಕ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ.

 

ರೈತನಾದವನು ಧಾರಾವಾಹಿಗಲ್ಲಿ ನಟಿಸಿದರೂ ತಪ್ಪಿಲ್ಲ. ಸಿನಿಮಾ ಹೀರೋ ಆಗಿ ಅವತರಿಸಿದರೂ ಖಂಡಿತೂ ಅದು ತಪ್ಪಲ್ಲ. ಆದರೆ ಬಿಗ್‌ಬಾಸ್ ಸ್ಪರ್ಧಿ ಶಶಿ ವಿಚಾರದಲ್ಲಿ ಇಂಥಾದ್ದೊಂದು ಪ್ರಶ್ನೆ ಎದ್ದಿರೋದೇ ಬೇರೆ ಕಾರಣಗಳಿಂದ. ಶಶಿ ತಾನು ಮಾಡರ್ನ್ ರೈತ ಅಂತ ಹೇಳಿಕೊಂಡಿದ್ದರ ಜೊತೆಗೇ ತಾನು ಜಾನಪದ ಕಲಾವಿದ ಅಂತೊಂದು ವಿಚಾರವನ್ನು ಜಾಹೀರು ಮಾಡಿದ್ದ. ಆದರೆ ಅದೇ ಹೊತ್ತಿನಲ್ಲಿ ತಾನು ಒಂದಷ್ಟು ಧಾರಾವಾಹಿಗಳಲ್ಲಿಯೂ ನಟಿಸಿದ್ದೇನೆ, ತಾನು ನಟನೂ ಹೌದು ಅಂತ ಯಾಕೆ ಹೇಳಿಕೊಂಡಿಲ್ಲ? ಇದು ತಾನು ರೈತ ಅಂತ ಗಿಟ್ಟಿಸಿಕೊಳ್ಳಲು ನೋಡುತ್ತಿರೋ ಫಾಯಿದೆ ಅಸ್ತವ್ಯಸ್ತವಾದೀತೆಂಬ ಭಯದ ಸೂಚನೆಯಲ್ಲವೇ?
ಬಿಗ್‌ಬಾಸ್ ಮನೆಯೊಳಗೂ ಕೂಡಾ ಶಶಿ ತಾನು ಆಧುನಿಕ ರೈತ ಅಂತ ಬಿಂಬಿಸಿಕೊಳ್ಳೋದಕ್ಕಾಗಿಯೇ ಲಾಗಾ ಹಾಕುತ್ತಿದ್ದಾನೆ. ಇತ್ತೀಚೆಗೊಂದು ದಿನ ನವರಸ ನಾಯಕ ಜಗ್ಗೇಶ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಮಾಡಿದ್ದರಲ್ಲಾ? ಆ ಸಂದರ್ಭದಲ್ಲಿ ಜಗ್ಗೇಶ್ ಅವರೇ ನಟನಂತೆ ಕಾಣ್ತೀಯಲ್ಲಪ್ಪಾ? ಅಂದಾಗಲೂ ಶಶಿ ನಾನು ಮಾಡರ್ನ್ ರೈತ ಅಂದಿದ್ದ. ಕಳೆದ ವಾರ ನಟಿ ಆಶಿಕಾ ರಂಗನಾಥ್ ನೀವು ಆಕ್ಟರ್ರಾ ಅಂತ ಕೇಳಿದಾಗಲೂ ಈತ ಇಲ್ಲ ನಾನು ಮಾಡರ್ನ್ ಫಾರ್ಮರ್ ಅಂತಲೇ ಹೇಳಿಕೊಂಡಿದ್ದ. ಈತನಿಗೆ ತಾನು ರೈತ ಅಂತ ಭೆನಿಫಿಟ್ ಗಿಟ್ಟಿಸಿಕೊಳ್ಳೋ ಇರಾದೆ ಇಲ್ಲದೇ ಹೋಗಿದ್ದರೆ `ನಾನೂ ಒಂದಷ್ಟು ಸೀರಿಯಲ್ ಗಳಲ್ಲಿ ನಟಿಸಿದ್ದೇನೆ’ ಅಂತ ಹೇಳಿಕೊಳ್ಳಬಹುದಿತ್ತಲ್ಲಾ?

ಇದೆಲ್ಲವೂ ಕೂಡಾ ಶಶಿಯ ಗೇಮ್‌ಪ್ಲಾನನ್ನು ಜಾಹೀರು ಮಾಡುತ್ತವೆ. ಅಷ್ಟಕ್ಕೂ ಈತ ತನ್ನೂರಲ್ಲಿ ಅದೇನು ಕೃಷಿ ಮಾಡಿದ್ದಾನೋ, ಅದ್ಯಾವ ಥರದಲ್ಲಿ ಉಳುಮೆ ಮಾಡಿದ್ದಾನೋ ಎಂಬುದು ಬಿಗ್‌ಬಾಸ್ ಆಯೋಜಕರಿಗೂ ಗೊತ್ತಿದೆ ಅನ್ನಲಾಗೋದಿಲ್ಲ. ಕೃಷಿಯಲ್ಲಿ ಎಂಎಸ್‌ದಸಿ ಮಾಡಿಕೊಂಡ ಮಾತ್ರಕ್ಕೆ, ಊರಲ್ಲಿ ಒಂದಷ್ಟು ಜಮೀನಿಟ್ಟುಕೊಂಡು ಎತ್ತು ಕಟ್ಟೋ ಜಾಗದಲ್ಲಿ ಟ್ರ್ಯಾಕ್ಟರು ನಿಂತೇಟಿಗೆ ಅಂಥವರನ್ನು ಮಾಡರ್ನ್ ರೈತ ಅನ್ನಲಾಗೋದಿಲ್ಲ. ರೈತರ ಶ್ರಮವನ್ನು ಗಿಮಿಕ್ಕುಗಳ ಮೂಲಕ ಯಾರು ಏನಕ್ಕೆ ಬಳಸಿಕೊಂಡರೂ ಅದು ಕ್ಷಮಾರ್ಹವಲ್ಲ. ಒಟ್ಟಾರೆಯಾಗಿ ಬಿಗ್‌ಬಾಸ್ ಪ್ರೇಕ್ಷಕರಿಗೂ ಕೂಡಾ ಶಶಿಯ ಮೇಲೊಂದು ಬಲವಾದ ಗುಮಾನಿ ಇದ್ದೇ ಇದೆ.

ಪರ ವಿರೋಧದ ಚರ್ಚೆಗಳೇನೇ ಇದ್ದರೂ ಶಶಿ ನಿಖರವಾಗಿಯೇ ತಾನೊಬ್ಬ ನಟ ಎಂಬ ವಿಚಾರವನ್ನು ಮುಚ್ಚಿಟ್ಟು ರೈತನ ಅವತಾರವೆತ್ತಿದ್ದಾನೆ. ಇಂಥಾ ಆತ್ಮವಂಚನೆಯ ಜೊತೆಗೇ ಬಿಗ್‌ಬಾಸ್ ಹೊಸ್ತಿಲು ದಾಟಿದವ ರಿಂದ ಅದೆಂಥಾ ಪ್ರಾಮಾಣಿಕ ಸ್ಪರ್ಧೆ ನಿರೀಕ್ಷಿಸಲಾದೀತು?

Continue Reading
Advertisement
Chitralahari 400 x 600
DJ ENTERTAINMENTS 300 x 600

Trending

Copyright © 2018 Cinibuzz